ವಿಜಯನಗರ ಜಿಲ್ಲಾಧಿಕಾರಿಗಳ ಆದೇಶ ಮೇರೆಗೆ: ಶ್ರೀ ಮೂಗಬಸವೇಶ್ವರ ರಥೋತ್ಸವ ರದ್ದು

 

ಕೊಟ್ಟೂರು ತಾಲೂಕಿನ ಚಿರಬಿ ಗ್ರಾಮದ ಹೊರವಲಯದಲ್ಲಿ ರುವ ಶ್ರೀ ಮೂಗಬಸವೇಶ್ವರ ಸ್ವಾಮಿಯ ರಥೋತ್ಸವ ಮತ್ತು ಜಾತ್ರಾ ಮಹೋತ್ಸವ ರದ್ದು ಮಾಡಲಾಗಿದೆ.

ಕೇವಲ ಭಕ್ತಾದಿಗಳು ದೇವಸ್ಥಾನಕ್ಕೆ ಆಗಮಿಸಿ ದೇವರ ದರ್ಶನ ಪಡೆದು ಹಣ್ಣು, ಕಾಯಿ  ಮಾಡಿಸಿಕೊಂಡು ಹೋಗಲು ಸೀಮಿ ತಗೊಳಿಸಿ ಜಿಲ್ಲಾಧಿಕಾರಿಗಳು ಆದೇಶ ವನ್ನು ಹೊರಡಿಸಿದ್ದಾರೆ.

2007ನೇ ಸಾಲಿನಿಂದ ಚಿರಬಿ ಮತ್ತು ರಾಂಪುರ ಗ್ರಾಮಸ್ಥರ ನಡುವೆ ದೇವಸ್ಥಾನದ ಪೂಜಾ ಕಾರ್ಯಕ್ರಮಗಳನ್ನು ನಡೆಸುವ ಸಂಬಂಧ ಘರ್ಷಣೆ ಉಂಟಾದ ಮೇರೆಗೆ ಅಂದಿನಿಂದ ಕಳೆದ ಸಾಲಿನವ ರೆಗೂ ರಥೋತ್ಸವ ಮತ್ತು ಜಾತ್ರೆ ಮಹೋತ್ಸವ ರದ್ದು ಮಾಡಲಾಗಿತ್ತು. 

ಸೆಪ್ಟಂಬರ್ 1 ರಂದು ಎರಡು ಗ್ರಾಮಗಳ ಗ್ರಾಮಸ್ಥರನ್ನು ಶಾಂತಿ ಸಭೆ ಕರೆಯಲಾಗಿದ್ದು ಎರಡು ಗ್ರಾಮದವರ ನಡುವೆ ಭಿನ್ನಾಭಿಪ್ರಾಯ ಮುಂದುವ ರೆದು ಯಾವುದೇ ಸಕರಾತ್ಮಕ ಬೆಳವ ಣಿಗೆ ಕಂಡು ಬಂದಿಲ್ಲ, ಅಲ್ಲದೇ ಎರಡು ಗ್ರಾಮಸ್ಥರ ಮಧ್ಯೆ ದ್ವೇಷಪೂ ,ಅಹಿತಕರ ವಾತಾವರಣ ಇದೆ, 2020 ನೇ ಸಾಲಿನ ಎರಡು ಗ್ರಾಮಸ್ಥರು ಈ ಜಾತ್ರೆಯ ಸಂಬಂಧ ತಮ್ಮ  ಹಕ್ಕುಗಳನ್ನು ಪ್ರತಿಪಾದಿಸುವ ಕುರಿತು ಕೂಡ್ಲಿಗಿಯ ನ್ಯಾಯಾಲಯದಲ್ಲಿ  ಅರ್ಜಿಯನ್ನು ಸಲ್ಲಿಸಿದ್ದಾರೆ. ಅರ್ಜಿಯು ಹಾಲಿ ನ್ಯಾಯಾಲಯದಲ್ಲಿ  ವಿಚಾರಣೆಯಲ್ಲಿದೆ.

ಹಾಗಾಗಿ  ಸೆಪ್ಟಂಬರ್  12, 13 ,ರಂದು ಕುಸ್ತಿ ಪಂದ್ಯಾವಳಿಗಳನ್ನು ಮತ್ತು ಇನ್ನಿತರ ಪಲ್ಲಕ್ಕಿ ಉತ್ಸವ  ಕಾರ್ಯಕ್ರಮಗಳನ್ನು ಸಂಪೂರ್ಣವಾಗಿ ರದ್ದು ಪಡಿಸಲಾಗಿದೆ.

ಕಾಮೆಂಟ್‌ಗಳು

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

ಪಡಿತರ ವಿತರಣೆಯಲ್ಲಿ ಸರ್ವರ್ ದೋಷ ಕಾದುಕುಳಿತ ಬಡ ಕುಟುಂಬಗಳು

ರಾಜ್ಯೋತ್ಸವ ಕಾರ್ಯಕ್ರಮಕ್ಕೆ ಆಹ್ವಾನ ನೀಡದ ಪಿಡಿಓ,ಕಾರ್ಯದರ್ಶಿ

*ಪ.ಪಂ. ಸದಸ್ಯರ ಅಧಿಕಾರಾವಧಿ ಅಂತ್ಯ : ಆಡಳಿತಾಧಿಕಾರಿಯಾಗಿ ಜಿ.ಕೆ. ಅಮರೇಶ್ ನೇಮಕ*