ಮಸ್ಕಿ ಠಾಣೆ ಪಿ.ಎಸ್.ಐ ಮಣಿಕಂಠ ಅವರನ್ನು ಅಮಾನತು ಮಾಡುವಂತೆ ಪ್ರತಿಭಟನೆ
ಮಸ್ಕಿ : ಮಸ್ಕಿ ಠಾಣೆ ಪಿ.ಎಸ್.ಐ ಮಣಿಕಂಠನ ದರ್ಪದ ಪ್ರಕರಣಕ್ಕೆ ಸಂಬಂಧಿಸಿದಂತೆ ಪಿ.ಎಸ್.ಐ ಅನ್ನು ಅಮಾನತು ಮಾಡುವಂತೆ ಒತ್ತಾಯಿಸಿ ಠಾಣೆ ಮುಂದೆ 200 ಕ್ಕೂ ಹೆಚ್ಚು ಸಾರ್ವಜನಿಕರು ಪ್ರತಿಭಟಿಸಿ .ಮಸ್ಕಿ ಪೊಲೀಸ್ ಠಾಣೆಗೆ ಎಸ್ .ಪಿ ಬರುವಂತೆ ಜನರು ಪಟ್ಟು ಹಿಡಿದಿದ್ದಾರೆ.
ತಾಲೂಕಿನಲ್ಲಿ ಮಣ್ಣು ಸಾಗಿಸುತ್ತಿದ್ದ ರಾಮಲದಿನ್ನಿ ಗ್ರಾಮದ ನಿರುಪಾದಿ ಎಂಬ ವ್ಯಕ್ತಿ ಮೇಲೆ ಮಾರಣಾಂತಿಕ ಹಲ್ಲೆ ಮಾಡಿ, ಅವಾಚ್ಯ ಶಬ್ದಗಳಿಂದ ನಿಂದಿಸಿ ಬಾಯಿಯಲ್ಲಿ ಬೂಟು ಇಟ್ಟು ಸಾಯಿಸ್ತೀನಿ ಎಂದು ಪಿ.ಎಸ್.ಐ ಮಣಿಕಂಠ ದರ್ಪ ತೋರಿದ್ದಾರೆ ಎಂದು ಆರೋಪಿಸಲಾಗಿದೆ. ಹಲ್ಲೆಯಿಂದಾಗಿ ನಿರುಪಾದಿ ಎಂಬ ವ್ಯಕ್ತಿಯನ್ನು ರಾಯಚೂರಿನ ರಿಮ್ಸ್ ಆಸ್ಪತ್ರೆಗೆ ದಾಖಲಿಸಲಾಗಿದ್ದು ಚಿಕಿತ್ಸೆ ಪಡೆಯುತ್ತಿದ್ದಾರೆ.
ನಂತರ ಸುದ್ದಿ ತಿಳಿದು ವಾಲ್ಮೀಕಿ ನಾಯಕ ಜನಾಂಗದವರು ಮಸ್ಕಿ ಪೊಲೀಸ್ ಠಾಣೆಯ ಮುಂದೆ 200 ಕ್ಕೂ ಹೆಚ್ಚು ಜನರು ಜಮಾಯಿಸಿ ವ್ಯಕ್ತಿಯ ಮೇಲೆ ಹಲ್ಲೆ ಮಾಡಿದ ಪಿ.ಎಸ್.ಐ ಮಣಿಕಂಠ ಅವರನ್ನು ಅಮಾನತುಗೊಳಿಸಬೇಕು, ಅವರ ವಿರುದ್ಧ ಶಿಸ್ತುಕ್ರಮ ಕೈಗೊಳ್ಳಬೇಕು ಎಂದು ಸಿ.ಪಿ.ಐ ಬಾಲಚಂದ್ರ ಡಿ ಲಕ್ಕಂ ಅವರ ಮುಖಾಂತರ ಎಸ್.ಪಿ ಅವರಿಗೆ ಮನವಿ ಸಲ್ಲಿಸಿದರು.
ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ