ಕಾವೇರಿ ನದಿ ನೀರನ್ನು ತಮಿಳುನಾಡಿಗೆ ಬಿಡುವ ಸುಪ್ರೀಂ ಕೋರ್ಟ್ ಆದೇಶವನ್ನು ಖಂಡಿಸಿ ಧರಣಿ
ವರದಿ- ಮಂಜುನಾಥ್ ಕೋಳೂರು
ಕೊಪ್ಪಳ ಕೊಪ್ಪಳ ಸೆ 28 :- ಕಾವೇರಿ ನದಿ ನೀರು ಹಂಚಿಕೆ ವಿಚಾರದಲ್ಲಿ ಸುಪ್ರೀಂ ಕೋರ್ಟ್ ತೀರ್ಪನ್ನು ಖಂಡಿಸಿ ಇಂದು ಕನ್ನಡಪರ ಸಂಘಟನೆ ಒಕ್ಕೂಟದಿಂದ ಕರ್ನಾಟಕ ರಾಜ್ಯ ಬಂದ ಕರೆ ನೀಡಿರುವ ಹಿನ್ನೆಲೆಯಲ್ಲಿ ಕೊಪ್ಪಳ ಜಿಲ್ಲಾ ಸಂಪೂರ್ಣವಾಗಿ ಬಂದು ಮಾಡುವ ಮೂಲಕ ಕಾವೇರಿ ಕಣಿವೆಯ ಜಿಲ್ಲೆಗಳಾದ ಮಂಡ್ಯ, ಮೈಸೂರು, ಹಾಸನ , ಚಾಮರಾಜನಗರ ಜಿಲ್ಲೆಗಳ ರೈತರಿಗೆ ಬೆಂಬಲವಾಗಿ ಬಂದು ಭಾಗವಹಿಸುತ್ತಾ ಕರ್ನಾಟಕ ರಾಜ್ಯ ರೈತ ಜನತೆಗೆ ಅನ್ಯಾಯವಾಗಿ ಎಂದು ಕರ್ನಾಟಕ ರಕ್ಷಣ ವೇದಿಕೆಯ ಶಿವರಾಮೇಗೌಡ್ರು ಬನದ ರಕ್ಷಣಾ ವೇದಿಕೆಯ ಕಾರ್ಯಕರ್ತರು ಇಂದು ಶುಕ್ರವಾರದಂದು ಕೊಪ್ಪಳದ ಕೇಂದ್ರ ಬಿಂದುವಾದ ಅಶೋಕ್ ಸರ್ಕಲ್ ನಲ್ಲಿ ರಾಜ್ಯ ಸರ್ಕಾರದ ವಿರುದ್ಧ ಹಾಗೂ ಕೇಂದ್ರ ಸರಕಾರದ ವಿರುದ್ಧ ತಮಿಳುನಾಡಿಗೆ ನೀರು ಬಿಡುವುದನ್ನು ವಿರೋಧಿಸಿ ಪ್ರತಿಭಟನೆ ಮಾಡುತ್ತಾ ಮೆರವಣಿಗೆ ಮುಖಾಂತರ ಕೊಪ್ಪಳ ನಗರದ ವಿವಿಧ ಮಾರ್ಗಗಳಾದ ಅಶೋಕ್ ಸರ್ಕಲ್ ದಿಂದ ತಾಸಿಲ್ದಾರ್ ಸರ್ಕಲ್ ಬಳಸಿಕೊಂಡು ಗಂಜ ಸರ್ಕಲ್ ಬಳಸಿಕೊಂಡು ಹೊಸಪೇಟೆ ರೋಡ್ ಮಾರ್ಗವಾಗಿ ಜಿಲ್ಲಾಧಿಕಾರಿಗಳ ಕಚೇರಿಗೆ ಬಂದು .ಜಿಲ್ಲಾಧಿಕಾರಿಗಳ ಮುಖಾಂತರ ಸನ್ಮಾನ್ಯ ಭಾರತ ಸರ್ಕಾರ ಪ್ರಧಾನ ಮಂತ್ರಿಗಳಾದ ಶ್ರೀ ನರೇಂದ್ರ ಮೋದಿಜಿ ಅವರಿಗೆ ರಾಜ್ಯದ ರೈತ ಜನರ ಹಿತ ಕಾಪಾಡೋದಗೋಸ್ಕರ ಕಾವೇರಿ ನದಿ ನೀರನ್ನು ತಮಿಳುನಾಡಿಗೆ ಅರ್ಸುವುದನ್ನು ಕೂಡಲೇ ನಿಲ್ಲಿಸಬೇಕು. ಸುಪ್ರೀಂಕೋರ್ಟ್ ತೀರ್ಪನ್ನು ಪುನರ ಪರಿಶೀಲಿಸಬೇಕೆಂದು . ಮನವಿ ಪತ್ರದ ಮುಖಾಂತರ ಮನವಿ ಮಾಡಿಕೊಳ್ಳಲಾಯಿತು. ಧರಣಿ ಹೋರಾಟದಲ್ಲಿ ಶಿವರಾಮೇಗೌಡ್ರು ಬಣದ ಕರ್ನಾಟಕ ರಕ್ಷಣಾ ವೇದಿಕೆ ಹಂಗಾಮಿ ಜಿಲ್ಲಾ ಅಧ್ಯಕ್ಷ ಶಿವರಾಜ್ ಉಳ್ಳಾಗಡ್ಡಿ , ಜಿಲ್ಲಾ ಕಾರ್ಯಾಧ್ಯಕ್ಷ ರಾಜಶೇಖರ್ ಷಾಗೋಟಿ , ಜಿಲ್ಲಾ ಉಪಾಧ್ಯಕ್ಷ ಈಶಪ್ಪ ಮೂಲಿಮನಿ , ಜಿಲ್ಲಾ ಸಂಘಟನಾ ಕಾರ್ಯದರ್ಶಿ ಮೌನೇಶ್ ಹಡಪದ್ , ಜಿಲ್ಲಾ ಯುವ ಘಟಕದ ಅಧ್ಯಕ್ಷ ರಾಜೇಶ ಚಿನ್ನೂರ್ , ಕೊಪ್ಪಳ ತಾಲೂಕ ಅಧ್ಯಕ್ಷ ನಾಗರಾಜ್ ಒಣಕೆರಿ , ತಾಲೂಕು ಗೌರವಾಧ್ಯಕ್ಷ ಪಾಪಣ್ಣ ಶಾಪೂರು , ತಾಲೂಕ್ ಘಟಕದ ಸದಸ್ಯರಾದ ಶಂಕರ್ ಮೇಟಿ , ಆರ್ ಜೆ ತಿಮ್ಮನಗೌಡ, ಗಂಗಾವತಿ ತಾಲೂಕ್ ಅಧ್ಯಕ್ಷ ಹನುಮೇಶ್ ಭಟಾರಿ, ಸದಸ್ಯ ಮಂಜುನಾಥ ಓಜನಹಳ್ಳಿ ಇನ್ನು ಮುಂತಾದವರು ಭಾಗವಹಿಸಿದ್ದರು.
ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ