ನಾವು ಎಲ್ಲರೂ ಒಂದೇ ಎನ್ನುವ ಭಾವನೆ ಸಂಕೇತವೇ ಗಣೇಶ ಚತುರ್ಥಿ ಆಚರಣೆ :ಎಂ ಎಂ ಜೆ ಹರ್ಷವರ್ಧನ್
ಕೊಟ್ಟೂರು: ಪಟ್ಟಣದ ಸಾರ್ವಜನಿಕ ಗ್ರಂಥಾಲಯದ ಪಕ್ಕದಲ್ಲಿ ಯುವ ಭಾರತೀಯರ ವೇದಿಕೆ ಹಾಗೂ ಕಲ್ಪತರು ಕಲಾ ಟ್ರಸ್ಟ್ ಸಂಯೋಗದಲ್ಲಿ ಗುರುವಾರ ಹಮ್ಮಿಕೊಂಡಿರುವ ಗಣೇಶೋತ್ಸವ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ನಾವೆಲ್ಲರೂ ಒಂದೇ ಅನ್ನುವ ಭಾವೈಕ್ಯತೆ ಬೆಳೆಸಿಕೊ ಳ್ಳಬೇಕು. ಗುರುವಿನ ಗರಡಿಯಲ್ಲಿ ಪಳ ಗಿದರೆ ಕಠಿಣವಾದ ಸಾಧನೆ ಸಹ ಮಾಡಬಹುದು ಎಂದು ಡಾ. ತಿಪ್ಪೇ ಸ್ವಾಮಿ ವೆಂಕಟೇಶ್ ತಿಳಿಸಿದರು.
ನಂತರ ಎಂ. ಎಂ. ಜೆ. ಹರ್ಷವರ್ಧನ್ ಮಾತಾನಾಡಿ ಸ್ವಾತಂತ್ರ್ಯ ಪೂರ್ವದಲ್ಲಿ ಸಾರ್ವಜನಿಕರು ಒಗ್ಗಟ್ಟಾಗಿ ಹೋರಾಡಲು ಬಾಲ ಗಂಗಾಧರ ತಿಲಕ್ ಅವರು ಗಣಪತಿ ಹಬ್ಬದಿಂದ ಚಾಲನೆ ಎಸ್ ಬಿ ನೀಡಿದ್ದರು ಎಂದು ತಿಳಿಸಿದರು.
ಯುವ ಭಾರತೀಯರ ವೇದಿಕೆಯ 90ಕ್ಕೂ ಹೆಚ್ಚಿನ ಸದಸ್ಯರು ಜಾತ್ಯಾತೀತ ವಾಗಿ ನಾವು ಎಲ್ಲರೂ ಒಂದೇ ಎನ್ನುವ ಭಾವನೆ ಇರುವುದು ಶ್ಲಾಘನೆ ಎಂದರು.
ಕೊಟ್ಟೂರಿನಲ್ಲಿ ಕಲೆ, ಸಾಹಿತ್ಯ, ಸಂಸ್ಕೃತಿ, ಸಂಗೀತ ನೃತ್ಯ ರಂಗಭೂಮಿ ಕಲಾವಿದ ರನ್ನು ಪ್ರೋತ್ಸಾಹಿಸಿ,ಕಲಾ ಪ್ರದರ್ಶನ ಅನಾವರಣದಲ್ಲಿ ಪ್ರೇಕ್ಷಕರು ವೀಕ್ಷಿಸಿ ಪ್ರೋತ್ಸಾಹ ನೀಡ ಬೇಕು ಎಂದು ತಿಳಿಸಿದರು.
ನಂತರ ಕಲ್ಪತರು ಕಲಾ ಟ್ರಸ್ಟ್ ಅಧ್ಯಕ್ಷರು ಚಿಗಟೇರಿ ಕೊಟ್ರೇಶಿ ಮಾತಾನಾಡಿ ಹಂಪಿ ಉತ್ಸವ ಮಾದರಿಯಲ್ಲಿ ಕೊಟ್ಟೂರು ಉತ್ಸವ ಆಚರಣೆ ಗೊಳ್ಳಲು ಎಲ್ಲಾ ಸಂಘ ಸಂಸ್ಥೆಗಳು ಮತ್ತು ಪಕ್ಷಾತೀತ, ಜಾತ್ಯತೀತವಾಗಿ ಎಲ್ಲಾರ ಸಹಕಾರ ಅಗತ್ಯ, ಎಂದರು.
ಡಾ.ಸಿದ್ಧಲಿಂಗ ಶಿವಾಚಾರ್ಯ ಸ್ವಾಮೀಜಿ ಡೊಣುರು ಚಾನುಕೋಟಿ ಮಠ ಇವರು ಆಶೀರ್ವಚನ ನೀಡಿದರು
ಈ ಸಮಯದಲ್ಲಿ ಮೈದೂರು ಪ್ರಕಾಶ್, ದೊಡ್ಡ ವೀರಯ್ಯ, ನಾಗ ರಾಜ್ ಎಚ್, ವಿಜಯ್ ಜಿನಗಾರ ಇವರಿಗೆ ಶ್ರೀ ಗುರು ಬಸವೇಶ್ವರ ಸ್ವಾಮಿಯ ಭಾವಚಿತ್ರವನ್ನು ನೀಡಿ ಸನ್ಮಾನಿಸಲಾಯಿತು ಹೆಚ್ ಸಿ ಆಕರ್ಷ ಪ್ರಾಸ್ತಾವಿಕವಾಗಿ ಮಾತನಾಡಿದರು.ಸಿ ಎಂ ನಂದೀತ ಪ್ರಾರ್ಥಿಸಿದರು.ಸಂಜಯ್ ಕಾರ್ಯಕ್ರಮ ನಿರೂಪಿಸಿ ಹೊಸಪೇಟೆಯ ಶ್ರೀ ಅಂಜಲಿ ಭರತ ನಾಟ್ಯ ಕಲಾ ಕೇಂದ್ರದ ವಿದ್ಯಾರ್ಥಿಗಳು ಭರತನಾಟ್ಯ ಪ್ರದರ್ಶನ ನೀಡಿದರು.
ಈ ಸಂದರ್ಭದಲ್ಲಿ ಯುವ ಭಾರತೀಯರ ವೇದಿಕೆಯ ಅಧ್ಯಕ್ಷರಾದ ವಿಶ್ವಾ ರಾಧ್ಯ, ಮೈಸೂರು ಪ್ರಕಾಶ್, ಎಸ್ ಚೇತನ್ ಕುಮಾರ್, ನಾಗರಾಜ್ ಎಚ್, ಜಿನ್ನಗಾರ ವಿಜಯ, ಚೇತನ್, ಚನ್ನಪ್ಪ, ಪ್ರಸಾದ್, ಇನ್ನು ಯುವ ಭಾರತೀಯರ ವೇದಿಕೆಯ ಸದಸ್ಯರು ಉಪಸ್ಥಿತರಿದ್ದರು.
Thank u brother ❤️
ಪ್ರತ್ಯುತ್ತರಅಳಿಸಿ