*ಅಧಿಕಾರಿಗಳೊಂದಿಗೆ ಸಭೆ: ಮುಂಗಾರು ಹಂಗಾಮಿನ ಪ್ರಗತಿ ಪರಿಶೀಲನೆ*
ಕೊಪ್ಪಳ ಜುಲೈ 14 (ಕರ್ನಾಟಕ ವಾರ್ತೆ): 2023-24ನೇ ಸಾಲಿನ ಮುಂಗಾರು ಹಂಗಾಮಿನ ಬಿತ್ತನೆ ಪ್ರಮಾಣ, ರಸಗೊಬ್ಬರ ವಿತರಣೆ ಸೇರಿದಂತೆ ಇನ್ನಿತರ ವಿಷಯಗಳು ಕುರಿತು ಚರ್ಚಿಸಲು ಜಿಲ್ಲಾಧಿಕಾರಿಗಳಾದ ಎಂ.ಸುಂದರೇಶ ಬಾಬು ಅವರು ಜುಲೈ 14ರಂದು ಕೃಷಿ ಸೇರಿದಂತೆ ವಿವಿಧ ಇಲಾಖೆಗಳ ಅಧಿಕಾರಿಗಳೊಂದಿಗೆ ಸಭೆ ನಡೆಸಿದರು. ಜಿಲ್ಲಾಧಿಕಾರಿಗಳ ಕಚೇರಿಯ ಸಭಾಂಗಣದಲ್ಲಿ ನಡೆದ ಸಭೆಯಲ್ಲಿ, 2023-24ನೇ ಸಾಲಿನಲ್ಲಿ ಬೆಳೆವಾರು ಬೀಜ ಬಿತ್ತನೆ ಪ್ರಗತಿ, ತಾಲೂಕುವಾರು ಬಿತ್ತನ ಬೀಜ ದಾಸ್ತಾನು ಮತ್ತು ವಿತರಣೆ, ತಾಲೂಕುವಾರು, ಮಾಹೆವಾರು ರಸಗೊಬ್ಬರ ಹಂಚಿಕೆ, ದಾಸ್ತಾನು ಮತ್ತು ಮಾರಾಟದ ವಿವರ, ಇ-ಕೆವೈಸಿ ಪ್ರಗತಿ, ಪ್ರಧಾನಮಂತ್ರಿ ಫಸಲ್ ಬಿಮಾ ಯೋಜನೆ ಅನುಷ್ಠಾನ ಸೇರಿದಂತೆ ಹಲವಾರು ವಿಷಯಗಳ ಬಗ್ಗೆ ಜಿಲ್ಲಾಧಿಕಾರಿಗಳು ಅಧಿಕಾರಿಗಳಿಂದ ಮಾಹಿತಿ ಪಡೆದು ಪರಿಶೀಲಿಸಿದರು. ಈ ವೇಳೆ ಜಿಲ್ಲಾಧಿಕಾರಿಗಳು ಮಾತನಾಡಿ, ಬಿತ್ತನೆಗೆ ಪೂರಕವಾದಷ್ಟು ಮಳೆ ಬೀಳದಿದ್ದ ಪಕ್ಷದಲ್ಲಿ ಭೂಮಿಗೆ ತಕ್ಕಂತೆ ಬೆಳೆ ತೆಗೆಯಲು, ಸಜ್ಜೆ, ನವಣೆ, ಸಾಮೆಯಂತಹ ಸಿರಿಧಾನ್ಯಗಳನ್ನು ಬಿತ್ತನೆ ಮಾಡಲು, ವಾತಾವರಣಕ್ಕೆ ಹೊಂದಿಕೊಳ್ಳುವ ವಿವಿಧ ತಳಿಯ ಬಹುವಿಧದ ಬೆಳೆಗಳ ಬೀಜ ಬಿತ್ತನೆ ಮಾಡಲು ಮತ್ತು ಈಗಾಗಲೇ ಬಿತ್ತನೆಯಾಗಿ ಮೊಳಕೆ ಸೇರಿದಂತೆ ವಿವಿಧ ಹಂತಗಳಲ್ಲಿ ಇರುವ ಬೆಳೆಗಳಿಗೆ ತಗುಲುವ ರೋಗಗಳ ಬಗ್ಗೆ ಪತ್ತೆ ಹಚ್ಚಿ ಅದಕ್ಕೆ ಔಷಧೋಪಚಾರದ ಬಗ್ಗೆ ರೈತರಿಗೆ ಸಲಹೆ ಮಾಡಬೇಕು ಎಂದು ತಿಳಿಸಿದರು. ಬಿತ್ತನೆ ಬೀಜ, ರಸ