537ನೇ ಕನಕದಾಸರ ಜಯಂತಿ ಆಚರಣೆ

 

ಮಸ್ಕಿ : ತಾಲೂಕಿನ ಬುದ್ದಿನ್ನಿ ಎಸ್ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ 537ನೇ ಕನಕದಾಸರ ಜಯಂತಿ ಅಂಗವಾಗಿ ಭಕ್ತ ಕನಕದಾಸರ ಫೋಟೋಗೆ ಮಾಲಾರ್ಪಣೆ ಮಾಡುವ ಮೂಲಕ ಶಾಲೆಯ ಎಸ್ ಡಿಎಂಸಿ ಅಧ್ಯಕ್ಷ ನಾಗರೆಡ್ಡೆಪ್ಪ ದೇವರಮನಿ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದರು. 

ನಂತರ ಶಾಲೆಯ ಅತಿಥಿ ಶಿಕ್ಷಕಿ ರಾಚಮ್ಮ ಸಾರಂಗಮಠ ಕನಕದಾಸರ ಜೀವನ ಚರಿತ್ರೆಯ ಕುರಿತು ಮಕ್ಕಳಿಗೆ ಉಪನ್ಯಾಸ ನೀಡಿದರು. ಹಿರಿಯ ಶಿಕ್ಷಕಿ ಪ್ರೇಮಾ ಸ್ವಾಗತಿಸಿ ನಿರೂಪಿಸಿದರು.

ಈ ಸಂದರ್ಭದಲ್ಲಿ ಶಾಲೆಯ ಪ್ರಭಾರಿ ಮುಖ್ಯಗುರುಗಳಾದ ಹೊಳೆಬಸಪ್ಪ ಸಜ್ಜನ್,ಹಿರಿಯ ಶಿಕ್ಷಕರಾದ ಆದೇಶ ಸಾನಬಾಳ, ಅತಿಥಿ ಶಿಕ್ಷಕರಾದ ಸಿದ್ದಪ್ಪ ಹೂವಿನಭಾವಿ, ಹನುಮಂತ ಭಜಂತ್ರಿ ,ಆರೋಗ್ಯಮೇರಿ ಹೂವಿನಭಾವಿ, ಸವಿತಾ ಮಸ್ಕಿ,ಎಲ್ ಕೆ ಜಿ ಯುಕೆಜಿ ಸಹಾಯಕಿ ಹುಲಿಗೆಮ್ಮ ದೇವರಮನಿ ಹಾಗೂ ಶಾಲಾ ಮಕ್ಕಳು ಹಾಜರಿದ್ದರು.

ಕಾಮೆಂಟ್‌ಗಳು

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

ಕ್ರಿಯಾಶೀಲರಾಗಲು ಕ್ರೀಡೆಗಳು ಸಹಕಾರಿ -ಕೆ ನೇಮಿರಾಜನಾಯ್ಕ

ರಾಜ್ಯೋತ್ಸವ ಕಾರ್ಯಕ್ರಮಕ್ಕೆ ಆಹ್ವಾನ ನೀಡದ ಪಿಡಿಓ,ಕಾರ್ಯದರ್ಶಿ

*ಪ.ಪಂ. ಸದಸ್ಯರ ಅಧಿಕಾರಾವಧಿ ಅಂತ್ಯ : ಆಡಳಿತಾಧಿಕಾರಿಯಾಗಿ ಜಿ.ಕೆ. ಅಮರೇಶ್ ನೇಮಕ*