ಪೋಸ್ಟ್‌ಗಳು

2025 ರಿಂದ ಪೋಸ್ಟ್‌ಗಳನ್ನು ತೋರಿಸುತ್ತಿದೆ

ಪಡಿತರ ವಿತರಣೆಯಲ್ಲಿ ಸರ್ವರ್ ದೋಷ ಕಾದುಕುಳಿತ ಬಡ ಕುಟುಂಬಗಳು

ಇಮೇಜ್
  ಕೊಟ್ಟೂರು : ರಾಜ್ಯದಲ್ಲಿ ಪಡಿತರದಿಂದಲೇ ತಮ್ಮ ನಿತ್ಯ ಜೀವನ ನಡೆಸುವ ಹಲವಾರು ಕುಟುಂಬಗಳಿವೆ. ಪ್ರತಿ ತಿಂಗಳು ಪಡಿತರ ತಂದು ಮನೆಯಲ್ಲಿ ಊಟ ಮಾಡುವ ಎಷ್ಟೋ ಕುಟುಂಬಗಳು ಇದನ್ನೇ ನಂಬಿಕೊಂಡಿವೆ. ಆದರೆ ಈ ತಿಂಗಳ ಪಡಿತರ ವಿತರಣೆಯಲ್ಲಿ ಆನ್‌ಲೈನ್ ಸರ್ವರ್ ದೋಷ ಬಂದಿರುವುದರಿಂದ ಪಡಿತರ ವಿತರಣೆಗೆ ಅಡಚಣೆ ಉಂಟಾಗಿದೆ. ಕೊಟ್ಟೂರಿನ ಅಕ್ಕಿ ವಿತರಣಾ ಹಲವು ಕೇಂದ್ರದಲ್ಲಿ ಬೆಳಗಿನಿಂದಲೂ ತಮ್ಮ ಕೆಲಸ ಕಾರ್ಯಗಳನ್ನು ಬಿಟ್ಟು ಪಡಿತರ ವಿತರಣಾ ಕೇಂದ್ರಗಳ ಬಳಿ ಬಂದು ಕಾದು ಕಾದು ಸುಸ್ತಾಗಿದ್ದಾರೆ.  ಆಹಾರ ಇಲಾಖೆಯ ಅಧಿಕಾರಿಗಳು ಏನು ಮಾಡುತ್ತಿದ್ದಾರೆ ಎಂಬ ಅನುಮಾನ ಮೂಡಿದೆ. ಮೇಲಾಧಿಕಾರಿಗಳು ಇತ್ತ ಗಮನ ಹರಿಸಿ, ಶೀಘ್ರವೇ ಸರ್ವರ್ ದೋಷಗಳನ್ನು ಪರಿಹರಿಸಲು ಮುಂದಾಗಬೇಕಿದೆ.   ಆಹಾರ ಇಲಾಖೆಯ ಉಪನಿರ್ದೇಶಕರಿಗೆ ಕರೆ ಮಾಡಿದರೆ, ಫೋನ್ ಸ್ವೀಕರಿಸುತ್ತಿಲ್ಲ, ನಮ್ಮ ಕಷ್ಟ ಕೇಳುವವರು ಯಾರು ಎಂದು ಪತ್ರಿಕಾ ಮೂಲಕ ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದರು   ಸರ್ವರ್ ದೋಷವಿರುವುದನ್ನು ಸರಿಪಡಿಸಲು ಸಂಬಂಧಪಟ್ಟ ಅಧಿಕಾರಿಗಳಿಗೆ ಸೂಚನೆ ನೀಡಿ, ಸರಿಪಡಿಸಲು ಕ್ರಮ ವಹಿಸುವೆ. ವಿಜಯನಗರ ಜಿಲ್ಲಾಧಿಕಾರಿಗಳು ನಮ್ಮ ಲಾಗಿನ್ ಮತ್ತು ಪಬ್ಲಿಕ್ ಲಾಗಿನ್ ಇರುವುದಿಲ್ಲ ಆದರೂ ಕೂಡ ಸರ್ವರ್ ಡೌನ್ ಆಗಿದ್ದು, ಈ ಬಗ್ಗೆ ಮೇಲಾಧಿಕಾರಿಗಳಿಗೆ ವರದಿ ಮಾಡಲಾಗಿದೆ. ಶೀಘ್ರವೇ ಇರುವ ದೋಷವನ್ನು ಸರಿಪಡಿಸಿ ಶೀಘ್ರ ಪಡಿತರ ವಿತರಣೆಗೆ ಕ್ರಮ ವಹ...

*ಪ.ಪಂ. ಸದಸ್ಯರ ಅಧಿಕಾರಾವಧಿ ಅಂತ್ಯ : ಆಡಳಿತಾಧಿಕಾರಿಯಾಗಿ ಜಿ.ಕೆ. ಅಮರೇಶ್ ನೇಮಕ*

ಇಮೇಜ್
ಕೊಟ್ಟೂರು ಪಟ್ಟಣ ಪಂಚಾಯಿತಿಗೆ 2018ರಲ್ಲಿ ಚುನಾವಣೆ ನಡೆದು, ಆಯ್ಕೆಯಾದ ಸದಸ್ಯರುಗಳು ಆರಂಭದಲ್ಲೇ ಅಧ್ಯಕ್ಷ, ಉಪಾಧ್ಯಕ್ಷರ ಮೀಸಲಾತಿ ಸಂಬಂಧ ಕರ್ನಾಟಕ ಉಚ್ಛ ನ್ಯಾಯಾಲಯಕ್ಕೆ ಹೋಗಿದ್ದರು. ನಂತರ ಘನ ನ್ಯಾಯಾಲಯವು ಅಧ್ಯಕ್ಷ ಉಪಾಧ್ಯಕ್ಷರ ಹಸಿರು ನಿಶಾನೆ ತೋರಿಸಿದ ಹಿನ್ನೆಲೆಯಲ್ಲಿ ದಿನಾಂಕ 06-11-2020 ರಂದು ಅಧ್ಯಕ್ಷ ಉಪಾಧ್ಯಕ್ಷರ ಆಯ್ಕೆಯಾಗಿತ್ತು. ಅಧ್ಯಕ್ಷರಾಗಿ ಭಾರತೀ ಸುಧಾಕರ್ ಪಾಟೀಲ್ ಅಧ್ಯಕ್ಷರಾಗಿ, ಉಪಾಧ್ಯಕ್ಷರಾಗಿ ಶಫೀ ಆಯ್ಕೆಯಾಗಿದ್ದರು. ಎರಡೂವರೆ ವರ್ಷಗಳ ನಂತರ ದಿನಾಂಕ 18-05-2023 ರಿಂದ 30-08-2024 ರವರೆಗೆ ಮಧ್ಯದ ಅವಧಿಯಲ್ಲಿ ಸರ್ಕಾರ ಆಡಳಿತಾಧಿಕಾರಿ ನೇಮಕ ಮಾಡಿ ಆದೇಶ ಹೊರಡಿಸಿತ್ತು. ದಿನಾಂಕ 30-08-2024 ರಿಂದ ಎರಡನೇ ಅವಧಿಗೆ ಅಧ್ಯಕ್ಷ ಉಪಾಧ್ಯಕ್ಷರ ಆಯ್ಕೆಯಾಗಿತ್ತು. ಪಕ್ಷೇತರರಾಗಿ ಗೆದ್ದುಬಂದ ಬಿ.ರೇಖಾ ಅಧ್ಯಕ್ಷರಾಗಿ, ಸಿದ್ದಯ್ಯ ಉಪಾಧ್ಯಕ್ಷರಾಗಿ ಆಯ್ಕೆಯಾಗಿದ್ದರು. ದಿನಾಂಕ 06-11-2025ಕ್ಕೆ ಎರಡನೇ ಅವಧಿಗೆ ಅಧ್ಯಕ್ಷ, ಉಪಾಧ್ಯಕ್ಷರ ಅವಧಿ ಮುಗಿದು, ಅಲ್ಲಿಂದ ಮತ್ತೇ ನ್ಯಾಯಾಲಯಕ್ಕೆ ಮೊರೆ ಹೋಗಿದ್ದರು. ಘನ ನ್ಯಾಯಾಲಯವು ಈ ಪ್ರಕರಣವನ್ನು ಸುದೀರ್ಘವಾಗಿ ಆಲಿಸಿ, ದಿನಾಂಕ 12-12-2025 ರಂದು ಮಧ್ಯಂತರ ತಡೆಯಾಜ್ಞೆ ತೆರವುಗೊಳಿಸಿದ್ದರಿಂದ ಸರ್ಕಾರ ಆಡಳಿತಾಧಿಕಾರಿ ನೇಮಕ ಮಾಡಿದೆ. ಆಡಳಿತಾಧಿಕಾರಿಗಳಾಗಿ ಕೊಟ್ಟೂರು ತಹಶೀಲ್ದಾರರು ಹಾಗೂ ತಾಲ್ಲೂಕು ದಂಡಾಧಿಕಾರಿಗಳಾದ ಜಿ.ಕೆ. ಅಮರೇಶ್, ಕೊಟ್ಟೂರು ಪಟ್ಟಣ ಪಂಚಾಯಿತಿ ಆಡಳ...

ಆಧಾರದ ಎಲ್ಲಾ ಸೌಲಭ್ಯಗಳು ಅಂಚೆ ಕಛೇರಿಯಲ್ಲಿ ಲಭ್ಯ

ಇಮೇಜ್
  ಕೊಟ್ಟೂರು: ಅಂಚೆ ಕಛೇರಿಯು ಗ್ರಾಹಕರಿಗೆ ನೂರಕ್ಕೂ ಹೆಚ್ಚು ಸೌಲಭ್ಯಗಳನ್ನು ಕೊಡುತ್ತಿದೆ, ಕಳೆದ ಒಂದು ದಶಕದಿಂದಲೂ ಆಧಾರದ ಎಲ್ಲಾ ಸೌಲಭ್ಯಗಳನ್ನು ಅಂಚೆ ಕಛೇರಿಯಲ್ಲಿ ಕೊಡಲಾಗುತ್ತದೆ, ಈ ನಿಟ್ಟಿನಲ್ಲಿ ಕೊಟ್ಟೂರಿನ ನೂತನ ಅಂಚೆ ಕಛೇರಿಯು ಕೊಟ್ಟೂರು ಹಾಗೂ ಸುತ್ತಮುತ್ತಲಿನ ಎಲ್ಲಾ ನಾಗರಿಕರಿಗೆ ಹೊಸ ಆಧಾರ್ ಕಾರ್ಡ್ ಮಾಡಿಸುವುದು, ಆಧಾರ್ ಕಾರ್ಡ್ ನಲ್ಲಿ ಫೋನ್ ನಂಬರ್ ತಿದ್ದುಪಡಿ ಮಾಡುವುದು, ಹೆಸರು ಮತ್ತು ವಿಳಾಸಗಳನ್ನು ತಿದ್ದುಪಡಿ ಮಾಡುವುದು, ಆಧಾರ್ ಬಯೋಮೆಟ್ರಿಕ್ ಮಾಡುವುದು, ಆಧಾರ್ ಕಾರ್ಡ್ ಪ್ರಿಂಟ್ ತೆಗೆಯುವುದು ಈ ಎಲ್ಲಾ ಸೌಲಭ್ಯಗಳು ಕೊಟ್ಟೂರಿನ ನೂತನ ಅಂಚೆ ಕಛೇರಿಯಲ್ಲಿ ಲಭ್ಯವಿವೆ, ಆಧಾರ್ ಕಾರ್ಡ್ ನಾಗರೀಕರ ಹಲವಾರು ಕೆಲಸ ಕಾರ್ಯಗಳಲ್ಲಿ ಮತ್ತು ಶಾಲಾ ಕಾಲೇಜುಗಳಲ್ಲಿ, ಸರ್ಕಾರದ ಸೌಲಭ್ಯಗಳನ್ನು ಪಡೆಯುವಲ್ಲಿ ಪ್ರಮುಖ ಪಾತ್ರವಹಿಸಿದೆ, ಈ ನಿಟ್ಟಿನಲ್ಲಿ ನಾಗರಿಕರಿಗೆ ಆಧಾರ್ ಕಾರ್ಡ್ ತಿದ್ದುಪಡಿ ಅವಶ್ಯಕತೆ ತುಂಬಾ ಇದೆ, ಈ ಸೌಲಭ್ಯಗಳನ್ನು ನಾಗರಿಕರು ಬಳಸಿಕೊಳ್ಳಬೇಕೆಂದು ಅಂಚೆ ಅಧೀಕ್ಷಕರಾದ ಪಿ ಚಿದಾನಂದ ಅವರು ಪತ್ರಿಕೆಗೆ ತಿಳಿಸಿದರು, ( ಬಾಕ್ಸ ಐಟಂ ) ಅಂಚೆ ಕಛೇರಿಯ ಹಳೆ ಕಟ್ಟಡದಲ್ಲಿ ನಾಗರಿಕರು ಬಂದು ನಿಲ್ಲುವ ಜಾಗದ ಅನಾನುಕೂಲ ಬಾಳ ಆಗಿದ್ದರಿಂದ ಆಧಾರ್ ಮಾಡಲು ತೊಂದರೆಯಾಗುತ್ತಿತ್ತು, ನೂತನ ಅಂಚೆ ಕಚೇರಿಯಲ್ಲಿ ಆಧಾರಿಗೋಸ್ಕರ ಬೇರೆ ವಿಭಾಗವನ್ನೇ ಮಾಡಿದ್ದಾರೆ ಕೊಟ್ಟೂರು ತಾಲೂಕಿನ ಎಲ್ಲಾ ನಾಗರಿಕರಿಗೂ ಈ ಸೌಲಭ್ಯ ಸ...

*ಡಾ || ಪಂಡಿತ್ ಪುಟ್ಟರಾಜ ಕವಿ ಗವಾಯಿಗಳವರ ಹದಿನಾರನೇ ಸ್ವರ ಶ್ರದ್ಧಾಂಜಲಿ ಕಾರ್ಯಕ್ರಮ*

ಇಮೇಜ್
ಕೊಟ್ಟೂರು : ಇಂದು ಕಾಲೇಜ್ ಕೊಟ್ಟೂರಿನಲ್ಲಿ ಗವಾಯಿಗಳವರ ಹದಿನಾರನೇ ಸ್ವರ ಶ್ರದ್ಧಾಂಜಲಿ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ಡಾ || ಪಂಡಿತ್ ಪುಟ್ಟರಾಜ ಕವಿ ಗವಾಯಿಗಳವರು ಉಭಯ ಗಾನ ವಿಶಾರದರು, ತ್ರಿಭಾಷಾ ಕವಿವರ್ಯ, ಸಕಲ ವಾದ್ಯ ಕಂಠೀರವ ನಾಡೋಜ ಹಾಗೂ ಕಾಳಿದಾಸ ಪ್ರಶಸ್ತಿ ವಿಜೇತರು ಪರಮಪೂಜ್ಯ ಡಾ || ಪಂಡಿತ್ ಪುಟ್ಟರಾಜ ಗವಾಯಿಗಳವರ ಹದಿನೈದನೇ ಸ್ವರ ಶ್ರದ್ಧಾಂಜಲಿ ಕಾರ್ಯಕ್ರಮವನ್ನು ದಿನಾಂಕ 12-12-2024 ರ ಶುಕ್ರವಾರದಂದು ಸಂಜೆ 6 :00 ಕ್ಕೆ ಸರಿಯಾಗಿ ಕೊಟ್ಟೂರಿನ ಇಂದು ಕಾಲೇಜ್ ನಲ್ಲಿ ಆಯೋಜನೆ ಮಾಡಲಾಗಿದೆ. ಅಂದು ಸಂಜೆ *ಸೋನಿ ಹಿಂದಿ ವಾಹಿನಿಯ Indion Idol ಕಾರ್ಯಕ್ರಮ ಖ್ಯಾತಿಯ ಹಾಗೂ Zee ಕನ್ನಡ ಸರಿಗಮಪ ಕಾರ್ಯಕ್ರಮ ಖ್ಯಾತಿಯ ಗಾಯಕಿ ಸರಿಗಮಪ ಸೀಸನ್ 21 ರ ವಿನ್ನರ್ ಶಿವಾನಿ ಶಿವದಾಸ್ ತಂಡದವರಿಂದ* ಸಂಗೀತ ಕಾರ್ಯಕ್ರಮವಿರುತ್ತದೆ ಆತ್ಮೀಯ ಕಲಾಭಿಮಾನಿಗಳು ಕಲಾ ಪ್ರೋತ್ಸಾಹಕರು ತಾವೆಲ್ಲರೂ ಈ ಕಾರ್ಯಕ್ರಮಕ್ಕೆ ಆಗಮಿಸಿ ಯಶಸ್ವಿಗೊಳಿಸಬೇಕಾಗಿ ಕೇಳಿಕೊಳ್ಳುತ್ತೇವೆ. ಮತ್ತು ಸುಧಾಕರ ಪಾಟೀಲ್ ಅಧ್ಯಕ್ಷರು ಡಾ || ಪಂಡಿತ್ ಪುಟ್ಟರಾಜ ಕವಿ ಗವಾಯಿಗಳವರ ಸೇವಾ ಸಮಿತಿ ಕೊಟ್ಟೂರು ವತಿಯಿಂದ ಸರ್ವರಿಗೂ ಪ್ರೀತಿಪೂರ್ವಕ ಸುಸ್ವಾಗತ ಪತ್ರಿಕೆ ಮೂಲಕ ತಿಳಿಸಲಾಯಿತು.

" ಶ್ರೀ ಗುರು ಕೊಟ್ಟೂರೇಶ್ವರ ಕಾರ್ತಿಕೋತ್ಸವದಲ್ಲಿ ಜಿಲ್ಲಾಧಿಕಾರಿಗಳು ಭಕ್ತಿ ಸಮರ್ಪಣೆ "

ಇಮೇಜ್
 *ವಿಜೃಂಭಣೆಯಿಂದ ಜರುಗಿದ ಶ್ರೀ ಗುರುವಿನ ಕಾರ್ತಿಕೋತ್ಸವ* ಕೊಟ್ಟೂರು :ಪಟ್ಟಣದ ಶ್ರೀ ಗುರು ಕೊಟ್ಟೂರೇಶ್ವರ ಸ್ವಾಮಿಯ ಕಾರ್ತಿಕೋತ್ಸವ ಅಸಂಖ್ಯಾತ ಭಕ್ತರ ಸಮ್ಮುಖದಲ್ಲಿ ಸೋಮವಾರ ವಿಜೃಂಭಣೆಯಿಂದ ಜರುಗಿತು. ದೇವಸ್ಥಾನದ ಮುಂಭಾಗದ ಆವರಣದಲ್ಲಿ ಸಾಲಾಗಿ ಜೋಡಿಸಿದ್ದ ಮಣ್ಣಿನ ಪ್ರಣತಿಯಲ್ಲಿ ಸಂಜೆ ೬ ಗಂಟೆ ಹೊತ್ತಿಗೆ ಸ್ವಾಮೀಜಿಗಳು, ಅಧಿಕಾರಿಗಳು, ಪ್ರಮುಖರು ದೀಪ ಹಚ್ಚುವ ಮೂಲಕ ಚಾಲನೆ ನೀಡಿದರು. ನಂತರದಲ್ಲಿ ಸ್ವಾಮಿಯ ಭಕ್ತರು ಪ್ರಣತಿಯಲ್ಲಿ ಎಣ್ಣೆ, ಬತ್ತಿ ಹಾಕಿ ಭಕ್ತಿ ಸಮರ್ಪಿಸಿದರು. ಹರಕೆ ರೂಪದಲ್ಲಿ ಭಕ್ತರು ಕೊಬ್ಬರಿ ಸುಟ್ಟರು. ಕಾರ್ತಿಕೋತ್ಸವಕ್ಕೆ ಕ್ರಿಯಾಮೂರ್ತಿಗಳಾದ  ಶ್ರೀ ಶಿವಪ್ರಕಾಶ ಕೊಟ್ಟೂರು ದೇವರು, ಸೋಮಶಂಕರ ಸ್ವಾಮಿಗಳು, ಜಿಲ್ಲಾಧಿಕಾರಿ ಕವಿತಾ ಮನ್ನಿಕೇರಿ,ಪಿ.ಎಚ್.ದೊಡ್ಡರಾಮಣ್ಣ, ಬಿ.ಡಿ.ಸಿ.ಸಿ.ಬ್ಯಾಂಕ್ ಐ ದಾರುಕೇಶ್, ಕಾಂಗ್ರೆಸ್ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಅಡಿಕೆ ಮಂಜುನಾಥ್, ಧರ್ಮಕರ್ತ ಎ.ಕೆ ಶೇಖರಯ್ಯ, ಧಾರ್ಮಿಕ ಇಲಾಖೆ ಎಸಿ ಪ್ರಕಾಶರಾವ್, ದೇವಸ್ಥಾನ ಇಒ ಮಲ್ಲಪ್ಪ, ಹಾಗೂ ಮುಖಂಡರು, ದೇವಸ್ಥಾನದ ಸಿಬ್ಬಂದಿಯವರು ಇದ್ದರು. ಕಾರ್ತಿಕೋತ್ಸವ ಪ್ರಯುಕ್ತ ಬೆಳಗಿನಿಂದಲೇ ಸ್ಥಳೀಯ ಹಾಗೂ ನಾನಾ ಕಡೆಗಳಿಂದ ಆಗಮಿಸಿದ್ದ ಭಕ್ತರು ಸ್ವಾಮಿ ದರ್ಶನ ಪಡೆದರು. ದೂರದ ಊರುಗಳಿಂದ ಅನೇಕ ಭಕ್ತರು ಕಾಲ್ನಡಿಗೆಯಲ್ಲಿ ಆಗಮಿಸಿದ್ದರು. ಸ್ವಾಮಿಯ ತೊಟ್ಟಿಲುಮಠ, ಗಚ್ಚಿನಮಠಗಳಲ್ಲಿಯೂ ಭಕ್ತರು ಸ್ವಾಮಿ ಆರ್ಶೀವಾದ ಪಡೆದುಕೊಂಡರು.

*ಹಸಿರು ಹೊನಲು ತಂಡದಿಂದ ಪರಿಸರ ಜಾಗೃತಿ*

ಇಮೇಜ್
ಕೊಟ್ಟೂರು: ಪಟ್ಟಣದ ಆರಾಧ ದೖವ ಶ್ರೀ ಗುರು ಕೊಟ್ಟೂರೇಶ್ವರ ಸ್ವಾಮಿಯ ಕಾರ್ತಿಕೋತ್ಸವ ಡಿಸೆಂಬರ್ 8 ಸೋಮವಾರ ರಂದು ಜರುಗುವ ಹಿನ್ನೆಲೆ, ದೇವಸ್ಥಾನ ಮುಂಭಾಗ ದಲ್ಲಿನ ಅಗ್ನಿ ಕುಂಡಕ್ಕೆ ಕೊಬ್ಬರಿ ಸುಟ್ಟು ನಮಿಸುವುದು ಸಂಸ್ಕೃತಿ ಇದೆ ಅದರಂತೆ ಅಂಗಡಿ ಮಾಲೀಕರು ಬರುವ ಭಕ್ತಾದಿಗಳಿಗೆ ಕೊಬ್ಬರಿಯನ್ನು ಪ್ಲಾಸ್ಟಿಕ್ ಚೀಲದಲ್ಲಿ ಮಾರಾಟ ಮಾಡದಂತೆ ಪೇಪರ್ ಚೀಲದಲ್ಲಿ ಕೊಬ್ಬರಿ ಮಾರಾಟ ಮಾಡಿ ಎಂದು ಅಂಗಡಿ ಮಾಲಿಕರಿಗೆ ಉಚಿತವಾಗಿ 20 ಸಾವಿರ ಪೇಪ‌ರ್ ಬ್ಯಾಗನ್ನು ಹಸಿರು ಹೊನಲು ತಂಡದ ಸದಸ್ಯರು ವಿತರಿಸಿ ಪರಿಸರ ಜಾಗೃತಿ ಮೂಡಿಸಿದರು. "ಅಂಗಡಿ ಮಾಲೀಕರು ಭಕ್ತರಿಗೆ ಪ್ಲಾಸ್ಟಿಕ್ ಸಹಿತ ಒಣ ಕೊಬ್ಬರಿ ಮಾರಾಟ ಮಾಡಿದಾಗ ಅದನ್ನು ಅಗ್ನಿ ಕುಂಡಕ್ಕೆ ಎಸೆಯುವುದರಿಂದ ಪರಿಸರ ಮಾಲಿನ್ಯಕ್ಕೆ ಕಾರಣವಾಗುತ್ತೆ ಜತೆಗೆ ಅದೇ ಭಸ್ಮವನ್ನ ಮರುದಿನ ಭಕ್ತರು ಹಣೆಗೆ ಹಚ್ಚಿಕೊಳ್ಳುವುದರಿಂದ ಚರ್ಮದ ಕಾಯಿಲೆ ಉದ್ಭವವಾಗುತ್ತದೆ. ಅಂಗಡಿಯ ಮಾಲೀಕರಿಗೆ ಮತ್ತು ವ್ಯಾಪಾರಸ್ಥರಿಗೆ ಪ್ಲಾಸ್ಟಿಕ್ ಬಿಟ್ಟು ಪೇಪರ್ ಬ್ಯಾಗ್ ಬಳಸುವಂತೆ ಬಂಜಾರ್ ನಾಗರಾಜ್ ಮನವಿ ಮಾಡಿದರು." ಈ ಸಂದರ್ಭದಲ್ಲಿ ಹಸಿರು ಹೊನಲು ಸೇವಾ ಸಂಸ್ಥೆ ಗೌರವಾಧ್ಯಕ್ಷ ಸಿ.ಬಸವರಾಜ, ಅಧ್ಯಕ್ಷ ಗುರುಬಸವರಾಜ್, ಬಿ ಆರ್ ವಿಕ್ರಮ್, ಗಿರೀಶ್, ಕೊಟ್ರೇಶ್, ನಾಗಣ್ಣ, ಪತ್ತಿಕೊಂಡ ಶ್ರೀಕಾಂತ ಇತರರು ಇದ್ದರು.

ದೇವೇಗೌಡ 2 ನಾಲಿಗೆ ಮನುಷ್ಯ

 ಸುದೀರ್ಘ ದಿನಗಳ ನಂತರ ಮಾಜಿ ಪ್ರಧಾನಮಂತ್ರಿ ಎಚ್ ಡಿ ದೇವೇಗೌಡರು ತಮ್ಮ ರಾಜಕೀಯ ಕಡುವೈರಿ ಎನಿಸಿದ್ದ ಮಾಜಿ ಮುಖ್ಯಮಂತ್ರಿ ದಿ. ರಾಮಕೃಷ್ಣ ಹೆಗಡೆ ಅವರನ್ನು ಗುಣಗಾನ ಮಾಡಿರುವುದು ಹಾಸ್ಯಾಸ್ಪದ ಎಂದು ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಡಿ. ಬಸವರಾಜ್ ಅವರು ಟೀಕಿಸಿದ್ದಾರೆ. ರಾಮಕೃಷ್ಣ ಹೆಗಡೆ ಅವರು ಬದುಕಿದ್ದಾಗ ಒಂದು ರೀತಿ ಕಷ್ಟ ಕೊಟ್ಟು ಅವರನ್ನು ಪಕ್ಷದಿಂದಲೇ ಉಚ್ಛಟನೆ ಮಾಡಿಸಿದ್ದ ದೇವೇಗೌಡ ರು ಈಗ ಆತ್ಮೀಯತೆಯ ಮಾತಾಡಿರುವುದು ಎರಡು ಬಗೆಯ ನಾಲಿಗೆಗೆ ಉದಾಹರಣೆಯಾಗಿದೆ. ದೇವೇಗೌಡರು ರಾಮಕೃಷ್ಣ ಹೆಗ್ಗಡೆಯವರಿಗೆ ಮೋಸ ಮಾಡಿದ್ದಾರೆ 1994 ರಲ್ಲಿ ಮುಖ್ಯಮಂತ್ರಿ, 1996 ರಲ್ಲಿ ಪ್ರಧಾನಿಯಾಗಬೇಕಿದ್ದದ್ದು ದೇವೇಗೌಡರಲ್ಲ ಬದಲಾಗಿ ರಾಮಕೃಷ್ಣ ಹೆಗ್ಗಡೆಯವರು.1994 ರಲ್ಲಿ ಜನಾತಾಪಕ್ಷ ಅಧಿಕಾರಕ್ಕೆ ಬಂದಾಗ ವಿಧಾನಸೌಧದ ಸುತ್ತಲೂ ಸೇರಿದ್ದ ಅರ್ತಾತ್ ಸೇರಿಸಿದ್ದ ಜನಸಂದಣಿ ಯಾರ ವಿರುದ್ದ ಎಂಬುದು ಇತಿಹಾಸದಲ್ಲಿ ದಾಖಲಾಗಿದೆ ಹಾಗೆಯೇ ಹೆಗಡೆಯವರು ಮುಂದೆ ಹಾಸನದಲ್ಲಿ ಲೋಕ ಶಕ್ತಿ ಪಕ್ಷದ ಪ್ರಚಾರಕ್ಕೆ ಹೋದಾಗ ಹೆಗಡೆಯವರ ಮೇಲಾದ ಕಲ್ಲೆಸೆತದ ಹಿಂದೆ ಯಾರಿದ್ದರು ಎಂಬುದು ನಿಮ್ಮ ಊಹೆಗೆ ಬಿಟ್ಟಿದ್ದು.  ವೀರೇಂದ್ರ ಪಾಟೀಲರು, ರಾಮಕೃಷ್ಣ ಹೆಗ್ಗಡೆ, ದೇವೇಗೌಡರು ಹಾಗೂ ಬೊಮ್ಮಯಿ ಈ ನಾಲ್ವರೂ ಒಬ್ಬರಿಗೊಬ್ಬರು ಪರಮ ಮಿತ್ರರು ಮೇಲಾಗಿ ನಿಜಲಿಂಗಪ್ಪನವರ ಪರಮ ಶಿಷ್ಯರು. ದೇವೇಗೌಡರು ಜನತಾ ಪಕ್ಷದ ಅಧ್ಯಕ್ಷರಾಗಿದ್ದ ಸಮಯದಲ್ಲಿ ದೇವೇಗೌಡರು ನೀಡಿದ ಕಿ...

ಅಫ್ಘಾನ್ ಕರೆನ್ಸಿ ಮುಂದೆಯೂ ಮಂಡಿಯೂರಿತು ರೂಪಾಯಿ!

ಇಮೇಜ್
  ಹಿಂದೊಮ್ಮೆ ಬಿಜೆಪಿಯ ರಾಜ್ಯಾಧ್ಯಕ್ಷರಾಗಿದ್ದವರು ಭಾರತದ ಕರೆನ್ಸಿ ಮುಂದೆ ಅಮೆರಿಕ ಡಾಲರ್ ಪಾತಾಳಕ್ಕೆ ಇಳಿಯುತ್ತೆ ಅಂದಿದ್ದರು. ಇಂದು ಒಂದು ಅಮೆರಿಕ ಡಾಲರ್ ಖರೀದಿಸಲು ನಾವು 88.81 ರೂ. ಕೊಡಬೇಕು! ವಿಷಯ ಅದಲ್ಲ; ಆ ಲೀಡರು ಏನೋ ಹೇಳಿದ ಅಂತ 2014ರಲ್ಲಿ ನಾವು ಸಾಲಾಗಿ ನಿಂತು ವೋಟ್ ಹಾಕಿ ಅವರ ಪಕ್ಷ ಗೆಲ್ಲಿಸಿದೆವು. ಇಂದು ಭಾರತದ ರೂಪಾಯಿ ದಿನದಿಂದ ದಿನಕ್ಕೆ ಪಾತಾಳಕ್ಕೆ ಇಳಿಯುತ್ತಿದೆ. 2014ಕ್ಕೂ ಮುನ್ನ ಡಾಲರ್ ಬೆಲೆ 61 _ 63 ರೂಪಾಯಿ ಆಸುಪಾಸಿನಲ್ಲಿ ಇತ್ತು ಇಂದು 90 ರುಪಾಯಿಗೆ ರೂಪಾಯಿ ಇಳಿದಿದೆ. ಇದು ದೊಡ್ಡ ವಿಷಯ ಅಲ್ಲ ಅನ್ನೋಣ ಬಿಡಿ. ಇದಕ್ಕೆ ನಮ್ಮ ವಿತ್ತ ಸಚಿವರು ಹೇಳೋದು ಬೇರೇನೇ ಇದೆ. ಈಗ ರೂಪಾಯಿ ವಿಷಯದಲ್ಲಿ ಮತ್ತೊಂದು ರೋಚಕ (ನಾಚುವಂತಹ) ವಿಷಯ ಇಲ್ಲಿ ಹಂಚಿಕೊಳ್ಳಬೇಕಿದೆ. ಅದೇನೆಂದರೆ ನಮ್ಮ ರೂಪಾಯಿ ಈಗ ಅಫ್ಘಾನಿಸ್ತಾನದ ಅಫ್ಘಾನ್ ಮುಂದೆಯೂ ಮಂಡಿಯೂರಿದೆ! ಒಂದು ಅಫ್ಘಾನ್ ಬೆಲೆ ಈಗ 1 ರೂಪಾಯಿ 36 ಪೈಸೆಗೆ ಏರಿದೆ. ಇದೇ ಕರೆನ್ಸಿ 2014ರಲ್ಲಿ 93 ಪೈಸೆ ಇತ್ತು. ನಾವೆತ್ತ ಸಾಗುತ್ತಿದ್ದೇವೆ ನೀವೇ ಯೋಚಿಸಿ

ಮನ ಸೆಳೆದ ತೊಗಲು ಬೊಂಬೆಯಾಟ

ಇಮೇಜ್
ಬಳ್ಳಾರಿ: ಶ್ರೀ ಹುಲಿಕುಂಟೆರಾಯ ತೊಗಲುಗೊಂಬೆ ಕಲಾ ತಂಡ ವತಿಯಿಂದ ರಾಜ್ತೋತ್ಸವ ಸಂಭ್ರಮದಡಿಯಲ್ಲಿ ಬಳ್ಳಾರಿ ನಗರದ ಗುಗ್ಗರಹಟ್ಟಿಯ ಶ್ರೀ ಶ್ರೀಶೈಲ ಭ್ರಮರಾಂಬ ಮಲ್ಲಿಕಾರ್ಜುನ ಸ್ವಾಮಿ ಶಿವದೀಕ್ಷಾ ಮಂದಿರದಲ್ಲಿ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಿತು. ವೀರಶೈವ ವಿದ್ಯಾವರ್ಧಕ ಸಂಘದ ಕಾರ್ಯಕಾರಿ ಸಮಿತಿ ಸದಸ್ಯ ಚೋರಚೂರು ಕೊಟ್ರಪ್ಪ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ಕನ್ನಡದ ಮೇಲೆ ಅಭಿಮಾನ ಮೂಡಿಸುವಂತಹದ್ದೇ ಕನ್ನಡ ರಾಜ್ಯೋತ್ಸವ ಆಚರಣೆ. ಕನ್ನಡ ರಾಜ್ಯೋತ್ಸವ ಆಚರಣೆ ಮಾಡುವ ಮೂಲಕ ಕನ್ನಡದ ಪ್ರೇಮ ಮೂಡಿಸಬೇಕು. ನಮ್ಮ ಜೀವನದ ಬದುಕಿಗೆ ಎಲ್ಲ ಭಾಷೆಗಳು ಬೇಕು. ಆದ್ರೆ ನಮ್ಮ ಮಾತೃ ಭಾಷೆ ಕನ್ನಡವನ್ನು ಉಳಿಸಿ ಬೆಳೆಸಬೇಕು. ನಮ್ಮ ಕನ್ನಡ ಭಾಷೆಗೆ ಹೆಚ್ಚಿನ ಒತ್ತು ಕೊಡಬೇಕು. ಅಧಿಕಾರದಲ್ಲಿ ಕನ್ನಡ ಭಾಷೆ ಹೆಚ್ಚು ಬಳಕೆ ಆಗಬೇಕು ಎಂದರು.  ಸಂಸ್ಕೃತಿ ಮತ್ತು ಸಂಸ್ಕಾರ ಬಹಳ ಮುಖ್ಯ. ಸಂಗೀತ, ಸಾಹಿತ್ಯ, ಶಿಲ್ಪ ಕಲೆ ಸೇರಿದಂತೆ ಯಾವುದಾದರೂ ಒಂದು ಕಲೆಯಲ್ಲಿ ಮಕ್ಕಳು ತಮ್ಮನ್ನು ತೊಡಗಿಸಿಕೊಳ್ಳಬೇಕು. ಅಂದಾಗ ಮಾತ್ರ ಮಕ್ಕಳು ಸರ್ವತೋಮುಖ ಅಭಿಯಾಗಲು ಸಾಧ್ಯ ಎಂದರು. ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಬಳ್ಳಾರಿ ಜಿಲ್ಲಾ ಕೈಗಾರಿಕಾ ಸಂಘದ ಅಧ್ಯಕ್ಷ ವಿ.ರಾಮಚಂದ್ರ ಅವರು ಮಾತನಾಡಿ, ಈ ಹಿಂದೆ ತೊಗಲುಗೊಂಬೆ ಆಡಿಸುವುದು ಬಹಳ ಕಷ್ಟದ ಕೆಲಸ. ಮುಖಕ್ಕೆ ಬಣ್ಣ ಹಾಕಿ ಅಭಿನಯಿಸೋದು ಸುಲಭ. ಪರದೆ ಹಿಂದೆ ನಿಂತು ತೊಗಲುಗೊಂಬೆ ಕುಣಿಸೋದು ಕಷ್ಟದ ಕೆಲಸ. ಆದ್ರೂ ಅಂತಹ...

ರಾಷ್ಟ್ರಪತಿಗೆ ಗಡುವು ಸರಿ ಅಲ್ಲ

ಇಮೇಜ್
  ಕೇಂದ್ರದಲ್ಲಿ ಯಾವುದೇ ಸರ್ಕಾರ ಬಂದರೂ ರಾಜ್ಯಪಾಲರ ಮೂಲಕ ಕೇಂದ್ರದಲ್ಲಿ ಆಡಳಿತ ನಡೆಸುವ ಪಕ್ಷದ ವಿರೋಧ ಪಕ್ಷಗಳು ಆಳ್ವಿಕೆ ನಡೆಸುವ ರಾಜ್ಯಗಳಲ್ಲಿ ರಾಜ್ಯಪಾಲರ ಮೂಲಕ ಕಿರುಕುಳ ಕೊಡುವ ಸಮಸ್ಯೆಗೆ ಪರಿಹಾರ ಸಿಕ್ಕಬಹುದು ಎಂಬ ಆಶಯ ಹುಸಿ ಆಗಿದೆ. ತಮಿಳುನಾಡು ಡಿಎಂಕೆ ಸರ್ಕಾರ ಮತ್ತು ರಾಜ್ಯಪಾಲರ ನಡುವೆ ನಡೆಯುತ್ತಿದ್ದ ಶೀತಲ ಸಮರಕ್ಕೆ ಈ ಏಪ್ರಿಲ್ 8, 2025ರಂದು ಜಸ್ಟೀಸ್ ಜಿ. ಬಿ. ಪರ್ದಿವಾಲ, ಜಸ್ಟೀಸ್ ಆರ್ ಲ್. ಮಹಾದೇವನ್ ಮಹತ್ವದ ತೀರ್ಪು ನೀಡಿ, ರಾಜ್ಯಪಾಲರು ಅಂಕಿತ ಹಾಕಲು ಹಾಡುವ ವಿಧಿಸಿದ್ದರು. ಅಷ್ಟರ ಒಳಗಾಗಿ ರಾಜ್ಯಪಾಲರು ಸಹಿ ಹಾಕಬೇಕು. ಗಡುನಿನ ಒಳಗೆ ಸಹಿ ಹಾಕದೆ ಇದ್ದರೆ ಮಸೂದೆ ಅಂಗೀಕೃತ ಎಂದು ಭಾವಿಸಬಹುದು ಎಂದು ತೀರ್ಪು ನೀಡಲಾಗಿತ್ತು. ಇದು ಪರೋಕ್ಷವಾಗಿ ರಾಷ್ಟ್ರಪತಿ ಅವರ ವಿವೇಚನಾ ಅಧಿಕಾರ ಮೊಟಕುಗೊಳಿಸುವ ರೀತಿ ಇತ್ತು. ತಮಿಳುನಾಡಿನ 10 ಮಸೂದೆಗಳು ರಾಷ್ಟ್ರಪತಿ ಅವರ ಬಳಿ ಅಂಕಿತಕ್ಕೆ ಹಲವಾರು ವರ್ಷ ಕಾದುಕೊಂಡು ಇದ್ದವು. ಸುಪ್ರೀಂ ತೀರ್ಮಾನದಿಂದ ಈ 10 ಮಸೂದೆಗಳು ಅಂಗೀಕಾರ ಆದಂತೆ ಆಗಿತ್ತು. ಇದು ರಾಜಕೀಯ ವಲಯದಲ್ಲಿ ತೀವ್ರ ಚರ್ಚೆಗೆ ಕಾರಣವಾಗಿದೆ ಎಡೆಮಾಡಿಕೊಟ್ಟಿತ್ತು. ತೀರ್ಪಿನಲ್ಲಿ ನ್ಯಾಯಾಲಯ ರಾಷ್ಟ್ರಪತಿಗಳು ಅಗತ್ಯ ಎನ್ನಿಸಿದಾಗ ಸುಪ್ರೀಂ ಕೋರ್ಟ್ ಅಭಿಪ್ರಾಯ ಕೇಳಬೇಕು ಎಂದು ಸಹ ಹೇಳಿತ್ತು. ಇದೀಗ ಸುಪ್ರೀಂ ಕೋರ್ಟಿನ ಮುಖ್ಯ ನ್ಯಾಯಮೂರ್ತಿ ಜಸ್ಟೀಸ್ ಬಿ.ಆರ್. ಗವಾಯ್ ಅವರ ಐದು ಜನರ ಪೀಠ ಇದು ಸಂವಿಧಾನಕ್ಕ...

ದಲಿತ, ಆದಿವಾಸಿ, ಮಹಿಳೆ ಮತ್ತು ಅಲ್ಪಸಂಖ್ಯಾತರ ಮೇಲಿನ ದೌರ್ಜನ್ಯ ಖಂಡಿಸಿ ಪ್ರತಿಭಟನಾ ದಿನ ಆಚರಣೆ

ಇಮೇಜ್
ಕೊಟ್ಟೂರು ಪಟ್ಟಣದ ವಾಲ್ಮೀಕಿ ನಗರದಲ್ಲಿ ಭಾರತ ಕಮ್ಯುನಿಸ್ಟ್ ಪಕ್ಷ ರಾಜ್ಯ ಮಂಡಳಿ ವತಿಯಿಂದ ನವೆಂಬರ್ ೧೮ರ ಅಖಿಲ ಭಾರತ ಪ್ರತಿಭಟನಾ ದಿನವನ್ನು ಆಚರಣೆ ಮಾಡಲಾಯಿತು. ಭಾರತದ ಇತಿಹಾಸದಲ್ಲಿ ಶತಮಾನಗಳಿಂದಲೂ ದಬ್ಬಾಳಿಕೆ, ಅಸ್ಪೃಶ್ಯತಾ ಮತ್ತು ಶೋಷಣೆಗೆ ಬಲಿಯಾದ ದಲಿತ, ಆದಿವಾಸಿ ಮತ್ತು ಮಹಿಳಾ ಸಮುದಾಯಗಳು ಇಂದಿಗೂ ದೌರ್ಜನ್ಯಗಳಿಂದ ಬಿಡುಗಡೆಯಾಗಿಲ್ಲ ಬದಲಿಗೆ ಇವತ್ತಿಗೂ ಅವು ಎಗ್ಗಿಲ್ಲದೇ ನಡೆಯುತ್ತಿವೆ. ಸಂವಿಧಾನ ಬಂದು ೭೫ ವರ್ಷಗಳಾದರೂ ಸಹ ಇದುವರೆಗೂ ಮನುಸ್ಮೃತಿಯ ಪಳೆಯುಳಿಕೆಗಳು ಈ ನೆಲದಲ್ಲಿ ಉಳಿದಿರುವ ಕಾರಣಕ್ಕೆ ಈ ಶೋಷಣೆಗಳು ನಡೆಯುತ್ತಿವೆ.  ಭಾರತೀಯ ಸಮಾಜವನ್ನು ಶ್ರೇಣೀಕೃತ ಜಾತಿ, ಉಪಜಾತಿಗಳೆಂದು ವಿಂಗಡಿಸಿ, ದಲಿತ ಸಮುದಾಯದಿಂದ ಅವರ ಮೂಲಭೂತ ಹಕ್ಕುಗಳನ್ನು ಕಸಿದುಕೊಂಡು ಅವರನ್ನು ಪ್ರಾಣಿಗಿಂತಲೂ ಕಡೆಯಾಗಿ ನಡೆಸಿಕೊಳ್ಳುತ್ತಲೇ ಬಂದಿದೆ. ಈ ನೆಲದಲ್ಲಿ ಸಂವಿಧಾನ ಜಾರಿಯಾದಾಗಿನಿಂದ ನಾವಿನ್ನೂ ಕೊಂಚ ಉಸಿರಾಡುತ್ತಿದ್ದೇವೆ. ಸ್ವಾತಂತ್ರ್ಯ ಬಂದು ಪ್ರಜಾಪ್ರಭುತ್ವವನ್ನು ಭಾರತಕ್ಕೆ ಅರ್ಪಿಸಿಕೊಂಡ ಮೇಲೂ ಸಹ ಈ ದೌರ್ಜನ್ಯಗಳು, ದಬ್ಬಾಳಿಕೆಗಳು ನಿಲ್ಲುವ ಲಕ್ಷಣಗಳೇ ಗೋಚರಿಸುತ್ತಿಲ್ಲ. ಬದಲಾಗಿ ಹಿಂಸೆಯ ಕರಾಳ ಮುಖಗಳು ಒಂದೊಂದಾಗಿ ಅನಾವರಣಗೊಳ್ಳುತ್ತಿವೆ. ಕೋಮುಗಲಭೆಗಳುಂಟಾಗಿ ಸಮಾಜದಲ್ಲಿ ಸಾಕಷ್ಟು ನೆತ್ತರು ಹರಿಯುವುದಕ್ಕೆ ಮೇಲು-ಕೀಳು, ಬಹುಸಂಖ್ಯಾ-ಅಲ್ಪಸಂಖ್ಯಾತ, ಹಿಂದೂ-ಮುಸ್ಲಿಂ ಎಂಬ ಭೇದಭಾವಗಳೇ ಈ ನೆಲದಲ್ಲಿ ಇನ್ನೂ ರಾರಾಜಿಸುತ್ತ...

ರಾಜ್ಯೋತ್ಸವ ಕಾರ್ಯಕ್ರಮಕ್ಕೆ ಆಹ್ವಾನ ನೀಡದ ಪಿಡಿಓ,ಕಾರ್ಯದರ್ಶಿ

ಇಮೇಜ್
  *ಏಕಮುಖವಾಗಿ ತಮಗೆ ಬೇಕಾದ ಹಾಗೆ ಕನ್ನಡ ರಾಜ್ಯೋತ್ಸವ ಕಾರ್ಯಕ್ರಮವನ್ನು ಆಚರಿಸಿದ ಕಾಳಾಪುರ ಪಿಡಿಓ ಜಯಮ್ಮ..?* "ಗ್ರಾಮ ಪಂಚಾಯಿತಿಯ ಪಿಡಿಓ, ಕಾರ್ಯದರ್ಶಿಯವರನ್ನು ಕೂಡಲೇ ಅಮಾನತ್ತಿಗೆ ಗ್ರಾಮ ಪಂಚಾಯಿತಿ ಸದಸ್ಯರು ಒತ್ತಾಯ" ಕೊಟ್ಟೂರು ತಾಲ್ಲೂಕು ಕಾಳಾಪುರ ಗ್ರಾಮ ಪಂಚಾಯಿತಿಯಲ್ಲಿ ರಾಜ್ಯೋತ್ಸವ ಕಾರ್ಯಕ್ರಮಕ್ಕೆ ಯಾವುದೇ ಪೂರ್ವಭಾವಿ ಸಭೆ ಕರೆಯದೇ, ಸದಸ್ಯರನ್ನು ಸದರಿ ಕನ್ನಡ ರಾಜ್ಯೋತ್ಸವಕ್ಕೆ ಆಹ್ವಾನಿಸದೇ ಪ್ರೊಟೋಕಾಲ್ ಸರಿಯಾಗಿ ಪಾಲಿಸಿಲ್ಲದ ಕಾರಣ ಹತ್ತು ಮಂದಿ ಮಂಜುನಾಥ್ ಪೂಜಾರ್ ಕಾಳಾಪುರ, ನಾಗಪ್ಪ ಕನ್ನಕಟ್ಟೆ ಕಾಳಾಪುರ,ಸಾತಾಳ ಅಂಜಿನಪ್ಪ ಚೀನ್ನೇನಹಳ್ಳಿ, ಮಾರಕ್ಕ ಕಾಳಾಪುರ, ಭರಮಪ್ಪ ಹಾರಕನಾಳು, ಶಿವಮ್ಮಚೀನ್ನೇನಹಳ್ಳಿ,ಸಿ ನಾಗರಾಜ್ ಗೌಡ ನಡುಮಾವಿನಹಳ್ಳಿ,ನಿಂಗಮ್ಮಹಾರಕನಾಳು,ನಾಗರಾಜ ಹಿರೇ ವಡ್ಡರಹಳ್ಳಿ ,ಗೀತಮ್ಮ ನಡುಮಾವಿನಹಳ್ಳಿ,ಗ್ರಾಮ ಪಂಚಾಯಿತಿ ಸದಸ್ಯರು ಹಕ್ಕುಚ್ಯುತಿ ಮಂಡಿಸಿದ್ದಾರೆ. ಕಾರ್ಯನಿರ್ವಾಹಕ ಅಧಿಕಾರಿಗಳಿಗೆ ಹತ್ತು ಮಂದಿ ಗ್ರಾಮ ಪಂಚಾಯಿತಿ ಸದಸ್ಯರು ಸಲ್ಲಿಸಿರುವ ಹಕ್ಕುಚ್ಯುತಿ ಪತ್ರದಲ್ಲಿ ಈ ಹಿಂದೆ ಪಿಡಿಓ ಅಧ್ಯಕ್ಷರು, ಉಪಾಧ್ಯಕ್ಷರು ಹಾಗೂ ಸರ್ವ ಸದಸ್ಯರನ್ನು ಪೂರ್ವಭಾವಿ ಸಭೆಗೆ ಹಾಜರಾಗುವಂತೆ ಕರೆಯೋಲೆ ನೀಡಿ ಕಾರ್ಯಕ್ರಮದ ರೂಪುರೇಷೆಗಳನ್ನು ಚರ್ಚಿಸಿ ನಂತರ ಸದರಿ ಕಾರ್ಯಕ್ರಮಕ್ಕೆ ಎಲ್ಲರೂ ಹಾಜರಾಗುವಂತೆ ಆಹ್ವಾನ ಪತ್ರಿಕೆಯನ್ನು ನೀಡಿ ಕಾರ್ಯಕ್ರಮಕ್ಕೆ ಕರೆಯುವ ಪದ್ಧತಿ ಇತ್ತು.  *ಬೇಕಾ ಬಿಟ್ಟ...

ತಲೇಖಾನ್ : ವಸತಿ ಹಂಚಿಕೆ ಗೋಲ್ಮಾಲ್ ರಾಜೀವ್ ಗಾಂಧಿ ವಸತಿ ನಿಗಮ ವ್ಯವಸ್ಥಾಪಕ ನಿರ್ದೇಶಕರ ಭೇಟಿ

ಇಮೇಜ್
  ವರದಿ : ಗ್ಯಾನಪ್ಪ ದೊಡ್ಡಮನಿ  ಮಸ್ಕಿ : ತಾಲೂಕಿನ ತಲೇಖಾನ ಗ್ರಾಮ ಪಂಚಾಯತಿ ಕಾರ್ಯಾಲಯದಲ್ಲಿ ಹಮ್ಮಿಕೊಂಡಿದ್ದ 200 ಮನೆಯ ಅಕ್ರಮ ಮಂಜೂರು ಮಾಡಿದ ಪಟ್ಟಿ ರದ್ದು ಪಡಿಸಬೇಕು ಎಂಬ ತನಿಖಾ ಸಭೆಯಲ್ಲಿ ಮಾತನಾಡಿದ ರಾಜೀವ್ ಗಾಂಧಿ ವಸತಿ ನಿಗಮ ಬೆಂಗಳೂರು ವ್ಯವಸ್ಥಾಪಕ ನಿರ್ದೇಶಕರು ಆದ ಉಸ್ಮಾನ್ ಪಾಷಾ ಇವರು ರಾಜ್ಯದಲ್ಲಿ ನೂತನ ವಸತಿ ನಿರ್ಮಾಣಕ್ಕೆ ನಿಗಮದಲ್ಲಿ 2 ಸಾವಿರ ಕೋಟಿ ಹಣವಿದ್ದು ಬರೀ 125 ಕೋಟಿ ಖರ್ಚು ಮಾಡಲಾಗಿದೆ ಸದ್ಭಳಕೆ ಮಾಡಿಕೊಳ್ಳಿ. ಸಭೆಯ ಸ್ಥಳದಲ್ಲಿಯೇ 412 ಮನೆ ಪಟ್ಟಿಯನ್ನು ಎಲ್ಲಾ ಗ್ರಾಮ ಪಂಚಾಯತ್ ಸದಸ್ಯರುಗಳಿಗೆ ವಾರ್ಡ್ ವಾರು ಪಟ್ಟಿ ವಿತರಿಸಿದರು. ಮಸ್ಕಿ ತಾಲೂಕಿಗೆ 7241 ಮನೆ ಬಂದಿದ್ದು 2 ಸಾವಿರ ಮನೆ ಮಾತ್ರ ಮಂಜೂರು ಮಾಡಲಾಗಿದೆ ಎಂದು ತನಿಖಾ ವಿಷಯದ ಬಗ್ಗೆ ಸಭೆಯಲ್ಲಿಯೇ ಶಾಂತ ರೀತಿಯಲ್ಲಿ ತಿಳಿಸಿದರು. ನಂತರ ಮದ್ಯಾಹ್ನದ ಊಟ ಆದ ಮೇಲೆ ಗ್ರಾಮ ಪಂಚಾಯತ್ ಅಭಿವೃದ್ಧಿ ಅಧಿಕಾರಿ ಜ್ಯೋತಿ ಬಾಯಿ ಸಿಬ್ಬಂದಿ ಮತ್ತು ಮಸ್ಕಿ ಠಾಣೆಯ ರಂಗಯ್ಯ ಕೆ ಮತ್ತು ಸಿಬ್ಬಂದಿ ಹಾಗೂ ರಿಸರ್ವ್ ಪೊಲೀಸರ ತಂಡದ ಸಹಕಾರದೊಂದಿಗೆ ಯರದೊಡ್ಡಿ ಗ್ರಾಮಕ್ಕೆ ತೆರಳಿ 200 ಮನೆಯಲ್ಲಿನ ಫಲಾನುಭವಿ ಪರಿಶೀಲನೆ ನಡೆಸಲಾಯಿತು. ಪರಿಶೀಲನೆ ಸಂದರ್ಭದಲ್ಲಿ ಮೊದಲ ಮನೆ ಪರಿಶೀಲನೆ ಮಾಡಿದಾಗ ಮಂಜುರಿಗೆ ಮೊದಲೇ ಮನೆ ಕಟ್ಟಿದ್ದು ಈಗ ಪ್ರಸ್ತುತ ಮನೆ ಮಂಜೂರು ಪಟ್ಟಿಯಲ್ಲಿ ಮನೆ ಮಾಲಿಕೆಯ ಹೆಸರಿದೆ, 10 ರಿಂದ 20 ಸಾವಿರ ಹಣ ಕೊಟ್ಟವರಿಗೆ ಮನೆ,ಮನೆ ಇದ್ದವರ...

ಕೊಳವೆಬಾವಿ ಜಲಮರುಪೂರ್ಣಕ್ಕೆ ವಿಶೇಷ ಅನುದಾನ ಕಲ್ಪಿಸುವ ಭರವಸೆ :ಶಾಸಕ ನೇಮಿರಾಜ್ ನಾಯ್ಕ

ಇಮೇಜ್
"ರಾಜ್ಯದಲ್ಲಿ ಹಗರಿಬೊಮ್ಮನಹಳ್ಳಿ ಕ್ಷೇತ್ರವನ್ನು ಮಾದರಿ ಕ್ಷೇತ್ರ ಮಾಡುವುದಾಗಿ ಶಾಸಕ ನೇಮಿರಾಜ್ ನಾಯ್ಕ ಭರವಸೆ ನೀಡಿದರು." ಕೊಟ್ಟೂರು : ತಾಲೂಕಿನ ತಿಮ್ಮಲಾಪುರ ಗ್ರಾಮದಲ್ಲಿ ಬಣಕಾರ ಚಂದ್ರಪ್ಪ ಹೊಲದಲ್ಲಿ ಸೋಮವಾರ ಸಾವಯವ ರೈತರ ವಿಶೇಷ ಪ್ರಯೋಗ ಪರಿವಾರದ ಸಭೆ ಮತ್ತು ಇಕ್ರಾ ಸಂಸ್ಥೆ ಹಾಗೂ ಭೂಮಿ ಮಿತ್ರ ಸಾವಯವ ರೈತರ ಒಕ್ಕೂಟ ಸಂಯೋಗದಲ್ಲಿ ಹಮ್ಮಿಕೊಂಡಿದ್ದರು  ರೈತರು ಕೊಳವೆ ಬಾವಿಯಲ್ಲಿನ ಅಂತರ್ಜಲ ಖಾಲಿಯಾದ ಮೇಲೆ ಮತ್ತೊಂದು ಕೊಳವೆಬಾವಿ ಕೊರೆಸಲು ಸಿದ್ಧವಾಗುತ್ತಾರೆ. ಆದರೆ ಬತ್ತಿದ ಕೊಳವೆಬಾವಿಗೆ ಜಲ ಮರುಪೂರ್ಣಗೊಳಿಸಿದರೆ ಅಂತರ್ಜಲ ಹೆಚ್ಚಾಗಿ ಮೊದಲಿನಂತೆ ಕೃಷಿ ಮಾಡಬಹುದು.  ಈ ಜಲಮರುಪೂರ್ಣಕ್ಕೆ ವಿಶೇಷ ಅನುದಾನ ನೀಡುವಂತೆ  ಅಧಿವೇಶನದಲ್ಲಿ ರೈತರ ಪರವಾಗಿ ಮಾತನಾಡುತ್ತೇನೆ.ಎಂದು ಹೇಳಿದರು. ಶಾಸಕರ ರೈತರ ಧ್ವನಿ :ರೈತರ ಪರ. ರೈತನಿಲ್ಲದಿದ್ದರೆ ಯಾರು ಬದುಕಲು ಸಾಧ್ಯವಿಲ್ಲ, ಅವರ ಸುಖ, ಅಭಿವೃದ್ಧಿಗೆ ನನ್ನ ಮೊದಲ ಆಧ್ಯತೆ, ಈ ಕೊಳವೆ ಬಾವಿಗಳ ಜಲಮರುಪೂರ್ಣಕ್ಕೆ ಶಾಸಕತ್ವದ ಎರಡೂವರೆ ವರ್ಷವನ್ನು ಮೀಸಲಿಡವುದಾಗಿ ಘೋಷಿಸಿದರು. ಡಾ. ದೇವರಾಜ್ ರೆಡ್ಡಿ ಮಾತಾನಾಡಿ,ಪದೇ ಪದೇ ಕೊಳವೆಬಾವಿಗಳನ್ನು ಕೊರಸುವುದರಿಂದ ಭೂಮಿಯ ಒಡಲು ಬತ್ತಿ ಹೋಗಿ ಮುಂದಿನ ದಿನಗಳಲ್ಲಿ ಜಲ ಕ್ಷಾಮ ಬರುವುದನ್ನು ತಪ್ಪಿಸಲು ಮಳೆಯ ನೀರನ್ನು ಕೊಳವೆ ಬಾವಿಯ ಇಂಗು ಗುಂಡಿಗೆ ಹಿಂಗಿಸಿದರೆ ಬತ್ತಿಹೋದ ಕೊಳವೆಬಾವಿಯಲ್ಲಿ ಅಂತರ್ಜಲ,ಜಲ ಮರುಪೂರ್ಣ ವೃದ್ಧಿಯಾಗುತ್ತ...

ರಾಹುಲ್ ಗಾಂಧಿಗೆ ಸಿದ್ದು ಹೇಳಿದ್ದೇನು?

ಇಮೇಜ್
Rahul Gandhi - siddu Karnataka politics ಕಳೆದ ವಾರ ದಿಲ್ಲಿಯಿಂದ ಬಂದ ವರ್ತಮಾನ ಸಿಎಂ ಸಿದ್ದರಾಮಯ್ಯ ಅವರ ಬೆಂಬಲಿಗರ ಆತ್ಮವಿಶ್ವಾಸ ಹೆಚ್ಚಿಸಿದೆ.ಅದರ ಪ್ರಕಾರ ರಾಹುಲ್ ಗಾಂಧಿಯವರಿಗೆ ಕೊಡಬೇಕಾದ ಮೆಸೇಜನ್ನು ಸಿದ್ದರಾಮಯ್ಯ ಅವರು ಕೊಟ್ಟಿದ್ದಾರೆ. ಯಾವಾಗ ರಾಹುಲ್ ಗಾಂಧಿ ಅವರಿಗೆ ಈ ಮೆಸೇಜನ್ನು ಸಿದ್ದರಾಮಯ್ಯ ತಲುಪಿಸಿದ್ದಾರೆ ಎಂಬ ವರ್ತಮಾನ ಸಿಕ್ಕಿತೋ?ಇದಾದ ನಂತರ ಸಿದ್ಧು ಆಪ್ತರ ಪಡೆ ಸಂಪುಟ ಪುನರ್ರಚನೆಯ ದಿನವನ್ನು ಎದುರು ನೋಡುತ್ತಿದೆ. ಮೂಲಗಳ ಪ್ರಕಾರ,ಇತ್ತೀಚೆಗೆ ರಾಹುಲ್ ಗಾಂಧಿ ಅವರ ಜತೆ ಮಾತನಾಡಿದ ಸಿದ್ದರಾಮಯ್ಯ ಅವರು:'ಸರ್ಕಾರ ಅಸ್ತಿತ್ವಕ್ಕೆ ಬಂದು ಎರಡೂವರೆ ವರ್ಷಗಳಾಗುತ್ತಾ ಬಂದಿದೆ.ಈ ಹೊತ್ತಿನಲ್ಲಿ ರಾಜ್ಯ ಸಚಿವ ಸಂಪುಟವನ್ನು ಪುನರ್ರಚಿಸಲೇಕು'ಎಂದಿದ್ದಾರೆ. ವಾಸ್ತವವಾಗಿ ಸಚಿವ ಸಂಪುಟದಲ್ಲಿರುವ ಹಲವರ ವಿಷಯದಲ್ಲಿ ಸಿದ್ದರಾಮಯ್ಯ ಅವರು ಸಮಾಧಾನದಿಂದಿಲ್ಲ.ಕಾರಣ?ಈ ಮಂತ್ರಿಗಳು ಅಧಿಕಾರಷಾಹಿಯ ಕಪಿಮುಷ್ಟಿಗೆ ಸಿಲುಕಿ ಕೆಲಸ ಮಾಡುತ್ತಿದ್ದಾರೆಯೇ ವಿನ: ಅವರಿಗೆ ತಮ್ಮದೇ ದೃಷ್ಟಿಕೋನವಿಲ್ಲ. ಹೀಗಾಗಿ ತಮಗೆ ಕೊಟ್ಟ ಖಾತೆಯ ಜವಾಬ್ದಾರಿಯನ್ನು ಅಧಿಕಾರಿಗಳ ಹೆಗಲಿಗೆ ಹಾಕಿ,ಅವರು ಹೇಳಿದ ಜಾಗದಲ್ಲಿ ಸಹಿ ಮಾಡಿ ನಿರುಮ್ಮಳವಾಗಿದ್ದಾರೆ. ಇವತ್ತು ತನ್ನ ಮೇಲಿರುವ ಸಾಲ,ಗ್ಯಾರಂಟಿ ಯೋಜನೆಗಳಿಗೆ ಕೊಡಬೇಕಾದ ಹಣ,ನೌಕರರ ವೇತನ,ಪಿಂಚಣಿಗೆ ನೀಡಬೇಕಾದ ಹಣ ಸೇರಿದಂತೆ ವಿವಿಧ ಬಾಬ್ತುಗಳ ಹೊಡೆತಕ್ಕೆ ಸಿಲುಕಿರುವ ಸರ್ಕಾರ ಆರ್ಥಿಕ ಸಂಕಷ್...

ರಾಜ್ಯ ಸರ್ಕಾರದ ಇಂದಿರಾ ಕಿಟ್ ಮತ್ತೊಂದು ವರ

ಇಮೇಜ್
ಗ್ಯಾರಂಟಿ ಯೋಜನೆಗಳನ್ನು ನೀಡಿ, ಸೈ ಎನ್ನಿಸಿಕೊಂಡಿದ್ದ ಕಾಂಗ್ರೆಸ್ ನೇತೃತ್ವದ ರಾಜ್ಯ ಸರ್ಕಾರ ಇದೀಗ ಮತ್ತೊಂದು ಕಲ್ಯಾಣಕಾರಿ ಕೆಲಸಕ್ಕೆ ಕೈ ಹಾಕಿದೆ. ಬರೀ ಅಕ್ಕಿ ಕೊಟ್ಟರೆ ಸಾಲದು, ಬಡತನ ರೇಖೆಗಿಂತ ಕೆಳಗೆ ಇರುವ ಎಲ್ಲಾ ನಾಗರಿಕರು ನೆಮ್ಮದಿ ಜೀವನ ಕಂಡುಕೊಳ್ಳಬೇಕು ಎಂಬ ಉದ್ದೇಶದಿಂದ ಇದೀಗ ರಾಜ್ಯ ಸರ್ಕಾರ ಇಂದಿರಾ ಕಿಟ್ ನೀಡುವ ಯೋಜನೆ ಆರಂಭಿಸಿದೆ  ಎಂದು ಕೆಪಿಸಿಸಿ ವಕ್ತಾರ, ರಾಜ್ಯ ಪ್ರಚಾರ ಸಮಿತಿ ಸಂಯೋಜಕ ವೆಂಕಟೇಶ್ ಹೆಗಡೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ 10 ಕೆಜಿ ಅಕ್ಕಿ ನೀಡುವುದರಿಂದ ನೆಮ್ಮದಿಯ ಜೀವನ ಸಾಗಲು ಆಗದು ಎಂದು ಮನಗಂಡ ರಾಜ್ಯ ಸರ್ಕಾರ ಇದೀಗ 5 ಕೆಜಿ ಅಕ್ಕಿ ನೀಡಿ, ಇನ್ನೂ 5 ಕೆಜಿ ಅಕ್ಕಿ ಬದಲು 2 ಕೆಜಿ ತೊಗರಿ ಬೇಳೆ, ಒಂದು ಕೆಜಿ ಎಣ್ಣೆ, ಒಂದು ಕೆಜಿ ಉಪ್ಪು ನೀಡಲು ನಿರ್ಧಾರ ಮಾಡಿದೆ. ಇದರಿಂದ ಅಕ್ಕಿಯ ಕಾಳಸಂತೆ ದಂಧೆಗೆ ಲಗಾಮು ಬಿದ್ದಂತೆ ಆಗುತ್ತದೆ ಅಲ್ಲದೆ ಜನರಿಗೆ ಸಾಕಷ್ಟು ನೆರವಾಗಲಿದೆ. ಬಡ ಕುಟುಂಬಗಳು ನೆಮ್ಮದಿಯ ಜೀವನ ಕಟ್ಟಿಕೊಳ್ಳಬಹುದಾಗಿದೆ. ಕೇಂದ್ರ ಸರ್ಕಾರದ ಇಂದಿನ ಆರ್ಥಿಕ ನೀತಿ ಬಡವರ ವಿರೋಧಿ ಆಗಿದೆ. ದಿನದಿಂದ ದಿನಕ್ಕೆ ಬೆಲೆ ಏರಿಕೆಯಿಂದ ಬಡ, ಮಧ್ಯಮ ವರ್ಗದ ಜನರು ದಿನನಿತ್ಯ ಬದುಕು ಕಟ್ಟಿಕೊಳ್ಳಲು ಹೆಣಗಾಡುವಂತೆ ಆಗಿದೆ. ಇದನ್ನು ಕಂಡೇ ನಮ್ಮ ಸರ್ಕಾರ ಅನ್ನಭಾಗ್ಯ ಯೋಜನೆ ಆರಂಭಿಸಿತ್ತು. ಆದರೆ, ಇದೂ ಸಹ ಸಾಲದು ಎಂಬುದನ್ನು ಅರಿತು ಇದೀಗ ಅಕ್ಕಿ ಜೊತೆ ಎಣ್ಣೆ, ಬೇಳೆ, ಉಪ್ಪು ವಿತರಿಸುವ ಕಾರ್ಯ ಆರ...

ಸಿಜೆಐ ಮೇಲೆ ಶೂ ಎಸೆತ : ಅಖಿಲ ಭಾರತ ದಲಿತ ಹಕ್ಕುಗಳ ಆಂದೋಲನ ಖಂಡನೆ

ಇಮೇಜ್
  ಕೊಟ್ಟೂರು : ಸುಪ್ರೀಂ ಕೊರ್ಟ್‌ನ ಗೌರವಾನ್ವಿತ ಮುಖ್ಯ ನ್ಯಾಯಮೂರ್ತಿ ಶ್ರೀ ಬಿ.ಆರ್.ಗವಾಯಿ ಅವರ ಮೇಲಿನ ಹಲ್ಲೆ ಖಂಡಿಸಿ ಉಪತಹಶೀಲ್ದಾರರಾದ ಅನ್ನದಾನೇಶ್‌ರವರಿಗೆ ಗುರುವಾರ ಮನವಿ ಪತ್ರ ನೀಡಲಾಯಿತು  ಸೋಮವಾರ ಸುಪ್ರೀಂಕೋರ್ಟ್ ಕಲಾಪದ ವೇಳೆಯಲ್ಲಿ ವಕೀಲನೊಬ್ಬ ಮುಖ್ಯ ನ್ಯಾಯಮೂರ್ತಿಯವರನ್ನು ಗುರಿಯಾಗಿಸಿ. ಶೂ ಎಸೆದ ಘಟನೆ ಭಾರತದ ನ್ಯಾಯಾಂಗ ವ್ಯವಸ್ಥೆಯಲ್ಲಿ ಒಂದು ಅಕ್ಷಮ್ಯ ಅಪರಾಧವಾಗಿದೆ. ಶೂ ಎಸೆದ ವಕೀಲ ರಾಕೇಶ್ ಕಿಶೋರ್ ಈ ಘಟನೆ ನಡೆದ ಬಳಿಕ ಸನಾತನ ಧರ್ಮದ ಮೇಲಿನ ಅವಮಾನವನ್ನು ಹಿಂದೂಸ್ತಾನವು ಸಹಿಸುವುದಿಲ್ಲ ಎಂದು ಕೂಗಾಡಿದ್ದಾನೆ. ಅವನ ಈ ಕೂಗಾಟಕ್ಕೆ ಸನಾತನ ಧರ್ಮದ ಪ್ರತಿಪಾದಕರಾದ ಆರ್.ಎಸ್.ಎಸ್. ಮತ್ತು ಬಿಜೆಪಿ ಗಳ ಮಾನವ ವಿರೋಧಿ ಸಿದ್ದಾಂತದ ಪ್ರೇರಣೆಯೇ ಇದಕ್ಕೆಲ್ಲ ಕಾರಣವಾಗಿದೆ. ಭಾರತ ಸನಾತನ ಧರ್ಮದ ಮೂಲ ಸಾಮಾಜಿಕ ಸಂರಚನೆಯಾದ ಶೈಕ್ಷಣಿಕ ಸಮಾಜವನ್ನು ನಮ್ಮ ದೇಶದಲ್ಲಿ ಭದ್ರಪಡಿಸಲು ಹೊರಟಿದೆ. ಇದು ಭಾರತದ ಭವಿಷ್ಯಕ್ಕೆ ಅಪಾಯಕಾರಿ ನಡೆಯಾಗಿದೆ.  ನಮ್ಮ ದೇಶದ ಸಂವಿಧಾನವನ್ನು ನಾಶಗೊಳಿಸಿ ಮನುವಾದ ಪ್ರಣಿತ ಶೋಷಕ ಸಮಾಜ ನಿರ್ಮಾಣದ ಮುನ್ಸೂಚನೆಯಾಗಿದೆ. ದಲಿತರಿಗೆ ವಿದ್ಯೆ ನಿರಾಕರಿಸಿದ ಪುರೋಹಿತಶಾಹಿ ವ್ಯವಸ್ಥೆಯನ್ನು ಬದಲು ಮಾಡಿ ನಮ್ಮ ಸಂವಿಧಾನ ನೀಡಿರುವ ಶಿಕ್ಷಣದ ಹಕ್ಕಿನಿಂದ ತಮ್ಮ ಪರಿಶ್ರಮದಿಂದ ದೇಶದ ದಲಿತ ಸಮುದಾಯಕ್ಕೆ ಸೇರಿದ ಅವಕಾಶ ವಂಚಿತ ವ್ಯಕ್ತಿಯೊಬ್ಬರು ಇಂದು ಸುಪ್ರೀಂ ಕೋರ್ಟಿನ ಮುಖ್ಯ ನ್ಯಾಯಾಧೀಶರಾಗಲ...

*🪔ನಿಧನ ವಾರ್ತೆ : ಗಿಡ್ಡ ಉಚ್ಚೆoಗೇಪ್ಪನವರ ದುರುಗೇಶ್ -ನಿಧನ 🪔*

ಇಮೇಜ್
ವಿಜಯನಗರ ಜಿಲ್ಲೆ ಕೂಡ್ಲಿಗಿ : ಪಟ್ಟಣದ ಡಾ. ಬಿ ಆರ್ ಅಂಬೇಡ್ಕರ ನಗರ 14ನೇ ವಾರ್ಡಿನಲ್ಲಿ ಗಿಡ್ಡ ಉಚ್ಛೇ oಪ್ಪನವರ ದುರುಗೇಶ್ ಇವರು (50) (ಅಕ್ಟೊಬರ್ 05 ರಂದು) ಭಾನುವಾರ ಸಂಜೆ ಸಮಯದಲ್ಲಿ 4.15ಗಂಟೆಗೆ ಅನಾರೋಗ್ಯ ದಿಂದ ಹೊಂದಿರುವ ಇವರು ಕಳೆದ ಹದಿನೈದು ದಿನಗಳಿಂದ ಅನಾರೋಗ್ಯ ದಿಂದ ಬಳಲುತ್ತಿದ್ದು ಸ್ವಗೃಹದಲ್ಲಿ ನಿಧನ ಹೊಂದಿದ್ದಾರೆ, ಮೃತರು ಇವರ ಕುಟುಂಬದಲ್ಲಿ ಮೃತ ಗಿಡ್ಡ ಉಚ್ಚೆoಗೇಪ್ಪರ ದುರುಗೇಶ್ ಇವರ ನ್ನು (ದುರ್ಗಾ ಪ್ರಸಾದ್) ಎಂತಲೂ ಸ್ನೇಹಿತರು ಕರೆಯುತ್ತಿದ್ದರು *ಅಂತ್ಯಕ್ರಿಯೆ*-ಅಕ್ಟೊಬರ್, 06-10-2025 ರ ಮದ್ಯಾಹ್ನ 12 . ಗಂಟೆಗೆ ,ಸುಮಾರಿಗೆ ಪಟ್ಟಣದ 16 ನೇ ವಾರ್ಡಿನ ರಾಜೀವ್ ಗಾಂಧಿ ನಗರ ಪಕ್ಕದಲ್ಲಿ ಬರುವ ಶಾಂತಿವನದಲ್ಲಿ ಯಲ್ಲಿ ಅಂತ್ಯಕ್ರಿಯೆ ನೆರವೇರಿಸಲಾಗುವುದು ಎಂದು ಗುರುಹಿರಿಯರು ತಿಳಿಸಿದ್ದಾರೆ *ಸಂತಾಪ*- ಕುಟುಂಬದ ಅಣ್ಣಾ ತಮ್ಮಂದಿರು ಹಾಗೂ ತಂಗಿ ಮತ್ತು ಅಳಿಯ ಮಾವಂದಿರು ಅನೇಕ ಬಂಧುಗಳು ಹಾಗೂ ಅಪಾರ ಕುಟುಂಬ ಬಂಧು ಬಳಗದವರು ಹಾಗೂ ಡಾ. ಬಿ. ಆರ್. ಅಂಬೇಡ್ಕರ್ ನಗರದ ಹಿರಿಯರು ಅಗಲಿಕೆಯಿಂದಾಗಿ , ಅವರ ಕುಟುಂಬದಲ್ಲಿ ದುಖಃ ಮಡುವುಗಟ್ಟಿದೆ ಸೂಚಕದ ಛಾಯೆ ಆವರಿಸಿದೆ. ಸಮಸ್ತ ಬಂಧುಗಳು , ದುಖಃತಪ್ತರಾಗಿದ್ದಾರೆ. ಮಾದಿಗ ಸಮುದಾಯದವರು ಸೇರಿದಂತೆ. ವಿವಿದ ಸಮುದಾಯದವರು. ಕೂಡ್ಲಿಗಿ ಅಂಬೇಡ್ಕರ ನಗರ ಸಮಸ್ತ ಗ್ರಾಮಸ್ಥರು. ಕ್ಷೇತ್ರದ ಶಾಸಕರಾದ ಡಾ ॥ ಎನ್ ಟಿ ಶ್ರೀನಿವಾಸ್ ರವರು. ಕೂಡ್ಲ...

ಹಗಲು-ರಾತ್ರಿ ಎನ್ನದೇ ಸರ್ವೆ ಮಾಡಿ ಐದೇ ದಿನದಲ್ಲಿ ಸಮೀಕ್ಷೆ ಮುಗಿಸಿದ ಪಿ.ಎಂ.ಶ್ರೀ ಧನಗರವಾಡಿ ಶಾಲೆಯ ಅತಿಥಿ ಶಿಕ್ಷಕ ಸಿದ್ದಯ್ಯ ಹಿರೇಮಠ

ಇಮೇಜ್
  ಮಸ್ಕಿ : ರಾಜ್ಯದಲ್ಲಿ ಸಾಮಾಜಿಕ ಮತ್ತು ಶೈಕ್ಷಣಿಕ ಗಣತಿ ಕಾರ್ಯ ಆರಂಭವಾಗಿದ್ದು, ನೆಟ್‌ವರ್ಕ್‌ ಸಮಸ್ಯೆ, ಸರ್ವರ್‌ ಸಮಸ್ಯೆ ಮಧ್ಯೆ ಶಿಕ್ಷಕರು ನಿಧಾನಕ್ಕೆ ಸರ್ವೆ ಮುಗಿಸುತ್ತಿದ್ದಾರೆ. ಸಿಟಿಗಳಲ್ಲೇ ಜನರು ಸರ್ವೆಗೆ ಸರಿಯಾಗಿ ಸ್ಪಂದನೆ ನೀಡದೇ ಇರುವುದು, ನಾಳೆ ಬನ್ನಿ ಎನ್ನುವುದು, ಒಟಿಪಿ ಹೇಳಲು ಹೆದರುತ್ತಿದ್ದಾರೆ. ಈ ಸಮಸ್ಯೆಗಳ ಮಧ್ಯೆ ಶಿಕ್ಷಕರಯೊಬ್ಬರು ಬರೀ ಐದೇ ದಿನಗಳಲ್ಲಿಯೇ ಸರ್ವೆ ಮುಗಿಸಿದ್ದಾರೆ. ಸಿಟಿಗಳಲ್ಲಿ ಶಿಕ್ಷಕರಿಗೆ 121 ಮನೆಗಳ ಟಾರ್ಗೆಟ್‌ ನೀಡಲಾಗಿದೆ. ಈ ಟಾರ್ಗೆಟ್‌ನ್ನು ಮಸ್ಕಿ ಪಟ್ಟಣದ ಗಾಂಧಿ ನಗರದಲ್ಲಿ ಅತಿಥಿ ಶಿಕ್ಷಕರಾದ ಸಿದ್ದಯ್ಯ ರವರು ಮುಗಿಸಿದ್ದಾರೆ. ಇಡೀ ಪಟ್ಟಣದಲ್ಲಿ ಸರ್ವೆ ಮುಗಿಸಿದ ಮೊದಲ ಶಿಕ್ಷಕ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ. ಪಟ್ಟಣದ ಶಿಕ್ಷಕ ಸಿದ್ದಯ್ಯ ಅವರು ಮೊದಲ ದಿನ ಸರ್ವೆ ಮಾಡಲಾಗದೆ ಒದ್ದಾಡಿದ್ದಾರೆ. ಇಡೀ ದಿನಕ್ಕೆ ಕೇವಲ ಒಂದು ಸರ್ವೆ ಮಾತ್ರ ಪೂರ್ಣಗೊಂಡಿದೆ. ಆದರೆ ನಂತರ ಸರ್ವೆ ಸರಾಗವಾಗಿ ನಡೆದಿದೆ. ಜನ ಕೆಲಸಕ್ಕೆ ಹೋಗಿಬಿಡುತ್ತಾರೆ. ಇನ್ನು ಸಿಗುವುದು ರಾತ್ರಿಯೇ! ಹಾಗಾಗಿ ಅತಿಥಿ ಶಿಕ್ಷಕರಾದ  ಸಿದ್ದಯ್ಯ ರವರು ಜನ ಕೆಲಸಕ್ಕೆ ಹೊರಡುವ ಮುನ್ನ, ಕೆಲಸದಿಂದ ಬಂದ ನಂತರ, ಹೀಗೆ ಹಗಲು ರಾತ್ರಿ ಎನ್ನದೇ ಸರ್ವೆ ಮುಗಿಸಿದ್ದಾರೆ. ನಾನು ಪಿ.ಎಂ.ಶ್ರೀ ಸರ್ಕಾರಿ ಪ್ರಾಥಮಿಕ ಶಾಲೆ ಧನಗರವಾಡಿ ಶಾಲೆಯ ಯಲ್ಲಿ ಅತಿಥಿ ಶಿಕ್ಷಕನಾಗಿ ಕೆಲಸ ಮಾಡ್ತಿದ್ದೇನೆ. ಹಗಲು ಹೊತ್ತು ಸರ್ವರ್ ಸ...

ಮಳೆ ಬಂದರೆ ವಿನಾಕಾರಣ ವಿದ್ಯುತ್ ಕಡಿತ ದಲಿತ ವಿದ್ಯಾರ್ಥಿ ಪರಿಷತ್ ಮನವಿ ಸಲ್ಲಿಕೆ

ಇಮೇಜ್
  ಮಸ್ಕಿ : ತಾಲೂಕಿನ ಮೆದಿಕಿನಾಳ ಜಿಲ್ಲಾ ಪಂಚಾಯತ ವ್ಯಾಪ್ತಿಯಲ್ಲಿನ ವಿವಿಧ ಗ್ರಾಮಗಳಲ್ಲಿ ವಿನಾಕಾರಣ ಪದೇ ಪದೇ ವಿದ್ಯುತ್ (ಕರೆಂಟ್) ಸರಬರಾಜು ವ್ಯವಸ್ಥೆಯನ್ನು ಕಡಿತಗೊಳಿಸುತ್ತಿದ್ದು ದಲಿತ ವಿದ್ಯಾರ್ಥಿ ಪರಿಷತ್ ವತಿಯಿಂದ ಮನವಿ ಸಲ್ಲಿಸಲಾಯಿತು. ಮೆದಿಕಿನಾಳ ಜಿಲ್ಲಾ ಪಂಚಾಯತ ವ್ಯಾಪ್ತಿಯಲ್ಲಿನ ವಿವಿಧ ಗ್ರಾಮಗಳಲ್ಲಿ ವಿನಾಕಾರಣ ಪದೇ ಪದೇ ವಿದ್ಯುತ್ (ಕರೆಂಟ್) ಸರಬರಾಜು ವ್ಯವಸ್ಥೆಯನ್ನು ಕಡಿತಗೊಳಿಸುತ್ತಿದ್ದು,ಈ ಭಾಗದ ವಿದ್ಯಾರ್ಥಿಗಳಿಗೆ ರಾತ್ರಿ ಸಮಯದಲ್ಲಿ ಓದಲು ಬಹಳ ಕಷ್ಟವಾಗಿರುತ್ತದೆ. ಅಲ್ಲದೇ ರಾತ್ರಿ ಸಮಯದಲ್ಲಿ ಊರಿನ ಜನರು, ವೃದ್ಧರು, ವಿದ್ಯಾರ್ಥಿಗಳು ನಡೆದಾಡಲು ಕಷ್ಟವಾಗಿರುತ್ತದೆ. ವಿದ್ಯುತ್ ಸಮಸ್ಯೆಯಿಂದ ಯಾವುದೇ ರೀತಿಯ ಆನ್‌ಲೈನ್ ಕೆಲಸಗಳು ಮತ್ತು ಇನ್ನಿತರೇ ಕೆಲಸ ಕಾರ್ಯಗಳು ಆಗುತ್ತಿಲ್ಲ. ಅಲ್ಲದೇ, ಮಳೆ ಬಂದಿದೆ ಎಂದು ತಿಳಿದರೆ ಸಾಕು. ವಿನಾ ಕಾರಣ ನೀಡಿ ಮೇನ್ ಲೈನ್ ಪಾಲ್ಟ್ ಇದೆ ಎಂದು ಸುಖಾ ಸುಮ್ಮನೆ ವಿದ್ಯುತ್ ತೆಗೆಯುವುದರಿಂದ ಇಂದಿನ ತಂತ್ರಜ್ಞಾನ ಬ್ಯಾಟರಿ ಮೇಲೆ ಕೆಲಸ ಮಾಡುತ್ತೆ, ಅದರಲ್ಲೂ ಶಾಲಾ ಮತ್ತು ಕಾಲೇಜು ವಿದ್ಯಾರ್ಥಿಗಳಿಗೆ ಪ್ರೊಜೆಕ್ಟರ್ ನಲ್ಲಿ ಸ್ಮಾರ್ಟ್ ಕ್ಲಾಸ್ ಹಾಗೂ ಆನ್ಲೈನ್ ಕ್ಲಾಸಸ್ ಮತ್ತು ಇನ್ನಿತರೆ ಕಚೇರಿ ಕೆಲಸ ಮಾಡಲು ವಿದ್ಯುತ್ ಕಡಿತ ಬಹಳ ತೊಂದರೆಯನ್ನುಂಟು ಮಾಡಿದೆ. ಆದ್ದರಿಂದ ಇದನ್ನು ಮನಗಂಡು ವಿದ್ಯಾರ್ಥಿಗಳ ಹಿತ ದೃಷ್ಟಿಯಿಂದ, ಕಚೇರಿ ಸಿಬ್ಬಂದಿಗಳಿಗೆ ಹಾಗೆಯೇ ಸಾರ್ವಜನಿಕ ಕೆ...

ಸಾಮಾಜಿಕ, ಶೈಕ್ಷಣಿಕ ಸಮೀಕ್ಷೆಗೆ ವ್ಯಾಪಕ ಪ್ರಚಾರ ಸಿಗಲಿ ಜಿ.ಪಂ ಉಪ ಕಾರ್ಯದರ್ಶಿ ಹಾಲ ಸಿದ್ದಪ್ಪ ಪೂಜೇರಿ ಸಲಹೆ

ಇಮೇಜ್
  ಮಸ್ಕಿ : ಪಟ್ಟಣದ ತಾಲೂಕು ಪಂಚಾಯತಿ, ತಹಸೀಲ್ದಾರ್ ಕಚೇರಿಗೆ ಜಿಪಂ ಉಪ ಕಾರ್ಯದರ್ಶಿಗಳಾದ ಹಾಲಸಿದ್ದಪ್ಪ ಪೂಜೇರಿ ಅವರು ಶನಿವಾರ ಭೇಟಿ ನೀಡಿ, ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷೆ ಪ್ರಗತಿ ಕುರಿತು ಮಾಹಿತಿ ಪಡೆದರು.  ಗ್ರಾ.ಪಂ ಅಭಿವೃದ್ಧಿ ಅಧಿಕಾರಿಗಳು ಮತ್ತು ಸಿಬ್ಬಂದಿ, ಸಮೀಕ್ಷೆಯ ನೋಡಲ್ ಅಧಿಕಾರಿಗಳೊಂದಿಗೆ ವಿ.ಸಿ ಮೂಲಕ ಸಭೆ ನಡೆಸಿದರು. ರಾಜ್ಯ ಸರ್ಕಾರದಿಂದ ಕೈಗೊಂಡಿರುವ ಸಾಮಾಜಿಕ, ಶೈಕ್ಷಣಿಕ ಸಮೀಕ್ಷೆ ಕುರಿತು ವ್ಯಾಪಕ ಪ್ರಚಾರ ಕೈಗೊಂಡು, ಪ್ರತಿಯೊಂದು ಕುಟುಂಬದ ಮಾಹಿತಿಯನ್ನು ನಿಗದಿತ ನಮೂನೆಯಲ್ಲಿ ಪಡೆದು, ತಂತ್ರಾಂಶದಲ್ಲಿ ದಾಖಲಿಸಬೇಕು. ಗ್ರಾಮ ಪಂಚಾಯತಿ ಮಟ್ಟದ ಸ್ವ ಸಹಾಯ ಗುಂಪುಗಳ ಮಹಿಳೆಯರು ಸಮೀಕ್ಷೆ ಕುರಿತು ಗ್ರಾಮೀಣರಲ್ಲಿ ಜಾಗೃತಿ ಮೂಡಿಸಬೇಕು. ಸಮೀಕ್ಷೆ ಯಶಸ್ಸಿಗೆ ಗ್ರಾಮ ಪಂಚಾಯತಿಯಿಂದ ಸಂಪೂರ್ಣ ಸಹಕಾರ ಒದಗಿಸಬೇಕು. ಗಣತಿದಾರರು ಪ್ರತಿ ದಿನ ಸಮೀಕ್ಷೆ ಕಾರ್ಯದಲ್ಲಿ ಭಾಗವಹಿಸಿರುವುದನ್ನು ಖಚಿತ ಪಡಿಸಿಕೊಳ್ಳಬೇಕು. ಮೂರು ನಾಲ್ಕು ದಿನಗಳ ಒಳಗೆ ಸಮೀಕ್ಷೆ ಪೂರ್ಣಗೊಳಿಸಬೇಕು ಎಂದರು. ತದ ನಂತರ ಉದ್ಬಾಳ ಗ್ರಾಮ ಪಂಚಾಯತಿಯ ಕ್ಯಾತ್ನಟ್ಟಿ, ಚಿಕ್ಕಕಡಬೂರು, ಉದ್ಬಾಳ ಗ್ರಾಮಕ್ಕೆ ಭೇಟಿ ನೀಡಿ ಸಮೀಕ್ಷೆ ಕಾರ್ಯವನ್ನು ವೀಕ್ಷಿಸಿ ಸಿಬ್ಬಂದಿಗಳೊಂದಿಗೆ ಚರ್ಚಿಸಿದರು. ಈ ಸಂದರ್ಭದಲ್ಲಿ ಕಾರ್ಯನಿರ್ವಾಹಕ ಅಧಿಕಾರಿಗಳಾದ ಅಮರೇಶ್, ವ್ಯವಸ್ಥಾಪಕರಾದ ಗಂಗಾಧರ ಮೂರ್ತಿ, ಸಿಬ್ಬಂದಿಗಳಾದ ಚಂದ್ರಶೇಖರ, ಬಸವರಾಜ್, ಉದ್ಬಾಳ ಗ...

ಸುಜ್ಞಾನ ನಿಧಿ ಶಿಷ್ಯವೇತನದಿಂದ ಮಕ್ಕಳ ಭವಿಷ್ಯ ಉಜ್ವಲ - ಸಿದ್ದಲಿಂಗ ಶ್ರೀ ಅಭಿಮತ

ಇಮೇಜ್
  ಕೊಟ್ಟೂರು: ಪಟ್ಟಣದ ಡೋಣೂರು ಚಾನುಕೋಟಿ ಮಠದ ಸಮುದಾಯ ಭವನದಲ್ಲಿ ೨೦೨೪ -೨೫ ನೇ ಸಾಲಿನ ೧೧೫ ವಿದ್ಯಾರ್ಥಿಗಳಿಗೆ ಸುಜ್ಞಾನ ನಿಧಿ ಶಿಷ್ಯ ವೇತನ ಮಂಜೂರಾತಿ ಪತ್ರ ವಿತರಣಾ ಕಾರ್ಯಕ್ರಮ ಹಮ್ಮಿಕೊಂಡಿದ್ದು ಕಾರ್ಯಕ್ರಮದಲ್ಲಿ ದಿವ್ಯ ಸಾನಿಧ್ಯ ಡಾ. ಶ್ರೀ ಸಿದ್ದಲಿಂಗ ಶಿವಾಚಾರ್ಯ ಸ್ವಾಮಿಯವರು ಹಾಗು ಮಾಜಿ ಜಿಲ್ಲಾ ಪಂಚಾಯತ್ ಸದಸ್ಯರು ಎಂ ಎಂ ಜೆ  ಹರ್ಷವರ್ದನ್ ರವರು ಕಾರ್ಯಕ್ರಮವನ್ನು ದೀಪ ಬೆಳಗಿಸುವ ಮೂಲಕ ಉದ್ಘಾಟನೆ ಮಾಡಿದರು. ಜಿಲ್ಲಾ ನಿರ್ದೇಶಕರು ಸತೀಶ್ ಶೆಟ್ಟಿ ಯವರು ಧರ್ಮಸ್ಥಳದಿಂದ ನಡೆಯುವ ಚತುರ್ವಿಧ ದಾನಗಳಾದ  ಅನ್ನದಾನ, ವಿದ್ಯಾದಾನ, ಅರೋಗ್ಯದಾನ, ಹಾಗು ಅಭಯ ದಾನಗಳ  ಬಗ್ಗೆ ತಿಳಿಸಿದರು ಸುಜ್ಞಾನ ನಿಧಿ ಶಿಷ್ಯ ವೇತನ ಕಾರ್ಯಕ್ರಮವನ್ನು ಕಳೆದ ೧೯ ವರ್ಷಗಳಿಂದ ನಿರಂತರವಾಗಿ ನೆಡೆದುಕೊಂಡು ಬರುತ್ತಿದೆ ಹಾಗು ನಿರ್ಗತಿಕರಿಗೆ ಮಾಶಾಸನ ತಿಂಗಳಿಗೆ ೧೦೦೦ ರೂ ಅಂತೆ ನೀಡಲಾಗುತ್ತಿದೆ  ವಿಜಯನಗರ ಜಿಲ್ಲೆಯಲ್ಲಿ ೮೦೦ ವಿದ್ಯಾರ್ಥಿಗಳಿಗೆ ಹಾಗು ನಮ್ಮ ಕೊಟ್ಟೂರು ತಾಲ್ಲೂಕಿನಲ್ಲಿ ಕಳೆದ ವರ್ಷ ೧೦೭ ಮತ್ತು ಈ ವರ್ಷ ೧೧೫ ಒಟ್ಟು ೨೨೨ ವಿದ್ಯಾರ್ಥಿಗಳಿಗೆ ೧೪,೫೨,೦೦೦ ಮೊತ್ತ ವನ್ನು ವಾರ್ಷಿಕವಾಗಿ ಹಣ ವಿದ್ಯಾರ್ಥಿಗಳ ಖಾತೆಗೆ ಹಾಕಲಾಗುತ್ತಿದೆ. ರಾಜ್ಯದಲ್ಲಿ ೯೫೦ ಕೆರೆಗಳನ್ನು ನಮ್ಮ ಊರು ನಮ್ಮ ಕೆರೆ ಕಾರ್ಯಕ್ರಮದಲ್ಲಿ ಕೆರೆ ಪುನಶ್ಚೇತನಗೊಳಿಸಲಾಗಿದೆ  ರಾಜ್ಯದಲ್ಲಿ ೧೦೫೦ ಜ್ಞಾನದೀಪಾ ಯೋಜನೆಯಡಿ ಸರ್ಕಾರಿ ಶಾಲೆಗಳಿಗ...

ಕೊಟ್ಟೂರು ತಾಲೂಕು ಪಂಚ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿ ರಚನೆ

ಇಮೇಜ್
  ಕೊಟ್ಟೂರು : ಕೊಟ್ಟೂರು ತಾಲೂಕು ಪಂಚ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿ ರಚನೆಗೊಂಡಿದ್ದುಕೊಟ್ಟೂರು ತಾಪಲೂಕು ಪಂಚಾಯಿತಿಯ ಮಾನ್ಯ ಕಾರ್ಯನಿರ್ವಾಹಕ ಅಧಿಕಾರಿಗಳು ಹಾಗೂ ಪಂಚ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿ ಸದಸ್ಯ ಕಾರ್ಯದರ್ಶಿಗಳೂ ಆದ ಶ್ರೀ ಡಾ.ಬಿ.ಆನಂದಕುಮಾರ ಅವರು ಸರ್ಕಾರದಿಂದ ನೇಮಕಗೊಂಡ ಅಧ್ಯಕ್ಷರು ಹಾಗೂ ಸದಸ್ಯರರುಗಳಿಗೆ ಆದೇಶ ಪ್ರತಿಯನ್ನು ನೀಡಿದರು. ಕೊಟ್ಟೂರು ತಾಲೂಕು ಪಂಚ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿಗೆ ಶ್ರೀ ಅನಿಲ್ ಹೊಸಮನಿ (ಅಧ್ಯಕ್ಷರು), ಸದಸ್ಯರಾಗಿ ಶ್ರೀ ಪ್ರಭುದೇವ್, ಶ್ರೀ ಮಾರಪ್ಪ ದೊಡ್ಡಮನಿ, ಶ್ರೀ ಹರೀಶ್ ನಾಯ್ಕ್ ಎಲ್.ಎನ್., ಶ್ರೀಮತಿ ಸುಶೀಲಮ್ಮ , ಶ್ರೀಮತಿ ಗಾಯತ್ರಿ ಎ.ಎಸ್, ಶ್ರೀ ಶಿವರಾಜ್ ಟಿ, ಶ್ರೀ ನಾಗಪ್ಪ, ಶ್ರೀ ಪಿ.ಕೆ. ಇಂದ್ರಜಿತ್, ಶ್ರೀ ತಿರುಕಪ್ಪ ಕರಡಿ, ಶ್ರೀ ಎನ್.ಚಂದ್ರಪ್ಪ, ಶ್ರೀ ಬಸವರಾಜ್, ಶ್ರೀ ಜೆ.ಆನಂದ, ಶ್ರೀ ಮಾಲವಿ ಜಮಿರ್ ಖಾನ್, ಶ್ರೀ ಉಮಾಪತಿ ಸ್ವಾಮಿ ಎಂ.ಎಂ. ಅವರು ಸಮಿತಿ ಸದಸ್ಯರಾಗಿ ನೇಮಕಗೊಂಡಿರುತ್ತಾರೆ.  ಈ ವೇಳೆ ಪಂಚ ಗ್ಯಾರಂಟಿ ಯೋಜನೆ ಅನುಷ್ಠಾನ ಸಮಿತಿ ಅಧ್ಯಕ್ಷರರಾದ ಶ್ರೀ ಅನಿಲ್ ಹೊಸಮನಿ ಅವರು ಮಾತನಾಡಿ, ತಾಲೂಕಿನಲ್ಲಿ ಪಂಚ ಗ್ಯಾರಂಟಿ ಯೋಜನೆಗಳಿಗೆ ಸಂಬಂಧಿಸಿದಂತೆ ಯಾವುದೇ ಕುಂದು ಕೊರತೆ ಇದ್ದಲ್ಲಿ, ಅನುಷ್ಠಾನ ಸಮಿತಿಗೆ ದೂರು ಸಲ್ಲಿಸುವಂತೆ ಮನವಿ ಮಾಡಿದರು.

ಕೊರಮ ಮತ್ತು ಕೊರಚ ಜನಾಂಗದವರಲ್ಲಿ ಮನವಿ

ಇಮೇಜ್
ಬಳ್ಳಾರಿ: ರಮಣಪ್ಪ ಭಜಂತ್ರಿ ರಾಜ್ಯ ಖಜಾಂಚಿ ಅಖಿಲ ಕರ್ನಾಟಕ ಕುಳುವ ಮಹಾ ಸಂಘ (ಕೊರಮ,ಕೊರಚ,ಕೊರವ ಸಮುದಾಯಗಳ ಒಕ್ಕೂಟ) ವತಿಯಿಂದ  ಸರ್ಕಾರ ನಡೆಸುತ್ತಿರುವ ಶೈಕ್ಷಣಿಕ ಮತ್ತು ಸಾಮಾಜಿಕ ಜಾತಿಗಣತಿಯಲ್ಲಿ ತಾವು ಜಾತಿ ಪ್ರಮಾಣದ ಪ್ರಕಾರ ಕೊರಚ ಇದ್ದರೆ ಅಂತ ಕೋಡ್. 053.1*ಕೊರಚ* ಬರೆಸಿ, ಕೊರಮ ಇದ್ದರೆ ಕೋಡ್ 054.1*ಕೊರಮ* ಅಂತ ಬರೆಸಿ  ಸಂವಿಧಾನ ಪ್ರಕಾರ *ಕೊರಚ ಮತ್ತು ಕೊರಮ* ಆದಕಾರಣ *ಕೊರಚ ಅಥವಾ ಕೊರಮ ಅಂತ ಬರೆಸಬೇಕು* ಎಂದು ತಮ್ಮಲ್ಲಿ ಮನವಿ ಮಾಡಿಕೊಳ್ಳುತ್ತೇನೆ. 

"ಯುವಜನರ ಅಭಿರುಚಿ ಬದಲಾಗದೆ,ಸಂಸ್ಕೃತಿ ಉಳುವಿಗೆ ಸಾಧ್ಯವಿಲ್ಲ : ವಿರೂಪಾಕ್ಷಪ್ಪ ಪಂಡಿತ್ "

ಇಮೇಜ್
ದಾವಣಗೆರೆ: ಯುವಜನರ ಅಭಿರುಚಿ ಬದಲಾಗದ ಹೊರತು ಸಂಸ್ಕೃತಿ ನಾಶವನ್ನ ತಡೆಯಲು ಯಾರಿಂದಲೂ ಸಾದ್ಯವಿಲ್ಲ ಸಂಸ್ಕೃತಿ ನಾಶವನ್ನು ತಡೆಗಟ್ಟುವಲ್ಲಿ ಯುವ ಜನರ ಅಭಿರುಚಿಯನ್ನು ಬದಲಾಯಿಸುವಲ್ಲಿ ಪೋಸಕರು ಶಿಕ್ಷಣವ್ಯವಸ್ಥೆ,ಸಮಾಜ, ಸಮೂಹ ಮಾದ್ಯಮಗಳು ಜವಾಬ್ದಾರಿ ನಿರ್ವಹಿಸುವಲ್ಲಿ ಸೋತಿದೆ ಎಂದು ಹಿರಿಯ ಪತ್ರಕರ್ತ ವಿರೂಪಾಕ್ಷಪ್ಪ ಪಂಡಿತ್ ವಿಷಾದ ವ್ಯಕ್ತ ಪಡಿಸಿದರು. ಅವರು ನಿನ್ನೆ ಇಲ್ಲಿನ ಕುವೆಂಪು ಕನ್ನಡ ಭವನದಲ್ಲಿ ಕರ್ನಾಟಕ ರತ್ನ ದಿ. ಡಾ/ವಿಷ್ಣುವರ್ಧನ್ ರವರ ಜನ್ಮದಿನಾಚರಣೆ ಹಾಗೂ ಗಾಯಕ ದಿ. ಎಸ್.ಪಿ ಬಾಲಸುಬ್ರಹ್ಮಣ್ಯಂ ಹಾಗೂ ದಿ. ಪುನೀತ್ ರಾಜಕುಮಾ‌ರ್ ಸಂಸ್ಮರಣೆ ಆಂಗವಾಗಿ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್, ಐಕ್ಯತಾ ಸಾಸ್ಕೃತಿಕ ಅಕಾಡೆಮಿ ,ಅಕ್ಷರ ನ್ಯೂಸ್ ಯೂಟೂಬ್ ಚಾನಲ್, ವಿಷ್ಣುವರ್ಧನ್ ಅಭಿಮಾನಿಗಳ ಸಂಘದ ಆಶ್ರಯದಲ್ಲಿ ಹಮ್ಮಿಕೊಂಡಿದ್ದ ಗೀತ ನಮನ ರಸಮಂಜರಿ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಪಾಲ್ಗೊಂಡು ಮಾತನಾಡುತ್ತಿದ್ದರು. ಯುವಜನರನ್ನ ಮೊಬೈಲ್ ಓದುವ ಸಂಸ್ಕೃತಿಯಿಂದ ದೂರ ತಳ್ಳಿದೆ. ಪರಿಣಾಕಾರಿಯಾದ ಮಾದ್ಯಮವಾದ ಸಿನಿಮಾ ಮತ್ತು ಅದರ ಸಾಹಿತ್ಯ ಕೂಡ ಲಾಂಗು ಮಚ್ಚು ಗಳನ್ನು ಹಿಡಿಯಲು ಯುವಜನರಿಗೆ ಪ್ರೇರೇಪಿಸುತ್ತಿವೆ ಸಾಮಾನ್ಯ ಜನರಿಗೆ ಮೇಲ್ಪಂಕ್ತಿ ಹಾಕಿಕೊಡಬೇಕಾದ ಸಿನಿಮಾ ನಟರು ಬಾಯಲ್ಲಿ ಹೇಳಿ ಕೇಸರಿ ಎಂದು ಜಾಹೀರಾತು ನೀಡಿ ಯುವಜನರ ಬದುಕನ್ನು ಕೆಸರು ಮಾಡುತ್ತಿದ್ದಾರೆ. ಇಂತಹ ಸಿನಿಮಾ ನಟರಿಂದ ಸಮಾಜ ಏನು ಕಲಿಯಬೇಕು? ಒಬ್ಬ ರೌಡಿ ಸ...

ಬಳ್ಳಾರಿಯ ಪ್ರತಿಭೆ, ಮುಖ್ಯ ಶಿಕ್ಷಕ ಎಚ್ .ತಿಪ್ಪೇಸ್ವಾಮಿಗೆ ಉತ್ತಮ ಶಿಕ್ಷಕ ಪ್ರಶಸ್ತಿ.

ಇಮೇಜ್
ಯಾದಗಿರಿ ಜಿಲ್ಲೆಯ, ತಾಲೂಕಿನ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆ ಮಾವಿನಹಳಿಯ ಪ್ರಭಾರ ಮುಖ್ಯಗುರುಗಳಾದ ತಿಪ್ಪೇಸ್ವಾಮಿ.ಹೆಚ್ ಅವರಿಗೆ ತಾಲೂಕು ಮಟ್ಟದ ಉತ್ತಮ ಶಿಕ್ಷಕ ಪ್ರಶಸ್ತಿ ಲಭಿಸಿದೆ.  ಜಿಲ್ಲಾಡಳಿತ ಮತ್ತು ಜಿಲ್ಲಾ ಪಂಚಾಯತಿ ಯಾದಗಿರಿ ಹಾಗೂ ಕ್ಷೇತ್ರ ಶಿಕ್ಷಣಾಧಿಕಾರಿಗಳ ಕ್ಷೇತ್ರ ಸಮನ್ವಯ ಅಧಿಕಾರಿಗಳ ಕಾರ್ಯಾಲಯ ಶಾಲಾ ಶಿಕ್ಷಣ ಇಲಾಖೆ ಯಾದಗಿರಿ ನೇತೃತ್ವದಲ್ಲಿ 2025 26 ನೇ ಸಾಲಿನ ತಾಲೂಕು ಮಟ್ಟದ ಶಿಕ್ಷಕರ ದಿನಾಚರಣೆ ಮತ್ತು ಉತ್ತಮ ಶಿಕ್ಷಕರಿಗೆ ಸನ್ಮಾನ ಸಮಾರಂಭ ಬಸವೇಶ್ವರ ಕಲ್ಯಾಣ ಮಂಟಪದಲ್ಲಿ ಶನಿವಾರ ಕಾರ್ಯಕ್ರಮ ನಡೆಯಿತು  ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆ ಮಾವಿನಹಳಿಯ ಆವರಣದಲ್ಲಿ ಪ್ರಭಾರ ಮುಖ್ಯಗುರುಗಳಾದ ಇವರು 101 ಮರಗಳ ನೆಟ್ಟು ನೀರು ಹಾಕಿ ಪೋಷಿಸಿದ್ದಾರೆ.ಇನ್ನು ತಿಪ್ಪೇಸ್ವಾಮಿ.ಹೆಚ್ ಅವರು ಮಕ್ಕಳೊಂದಿಗೆ ಮಕ್ಕಳಂತೆ ಇದು ಉತ್ತಮವಾಗಿ ಸೃಜನಾತ್ಮಕವಾಗಿ, ಮಾನವೀಯ ಮೌಲ್ಯಗಳೊಂದಿಗೆ, ಪ್ರಾಯೋಗಿಕ ಬೋಧನೆ ಮಾಡಿ ಗಮನ ಸೆಳೆದಿದ್ದಾರೆ.  ಮೂಲತಃ ಬಳ್ಳಾರಿ ಗ್ರಾಮಾಂತರ ಸಿಂಧವಾಳ ಗ್ರಾಮದ ದಂಪತಿ ಧರ್ಮ ರೆಡ್ಡಿ, ರೇಣಕಮ್ಮ ಅವರ ಎರಡನೇ ಪುತ್ರ ರಾಗಿದ್ದಾರೆ. ಈ ಎಲ್ಲಾ ಸಾಧನೆಗೆ ತಂದೆ ತಾಯಿಗಳು ಮತ್ತು ಪೋಷಕರು ಹಾಗೂ ಯಾದಗಿರಿ ಜಿಲ್ಲೆಯ ಶಿಕ್ಷಣ ಇಲಾಖೆ ಅಧಿಕಾರಿಗಳು ಮತ್ತು ಸಿಬ್ಬಂದಿ ವರ್ಗದವರು ಶಿಕ್ಷಕರು ಪ್ರೋತ್ಸಾಹಕ್ಕೆ ಧನ್ಯವಾದಗಳು ತಿಳಿಸಿದ್ದಾರೆ. ಈ ಸಮಯದಲ್ಲಿ ಬಾಬುರಾವ್ ಚಿಂಚನಸೂರು, ಶಾಸಕರಾದ ಚನ್ನ ...