ಪೋಸ್ಟ್‌ಗಳು

ಜೂನ್, 2025 ರಿಂದ ಪೋಸ್ಟ್‌ಗಳನ್ನು ತೋರಿಸುತ್ತಿದೆ

*ಬಯಲು ಸೀಮೆಯನ್ನು ಹಸುರಾಗಿಸಿದ ಹಸಿರು ಹೊನಲು ಸೇವಾ ಸಂಸ್ಥೆ*

ಇಮೇಜ್
"ಹಸಿರು ಹೊನಲು ಸೇವಾ ಸಂಸ್ಥೆಯಿಂದ ಕೊಟ್ಟೂರಿನ ಇತಿಹಾಸದಲ್ಲಿ ಮೊದಲ ಬಾರಿಗೆ ಗಿಡಗಳ ಮೆರವಣಿಗೆಗೆ ಸಾಕ್ಷಿ " ಮಕ್ಕಳಿಂದ ಪರಿಸರ ಬಗ್ಗೆ ಜಯ ಘೋಷ ಕೂಗುತ್ತಾ ಪರಿಸರ ಸಂದೇಶ ಕೊಟ್ಟೂರು: ಸದಾ ಬರಗಾಲಕ್ಕೆ ಹೆಸರುವಾಸಿವಾಗಿರುವ ಕಲ್ಯಾಣ ಕರ್ನಾಟಕದಲ್ಲಿ ಕೊಟ್ಟೂರು ಪಟ್ಟಣದಲ್ಲಿ ಹಸಿರು ಹೊನಲು ಸೇವಾ ಸಂಸ್ಥೆಯು ಸದಾ ಪರಿಸರ ಸಂರಕ್ಷಣೆ, ಜಾತ್ರೆ ಸಂದರ್ಭದಲ್ಲಿ ಸ್ವಚ್ಛತೆ ಹಾಗೂ ಮಡಿದವರ ಹೆಸರಿನಲ್ಲಿ ಗಿಡ ನೆಡುವ, ನೆಟ್ಟಿರುವ ಗಿಡವನ್ನು ಬೆಳೆಸಿ ಪರಿಸರ ಕಾಳಜಿಯನ್ನು ತೋರುತ್ತಿದ್ದಾರೆ. ಇದೇ ತರಹ ಪ್ರತಿಯೊಬ್ಬರೂ ಗಿಡ ನೆಡುವ ಕೆಲಸ ಮಾಡಬೇಕು ಎಂದು ಪರಿಸರ ತಜ್ಞ ಶಿವಾನಂದ ಕಳವೆ ಹೇಳಿದರು. ಇದಕ್ಕೂ ಮೊದಲು ಪಟ್ಟಣದಲ್ಲಿ ಹಸಿರು ಹೊನಲು ಸೇವಾ ಸಂಸ್ಥೆ ಇವರಿಂದ ಜೂನ್ ಒಂದರಿಂದ ಒಂದು ತಿಂಗಳ ಕಾಲ ಗಿಡ ನೆಡುವ ಅಭಿಯಾನವನ್ನು ಹಮ್ಮಿಕೊಂಡಿದ್ದರು. ಅದರ ಸಮಾರೋಪ ಸಮಾರಂಭ ಭಾನುವಾರದಂದು ಶ್ರೀ ಗುರು ಕೊಟ್ಟೂರೇಶ್ವರ ಸ್ವಾಮಿಯ ದೇವಸ್ಥಾನದಿಂದ ಹಸಿರ ಹಬ್ಬ ಮೆರವಣಿಗೆಯನ್ನು ಹಮ್ಮಿಕೊಳ್ಳಲಾಗಿತ್ತು. ಸಾಮಾನ್ಯವಾಗಿ ಮೆರವಣಿಗೆ ಎಂದರೆ ವಧು-ವರರ ಮೆರವಣಿಗೆ ಅಥವಾ ಗಣ್ಯರ ಮೆರವಣಿಗೆ ನೋಡಿದ್ದೇವೆ ಕೇಳಿದ್ದೇವೆ ಆದರೆ ಕೊಟ್ಟೂರಿನ ಇತಿಹಾಸದಲ್ಲಿ ಮೊದಲ ಬಾರಿಗೆ ಗಿಡಗಳ ಮೆರವಣಿಗೆಯನ್ನು ನಡೆಸಲಾಯಿತು. ಈ ಮೆರವಣಿಗೆಗೆ ಸಮಾಳ, ನಂದಿಕೋಲುಗಳು ದಾರಿಯುದ್ದಕ್ಕೂ ಶಬ್ದದಿಂದ ಮೆರವಣಗೆಗೆ ಮೆರಗನ್ನು ತಂದಿತ್ತು. ಮಕ್ಕಳಿಂದ ಪರಿಸರ ಬಗ್ಗೆ ಜಯ ಘೋಷ ಕೂಗುತ್ತಾ ಪರಿಸರ...

"ಕರ್ನಾಟಕ ಪ್ರಸ್ ಕ್ಲಬ್ ಹಗರಿ ಬೊಮ್ಮನಹಳ್ಳಿ ತಾಲೂಕು ಅಧ್ಯಕ್ಷರಾಗಿ ಶಿವಶಂಕರ ಸ್ವಾಮಿ ಅವಿರೋಧವಾಗಿ ಆಯ್ಕೆ"

ಇಮೇಜ್
*ಕರ್ನಾಟಕ ಪ್ರಸ್ ಕ್ಲಬ್ ತಾಲೂಕು ಘಟಕ ಪ್ರಾರಂಭೋತ್ಸವ* ಹಗರಿಬೊಮ್ಮನಹಳ್ಳಿ:   ಕರ್ನಾಟಕ ಪ್ರಸ್ ಕ್ಲಬ್ ಹಗರಿ ಬೊಮ್ಮನಹಳ್ಳಿ ತಾಲೂಕು ನೂತನ ಅಧ್ಯಕ್ಷರಾಗಿ ಶಿವ ಶಂಕರ್ ಸ್ವಾಮಿ ಅವಿರೋಧವಾಗಿ ಆಯ್ಕೆಗೊಂಡರು. ಈ ಸಂಬಂಧ ಇಲ್ಲಿನ  ಸರ್ಕ್ಯೂಟ್ ಹೌಸ್ ನಲ್ಲಿ ಶನಿವಾರ ರಂದು ಕರ್ನಾಟಕ ಪ್ರಸ್ ಕ್ಲಬ್ ರಾಜ್ಯ ಉಪಾಧ್ಯಕ್ಷ ಕೆ ಕೊಟ್ರೇಶ್ ನೇತೃತ್ವದಲ್ಲಿ ಆಯ್ಕೆ ಪ್ರಕ್ರಿಯೆ ನಡೆಯಿತು. ಕರ್ನಾಟಕ ಪ್ರಸ್ ಕ್ಲಬ್ ಸಂಘದಿಂದ ಆರೋಗ್ಯ ವಿಮೆ, ಮೃತ ಹೊಂದಿದ ಸದಸ್ಯರಿಗೆ ಸಹಾಯಧನ ಮತ್ತು ವಿವಿಧ ಸೌಲಭ್ಯಗಳ ಅನುಕೂಲಕ್ಕೆ ಸಂಘದಿಂದ ಪ್ರೋತ್ಸಾಹ ಸದಸ್ಯರ ಸಮಸ್ಯೆಗಳಿಗೆ ಸ್ಪಂದಿಸುತ್ತೇವೆ ಎಂದರು  ತಾಲೂಕು ಕರ್ನಾಟಕ ಪ್ರಸ್ ಕ್ಲಬ್ ಸಂಘದ ಸರ್ವಸದಸ್ಯರ  ಸಂಯುಕ್ತ ಕರ್ನಾಟಕ ವರದಿಗಾರರು ಉಮೇಶ್ ನೆಲ್ಕುದ್ರಿ, ಕನ್ನಡ ಪ್ರಭ ವರದಿಗಾರರು ಸುರೇಶ್ ಯಳಕಪ್ಪನವರನ್ನು ಒಮ್ಮತದಿಂದ ಜಿಲ್ಲಾ ಸಂಘಕ್ಕೆ ಆಯ್ಕೆ ಮಾಡಲಾಯಿತು. ಪದಾಧಿಕಾರಳ ವಿವರ: ಹಗರಿ ಬೊಮ್ಮನಹಳ್ಳಿ ತಾಲೂಕು ಉಪಾಧ್ಯಕ್ಷ ಫಕೀರಪ್ಪ, ಚಂದ್ರಶೇಖರ್, ಏಳು ಕೋಟಿ,ಪ್ರಧಾನ ಕಾರ್ಯದರ್ಶಿ ಪೂಜಾರ್ ಸಿದ್ದಪ್ಪ , ಸಹ ಕಾರ್ಯದರ್ಶಿ ಫಕ್ರುದ್ದೀನ್, ಸಂಘಟನಾ ಕಾರ್ಯದರ್ಶಿ ಸುರೇಶ್ ಬಡಿಗೇರ್, ಪ್ರಜಾಂಚಿ ಎನ್ ಪರಶುರಾಮ್,ಸದಸ್ಯರಾದ .ಆರ್ ಪ್ರಕಾಶ್ ದೊಡ್ಡ ಬಸವರಾಜ. ಮೈಲಪ್ಪ. ಸಂತೋಷ.ಇದ್ದರು ಈ ಸಂದರ್ಭದಲ್ಲಿ ಕೊಟ್ಟೂರಿನ ಹಿರಿಯ ಪತ್ರಕರ್ತರು ಡಿ ಸಿದ್ದಪ್ಪ ,ಹಿರಿಯ ಪತ್ರಕರ್ತರು ಪರುಶುರಾಮ ಎಸ್ ,ಎಸ್ ...

ಸರಕಾರಿ ಶಾಲೆಯಲ್ಲಿ ನಾಡಪ್ರಭು ಕೆಂಪೇಗೌಡ ಜಯಂತಿ ಆಚರಣೆ

ಇಮೇಜ್
ಮಸ್ಕಿ : ಪಟ್ಟಣದ ಪಿ.ಎಂ.ಶ್ರೀ ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಯಲ್ಲಿ ಕೆಂಪೇಗೌಡರ ಭಾವ ಚಿತ್ರಕ್ಕೆ ಹೂವಿನ ಹಾರ ಹಾಕಿ ಕರ್ಪೂರ ಹಚ್ಚಿ ಕಾಯಿ ಒಡೆಯುವ ಮೂಲಕ ಜಯಂತಿ ಆಚರಣೆ ಮಾಡಲಾಯಿತು. ನಂತರ ಜಯಂತಿಯ ಕುರಿತು ಮಾತನಾಡಿ ಶಿಸ್ತುಬದ್ಧ ಆಡಳಿತ, ಯೋಜನೆ-ಯೋಚನೆಗಳ ಮೂಲಕ ಬಾಲ್ಯದಲ್ಲಿ ಕಂಡ ಜನಪರ ಕನಸನ್ನು ನನಸಾಗಿಸಲು ಕೆಂಪೇಗೌಡರ ತ್ಯಾಗ ಹಾಗೂ ಶ್ರಮವನ್ನು ನೆನಪು ಮಾಡಿಕೊಳ್ಳಬೇಕು ಎಂದು ಶಾಲೆ ಮುಖ್ಯ ಗುರುಗಳಾದ ಶ್ರೀಕಾಂತಮ್ಮ ರವರು ಹೇಳಿದರು. ಇಪ್ಪತ್ತಮೂರು ವರ್ಷಗಳ ಕಾಲ ಆಡಳಿತ ನಡೆಸಿ ಇಂದಿನ ಬಹುದೊಡ್ಡ ಸುಸಜ್ಜಿತ ನಗರ ವೊಂದಕ್ಕೆ ಶಾಶ್ವತ ಬದ್ರಬುನಾದಿ ಹಾಕಿದ ನಾಡಪ್ರಭು ಕೆಂಪೇಗೌಡರು ಸದಾ ಸ್ಮರಣೀಯರು ಎಂದು ಶಾಲೆಯ ಶಿಕ್ಷಕರಾದ ಸಿದ್ದಯ್ಯ ಹಿರೇಮಠ ರವರು ತಿಳಿಸಿದರು. ಈ ವೇಳೆ, ಶಿಕ್ಷಕರಾದ,ಮಧುಮತಿ,ಬಸವರಾಜ, ಶಿವನಂದಾ,ಪವಿತ್ರ, ಮಲ್ಲಮ್ಮ,ಯಶೋಧ, ಸೇರಿದಂತೆ ಶಿಕ್ಷಕರು ಮಕ್ಕಳು ಇದ್ದರು.

ಗ್ರಾಮ ಪಂಚಾಯತಿ ಮನೆಗಳೆಲ್ಲ ಭ್ರಷ್ಟರ ಪಾಲು ಬಡವರೆಲ್ಲಾ ಬೀದಿಪಾಲು : ಶರಣಬಸವ ಸೊಪ್ಪಿಮಠ

ಇಮೇಜ್
  ಮಸ್ಕಿ : ತಾಲೂಕಿನ ಮಾರಲದಿನ್ನಿ ಗ್ರಾಮದಲ್ಲಿ ಪ್ರತಿಭಟನೆ ಮಾಡುವ ಮೂಲಕ ಆಡಳಿತ ಸರಕಾರದ ವಿರುದ್ಧ ಘೋಷಣೆ ಕೂಗುತ್ತಾ ಗ್ರಾಮ ಪಂಚಾಯತಿ ಅಭಿವೃದ್ಧಿ ಅಧಿಕಾರಿ ಮಂಜುಳಾ ಇವರಲ್ಲಿ ಮನವಿ ಪತ್ರವನ್ನು ಸಲ್ಲಿಸಿದರು. ವಿಧಾನಸಭಾ ಕ್ಷೇತ್ರದ ವ್ಯಾಪ್ತಿಯಲ್ಲಿ ಬರುವ ಗ್ರಾಮ ಪಂಚಾಯಿತಿಗಳಲ್ಲಿ ವಸತಿ ಯೋಜನೆ ಭ್ರಷ್ಟಾಚಾರದ ಕುರಿತು ಪ್ರತಿಭಟನೆ ಮಾಡಿ ಪಂಚಾಯತ್ ಅಭಿವೃದ್ಧಿ ಅಧಿಕಾರಿಗಳ ಮೂಲಕ ರಾಜ್ಯಪಾಲರಿಗೆ ಮನವಿ ಪತ್ರವನ್ನು ಸಲ್ಲಿಸುತ್ತಿದ್ದು, ಈ ವೇಳೆ ಬಿಜೆಪಿ ಮಂಡಲ ಅಧ್ಯಕ್ಷರಾದ ಶರಣಬಸವ ಸೊಪ್ಪಿಮಠ ಮಾತನಾಡಿ ಬಿಜೆಪಿಯ ರಾಜ್ಯಾಧ್ಯಕ್ಷರಾದ ಬಿ.ವೈ ವಿಜಯೇಂದ್ರ ಅವರ ಆದೇಶದಂತೆ ರಾಜ್ಯಾದ್ಯಂತ ಗ್ರಾಮ ಪಂಚಾಯಿತಿ ಮುಂಭಾಗದಲ್ಲಿ ಪ್ರತಿಭಟನೆ ಮಾಡಲಾಯಿತು ಅದರಂತೆ ಇಂದಿನಿಂದ ಮಸ್ಕಿ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ಬರುವ ಸಂತೆಕೆಲ್ಲೂರ್ ಜಿಲ್ಲಾ ಪಂಚಾಯತಿ ವ್ಯಾಪ್ತಿಯಲ್ಲಿ ಬರುವ ಮಾರಲದಿನ್ನಿ, ಸಂತೆಕೆಲ್ಲೂರ್ ಮಟ್ಟೂರು, ಮತ್ತು ಸರ್ಜಾಪುರ ಗ್ರಾಮ ಪಂಚಾಯತಿಗಳಲ್ಲಿ ಮನೆಗಳೆಲ್ಲ ಭ್ರಷ್ಟರ ಪಾಲು ಬಡವರೆಲ್ಲ ಬೀದಿಪಾಲು ಕಾಂಗ್ರೆಸ್ ಸರಕಾರದ ವಸತಿ ನಿಗಮದಲ್ಲಿ ನಡೆದ ಭ್ರಷ್ಟಾಚಾರದ ವಿರುದ್ಧ ರಾಜ್ಯದ ಎಲ್ಲಾ ಗ್ರಾಮ ಪಂಚಾಯಿತಿಗಳ ಮುಂದೆ ಪ್ರತಿಭಟನಾ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ಪಕ್ಷದ ಹಿರಿಯ ಮುಖಂಡರಾದ ಬಸವಂತರಾಯ ಕುರಿ ಅವರು ಹಾಗೂ ಯುವ ಮುಖಂಡರಾದ ಪ್ರಸನ್ನ ಪಾಟೀಲ್ ಅವರು ಭ್ರಷ್ಟ ಕಾಂಗ್ರೆಸ್ ಸರ್ಕಾರ ವಿರುದ್ಧ ಮಾತನಾಡಿದರು....

ಸಂಪ್ರದಾಯಕ್ಕೆ ಮಾತ್ರ ಸೀಮಿತಗೊಂಡ ಮಣ್ಣೆತ್ತಿನ ಅಮಾವಾಸ್ಯೆ

ಇಮೇಜ್
  ಮಸ್ಕಿ : ಪಟ್ಟಣ ಸೇರಿದಂತೆ ತಾಲೂಕಿನಾದ್ಯಂತ ಮುಂಗಾರು ಮಳೆಯು ಸಮೃದ್ಧವಾಗಿದ್ದು, ರೈತಾಪಿ ವರ್ಗವೂ ಮಣ್ಣೆತ್ತು ಪೂಜಿಸುವ ಮೂಲಕ ಮಳೆ, ಬೆಳೆಯು ಚೆನ್ನಾಗಿ ಬರಲಿ ಎಂದು ಪ್ರಾರ್ಥಿಸಲು ತಯಾರಿ ನಡೆಸಿದ್ದಾರೆ. ಇದಕ್ಕೆ ಪೂರಕವಾಗುವಂತೆ ಸ್ಥಳೀಯ ಕುಂಬಾರರು ವಿವಿಧ ಬಗೆಯ ಮಣ್ಣೆತ್ತಿನ ಮೂರ್ತಿಗಳನ್ನು ಸಿದ್ಧಪಡಿಸಿದ್ದಾರೆ. ಮಣ್ಣೆತ್ತಿನ ಅಮಾವಾಸ್ಯೆ ಹಿನ್ನೆಲೆ ಪೂಜೆಗಾಗಿ ತಯಾರಿಸಿರುವ ಮಣ್ಣಿನ ಎತ್ತುಗಳ ಮಾರಾಟ ನಡೆದಿತ್ತು. ಸಾರ್ವಜನಿಕರು ಸಂಭ್ರಮದಿಂದ ಮಣ್ಣೆತ್ತು ಖರೀದಿಸಿದರು. ಎತ್ತುಗಳ ಅಳತೆಯ ಮೇಲೆ ಅವುಗಳಿಗೆ ದರ ನಿಗದಿ ಮಾಡಲಾಗಿದೆ. ಮಣ್ಣೆತ್ತು ಜೋಡಿಗೆ ₹20ರಿಂದ 50 ಮಾರಾಟ ಮಾಡಲಾಗುತ್ತಿದೆ. ಪಟ್ಟಣ ಹಾಗೂ ನಗರ ಪ್ರದೇಶಕ್ಕಿಂತ ಗ್ರಾಮೀಣ ಭಾಗದಲ್ಲಿ ಸಂಭ್ರಮದಿಂದ ಮಣ್ಣೆತ್ತಿನ ಅಮಾವಾಸ್ಯೆ ಮಾಡಲಾಗುತ್ತಿದೆ. ಮಕ್ಕಳು, ಹಿರಿಯರೊಡನೆ ಸೇರಿ ಮಣ್ಣಿನ ಎತ್ತುಗಳನ್ನು ಸ್ಥಳೀಯವಾಗಿ ಸಿಗುವ ವಸ್ತುಗಳಿಂದ ಅಲಂಕಾರ ಮಾಡುವ ಮೂಲಕ ಆಚರಣೆ ಮಾಡುತ್ತಾರೆ. ಸುಮಾರು 50 ವರ್ಷಗಳಿಂದ ನಮ್ಮ ಮನೆಯಲ್ಲಿ ಮಣ್ಣೆತ್ತು ತಯಾರು ಮಾಡುತ್ತಿದ್ದು, ನಾವು ಜಹಗೀರ ಗುಡದೂರ ಕೆರೆಯಿಂದ ಮಣ್ಣು ತಂದು ತಯಾರಿಸುತ್ತೇವೆ. ಆದರೆ ಈ ವರ್ಷ ಪಿಒಪಿ ಎತ್ತುಗಳು ಮಾರಾಟಕ್ಕೆ ಬಂದ ಹಿನ್ನೆಲೆ ನಮ್ಮ ಮಣ್ಣೆತ್ತುಗಳಿಗೆ ಬೇಡಿಕೆ ಕಡಿಮೆಯಾಗಿದೆ ಎಂದು ಕೋಳಬಾಳ ಗ್ರಾಮದ ನಿವಾಸಿ ಯಲ್ಲಮ್ಮ ಕುಂಬಾರ ತಿಳಿಸಿದ್ದಾರೆ.

*ನೂರಾ ಐವತ್ತು ಎಕರೆ ಜಮೀನುಗಳಲ್ಲಿ ಮೆಕ್ಕೆಜೋಳ ಬೀಜ ಬಿತ್ತನೆ,ಮೊಳಕೆ ಬರದೆ ರೈತರು ಅಕ್ಷರಶಃ ಕಂಗಾಲು *

ಇಮೇಜ್
" ಕಳಪೆ ಗುಣಮಟ್ಟದ ಮೆಕ್ಕೆಜೋಳ ವಿತರಣೆ" ಕೊಟ್ಟೂರು ತಾಲ್ಲೂಕು ತಾಲ್ಲೂಕಿನಾದ್ಯಂತ ಇತ್ತೀಚೆಗೆ ಮಳೆ ಚೆನ್ನಾಗಿ ಆಗಿದ್ದು, ಗಾಣಗಟ್ಟೆ ಗ್ರಾಮದಲ್ಲಿನ ಇಪ್ಪತ್ತೈದಕ್ಕೂ ಹೆಚ್ಚು ರೈತರು ಸುಮಾರು ನೂರಾ ಐವತ್ತು ಎಕರೆ ಜಮೀನುಗಳಲ್ಲಿ ಮೆಕ್ಕೆಜೋಳ ಬೀಜವನ್ನು ಬಿತ್ತನೆ ಮಾಡಿದ್ದರು. ಮೆಕ್ಕೆಜೋಳ ಕಳಪೆ ಗುಣಮಟ್ಟದಿಂದ ಕೂಡಿದ್ದು, ಸರಿಯಾಗಿ ಹುಟ್ಟಿರುವುದಿಲ್ಲವೆಂದು ರೈತರು ಗೋಳಾಡುತ್ತಿದ್ದಾರೆ. ಗಾಣಗಟ್ಟೆ ಗ್ರಾಮದ ರೈತರಾದ ಹನುಮಂತಪ್ಪ, ಎನ್ ಮಹಾಂತೇಶ, ಮಾರುತಿ, ಪ್ರವೀಣ, ಮಹಾಂತೇಶ, ವೆಂಕಟೇಶ, ರಾಜಶೇಖರ, ಎಸ್ ಮಾಯಪ್ಪ, ಬಸವರಾಜ, ಆನಂದಪ್ಪ, ಬುಡ್ರಿ ಮಹೇಶ, ರಾಜಣ್ಣ, ಇನ್ನು ಹೆಚ್ಚು ರೈತರು ರಾಣೇಬೆನ್ನೂರಿನಿಂದ ಬೀಜವನ್ನು ಶಿವಂ ಸೀಡ್ಸ್ ಅಂಗಡಿಯಿಂದ ಖರೀದಿ ಮಾಡಿ ತಂದಿದ್ದರು. ಮಳೆ ಬಂದ ನಂತರ ಬಿತ್ತನೆಯನ್ನು ಮಾಡಿದ್ದರು ಆದರೆ ಬೀಜಗಳ ಗುಣಮಟ್ಟ ಸರಿಯಿಲ್ಲದ ಕಾರಣ ಬಿತ್ತನೆ ಮಾಡಿದ ಸಸಿಗಳು ಮೊಳಕೆ ಬಂದಿರುವುದಿಲ್ಲ. ಕೃಷಿ ಇಲಾಖೆಯ ಅಧಿಕಾರಿಗಳು ಕಳಪೆ ಬೀಜಕ್ಕೆ ಕಾರಣರಾದವರ ಮೇಲೆ ಕೂಡಲೇ ಅಧಿಕಾರಿಗಳು ಕ್ರಮ ಕೈಗೊಳ್ಳಬೇಕು ಎಂದು ರೈತರು ಕೇಳಿಕೊಳ್ಳುತ್ತಿದ್ದಾರೆ. ಮೊಳಕೆ ಬರದ ರೈತರು ಅಕ್ಷರಶಃ ಕಂಗಾಲಾಗಿದ್ದಾರೆ. ಅಧಿಕಾರಿಗಳು ಯಾವ ರೀತಿ ಕ್ರಮ ಕೈಗೊಳ್ಳುವರೋ ಕಾದು ನೋಡಬೇಕಾಗಿದೆ. ಎಂದರು  ಕೋಟ್-೧ ರೈತರು ಹತ್ತಿರದ ರೈತ ಸಂಪರ್ಕ ಕೇಂದ್ರ ಮತ್ತು ಸ್ಥಳೀಯವಾಗಿ ವಿಶ್ವಾಸಾರ್ಹ ಮತ್ತು ಪರವಾನಗಿ ಪಡೆದ ಮಾರಾಟಗಾರರಿಂದ ಬೀಜಗಳನ್ನು ಖರೀದಿಸಬ...

"ಕಲ್ಲೇಶ್ ಅವರಿಗೆ ಮುಂಬಡ್ತಿ ನೀಡಿ ಸನ್ಮಾನ"

ಇಮೇಜ್
ಕೊಟ್ಟೂರು: ಪೊಲೀಸ್ ಇಲಾಖೆಯಲ್ಲಿ ಪ್ರಮಾಣಿಕ ಸೇವೆ ಸಲ್ಲಿಸಿದ್ದ ಕೊಟ್ಟೂರು ಪೊಲೀಸ್ ಠಾಣೆಯ ಕಾನ್ ಸ್ಟೇಬಲ್  ಕಲ್ಲೇಶ್ ಅವರು ಹೆಡ್ ಕಾನ್‌ಸ್ಟೇಬಲ್ ಹುದ್ದೆಗೆ ಮುಂಬಡ್ತಿ ನೀಡಲಾಯಿತು  ಹಗರಿಬೊಮ್ಮನಹಳ್ಳಿ ಸಿಪಿಐ ವಿಕಾಸ್ ಲಮಾಣಿ ಹಾಗೂ ಕೊಟ್ಟೂರು ಪಿಎಸ್‌ಐ ಗೀತಾಂಜಲಿ ಸಿಂಧೆ ಶುಕ್ರವಾರ ಠಾಣೆಯಲ್ಲಿ ಅಭಿನಂದಿಸಿ ಗೌರವಿಸಿದರು.  ಪಡೆದಿರುವ ಹುದ್ದೆಯಲ್ಲಿ ಪ್ರಾಮಾಣಿಕ ,ಶ್ರದ್ದೆ ಮತ್ತು ನಿಷ್ಠೆಯಿಂದ ಸೇವೆಯನ್ನು ಸಲ್ಲಿಸಿ ಇನ್ನೂ ಉನ್ನತ ಹುದ್ದೆಯು ದೊರೆಯುವಂತಾಗಲಿ ಎಂದು ಪಿಎಸ್‌ಐ ಗೀತಾಂಜಿಲಿ ಸಿಂಧೆ ಶುಭ ಹಾರೈಸಿದರು.  ಒಳ್ಳೆಯ ಕರ್ತವ್ಯ ನಿರ್ವಹಿಸಿದ ಕಾನ್ ಸ್ಟೇಬಲ್  ಕಲ್ಲೇಶ್ ಅವರಿಗೆ ಸಾರ್ವಜನಿಕ ವಲಯದಲ್ಲಿ ಮುಂಬಡ್ತಿ ಪಡೆದಿದ್ದಕ್ಕೆ  ಸಂಘ, ಸಂಸ್ಥೆ ,ಸಂಘಟನೆಗಳು ಮೆಚ್ಚುಗೆ ವ್ಯಕ್ತಪಡಿಸಿದರು ಈ ಸಂದರ್ಭದಲ್ಲಿ ಪೊಲೀಸ್ ಇಲಾಖೆ ಸಿಬ್ಬಂದಿ ಶಶಿಧರ ಸ್ವಾಮಿ, ಚಂದ್ರಶೇಖರ್,ವಿಷ್ಣು , ಬಸವರಾಜ್,   ಶಂಕ್ರಪ್ಪ, ಸಿದ್ದಪ್ಪ, ರಮೇಶ್, ಸಂತೋಷ, ಬಸವರಾಜ್,  ಎರ್ರಿಸ್ವಾಮಿ ಹಾಗೂ ಠಾಣೆಯ ಎಲ್ಲಾ ಸಿಬ್ಬಂದಿ ಇದ್ದರು.

ಪರಿಶ್ರಮದ ಮೂಲಕ ಕನಸು ನನಸಾಗಿಸಬೇಕು : ನಾಗಭೂಷಣ ಬಾರಿಕೇರ್

ಇಮೇಜ್
  ಮಸ್ಕಿ : ಸಣ್ಣ ನೀರಾವರಿ ಹಾಗೂ ವಿಜ್ಞಾನ ಮತ್ತು ತಂತ್ರಜ್ಞಾನ ಸಚಿವರಾದ ಎನ್ .ಎಸ್ ಬೋಸ್ ರಾಜ್ ಹಾಗೂ ಸಹಕಾರ ಸಚಿವ ಕೆ.ಎನ್ ರಾಜಣ್ಣ ಅವರ ಹುಟ್ಟಹಬ್ಬದ ಪ್ರಯುಕ್ತ ಸಹಕಾರಿ ಸಂಘದ ಅಧ್ಯಕ್ಷ ನಾಗಭೂಷಣ ಬಾರಿಕೇರ ನೇತೃತ್ವದಲ್ಲಿ ಕಾಂಗ್ರೆಸ್ ಪಕ್ಷದ ಪ್ರಮುಖ ಮುಖಂಡರು, ಪಟ್ಟಣದ ಪಿಎಂ ಶ್ರೀ ಧನಗರವಾಡಿ ಶಾಲೆಯ ಮಕ್ಕಳಿಗೆ ನೋಟ್ ಬುಕ್, ಪೆನ್, ಹಾಗೂ ಸಿಹಿ ವಿತರಿಸುವ ಮೂಲಕ ವಿಶೇಷವಾಗಿ ಸಚಿವರುಗಳ ಹುಟ್ಟು ಹಬ್ಬವನ್ನು ಆಚರಿಸಲಾಯಿತು. ಈ ವೇಳೆ,ಹಿರಿಯರಾದ ನಾರಾಯಣಪ್ಪ ಕಾಸ್ಲಿ ರವರು ಮಾತನಾಡಿ, ಸಹಕಾರಿ ಸಂಘದ ಅಧ್ಯಕ್ಷರಾಗಿ ಸಹಕಾರಿ ಅಭಿವೃದ್ಧಿ ಜೊತೆಗೆ ಬೇಸಿಗೆ ಕಾಲದಲ್ಲಿ ಸಾರ್ವಜನಿಕ ರಿಗೆ ಕುಡಿಯುವ ನೀರಿನ ಅರವಟ್ಟಿಗೆ ಹಾಗೂ ಸರಕಾರಿ ಶಾಲೆ ಮಕ್ಕಳಿಗೆ ತಮ್ಮ ಸ್ವಂತ ಹಣದಿಂದ ನೋಟ್ ಬುಕ್ ವಿತರಣೆ ಸೇರಿದಂತೆ ಅನೇಕ ಸಮಾಜ ಸೇವೆ ಮಾಡುತ್ತಾ ಬರುತ್ತಿರುವುದು ಅವರ ದೊಡ್ಡ ಗುಣ ಅವರ ಸಮಾಜಮುಖಿ ಕಾರ್ಯಕ್ಕೆ ಮನಸೋಲದ ವ್ಯಕ್ತಿಗಳೇ ಇಲ್ಲಾ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು. ಅದೇ ರೀತಿ ವಿದ್ಯಾರ್ಥಿಗಳು ಜೀವನದಲ್ಲಿ ದೊಡ್ಡ ಕನಸು ಕಾಣಬೇಕು. ಪರಿಶ್ರಮದ ಮೂಲಕ ಅದನ್ನುನನಸಾಗಿಸಿಕೊಳ್ಳಬೇಕು ಎಂದು ಸಹಕಾರಿ ಅಧ್ಯಕ್ಷ ನಾಗಭೂಷಣ ಬಾರಿಕೇರ ರವರು ಹೇಳಿದರು. ಏಕಾಗ್ರತೆಯಿಂದ ಸತತ ಅಭ್ಯಾಸ ಮಾಡುವುದರಿಂದ ಜೀವನದ ಗುರಿ ಮುಟ್ಟಲು ಸಾಧ್ಯವಿದೆ ಎಂದು ರವಿ ಚಿಗಿರಿ ರವರು ತಿಳಿಸಿದರು. ಈ ವೇಳೆ, ಶಾಲೆಯ ಮುಖ್ಯ ಶಿಕ್ಷಕಿ ಶ್ರಿಕಾಂತಮ್ಮ,ಪುರಸಭೆ ಸದಸ್ಯ ಮಲ್ಲ...

ಮಸ್ಕಿ : "ಪಿ.ಎಂ.ಶ್ರೀ ಧನಗರವಾಡಿ ಸರಕಾರಿ ಶಾಲೆಯಲ್ಲಿ ಅರ್ಥಪೂರ್ಣ ಯೋಗ ದಿನಾಚರಣೆ

ಇಮೇಜ್
  ಮಸ್ಕಿ : ಪಟ್ಟಣದ ಪಿ.ಎಂ.ಶ್ರೀ ಧನಗರವಾಡಿ ಸರಕಾರಿ ಶಾಲೆ ಹಾಗೂ ನಮ್ಮ ಕ್ಲಿನಿಕ್ ಸಂಯೋಗದಲ್ಲಿ ಶಾಲೆಯ ಆವರಣದಲ್ಲಿ ನಡೆದ 11ನೇ ಅಂತರರಾಷ್ಟ್ರೀಯ ಯೋಗ ದಿನಾಚರಣೆ ಹಾಗೂ ವಿಶ್ವ ಸಂಗೀತ ಕಾರ್ಯಕ್ರಮದಲ್ಲಿ ಮಾತನಾಡಿ.ಯೋಗವು ಭಾರತದ ಪ್ರಾಚೀನ ಸಂಪ್ರದಾಯದ ಅಮೂಲ್ಯ ಕೊಡುಗೆ. ಇದು ಮನಸ್ಸು ಮತ್ತು ದೇಹದ ಏಕತೆಯನ್ನು ಸಾರುತ್ತದೆ. ಆರೋಗ್ಯ ಮತ್ತು ಯೋಗಕ್ಷೇಮಕ್ಕೆ ಸಮಗ್ರ ವಿಧಾನವಾಗಿದೆ ಎಂದು ಧನಗರವಾಡಿ ಶಾಲೆಯ ಮುಖ್ಯ ಶಿಕ್ಷಕಿಯಾದ ಶ್ರೀಕಾಂತಮ್ಮ ಜಂಗಮರಹಳ್ಳಿ ರವರು ಹೇಳಿದರು. ನಮ್ಮ ಕಿನ್ಲಿಕ್ ಸಿಬ್ಬಂದಿ ವರ್ಗದ ಶಶಿ ರೇಖಾ ರವರು ಮಾತನಾಡಿ, ಮಾನವೀಯ ಮೌಲ್ಯಗಳಲ್ಲಿ ನಾವು ಅರಳುವಂತೆ ಮಾಡುವ ಅತ್ಯುತ್ತಮ ಸಾಧನವೆಂದರೆ ಯೋಗ ಎಂದು ಹೇಳಿದರು. ಶಿಕ್ಷಕರಾದ ಸಿದ್ದಯ್ಯ ಹಿರೇಮಠ ಹಾಗೂ ಮಧು ಮತಿ ರವರು ಯೋಗವನ್ನು ಅಭ್ಯಾಸ ಮಾಡಿಸಿದರು. ಯೋಗದಿಂದ ಆಗುವ ಲಾಭಗಳನ್ನು ತಿಳಿಸಿ ಯೋಗದ ವಿವಿಧ ವಿಧಾನಗಳನ್ನು ತಿಳಿಸಿದರು. ಇದೇ ವೇಳೆಯಲ್ಲಿ ಶಿಕ್ಷಕರಾದ ಬಸವರಾಜ, ಶಿವಾನಂದ,ನಮ್ಮ ಕ್ಲಿನಿಕ್ ಸಿಬ್ಬಂದಿಗಳಾದ ನಿಂಗಮ್ಮ, ಯಮನೂರ.ಎಚ್. ಜಿ,ಸೇರಿದಂತೆ ಶಾಲೆ ಶಿಕ್ಷಕರು,ಮಕ್ಕಳು ಇದ್ದರು.

ಮರಗಳ ಸಂರಕ್ಷಣೆಗೆ ಮಹಿಳೆಯರ ವಿಶೇಷ ಅಭಿಯಾನ

ಇಮೇಜ್
ಮಸ್ಕಿ : ಪಟ್ಟಣದ ಕರ್ನಾಟಕ ಪಬ್ಲಿಕ್ ಶಾಲೆ ಮೈದಾನ ಆವರಣದಲ್ಲಿ ಪುರಸಭೆ ವತಿಯಿಂದ ಮರಗಳ ಸಂರಕ್ಷಣೆಗೆ ಮಹಿಳೆಯರ ವಿಶೇಷ ಅಭಿಯಾನ ಹಾಗೂ ತಾಯಿ ಹೆಸರಿನಲ್ಲಿ ಒಂದು ಗಿಡ ನೆಡುವ ಕಾರ್ಯಕ್ರಮಕ್ಕೆ ಚಾಲನೆ. ನಂತರ ಮಾತನಾಡಿ ಮರಗಳ ಸಂರಕ್ಷಣೆಗೆ ಮಹಿಳೆಯರ ವಿಶೇಷ ಅಭಿಯಾನ ಹಾಗೂ ತಾಯಿ ಹೆಸರಿನಲ್ಲಿ ಒಂದು ಗಿಡ ನೆಡುವ ಅಭಿಯಾನ ಒಂದು ಮಹತ್ವವಾದ ಯೋಜನೆ ಇಂತಹ ಕಾರ್ಯಕ್ರಮ ವಿರಳ ಎಂದು ಪುರಸಭೆ ಸದಸ್ಯರಾದ ಶರಣಬಸವ ಸೊಪ್ಪಿಮಠ ಸಸಿ ನೆಡುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಇದೇ ಸಂದರ್ಭದಲ್ಲಿ ಪುರಸಭೆಯ ಉಪಾಧ್ಯಕ್ಷರಾದ ಶ್ರೀಮತಿ ಗೀತಾ ಶಿವರಾಜ್ ಬುಕ್ಕಣ್ಣ, ಸ್ಥಾಯಿ ಸಮಿತಿ ಅಧ್ಯಕ್ಷರಾದ ಚೇತನ್ ಪಾಟೀಲ್, ಪುರಸಭೆ ಮುಖ್ಯಾಧಿಕಾರಿ  ನರಸರೆಡ್ಡಿ , ಕಾಲೇಜಿನ ಪ್ರಾಂಶುಪಾಲರಾದ ತಿಪ್ಪಣ್ಣ, ಶಂಕರ್, ಸ್ತ್ರೀ ಶಕ್ತಿ ಗುಂಪಿನ ಮಹಿಳೆಯರು ಮತ್ತು ಪದಾಧಿಕಾರಿಗಳು, ಹಿರಿಯ ಮಹಿಳಾ ಮುಖಂಡರು ಸೇರಿದಂತೆ ಪುರಸಭೆಯ ಸಿಬ್ಬಂದಿಗಳು ಇನ್ನಿತರರು ಉಪಸ್ಥಿತರಿದ್ದರು.

ಸ್ವಚ್ಛ ಪರಿಸರ ಆರೋಗ್ಯಕ್ಕೆ ಬಹಳ ಮುಖ್ಯ : ಕೆ ಕೊಟ್ರೇಶ್

ಇಮೇಜ್
*ಹಸಿರು ಹೊನಲು ತಂಡದಿಂದ ಹಸಿರು ಹಬ್ಬ ಆಚರಣೆ* ಕೊಟ್ಟೂರು : ಕೊಟ್ಟೂರಿನಲ್ಲಿ ಹಸಿರು ಹೊನಲು ತಂಡದವರು ಜೂನ್ 5 ವಿಶ್ವ ಪರಿಸರ ದಿನಾಚರಣೆ ಅಂಗವಾಗಿ ಜೂನ್ ತಿಂಗಳು ಹಸಿರು ಹಬ್ಬ ವಿಭಿನ್ನವಾಗಿ ಆಚರಣೆ ಮಾಡಲಾಗುತ್ತದೆ  ವಿವಿಧ ಸಂಘ-ಸಂಸ್ಥೆಗಳು, ಸಂಘಟನೆ, ಪತ್ರಿಕಾ ಮಾಧ್ಯಮದವರನ್ನು ಪ್ರತಿ ದಿನ ಆಹ್ವಾನಿಸಿ ಪರಿಸರ ಸಂರಕ್ಷಣೆ ಬಗ್ಗೆ ಮಾಹಿತಿ ನೀಡಿ ಸಸಿ ನೆಡುವ ಕಾರ್ಯಕ್ರಮಕ್ಕೆ ಮುಂದಾಗಿದ್ದಾರೆ  ಕರ್ನಾಟಕ ಪ್ರಸ್ ಕ್ಲಬ್ ಮತ್ತು ಕನ್ನಡ ಸಾಹಿತ್ಯ ಪರಿಷತ್ ಗುರುವಾರ ಆಹ್ವಾನಿಸಿ ಪರಿಸರ ದಿನಾಚರಣೆ ಅಂಗವಾಗಿ  ಸಸಿ ನೆಡುವ ಮೂಲಕ ಪರಿಸರ ಸಂರಕ್ಷಣೆಗೆ ಅರಿವು ಕಾರ್ಯಕ್ರಮವನ್ನು ಮಾಡಲಾಯಿತು. ಡಾಕ್ಟರ್ ಸತೀಶ್ ಪಾಟೀಲ್ ಅವರು ಮಾತನಾಡಿ ಹಸಿರಿನ ಮಹತ್ವವನ್ನು ಜಗತ್ತಿನೆಲ್ಲೆಡೆ ಸಾರುವ ದಿನ. ಆದರೆ ಕಾಡು ಪರಿಸರ ರಕ್ಷಣೆ ಕೇವಲ ಈ ದಿನಕ್ಕೆ ಸೀಮಿತವಾಗಿರಬಾರದು. ಪ್ರತಿದಿನ ನಾವು ಮಾಡುವ ಪ್ರತಿ ಕೆಲಸದಲ್ಲೂ ಪರಿಸರವನ್ನ ಗಮನದಲ್ಲಿಟ್ಟುಕೊಳ್ಳಬೇಕು ಪರಿಸರವನ್ನು ಹಸಿರೀಕರಣವನ್ನಾಗಿ ಮಾಡಲು ಮತ್ತು  ಕೊಟ್ಟೂರನ್ನು ಹಸಿರು ಕ್ರಾಂತಿ ಗುರಿಯಾಗಿಸಿದೆ ಹವಾಮಾನ ಬದಲಾವಣೆಯ ಸವಾಲುಗಳನ್ನು ಎದುರಿಸಲು ಸುಸ್ಥಿರ ಜೀವನಶೈಲಿಯನ್ನು ಅಳವಡಿಸಿಕೊಳ್ಳಬೇಕು  ನಮ್ಮ ದುರಾಸೆ ಬಿಟ್ಟು, ಪ್ರಾಮಾಣಿಕವಾಗಿ ಈ ವಿಚಾರದಲ್ಲಿ ಕೈ ಜೋಡಿಸಬೇಕು. ಇಲ್ಲಿ ಪರಿಸರ ಸಂರಕ್ಷಣೆಯ ಕುರಿತ ಅರಿವು ಮೂಡಿಸುವಲ್ಲಿ ಯಶಸ್ವಿಯಾಗಬೇಕು ಎಂದರು  ಕರ್ನಾಟಕ ಪ್ರಸ್ ಕ...

ಪಟ್ಟಣ ಪಂಚಾಯಿತಿ ಪೌರ ಕಾರ್ಮಿಕರಿಗೆ ಆರೋಗ್ಯ ತಪಾಸಣೆ

ಇಮೇಜ್
  ಕೊಟ್ಟೂರು ಪಟ್ಟಣ ಪಂಚಾಯಿತಿಯ ಪೌರ ಕಾರ್ಮಿಕರಿಗೆ ಪಟ್ಟಣ ಪಂಚಾಯಿತಿ ವತಿಯಿಂದ ಉಚಿತ ಆರೋಗ್ಯ ತಪಾಸಣೆ ಕಾರ್ಯಕ್ರಮ ಬುಧವಾರ ಕೈಗೊಳ್ಳಲಾಯಿತು. ಆರೋಗ್ಯ ಇಲಾಖೆಯ ವೈದ್ಯರಾದ ಮಂಜುನಾಥ್ ರವರು ಪೌರ ಕಾರ್ಮಿಕರ ಆರೋಗ್ಯ ತಪಾಸಣೆ ನಡೆಸಿದರು. ಮುಖ್ಯಾಧಿಕಾರಿಗಳಾದ ನಸುರುಲ್ಲಾ ಮಾತನಾಡಿ, ಪೌರ ಕಾರ್ಮಿಕರು ತಮ್ಮ ಆರೋಗ್ಯವನ್ನು ಕಾಪಾಡಿಕೊಳ್ಳುವುದು ಬಹಳ ಮುಖ್ಯ. ಪಟ್ಟಣದ ಸ್ವಚ್ಛತಾ ಕಾರ್ಯವನ್ನು ಮಾಡುವುದರಿಂದ ಕಾರ್ಮಿಕರಿಗೆ ನಿಯಮಿತವಾಗಿ ಆರೋಗ್ಯ ತಪಾಸಣೆಯ ಅಗತ್ಯವಿರುತ್ತದೆ. ಆದ್ದರಿಂದ ಎಲ್ಲಾ ಪೌರಕಾರ್ಮಿಕರು ತಮ್ಮ ಆರೋಗ್ಯ ತಪಾಸಣೆ ಮಾಡಿಸಿಕೊಳ್ಳಬೇಕು ಎಂದರು. ವೈದ್ಯರಾದ ಮಂಜುನಾಥ್ ರವರು ಎಲ್ಲಾ ಪೌರ ಕಾರ್ಮಿಕರ ಆರೋಗ್ಯ ತಪಾಸಣೆ ಮಾಡಿದರು. ಈ ಸಂದರ್ಭದಲ್ಲಿ ಆರೋಗ್ಯ ಇಲಾಖೆಯ ಸಿಬ್ಬಂದಿ ವರ್ಗ, ಪಟ್ಟಣ ಪಂಚಾಯಿತಿಯ ಸಿಬ್ಬಂದಿ ಹಾಜರಿದ್ದರು.

ನಿಮಗೆ ಉಸಿರಾಡಲು ಆಮ್ಲ ಜನಕ ಬೇಕಾದರೆ ಮನೆಗೊಂದು ಮರ ಬೆಳೆಸಿ : ಶಿವಮೂರ್ತಿ ಗದ್ಗಿಮಠ ಮನವಿ

ಇಮೇಜ್
  ಮಸ್ಕಿ : ಪ್ರಕೃತಿ ಫೌಂಡೇಶನ್ ಹಾಗೂ ಅಭಿನಂದನ್ ಸಂಸ್ಥೆಯ ಸಹಯೋಗದಲ್ಲಿ ಪರಿಸರ ಜಾಗೃತಿ ಅಂಗವಾಗಿ ಮಸ್ಕಿ ಹಸಿರು ಬೃಂದಾವನ - ಮನೆಗೊಂದು ಮರ ಅಭಿಯಾನದ ಕಾರ್ಯಕ್ರಮ ಪಟ್ಟಣದ ಪಲ್ಲೇದ್ ಲೇಔಟ್ ನಲ್ಲಿ ಸಸಿಗಳನ್ನು ನೆಡುವ ಮೂಲಕ ಪರಿಸರ ಜಾಗೃತಿ ಕಾರ್ಯಕ್ರಮ ಜರುಗಿತು. ಇದೇ ವೇಳೆ ಪ್ರಕೃತಿ ಫೌಡೇಶನ್ ಸಂಸ್ಥಾಪಕ ಅಧ್ಯಕ್ಷ ಶಿವಮೂರ್ತಿ ಗದ್ಗಿಮಠ (ಗ್ರೀನ್ ಆರ್ಮಿ) ರವರು ಮಾತನಾಡಿ ಪ್ರತಿಯೊಬ್ಬರಿಗೂ ಉಸಿರಾಡಲು ಆಮ್ಲ ಜನಕ ಬೇಕೇ ಅಂದ್ರೇ ಎಲ್ಲರೂ ತಮ್ಮ ತಮ್ಮ ಮನೆಯಲ್ಲಿ ಒಂದರಂತೆ ಮರ ಬೆಳೆಸಿ ಈ ಪರಿಸರದ ಅಭಿಯಾನಕ್ಕೆ ಎಲ್ಲರೂ ಕೈ ಜೋಡಿಸಿದಾಗ ಕೆಲವೇ ವರ್ಷ ಗಳಲ್ಲಿ ಮಸ್ಕಿ ಪಟ್ಟಣ ಹಸಿರುಮಯವಾಗುತ್ತದೆ. ನಮಗಾಗಿ ಇರುವ ಪರಿಸರವನ್ನು ನಾವೇ ಸಂರಕ್ಷಿಸೋಣ ಎಂದರು. ಶಿಕ್ಷಕರಾದ ಸಿದ್ದಾರೆಡ್ಡಿ ಗಿಣಿವಾರ ರವರು ಮಾತನಾಡಿ, ಮನೆಗೊಂದು ಮರ ಅಭಿಯಾನ" ಎಂಬ ಈ ಪರಿಸರ ಕಳಕಳಿಯ ಅಭಿಯಾನಕ್ಕೆ ಸಾರ್ವಜನಿಕರ ಸಹಕಾರ ಸಿಕ್ಕರೆ ಮಸ್ಕಿಯು ಹಸಿರು ನಗರ ಆಗುವಲ್ಲಿ ಯಾವ ಅನುಮಾನವಿಲ್ಲ. ಈ ಒಂದು ಅಭಿಯಾನಕ್ಕೆ ಕರೆ ನೀಡಿದ ಪ್ರಕೃತಿ ಫೌಂಡೇಶನ್ ಶಿವಮೂರ್ತಿ ಗದ್ಗಿಮಠ ಬಳಗಾನೂರ ಹಾಗೂ ಅಭಿನಂದನ್ ಸಂಸ್ಥೆಗೆ ಇನ್ನಷ್ಟು ಶಕ್ತಿ ಜೊತೆಯಾಗಲಿ ಅವರ ಕಾರ್ಯ ಯಶಸ್ವಿಯಾಗಿ ನಡೆಯಲಿ ಎಂದರು. ಈ ವೇಳೆ, ಸಮಾಜ ಸೇವಕರಾದ ಸಿದ್ದಯ್ಯ ಹೆಸರೂರು, ರಾಮಣ್ಣ ಹಂಪರಗುಂದಿ, ಕುಮಾರೆಪ್ಪ , ಬಸವರಾಜ ಯದ್ದಲದಿನ್ನಿ, ಶಾಂತಕುಮಾರ್, ರಾಜಣ್ಣ ಸಾನಬಾಳ, ವೀರೇಶ ಕಮತರ, ಸೂಗುರಯ್ಯ, ಸುರೇಶ್ ಬ್ಯಾಳ...

ದಶಕಗಳಿಂದ ಬೀಡುಬಿಟ್ಟಿರುವ ತಹಶೀಲ್ದಾರ್‌ ಕಚೇರಿ ಸಿಬ್ಬಂದಿ ವರ್ಗಾವಣೆ ಯಾವಾಗ ?

ಇಮೇಜ್
ವರದಿ : ಗ್ಯಾನಪ್ಪ ದೊಡ್ಡಮನಿ  ಮಸ್ಕಿ : ತಾಲ್ಲೂಕು ಆಡಳಿತದ ‘ಶಕ್ತಿ ಕೇಂದ್ರ’ ಎನಿಸಿರುವ ಇಲ್ಲಿನ ತಹಶೀಲ್ದಾರ್ ಕಚೇರಿಯ ವಿವಿಧ ವಿಭಾಗಗಳಲ್ಲಿ ಸೇವೆ ಸಲ್ಲಿಸುತ್ತಿರುವ ಸಿಬ್ಬಂದಿ ಆರು ಏಳು ವರ್ಷಗಳಿಂದ ಇಲ್ಲೇ ಬೀಡುಬಿಟ್ಟಿದ್ದು, ಆಡಳಿತ ಜಡ್ಡುಗಟ್ಟಿ ಹೋಗಿದೆ. ಸಿಬ್ಬಂದಿಯ ನಿರ್ಲಕ್ಷ್ಯ ಮನೋಭಾವದಿಂದಾಗಿ ಸಾರ್ವಜನಿಕರು ತಮ್ಮ ಕೆಲಸ– ಕಾರ್ಯಗಳಿಗೆ ನಿತ್ಯ ಅಲೆಯಬೇಕಾದ ದುಸ್ಥಿತಿ ಇದೆ. ಸಾರ್ವಜನಿಕ ದಾಖಲೆ ವಿಭಾಗ, ಭೂಮಾಪನ ಇಲಾಖೆ , ಆರ್.ಆರ್.ಟಿ, ಭೂಮಿ ವಿಭಾಗದ ಸಿಬ್ಬಂದಿ ಹಾಗೂ ಗ್ರಾಮ ಲೆಕ್ಕಾಧಿಕಾರಿಗಳು ಸೇರಿ ಇಲ್ಲಿನ ಬಹುತೇಕ ಸಿಬ್ಬಂದಿ 6-7 ವರ್ಷಗಳಿಂದ ಇಲ್ಲಿಯೇ ಬೀಡುಬಿಟ್ಟಿದ್ದಾರೆ. ಸುದೀರ್ಘ ಅವಧಿಯಿಂದ ಇಲ್ಲೇ ಕೆಲಸ ಮಾಡಿರುವುದರಿಂದ ‘ಪ್ರಭಾವಿ’ಗಳಾಗಿರುವ ಸಿಬ್ಬಂದಿಯನ್ನು ಪ್ರಶ್ನಿಸುವವರೇ ಇಲ್ಲದಂತಾಗಿದೆ ಎಂಬುದು ಜನರ ದೂರು. ಜಿಲ್ಲೆಯಲ್ಲಿ ಅನೇಕ ಕಂದಾಯ ಇಲಾಖೆಯ ಕಛೇರಿಯಲ್ಲಿ ಬಹುತೇಕ ಸಿಬ್ಬಂದಿ ನಿತ್ಯವೂ ವಿವಿಧ ಹಳ್ಳಿಗಳಿಂದ ಬರುತ್ತಾರೆ. ಬೆಳಿಗ್ಗೆ 11 ಗಂಟೆಯ ನಂತರ ಒಬೊಬ್ಬರಾಗಿ ಕಚೇರಿಗೆ ಆಗಮಿಸುತ್ತಾರೆ. ಮಧ್ಯಾಹ್ನ 1 ಗಂಟೆ ವೇಳೆಗಾಗಲೇ ಊಟಕ್ಕೆ ತೆರಳುತ್ತಾರೆ. 4 ಗಂಟೆಗೆ ಊರಿಗೆ ಮರಳುವ ತರಾತುರಿಯಲ್ಲಿರುತ್ತಾರೆ. ಕೆಲಸದ ಬಗ್ಗೆ ನಿರ್ಲಕ್ಷ್ಯ ತೋರುತ್ತಿದ್ದು, ತೀವ್ರ ಸಮಸ್ಯೆಯಾಗಿದೆ ಎಂದು ಸಾರ್ವಜನಿಕರು ಆರೋಪಿಸಿದ್ದಾರೆ. ಇಲ್ಲಿನ ತಹಶೀಲ್ದಾರ್ ಕಚೇರಿ ಸಿಬ್ಬಂದಿ ಮತ್ತು ಅಧಿಕಾರಿಗಳಿಗೆ ಕುರ್ಚಿಯಲ್ಲಿ ಕುಳಿತುಕೊಳ್ಳು...

ಅಂಗನವಾಡಿ, ಶಾಲೆಯಲ್ಲಿ ಮಕ್ಕಳಿಗೆ ಸೌಕರ್ಯ ಕಲ್ಪಿಸಿ : ತೆಗ್ಗಿನಕೇರಿ ಹನುಮಂತಪ್ಪ ವಕೀಲರು

ಇಮೇಜ್
  ಹೈಲೈಟ್ಸ್‌: ಅಂಗನವಾಡಿ ಕೇಂದ್ರಗಳಲ್ಲಿ ಮೂಲ ಸೌಕರ್ಯಗಳು ಸಮರ್ಪಕವಾಗಿಲ್ಲ ಅಂಗನವಾಡಿಗಳಿಗೆ ಮೂಲಸೌಕರ್ಯ ಒದಗಿಸಲು ಕ್ರಮ ಕೈಗೊಳ್ಳಿ "ಅಂಗನವಾಡಿಗಳಿಗೆ ವಿದ್ಯುತ್, ಫ್ಯಾನ್, ಶೌಚಾಲಯ ಸೇರಿದಂತೆ ಅಗತ್ಯ ಮೂಲಸೌಕರ್ಯ ಒದಗಿಸಲು ಕ್ರಮ ಕೈಗೊಳ್ಳುವಂತೆ ಸಾರ್ವಜನಿಕರಿಂದ ಒತ್ತಾಯ" ಕೊಟ್ಟೂರು: ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯು ಅಂಗನವಾಡಿ ಕೇಂದ್ರಗಳ ಮೂಲಸೌಕರ್ಯಗಳ ಕೊರತೆ ಎದುರಿಸುತ್ತಿದೆ.  ಪಟ್ಟಣದಲ್ಲಿ ಅಂಗನವಾಡಿ ಕೇಂದ್ರಗಳಲ್ಲಿ ಮೂಲ ಸೌಕರ್ಯಗಳು ಸಮರ್ಪಕವಾಗಿಲ್ಲ. ಕೆಲವಡೆ ಶೌಚಾಲಯ ಇಲ್ಲ. ಕುಡಿಯುವ ನೀರು, ವಿದ್ಯುತ್ ಪೂರೈಕೆ ಸಮಸ್ಯೆ ಇದೆ. ಇದಲ್ಲದೆ ಮಕ್ಕಳಿಗೆ ಪೂರಕ ವಾತಾವರಣ ಇಲ್ಲ ಎಂಬ ದೂರುಗಳು ಸಾರ್ವಜನಿಕರಲ್ಲಿ ವ್ಯಾಪಕವಾಗಿ ಕೇಳಿ ಬರುತ್ತಿವೆ. ಪಟ್ಟಣದ ಗ್ರಂಥಾಲಯ ಹಿಂಭಾಗದಲ್ಲಿರುವ ಅಂಗನವಾಡಿ ಕೇಂದ್ರದ ಸುತ್ತಲು ಜಾಲಿ ಗಿಡಗಳು, ಎಲ್ಲೆಂದರಲ್ಲಿ ತಿಪ್ಪೆಗುಂಡಿ ನಿರ್ಮಾಣವಾಗಿರುವುದರಿಂದ ಅಂಗನವಾಡಿ ಕೇಂದ್ರಕ್ಕೆ ತೆರಳುವ ಮಕ್ಕಳು ಆರೋಗ್ಯದ ಮೇಲೆ ಪರಿಣಾಮ ಬೀರಬಹುದು , ಸೊಳ್ಳೆಗಳ ಕಾಟ ಹೆಚ್ಚಾಗಿದ್ದು ಪೋಷಕರಲ್ಲಿ ಆತಂಕ ಎದುರಾಗಿದೆ . . . . ತಾಲೂಕಿನ ಎಲ್ಲಾ ಅಂಗನವಾಡಿ ಕೇಂದ್ರಗಳಿಗೆ ಅಗತ್ಯ ಮೂಲ ಸೌಕರ್ಯ ಕಲ್ಪಿಸುವುದು ತಾಲೂಕು ಮಟ್ಟದ ಅಧಿಕಾರಿಗಳು, ಜನಪ್ರತಿನಿಧಿಗಳು ,ಸರಕಾರದ ಆದ್ಯ ಕರ್ತವ್ಯ ಎಂದು ಸ್ಥಳೀಯ ಸಾರ್ವಜನಿಕರಾದ ರಮೇಶ್ , ಮಂಜುನಾಥ್ ,ಅಂಜನಿ, ಪ್ರವೀಣ್ ಕುಮಾರ್ ಪತ್ರಿಕೆ ಮೂಲಕ ಒತ್ತಾಯಿಸಿದರು  ...

ಮಹಿಳಾ ಮಹಾ ವಿದ್ಯಾಲಯದ ಪರೀಕ್ಷಾ ಕೇಂದ್ರಕ್ಕೆ ವಿಚಕ್ಷಕ ದಳ ಧಿಡೀರ್ ಭೇಟಿ

ಇಮೇಜ್
ಮಸ್ಕಿ : ಪಟ್ಟಣದ ಸನರೈಸ್ ಮಹಿಳಾ ಪದವಿ ಮಹಾವಿದ್ಯಾಲಯಕ್ಕೆ ವಿಚಕ್ಷಕ ದಳದ ಅಧ್ಯಕ್ಷರು ಮತ್ತು ಸದಸ್ಯರು ಧಿಡೀರ್ ಭೇಟಿ ನೀಡಿದ್ದಾರೆ. ಸಿಂಧನೂರು ಪಟ್ಟಣದ ಸರ್ಕಾರಿ ಮಹಿಳಾ ಕಲಾ ಮತ್ತು ವಾಣಿಜ್ಯ ಮಹಾವಿದ್ಯಾಲಯದಲ್ಲಿ ನಡೆಯುತ್ತಿರುವ ಪದವಿಯ ಬಿ.ಎ ಮತ್ತು ಬಿ. ಕಾಂ ಪರೀಕ್ಷಾ ಕೇಂದ್ರಕ್ಕೆ ಕರ್ನಾಟಕ ರಾಜ್ಯ ಅಕ್ಕ ಮಹಾದೇವಿ ಮಹಿಳಾ ವಿಶ್ವವಿದ್ಯಾನಿಲಯದ ಪರೀಕ್ಷಾ ವಿಚಕ್ಷಕ ದಳದ ಅಧ್ಯಕ್ಷರು ಮತ್ತು ಸದಸ್ಯರುಗಳು ಮಹಾವಿದ್ಯಾಲಯದಲ್ಲಿನ ವಿದ್ಯಾರ್ಥಿನಿಯರು ನಕುಲು ಮಾಡದೆ ಸುಸೂತ್ರವಾಗಿ ಪರೀಕ್ಷೆ ಬರೆಯಲು ಕಲ್ಪಿಸಿರುವ ವ್ಯವಸ್ಥೆ, ಸಿಸಿ ಕ್ಯಾಮರಾ ಅಳವಡಿಕೆ ಮಾಡಿರುವುದನ್ನು ವೀಕ್ಷಿಸಿದರು.   ಇತ್ತೀಚಿಗೆ ಪತ್ರಿಕೆಯಲ್ಲಿ ಪ್ರಕಟಣೆಗೊಂಡ ವಿಶ್ವವಿದ್ಯಾನಿಲಯದ ಕುಲಸಚಿವರಾದ ಡಾ. ಚಂದ್ರಶೇಖರ ಎಚ್.ಎಮ್ ಅವರ ಮೇಲೆ ಮಾಡಲಾದ ಹಣದ ಬೇಡಿಕೆ ಆರೋಪ ಸುಳ್ಳು ಅವರು  ಬಾಹ್ಯ ಹಿರಿಯ ಮೇಲ್ವಿಚಾರಕರ ಮತ್ತು ವಿಚಕ್ಷಕ ದಳದ ನೇಮಕ ವಿಚಾರದಲ್ಲಿ ಯಾವುದೇ ರೀತಿಯಾದಂತ ಹಣದ ಬೇಡಿಕೆ ಇಟ್ಟಿರುವುದಿಲ್ಲ, ಕಳೆದ ಎರಡು ಮೂರು ವರ್ಷಗಳಿಂದ ಪರೀಕ್ಷಾ ವಿಭಾಗದಲ್ಲಿ ಉತ್ತಮವಾದ ಆಡಳಿತವನ್ನು ಮಾಡಿಕೊಂಡು ಬಂದಿದ್ದಾರೆ. ಜೊತೆಗೆ ಸಕಾಲದಲ್ಲಿ ವಿದ್ಯಾರ್ಥಿನಿಯರಿಗೆ ಫಲಿತಾಂಶವನ್ನು ನೀಡಿ ವಿದ್ಯಾರ್ಥಿನಿಯರಿಗೆ ಮುಂದಿನ ಉನ್ನತ ವ್ಯಾಸಂಗಕ್ಕೆ ಅನುಕೂಲ ಮಾಡಿಕೊಟ್ಟಿದ್ದಾರೆ  ಎಂದು ವಿಚಕ್ಷಕ ದಳದ ಅಧ್ಯಕ್ಷರಾದ ಪ್ರೊ. ಎಸ್ ಆರ್ ಸಾಹು ಹೇಳಿದರು.  ಈ ಸಂದರ್ಭದಲ್...

ಕಳಪೆ ಕಾಮಗಾರಿ,ಲೋಕಾಯುಕ್ತಕ್ಕೆ ದೂರು ಕ್ರಮ ಯಾವಾಗ ? : ಶರಣ ಬಸವ

ಇಮೇಜ್
  ಮಸ್ಕಿ : ತಾಲ್ಲೂಕಿನ ಮುದಬಾಳ ಕ್ರಾಸ್ – ಮಾರಲದಿನ್ನಿನಲ್ಲಿ ಕಳಪೆ ಕಾಮಗಾರಿ ನಡೆಯುತ್ತಿದೆ ಎಂದು ಸಾರ್ವಜನಿಕರಾದ ಶರಣಬಸವ ಕಾಟಗಲ್ ಎಂಬವರು 18/10/2022 ರಂದು ಲೋಕಾಯುಕ್ತ ಕಛೇರಿಯಲ್ಲಿ ದೂರು ದಾಖಲು. ಹೌದು ಮುದಬಾಳ ಕ್ರಾಸ್ ನಿಂದ ಮಾರಲದಿನ್ನಿ ರಸ್ತೆ ಡಾಂಬರು ಹಾಕಿದ ದಿನವೇ ಕಿತ್ತು ಹೋಗಿದೆ.ಪಂಚಾಯತ್ ರಾಜ್ ಇಲಾಖೆ ಎಂಜಿನಿಯರಿಂಗ್‌ ವಿಭಾಗದಿಂದ ಬಿಆರ್‌ಜಿಎಫ್ ಯೋಜನೆ ₹1.60 ಕೋಟಿ ವೆಚ್ಚದಲ್ಲಿ 4.5 ಕಿ.ಮೀ ರಸ್ತೆ ಡಾಂಬರೀಕರಣಕ್ಕೆ ರಾಯಚೂರು ಮೂಲದ ನರಸರೆಡ್ಡಿ ಎನ್ನುವರು ಗುತ್ತಿಗೆದಾರರಿಗೆ ಗುತ್ತಿಗೆ ನೀಡಲಾಗಿದೆ. ಕಳಪೆ ಕಾಮಗಾರಿಯ ಕಾರಣಕ್ಕೆ ರಸ್ತೆ ಹಾಳಾಗಿದೆ ಎಂದು ಆರೋಪಿಸಿ ಕಾಟಗಲ್, ಉಸ್ಕಿಹಾಳ ಸೇರಿ ವಿವಿಧ ಗ್ರಾಮಗಳ ಗ್ರಾಮಸ್ಥರು ಕಾಮಗಾರಿ ಬಂದ್ ಮಾಡಿಸಿ ರಸ್ತೆ ಮೇಲೆಯೇ ಹೋರಾಟ ಮಾಡಿದರು. ಎಫ್.ಶಿವಕುಮಾರ್ ಸಹಾಯಕ ಕಾರ್ಯಪಾಲಕ ಪಂಚಾಯತ್ ರಾಜ್ ಇಂಜಿನಿಯರಿಂಗ್ ಉಪ ವಿಭಾಗ ಲಿಂಗಸ್ಗೂರು ಇವರು ಅಪರ ನಿಭಂದಕರು ವಿಚಾರಣೆಗಳು -5 ಕರ್ನಾಟಕ ಲೋಕಾಯುಕ್ತರು ಬೆಂಗಳೂರು ಇವರಿಗೆ ಯಾವುದೇ ರೀತಿಯ ಕಳಪೆ ಕಾಮಗಾರಿ ಆಗಿಲ್ಲ ಎಂದು ವರದಿ ಸಲ್ಲಿಸಿದ್ದಾರೆ. ದೂರಿನ ಸ್ಥಳಕ್ಕೆ ಲೋಕಾಯುಕ್ತ ಅಧಿಕಾರಿಗಳು ಭೇಟಿ ನೀಡಿ ಕಾಮಗಾರಿಯ ಗುಣಮಟ್ಟವನ್ನು ವೀಕ್ಷಿಸಿದರು. ಆದರೆ ಯಾವ ಹಂತದಲ್ಲಿದೆ ಎಂಬುದು ಗೌಪ್ಯ ವರದಿಯಾಗಿದೆ.ಕ್ಷೇತ್ರದಲ್ಲಿ ಈ ರೀತಿಯಲ್ಲಿ ಇನ್ನೂ ಎಷ್ಟು ಕಾಮಗಾರಿಗಳು ಇವೆ  ರೀತಿಯಲ್ಲಿ ನಡೆಯುತ್ತವೆ ಎಂದು ಸಾರ್ವಜನಿಕರು ಹಿಡಿ ಶಾ...

ಅಮೃತ ಯೋಜನೆಯಡಿ ಕುಡಿಯುವ ನೀರಿನ ಕಾಮಗಾರಿ ಭೂಮಿ ಪೂಜೆ

ಇಮೇಜ್
  ಮಸ್ಕಿ : ಪುರಸಭೆ ವ್ಯಾಪ್ತಿಯ ಎಲ್ಲಾ ವಾರ್ಡ್‌ ಗಳಿಗೆ ಶುದ್ಧ ಕುಡಿಯುವ ನೀರನ್ನು ಒದಗಿಸಲು ಅಮೃತ ಯೋಜನೆಯಡಿ ₹42.47 ಕೋಟಿ ರೂ ಗಳ ಅನುದಾನ ಬಿಡುಗಡೆಯಾಗಿದೆ’ ಎಂದು ಖಾದಿ ಮತ್ತು ಗ್ರಾಮೋದ್ಯೋಗ ಮಂಡಳಿ ಅಧ್ಯಕ್ಷರು ಹಾಗೂ ಶಾಸಕ ಬಸನಗೌಡ ತುರುವಿಹಾಳ ಅವರು ತಿಳಿಸಿದರು. ಪಟ್ಟಣದ ದೈವದ ಕಟ್ಟೆ ಬಳಿ ಕುಡಿಯುವ ನೀರು ಅಮೃತ ಯೋಜನೆ ಅಡಿಯಲ್ಲಿ ಭೂಮಿ ಪೂಜೆ ನೆರವೇರಿಸಿ ಮಾತನಾಡಿದ ಅವರು ಪುರಸಭೆ ವ್ಯಾಪ್ತಿಯಲ್ಲಿ 23 ವಾರ್ಡ್‌ ಗಳಿದ್ದು,ಮೂಲಸೌಕರ್ಯ ಗಳಲ್ಲಿ ಒಂದಾದ ಶುದ್ಧ ಕುಡಿಯುವ ನೀರಿನ ಪೂರೈಕೆ ಕಾಮಗಾರಿಯನ್ನು ಗುತ್ತಿಗೆದಾರರು ನಿಗದಿತ ಅವಧಿಯಲ್ಲಿ ಮುಗಿಸುವ ಜೊತೆಗೆ ಉತ್ತಮ ಗುಣಮಟ್ಟ ಕಾಯ್ದುಕೊಳ್ಳಬೇಕು. ಕಾಮಗಾರಿ ಸಂದರ್ಭದಲ್ಲಿ ಸಾರ್ವಜನಿಕರಿಗೆ ಹಾಗೂ ಸಾರ್ವಜನಿಕ ಆಸ್ತಿ - ಪಾಸ್ತಿ ಗಳಿಗೆ ಹಾನಿಯಾಗದಂತೆ ಎಚ್ಚರಿಕೆ ವಹಿಸಬೇಕು’ ಎಂದರು. ಈ ವೇಳೆಯಲ್ಲಿ ಪುರಸಭೆ ಅಧ್ಯಕ್ಷ ಮಲ್ಲಯ್ಯ ಅಂಬಾಡಿ,ಉಪಾಧ್ಯಕ್ಷೆ ಗೀತಾ ಶಿವರಾಜ್ ಬುಕ್ಕಣ್ಣ,ಮಸ್ಕಿ ಸಹಕಾರಿ ಅಧ್ಯಕ್ಷ ನಾಗಭೂಷಣ ಬಾರಿಕೇರ, ಬಸನಗೌಡ ಪೊಲೀಸ್ ಪಾಟೀಲ್, ಬ್ಲಾಕ್ ಕಾಂಗ್ರೆಸ್ ಗ್ರಾಮೀಣ ಘಟಕದ ಅಧ್ಯಕ್ಷ ಹನುಮಂತಪ್ಪ ಮುದ್ದಾಪುರ,ಮಲ್ಲಯ್ಯ ಬಳ್ಳಾ,ಮಲ್ಲಯ್ಯ ಮುರಾರಿ, ರವಿ ಮಡಿವಾಳ, ಮಲ್ಲಿಕ್ ಮುರಾರಿ,ಪುರಸಭೆ ನಾಮ ನಿರ್ದೇಶನ ಸದಸ್ಯ ಕೃಷ್ಣ ಚಿಗಿರಿ ಸೇರಿದಂತೆ ಅನೇಕ ಕಾಂಗ್ರೆಸ್ ಪಕ್ಷದ ಪ್ರಮುಖ ಮುಖಂಡರು, ಹಾಗೂ ಅಧಿಕಾರಿಗಳು ಇದ್ದರು.

*ಇಟ್ಟಗಿ-ಕೊಟ್ಟೂರು ರಸ್ತೆಯ ರೈಲ್ವೆ ಸೇತುವೆಯಲ್ಲಿ ಭಾರೀ ಪ್ರಮಾಣದಲ್ಲಿ ಮಳೆ ನೀರು ಸಂಗ್ರಹ ವಾಹನ ಸಾವರರಿಗೆ ಹಾಗೂ ಸಾರ್ವಜನರಿಕರಿಗೆ ರಸ್ತೆ ಸಂಚಾರಕ್ಕೆ ಅಡಚಣೆ *

ಇಮೇಜ್
ಕೊಟ್ಟೂರು : ಕೊಟ್ಟೂರು ತಾಲೂಕಿನಲ್ಲಿ ಭಾನುವಾರ ರಾತ್ರಿ ಹೆಚ್ಚಿನ ಪ್ರಮಾಣದಲ್ಲಿ ಮಳೆಯಾಗಿದ್ದು,  ಕೊಟ್ಟೂರು ಹೋಬಳಿಯಲ್ಲಿ 136.4 ಎಂಎಂ ಹಾಗೂ ಕೋಗಳಿ ಹೋಬಳಿಯಲ್ಲಿ 16.6 ಎಂಎಂ ಮಳೆಯಾಗಿರುತ್ತದೆ. ಇದುವರೆಗೂ ರಾಂಪುರದಲ್ಲಿ-2, ಜೋಳದಕೂಡ್ಲಿಗಿಯಲ್ಲಿ-1, ಕಾಳಾಪುರದಲ್ಲಿ-1 ಒಟ್ಟು 4 ಮನೆಗಳು ಬಾಗಶ: ಹಾನಿಯಾಗಿರುವುದಾಗಿ ತಿಳಿದುಬಂದಿರುತ್ತದೆ.  ಇಟ್ಟಿಗಿ-ಕೊಟ್ಟೂರು ರಸ್ತೆಯ ರೈಲ್ವೆ ಸೇತುವೆ ಕೆಳಗಡೆಯ ಮುಂದುಗಡೆಯ ರಸ್ತೆಯಲ್ಲಿ ಭಾರೀ ಪ್ರಮಾಣದಲ್ಲಿ ನೀರು ಸಂಗ್ರಹವಾಗಿದ್ದು, ಸಾರ್ವಜನರಿಕರ ಸಂಚಾರಕ್ಕೆ ಅಡಚಣೆಯಾಗಿರುವುದು ಗಮನಕ್ಕೆ ಬಂದ ಕಾರಣ ಲೋಕೋಪಯೋಗಿ ಮತ್ತು ಪಟ್ಟಣ ಪಂಚಾಯಿತಿಯ ಸಿಬ್ಬಂದಿಯೊಂದಿಗೆ ಜೆಸಿಬಿ ಯಂತ್ರದಿಂದ ಕಾಲುವೆ ಮೂಲಕ ನೀರು ಸರಾಗವಾಗಿ ಹರಿಯುವಂತೆ ಮಾಡಿ ಸುಗಮ ಸಂಚಾರಕ್ಕೆ ಅನುವು ಮಾಡಿಕೊಡಲಾಗಿರುತ್ತದೆ.  ಹಾಗೂ ಅಲಬೂರು ಹಗರಿಹಳ್ಳದಲ್ಲಿ ಹೆಚ್ಚಿನ ಪ್ರಮಾಣದಲ್ಲಿ ನೀರು ಬಂದಿರುವ ಕಾರಣ ಕೋಗಳಿ-ಕನ್ನಿಹಳ್ಳಿ ಸಂಪರ್ಕ ಸೇತುವೆ ರಸ್ತೆಯ ಮೇಲೆ ನೀರು ಹರಿಯುವುತ್ತಿರುವುದರಿಂದ ಸಾರ್ವಜನಿಕರು ಓಡಾಡದಂತೆ ಮುಂಜಾಗ್ರತಾ ಕ್ರಮವಾಗಿ ಗ್ರಾಮ ಪಂಚಾಯಿತಿಯಿಂದ ತಾತ್ಕಾಲಿಕ ಬೇಲಿ ಹಾಕಿಸಿ ಸಾರ್ವಜನಿಕರಿಗೆ ಅರಿವು ಮೂಡಿಸಲಾಗಿದೆ. ರಾಂಪುರ ಹಾಗೂ ಹಿರೇವಡ್ರಹಳ್ಳಿ ಗ್ರಾಮಗಳಲ್ಲಿ ಸಂಚರಿಸಿ ಪರಿಶೀಲನೆ ಮಾಡಲಾಗಿದೆ. ಹವಮಾನ ಇಲಾಖೆಯ ವರದಿ ಪ್ರಕಾರ ಇನ್ನೂ 2 ದಿನ ಹೆಚ್ಚಿನ ಮಳೆಯಾಗಲಿರುವುದರಿಂದ  ತಾಲೂಕಿನ ಎಲ್ಲಾ ಗ್ರ...

ರಾಜ್ಯ ಸರ್ಕಾರ ತನ್ನ ರಕ್ಷಣೆಗಾಗಿ ಅಮಾಯಕ ಆಯುಕ್ತ ಬಿ.ದಯಾನಂದ ಅವರ ಅಮಾನತು ಖಂಡನೀಯ : ಆರ್. ಕೆ ನಾಯಕ

ಇಮೇಜ್
  ಮಸ್ಕಿ : ಸರ್ಕಾರದ ವೈಫಲ್ಯಗಳನ್ನು ಮುಚ್ಚಿಕೊಳ್ಳುವುದಕ್ಕೆ ಪ್ರಾಮಾಣಿಕ ಪೊಲೀಸ್ ಅಧಿಕಾರಿಯನ್ನು ಸಸ್ಪೆಂಡ್ ಮಾಡಿರುವುದು ಎಷ್ಟು ಸರಿ.! ನಾಯಕ ಸಮಾಜದ ಪ್ರಮಾಣಿಕ ಮತ್ತು ದಕ್ಷ ಅಧಿಕಾರಿಗಳನ್ನು ಮುಗಿಸುವ ಷಡ್ಯಂತ್ರವೋ ಒಂದು ತಿಳಿಯುತ್ತಿಲ್ಲ ಸರ್ಕಾರದ ಮುಖ್ಯಮಂತ್ರಿ ಮತ್ತು ಉಪಮುಖ್ಯಮಂತ್ರಿ ತಮ್ಮ ದಡ್ಡತನ ಅಸಡ್ಡೆಯಿಂದ ಆಗಿರುವ ಅನಾಹುತಕ್ಕೆ ನೈತಿಕ ಹೊಣೆ ಹೊತ್ತು ರಾಜೀನಾಮೆ ಕೊಟ್ಟು ಮರ್ಯಾದೆ ಉಳಿಸಿಕೊಳ್ಳಬೇಕಿತ್ತು. ಆದರೆ ವಾಲ್ಮೀಕಿ ನಾಯಕ ಜನಾಂಗದ ದಕ್ಷ ಹಿರಿಯ ಪೊಲೀಸ್ ಅಧಿಕಾರಿ ಬೆಂಗಳೂರು ನಗರ ಆಯುಕ್ತರಾದ ಶ್ರೀ ಬಿ.ದಯಾನಂದ ಅವರ ಮೇಲೆ ಅಮಾನತು ಶಿಕ್ಷೆ ಕೊಟ್ಟಿರುವುದು ಯಾವ ನ್ಯಾಯ? ಎಂದು ಆರ್.ಕೆ ನಾಯಕ ರವರು ಸರಕಾರದ ವಿರುದ್ಧ ಪತ್ರಿಕಾ ಹೇಳಿಕೆ ಮೂಲಕ ಆಕ್ರೋಶ ವ್ಯಕ್ತಪಡಿಸಿದರು. ವಾಲ್ಮೀಕಿ ನಾಯಕ ಜನಾಂಗದ ಸಚಿವರುಗಳಿಗೆ ಶಾಸಕರುಗಳಿಗೆ ಸಮಾಜದ ಬಗ್ಗೆ ಸ್ವಲ್ಪವಾದರೂ ಕಾಳಜಿ ಇದ್ದರೆ ಇಂತಹ ಅನಾಹುತಗಳು ಆಗಲು ಬಿಡುತ್ತಿದ್ದಿಲ್ಲ.ಸರಕಾರ ವಾಲ್ಮೀಕಿ ಜನಾಂಗವನ್ನು ಗುರಿಯಾಗಿಸಿಕೊಂಡಿದೆಯಾ? ಈ ಘಟನೆಗೆ ಸಂಬಂಧಿಸಿದಂತೆ ಮಾನ್ಯ ಗೃಹ ಸಚಿವರು ಕಾರಣ ಅವರನ್ನು ಯಾಕೆ ಸಚಿವ ಸ್ಥಾನದಿಂದ ವಜಾಗೊಳಿಸಲಿಲ್ಲ ಎಂದು  ಅಖಿಲ ಕರ್ನಾಟಕ ವಾಲ್ಮೀಕಿ ನಾಯಕ ಮಹಾಸಭಾದ ತಾಲೂಕ ಅಧ್ಯಕ್ಷ ಆರ್.ಕೆ ನಾಯಕ ಎಚ್ಚರಿಕೆ ನೀಡಿದರು.

ಲಿಂಗಸೂಗೂರು ಸರಕಾರಿ ಪದವಿ ಕಾಲೇಜು ಸಮಾಜಶಾಸ್ತ್ರದ ವಿದ್ಯಾರ್ಥಿಗಳಿಂದ ಸಮೀಕ್ಷೆ ಕಾರ್ಯ ಯಶಸ್ವಿ

ಇಮೇಜ್
  ಮಸ್ಕಿ : ಪಟ್ಟಣದಲ್ಲಿರುವ ಅಭಿನಂದನ್ ಶಿಕ್ಷಣ ಹಾಗೂ ಗ್ರಾಮೀಣ ಅಭಿವೃದ್ಧಿ ಸಂಸ್ಥೆ (ರಿ) ಮಸ್ಕಿಗೆ ಕರ್ನಾಟಕ ಸರ್ಕಾರ ಕಾಲೇಜು ಶಿಕ್ಷಣ ಇಲಾಖೆ,ಸರಕಾರಿ ಪ್ರಥಮ ದರ್ಜೆ ಕಾಲೇಜು ಲಿಂಗಸೂಗೂರಿನ ಸಮಾಜಶಾಸ್ತ್ರ ವಿಭಾಗದ ವಿದ್ಯಾರ್ಥಿಗಳು ಒಂದು ದಿನ ಕ್ಷೇತ್ರಾಧ್ಯಾಯನ ಸಮೀಕ್ಷೆ ಮಾಡಲು ಭೇಟಿ ನೀಡಿ ಅಲ್ಲಿನ ಮಕ್ಕಳ ಶಿಕ್ಷಣ ಮತ್ತು ಆರೋಗ್ಯದ ಸ್ಥಿತಿಗತಿ ಬಗ್ಗೆ ಸಮೀಕ್ಷೆ ಕಾರ್ಯ ನಡೆಸಿದರು ಈ ಸಮೀಕ್ಷೆಯಲ್ಲಿ ವಿಭಾಗದ ಉಪನ್ಯಾಸಕರಾದ ಡಾ.ಮರೆಪ್ಪ,ಎಂ.ಪರಮೇಶ್ವರ,ಹಾಗೂ ಸಹಾಯಕ ಪ್ರಾಧ್ಯಾಪಕರಾದ ದಿವ್ಯಾ ಮತ್ತು ವಿದ್ಯಾರ್ಥಿಗಳು ಇದ್ದರು.

"ಕೊಟ್ಟೂರಿನಲ್ಲಿ ಪವಿತ್ರ ಬಕ್ರಿದ್ ಹಬ್ಬದ ಆಚರಣೆ "

ಇಮೇಜ್
*ತ್ಯಾಗ ಬಲಿದಾನದ ಸಂಕೇತವಾದ ಬಕ್ರೀದ್ ಹಬ್ಬ ಆಚರಣೆ* ಕೊಟ್ಟೂರು : ತಾಲ್ಲೂಕಿನ ಪಟ್ಟಣದ ಹ್ಯಾಳ್ಯ ರಸ್ತೆಯಲ್ಲಿ ಬರುವ ಈದ್ಗಾ ಮೈದಾನದಲ್ಲಿ ಮುಸ್ಲಿಂ ಭಾಂದವರು ಶನಿವಾರ ಪ್ರಾರ್ಥನೆ ಸಲ್ಲಿಸಿದರು . ಬಕ್ರೀದ್ ಹಬ್ಬ ಆಚರಣೆಗೆ ಕಾರಣವಾದ ಪ್ರವಾದಿ ಇಬ್ರಾಹಿಂ(ಸ) ರವರ ಭಕ್ತಿ ಮತ್ತು ನಿಷ್ಠೆಯನ್ನು ಪರೀಕ್ಷಿಸಲು ಅಲ್ಲಾಹ ಮುಂದಾಗುತ್ತಾರೆ. ಕನಸಿನಲ್ಲಿ ಬರುವ ಅಲ್ಲಾಹ ಜಗತ್ತಿನಲ್ಲಿ ನಿಮಗೆ ಅತ್ಯಂತ, ಪ್ರಿಯರು ಯಾರು ಎಂದು ಕೇಳಿದಾಗ ನನ್ನ ಪುತ್ರ ನನಗೆ ಅತ್ಯಂತ ಪ್ರಿಯವಾದ ವ್ಯಕ್ತಿಯಿಂದು ಇಬ್ರಾಹಿಂ(ಸ) ಹೇಳ್ತಾರೆ. ಹಾಗಾದರೆ ಓರ್ವನೇ ಮಗನಾದ ಇಸ್ಮಾಯಿಲ್ ರನ್ನು ಬಲಿ ನೀಡಬೇಕೆಂದು ಕನಸಿನಲ್ಲಿ ಆಜ್ಞೆಯಾಗುತ್ತದೆ. ಅಲ್ಲಾಹನ ಆಜ್ಞೆಯಂತೆ ಇಬ್ರಾಹಿಂ(ಸ) ಮಗನ బలిಗೆ ಮುಂದಾಗುತ್ತಾರೆ. ತಂದೆಯ ಮಾತನ್ನು ಇಸ್ಮಾಯಿಲ್ ಸಹ ಒಪ್ಪಿಕೊಂಡು ಬಲಿಗೆ ನಗುಮೊಗದಲ್ಲಿಯೇ ಸಿದ್ದಗೊಳ್ಳುತ್ತಾರೆ. ಕತ್ತಿ ಆದರೆ  ಮಗನನ್ನು ಬಲಿ ಕೊಡಲು ನೀಡಲು ಪುತ್ರ ವಾತ್ಸಲ್ಯ ಅಡ್ಡಿಯಾಗುತ್ತದೆ. ಈ ಸದರ್ಭದಲ್ಲಿ ಕಣ್ಣಿಗೆ ಕಪ್ಪು ಬಟ್ಟೆ ಕಟ್ಟಿಕೊಂಡ ಅವರು ಮಗನ ಕುತ್ತಿಗೆಗೆ ಬೀಸಲು ಸಿದ್ದರಾಗುತ್ತಾರೆ. ಆ ವೇಳೆ, ಪ್ರತ್ಯಕ್ಷರಾದ ದೇವದೂತ ಜಿಬ್ರಾಯಿಲ್, ಇಸ್ಮಾಯಿಲ್‌ರನ್ನು ಬದಿಗೆ ಸರಿಸಿ ಅವರ ಬದಲಿಗೆ ಒಂದು ಕುರಿಯನ್ನು ಬಲಿಕೊಡುವಂತೆ ಆಜ್ಞಾಪಿಸುತ್ತಾರೆ. ಕುರಿಯು ಕುತ್ತಿಗೆಯ ಮೇಲೆ ಹರಿಸಿದ ಕತ್ತಿ ಸಫಲವಾಗುತ್ತದೆ. ದೇವನಲ್ಲಿ ತಮಗಿರುವ ಸತ್ವನಿಷ್ಠೆಯ ಸಂಕೇತವಾಗಿ ವಿಶ್ವದಾ...

ರಾಜ್ಯ ತಂಡದಿಂದ ನರೇಗಾ ಕಾಮಗಾರಿಗಳ ವೀಕ್ಷಣೆ

ಇಮೇಜ್
  ಮಸ್ಕಿ : ತಾಲೂಕಿನ ಮೆದಿಕಿನಾಳ, ಹಾಗೂ ಪಾಮನಕಲ್ಲೂರು ಗ್ರಾಮ ಪಂಚಾಯತಿ ವ್ಯಾಪ್ತಿಯಲ್ಲಿ 2024-25 ನೇ ಸಾಲಿನಲ್ಲಿ ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆ ಅಡಿಯಲ್ಲಿ ಅನುಷ್ಠಾನಗೊಂಡ ಕಾಮಗಾರಿಗಳನ್ನು ಶುಕ್ರವಾರ ರಾಜ್ಯ ಗ್ರಾಮೀಣಾಭಿವೃದ್ಧಿ ಆಯುಕ್ತಾಲಯದ ಅಧಿಕಾರಿಗಳ ತಂಡ ಪರಿಶೀಲಿಸಿತು.ಗ್ರಾಮೀಣಾಭಿವೃದ್ಧಿ ಆಯುಕ್ತಾಲಯದ ಸಹಾಯಕ ನಿರ್ದೇಶಕರಾದ (ಆಡಳಿತ) ಶಿವಾನಂದ ಬೇವೂರು, ತಾಂತ್ರಿಕ ಸಂಯೋಜಕರಾದ ಅಭಿರಾಮ್ ತಾಂತ್ರಿಕ ಸಂಯೋಜಕರು (ಸಿವಿಲ್), ಸ್ವಾಮಿ ತಾಂತ್ರಿಕ ಸಂಯೋಜಕರು (ಅರಣ್ಯ) , ರಾಜ್ಯ ಗುಣ ನಿಯಂತ್ರಣ ಮಾಪಕರಾದ ಗಂಗಾಧರ್ ಕೆ.ಸಿ ಅವರನ್ನು ಒಳಗೊಂಡ ತಂಡವು 2024-25 ನೇ ಸಾಲಿನಲ್ಲಿ ಅನುಷ್ಠಾನವಾಗಿರುವ ಕೃಷಿ ಹೊಂಡ, ಜಾನುವಾರುಗಳ ಶೆಡ್, ಟ್ರಂಚ್ ಕಮ್ ಬಂಡ್ ಕಾಮಗಾರಿಗಳು, ಸಾಮಾಜಿಕ ಅರಣ್ಯ ಇಲಾಖೆಯ ನೆಡುತೋಪು, ನರೇಗಾದಡಿ ಹೂಳು ಎತ್ತಿದ ಕೆರೆ, ನಾಲೆಗಳನ್ನು ವೀಕ್ಷಿಸಿದರು. ಕಾಮಗಾರಿಗೆ ಸಂಬಂಧಿಸಿದ ಕಡತಗಳನ್ನು ಪರಿಶೀಲಿಸಿದರು‌. ಶಿವಾನಂದ ಬೇವೂರು, ಗಂಗಾಧರ ಅವರು ಪಾಮನಕಲ್ಲೂರು ಗ್ರಾಮ ಪಂಚಾಯತಿಯ ಬೆಂಚಮರಡಿ ಗ್ರಾಮದ ಹಳ್ಳ ಹೂಳು ಎತ್ತಿದ ಕಾಮಗಾರಿ ವೀಕ್ಷಿಸಿ ಕಾಮಗಾರಿಯ ಅಳತೆ ಪಡೆದರು. ಕೂಲಿಕಾರರಿಗೆ ಕೆಲಸದ ಪ್ರಮಾಣದ ಕುರಿತು ಅಗತ್ಯ ಮಾಹಿತಿ ನೀಡಿ, ಅವರಿಂದ‌ ಕೆಲಸ‌ ಪಡೆಯಬೇಕು. ಕೂಲಿಕಾರರು ನಿರ್ವಹಿಸಿದ ಕೆಲಸದ ಅನುಸಾರ ಅಳತೆ ಪುಸ್ತಕದಲ್ಲಿ ಅಳತೆ ನಮೂದಿಸಿ ಕೂಲಿ ಪಾವತಿಸಬೇಕು ಎಂದರು.  ...

ವನಸಿರಿ ವತಿಯಿಂದ ಪರಿಸರ ದಿನಾಚರಣೆಯ ನಿಮಿತ್ತ ವಿದ್ಯಾರ್ಥಿಗಳಿಗೆ 500 ಗಿಡ ವಿತರಣೆ

ಇಮೇಜ್
  ಮಸ್ಕಿ : ನಗರದ ಎಸ್.ಡಿ.ಎಂ.ಆಂಗ್ಲ ಮಾಧ್ಯಮ ಪ್ರಾಥಮಿಕ ಹಾಗೂ ಪ್ರೌಢ ಶಾಲೆಯ ಆವರಣದಲ್ಲಿ ವನಸಿರಿ ಪೌಂಡೇಷನ್ ಪೌಂಡೇಷನ್(ರಿ)ರಾಜ್ಯ ಘಟಕ ರಾಯಚೂರು ವತಿಯಿಂದ ವಿಶ್ವ ಪರಿಸರ ದಿನಾಚರಣೆಯ ಅಂಗವಾಗಿ ಪರಿಸರ ಹಬ್ಬ ಹಾಗೂ ವಿದ್ಯಾರ್ಥಿಗಳಿಗೆ 500 ಸಸಿ ವಿತರಣೆಯ ಮೂಲಕ ಪರಿಸರ ಜಾಗೃತಿ ಕಾರ್ಯಕ್ರಮ ಹಮ್ಮಿಕೊಳ್ಳಲಾಯಿತು. ಕಾರ್ಯಕ್ರಮದ ಉದ್ಘಾಟನೆಯನ್ನು ಕರ್ನಾಟಕ ರಾಜ್ಯ ಪರಿಸರ ರಾಜ್ಯ ಪ್ರಶಸ್ತಿ ಪುರಸ್ಕೃತ ಹಾಗೂ ವನಸಿರಿ ಪೌಂಡೇಷನ್ ಸಂಸ್ಥಾಪಕ ಅಧ್ಯಕ್ಷ ಅಮರೇಗೌಡ ಮಲ್ಲಾಪುರ ಸಸಿ ನೆಟ್ಟು ನೀರುಣಿಸುವ ಮೂಲಕ ವಿಶ್ವ ಪರಿಸರ ದಿನಾಚರಣೆಗೆ ಚಾಲನೆ ನೀಡಿ ಮಾತನಾಡಿದರು.  ನಂತರ ಮಾತನಾಡಿ ಮರ ದೇವನಿತ್ತ ವರ ಮರದ ರಕ್ಷಣೆ ಮಹಾದೇವನ ರಕ್ಷಣೆ ಮಾಡಿದಂತೆ ಎನ್ನುವ ಕೊಪ್ಪಳದ ಗವಿ ಶ್ರೀಗಳ ಒಂದು ಅಮೃತ ವಾಣಿಯಂತೆ ಗಿಡ ಮರಗಳನ್ನು ಉಳಿಸಿ ಬೆಳಸುವ ಮೂಲಕ ಹಸಿರುಕರಣ ಮಾಡಿ ಮಹಾದೇವನ ಕೃಪೆಗೆ ಪಾತ್ರರಾಗೋಣ. ನಾವುಗಳೆಲ್ಲರೂ ಪ್ರತಿಯೊಂದು ಹುಟ್ಟುಹಬ್ಬದ,ಮದುವೆ ಇನ್ನಿತರ ಸಮಾರಂಭಗಳಲ್ಲಿ ಸಸಿಗಳನ್ನು ನೆಟ್ಟು ಆಚರಿಸಬೇಕು.ಅದೇರೀತಿ ರಕ್ಷಾ ಬಂಧನ ಬಂದಾಗ ಗಿಡಗಳಿಗೆ ರಾಖಿ ಕಟ್ಟಿ ಗಿಡಮರಗಳನ್ನು ಬೆಳೆಸಲು ಮುಂದಾಗಬೇಕು.ಇಲ್ಲದ್ದಿದ್ದರೆ ಆಧುನಿಕತೆಯ ಭರಾಟೆಯಲ್ಲಿ ಪರಿಸರ ವಿನಾಶದತ್ತ ಸಾಗುತ್ತದೆ.ನಾವುಗಳೆಲ್ಲರೂ ಈಗಿನಿಂದಲೇ ಒಂದು ಪ್ರತಿಜ್ಞೆ ಮಾಡೋಣ ಸಾಲುಮರದ ತಿಮ್ಮಕ್ಕನ ಆರ್ಶಿವಾದದೊಂದಿಗೆ ಮಗುವಿಗೊಂದರಂತೆ ಮನೆಗೊಂದು ಗಿಡಮರಗಳನ್ನು ಬೆಳೆಸೋಣ ಎಂದು ತಿಳಿಸಿ...