ಮಹಿಳಾ ಮಹಾ ವಿದ್ಯಾಲಯದ ಪರೀಕ್ಷಾ ಕೇಂದ್ರಕ್ಕೆ ವಿಚಕ್ಷಕ ದಳ ಧಿಡೀರ್ ಭೇಟಿ
ಮಸ್ಕಿ : ಪಟ್ಟಣದ ಸನರೈಸ್ ಮಹಿಳಾ ಪದವಿ ಮಹಾವಿದ್ಯಾಲಯಕ್ಕೆ ವಿಚಕ್ಷಕ ದಳದ ಅಧ್ಯಕ್ಷರು ಮತ್ತು ಸದಸ್ಯರು ಧಿಡೀರ್ ಭೇಟಿ ನೀಡಿದ್ದಾರೆ.
ಸಿಂಧನೂರು ಪಟ್ಟಣದ ಸರ್ಕಾರಿ ಮಹಿಳಾ ಕಲಾ ಮತ್ತು ವಾಣಿಜ್ಯ ಮಹಾವಿದ್ಯಾಲಯದಲ್ಲಿ ನಡೆಯುತ್ತಿರುವ ಪದವಿಯ ಬಿ.ಎ ಮತ್ತು ಬಿ. ಕಾಂ ಪರೀಕ್ಷಾ ಕೇಂದ್ರಕ್ಕೆ ಕರ್ನಾಟಕ ರಾಜ್ಯ ಅಕ್ಕ ಮಹಾದೇವಿ ಮಹಿಳಾ ವಿಶ್ವವಿದ್ಯಾನಿಲಯದ ಪರೀಕ್ಷಾ ವಿಚಕ್ಷಕ ದಳದ ಅಧ್ಯಕ್ಷರು ಮತ್ತು ಸದಸ್ಯರುಗಳು ಮಹಾವಿದ್ಯಾಲಯದಲ್ಲಿನ ವಿದ್ಯಾರ್ಥಿನಿಯರು ನಕುಲು ಮಾಡದೆ ಸುಸೂತ್ರವಾಗಿ ಪರೀಕ್ಷೆ ಬರೆಯಲು ಕಲ್ಪಿಸಿರುವ ವ್ಯವಸ್ಥೆ, ಸಿಸಿ ಕ್ಯಾಮರಾ ಅಳವಡಿಕೆ ಮಾಡಿರುವುದನ್ನು ವೀಕ್ಷಿಸಿದರು.
ಇತ್ತೀಚಿಗೆ ಪತ್ರಿಕೆಯಲ್ಲಿ ಪ್ರಕಟಣೆಗೊಂಡ ವಿಶ್ವವಿದ್ಯಾನಿಲಯದ ಕುಲಸಚಿವರಾದ ಡಾ. ಚಂದ್ರಶೇಖರ ಎಚ್.ಎಮ್ ಅವರ ಮೇಲೆ ಮಾಡಲಾದ ಹಣದ ಬೇಡಿಕೆ ಆರೋಪ ಸುಳ್ಳು ಅವರು ಬಾಹ್ಯ ಹಿರಿಯ ಮೇಲ್ವಿಚಾರಕರ ಮತ್ತು ವಿಚಕ್ಷಕ ದಳದ ನೇಮಕ ವಿಚಾರದಲ್ಲಿ ಯಾವುದೇ ರೀತಿಯಾದಂತ ಹಣದ ಬೇಡಿಕೆ ಇಟ್ಟಿರುವುದಿಲ್ಲ, ಕಳೆದ ಎರಡು ಮೂರು ವರ್ಷಗಳಿಂದ ಪರೀಕ್ಷಾ ವಿಭಾಗದಲ್ಲಿ ಉತ್ತಮವಾದ ಆಡಳಿತವನ್ನು ಮಾಡಿಕೊಂಡು ಬಂದಿದ್ದಾರೆ. ಜೊತೆಗೆ ಸಕಾಲದಲ್ಲಿ ವಿದ್ಯಾರ್ಥಿನಿಯರಿಗೆ ಫಲಿತಾಂಶವನ್ನು ನೀಡಿ ವಿದ್ಯಾರ್ಥಿನಿಯರಿಗೆ ಮುಂದಿನ ಉನ್ನತ ವ್ಯಾಸಂಗಕ್ಕೆ ಅನುಕೂಲ ಮಾಡಿಕೊಟ್ಟಿದ್ದಾರೆ ಎಂದು ವಿಚಕ್ಷಕ ದಳದ ಅಧ್ಯಕ್ಷರಾದ ಪ್ರೊ. ಎಸ್ ಆರ್ ಸಾಹು ಹೇಳಿದರು.
ಈ ಸಂದರ್ಭದಲ್ಲಿ ವಿಚಕ್ಷಕ ದಳದ ಸದಸ್ಯರಾದ ಡಾ. ರೇಣುಕಾರೆಡ್ಡಿ , ಪ್ರೊ. ಲಕ್ಷ್ಮಿ ಹೆಬ್ಬಾಳ್ ಹಾಗೂ ಸನ್ ರೈಸ್ ಮಹಿಳಾ ಮಹಾ ವಿದ್ಯಾಲಯದ ಸರ್ವ ಸಿಬ್ಬಂದಿಗಳು ಇದ್ದರು.

ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ