ಪೋಸ್ಟ್‌ಗಳು

ಸೆಪ್ಟೆಂಬರ್, 2025 ರಿಂದ ಪೋಸ್ಟ್‌ಗಳನ್ನು ತೋರಿಸುತ್ತಿದೆ

ಸಾಮಾಜಿಕ, ಶೈಕ್ಷಣಿಕ ಸಮೀಕ್ಷೆಗೆ ವ್ಯಾಪಕ ಪ್ರಚಾರ ಸಿಗಲಿ ಜಿ.ಪಂ ಉಪ ಕಾರ್ಯದರ್ಶಿ ಹಾಲ ಸಿದ್ದಪ್ಪ ಪೂಜೇರಿ ಸಲಹೆ

ಇಮೇಜ್
  ಮಸ್ಕಿ : ಪಟ್ಟಣದ ತಾಲೂಕು ಪಂಚಾಯತಿ, ತಹಸೀಲ್ದಾರ್ ಕಚೇರಿಗೆ ಜಿಪಂ ಉಪ ಕಾರ್ಯದರ್ಶಿಗಳಾದ ಹಾಲಸಿದ್ದಪ್ಪ ಪೂಜೇರಿ ಅವರು ಶನಿವಾರ ಭೇಟಿ ನೀಡಿ, ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷೆ ಪ್ರಗತಿ ಕುರಿತು ಮಾಹಿತಿ ಪಡೆದರು.  ಗ್ರಾ.ಪಂ ಅಭಿವೃದ್ಧಿ ಅಧಿಕಾರಿಗಳು ಮತ್ತು ಸಿಬ್ಬಂದಿ, ಸಮೀಕ್ಷೆಯ ನೋಡಲ್ ಅಧಿಕಾರಿಗಳೊಂದಿಗೆ ವಿ.ಸಿ ಮೂಲಕ ಸಭೆ ನಡೆಸಿದರು. ರಾಜ್ಯ ಸರ್ಕಾರದಿಂದ ಕೈಗೊಂಡಿರುವ ಸಾಮಾಜಿಕ, ಶೈಕ್ಷಣಿಕ ಸಮೀಕ್ಷೆ ಕುರಿತು ವ್ಯಾಪಕ ಪ್ರಚಾರ ಕೈಗೊಂಡು, ಪ್ರತಿಯೊಂದು ಕುಟುಂಬದ ಮಾಹಿತಿಯನ್ನು ನಿಗದಿತ ನಮೂನೆಯಲ್ಲಿ ಪಡೆದು, ತಂತ್ರಾಂಶದಲ್ಲಿ ದಾಖಲಿಸಬೇಕು. ಗ್ರಾಮ ಪಂಚಾಯತಿ ಮಟ್ಟದ ಸ್ವ ಸಹಾಯ ಗುಂಪುಗಳ ಮಹಿಳೆಯರು ಸಮೀಕ್ಷೆ ಕುರಿತು ಗ್ರಾಮೀಣರಲ್ಲಿ ಜಾಗೃತಿ ಮೂಡಿಸಬೇಕು. ಸಮೀಕ್ಷೆ ಯಶಸ್ಸಿಗೆ ಗ್ರಾಮ ಪಂಚಾಯತಿಯಿಂದ ಸಂಪೂರ್ಣ ಸಹಕಾರ ಒದಗಿಸಬೇಕು. ಗಣತಿದಾರರು ಪ್ರತಿ ದಿನ ಸಮೀಕ್ಷೆ ಕಾರ್ಯದಲ್ಲಿ ಭಾಗವಹಿಸಿರುವುದನ್ನು ಖಚಿತ ಪಡಿಸಿಕೊಳ್ಳಬೇಕು. ಮೂರು ನಾಲ್ಕು ದಿನಗಳ ಒಳಗೆ ಸಮೀಕ್ಷೆ ಪೂರ್ಣಗೊಳಿಸಬೇಕು ಎಂದರು. ತದ ನಂತರ ಉದ್ಬಾಳ ಗ್ರಾಮ ಪಂಚಾಯತಿಯ ಕ್ಯಾತ್ನಟ್ಟಿ, ಚಿಕ್ಕಕಡಬೂರು, ಉದ್ಬಾಳ ಗ್ರಾಮಕ್ಕೆ ಭೇಟಿ ನೀಡಿ ಸಮೀಕ್ಷೆ ಕಾರ್ಯವನ್ನು ವೀಕ್ಷಿಸಿ ಸಿಬ್ಬಂದಿಗಳೊಂದಿಗೆ ಚರ್ಚಿಸಿದರು. ಈ ಸಂದರ್ಭದಲ್ಲಿ ಕಾರ್ಯನಿರ್ವಾಹಕ ಅಧಿಕಾರಿಗಳಾದ ಅಮರೇಶ್, ವ್ಯವಸ್ಥಾಪಕರಾದ ಗಂಗಾಧರ ಮೂರ್ತಿ, ಸಿಬ್ಬಂದಿಗಳಾದ ಚಂದ್ರಶೇಖರ, ಬಸವರಾಜ್, ಉದ್ಬಾಳ ಗ...

ಸುಜ್ಞಾನ ನಿಧಿ ಶಿಷ್ಯವೇತನದಿಂದ ಮಕ್ಕಳ ಭವಿಷ್ಯ ಉಜ್ವಲ - ಸಿದ್ದಲಿಂಗ ಶ್ರೀ ಅಭಿಮತ

ಇಮೇಜ್
  ಕೊಟ್ಟೂರು: ಪಟ್ಟಣದ ಡೋಣೂರು ಚಾನುಕೋಟಿ ಮಠದ ಸಮುದಾಯ ಭವನದಲ್ಲಿ ೨೦೨೪ -೨೫ ನೇ ಸಾಲಿನ ೧೧೫ ವಿದ್ಯಾರ್ಥಿಗಳಿಗೆ ಸುಜ್ಞಾನ ನಿಧಿ ಶಿಷ್ಯ ವೇತನ ಮಂಜೂರಾತಿ ಪತ್ರ ವಿತರಣಾ ಕಾರ್ಯಕ್ರಮ ಹಮ್ಮಿಕೊಂಡಿದ್ದು ಕಾರ್ಯಕ್ರಮದಲ್ಲಿ ದಿವ್ಯ ಸಾನಿಧ್ಯ ಡಾ. ಶ್ರೀ ಸಿದ್ದಲಿಂಗ ಶಿವಾಚಾರ್ಯ ಸ್ವಾಮಿಯವರು ಹಾಗು ಮಾಜಿ ಜಿಲ್ಲಾ ಪಂಚಾಯತ್ ಸದಸ್ಯರು ಎಂ ಎಂ ಜೆ  ಹರ್ಷವರ್ದನ್ ರವರು ಕಾರ್ಯಕ್ರಮವನ್ನು ದೀಪ ಬೆಳಗಿಸುವ ಮೂಲಕ ಉದ್ಘಾಟನೆ ಮಾಡಿದರು. ಜಿಲ್ಲಾ ನಿರ್ದೇಶಕರು ಸತೀಶ್ ಶೆಟ್ಟಿ ಯವರು ಧರ್ಮಸ್ಥಳದಿಂದ ನಡೆಯುವ ಚತುರ್ವಿಧ ದಾನಗಳಾದ  ಅನ್ನದಾನ, ವಿದ್ಯಾದಾನ, ಅರೋಗ್ಯದಾನ, ಹಾಗು ಅಭಯ ದಾನಗಳ  ಬಗ್ಗೆ ತಿಳಿಸಿದರು ಸುಜ್ಞಾನ ನಿಧಿ ಶಿಷ್ಯ ವೇತನ ಕಾರ್ಯಕ್ರಮವನ್ನು ಕಳೆದ ೧೯ ವರ್ಷಗಳಿಂದ ನಿರಂತರವಾಗಿ ನೆಡೆದುಕೊಂಡು ಬರುತ್ತಿದೆ ಹಾಗು ನಿರ್ಗತಿಕರಿಗೆ ಮಾಶಾಸನ ತಿಂಗಳಿಗೆ ೧೦೦೦ ರೂ ಅಂತೆ ನೀಡಲಾಗುತ್ತಿದೆ  ವಿಜಯನಗರ ಜಿಲ್ಲೆಯಲ್ಲಿ ೮೦೦ ವಿದ್ಯಾರ್ಥಿಗಳಿಗೆ ಹಾಗು ನಮ್ಮ ಕೊಟ್ಟೂರು ತಾಲ್ಲೂಕಿನಲ್ಲಿ ಕಳೆದ ವರ್ಷ ೧೦೭ ಮತ್ತು ಈ ವರ್ಷ ೧೧೫ ಒಟ್ಟು ೨೨೨ ವಿದ್ಯಾರ್ಥಿಗಳಿಗೆ ೧೪,೫೨,೦೦೦ ಮೊತ್ತ ವನ್ನು ವಾರ್ಷಿಕವಾಗಿ ಹಣ ವಿದ್ಯಾರ್ಥಿಗಳ ಖಾತೆಗೆ ಹಾಕಲಾಗುತ್ತಿದೆ. ರಾಜ್ಯದಲ್ಲಿ ೯೫೦ ಕೆರೆಗಳನ್ನು ನಮ್ಮ ಊರು ನಮ್ಮ ಕೆರೆ ಕಾರ್ಯಕ್ರಮದಲ್ಲಿ ಕೆರೆ ಪುನಶ್ಚೇತನಗೊಳಿಸಲಾಗಿದೆ  ರಾಜ್ಯದಲ್ಲಿ ೧೦೫೦ ಜ್ಞಾನದೀಪಾ ಯೋಜನೆಯಡಿ ಸರ್ಕಾರಿ ಶಾಲೆಗಳಿಗ...

ಕೊಟ್ಟೂರು ತಾಲೂಕು ಪಂಚ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿ ರಚನೆ

ಇಮೇಜ್
  ಕೊಟ್ಟೂರು : ಕೊಟ್ಟೂರು ತಾಲೂಕು ಪಂಚ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿ ರಚನೆಗೊಂಡಿದ್ದುಕೊಟ್ಟೂರು ತಾಪಲೂಕು ಪಂಚಾಯಿತಿಯ ಮಾನ್ಯ ಕಾರ್ಯನಿರ್ವಾಹಕ ಅಧಿಕಾರಿಗಳು ಹಾಗೂ ಪಂಚ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿ ಸದಸ್ಯ ಕಾರ್ಯದರ್ಶಿಗಳೂ ಆದ ಶ್ರೀ ಡಾ.ಬಿ.ಆನಂದಕುಮಾರ ಅವರು ಸರ್ಕಾರದಿಂದ ನೇಮಕಗೊಂಡ ಅಧ್ಯಕ್ಷರು ಹಾಗೂ ಸದಸ್ಯರರುಗಳಿಗೆ ಆದೇಶ ಪ್ರತಿಯನ್ನು ನೀಡಿದರು. ಕೊಟ್ಟೂರು ತಾಲೂಕು ಪಂಚ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿಗೆ ಶ್ರೀ ಅನಿಲ್ ಹೊಸಮನಿ (ಅಧ್ಯಕ್ಷರು), ಸದಸ್ಯರಾಗಿ ಶ್ರೀ ಪ್ರಭುದೇವ್, ಶ್ರೀ ಮಾರಪ್ಪ ದೊಡ್ಡಮನಿ, ಶ್ರೀ ಹರೀಶ್ ನಾಯ್ಕ್ ಎಲ್.ಎನ್., ಶ್ರೀಮತಿ ಸುಶೀಲಮ್ಮ , ಶ್ರೀಮತಿ ಗಾಯತ್ರಿ ಎ.ಎಸ್, ಶ್ರೀ ಶಿವರಾಜ್ ಟಿ, ಶ್ರೀ ನಾಗಪ್ಪ, ಶ್ರೀ ಪಿ.ಕೆ. ಇಂದ್ರಜಿತ್, ಶ್ರೀ ತಿರುಕಪ್ಪ ಕರಡಿ, ಶ್ರೀ ಎನ್.ಚಂದ್ರಪ್ಪ, ಶ್ರೀ ಬಸವರಾಜ್, ಶ್ರೀ ಜೆ.ಆನಂದ, ಶ್ರೀ ಮಾಲವಿ ಜಮಿರ್ ಖಾನ್, ಶ್ರೀ ಉಮಾಪತಿ ಸ್ವಾಮಿ ಎಂ.ಎಂ. ಅವರು ಸಮಿತಿ ಸದಸ್ಯರಾಗಿ ನೇಮಕಗೊಂಡಿರುತ್ತಾರೆ.  ಈ ವೇಳೆ ಪಂಚ ಗ್ಯಾರಂಟಿ ಯೋಜನೆ ಅನುಷ್ಠಾನ ಸಮಿತಿ ಅಧ್ಯಕ್ಷರರಾದ ಶ್ರೀ ಅನಿಲ್ ಹೊಸಮನಿ ಅವರು ಮಾತನಾಡಿ, ತಾಲೂಕಿನಲ್ಲಿ ಪಂಚ ಗ್ಯಾರಂಟಿ ಯೋಜನೆಗಳಿಗೆ ಸಂಬಂಧಿಸಿದಂತೆ ಯಾವುದೇ ಕುಂದು ಕೊರತೆ ಇದ್ದಲ್ಲಿ, ಅನುಷ್ಠಾನ ಸಮಿತಿಗೆ ದೂರು ಸಲ್ಲಿಸುವಂತೆ ಮನವಿ ಮಾಡಿದರು.

ಕೊರಮ ಮತ್ತು ಕೊರಚ ಜನಾಂಗದವರಲ್ಲಿ ಮನವಿ

ಇಮೇಜ್
ಬಳ್ಳಾರಿ: ರಮಣಪ್ಪ ಭಜಂತ್ರಿ ರಾಜ್ಯ ಖಜಾಂಚಿ ಅಖಿಲ ಕರ್ನಾಟಕ ಕುಳುವ ಮಹಾ ಸಂಘ (ಕೊರಮ,ಕೊರಚ,ಕೊರವ ಸಮುದಾಯಗಳ ಒಕ್ಕೂಟ) ವತಿಯಿಂದ  ಸರ್ಕಾರ ನಡೆಸುತ್ತಿರುವ ಶೈಕ್ಷಣಿಕ ಮತ್ತು ಸಾಮಾಜಿಕ ಜಾತಿಗಣತಿಯಲ್ಲಿ ತಾವು ಜಾತಿ ಪ್ರಮಾಣದ ಪ್ರಕಾರ ಕೊರಚ ಇದ್ದರೆ ಅಂತ ಕೋಡ್. 053.1*ಕೊರಚ* ಬರೆಸಿ, ಕೊರಮ ಇದ್ದರೆ ಕೋಡ್ 054.1*ಕೊರಮ* ಅಂತ ಬರೆಸಿ  ಸಂವಿಧಾನ ಪ್ರಕಾರ *ಕೊರಚ ಮತ್ತು ಕೊರಮ* ಆದಕಾರಣ *ಕೊರಚ ಅಥವಾ ಕೊರಮ ಅಂತ ಬರೆಸಬೇಕು* ಎಂದು ತಮ್ಮಲ್ಲಿ ಮನವಿ ಮಾಡಿಕೊಳ್ಳುತ್ತೇನೆ. 

"ಯುವಜನರ ಅಭಿರುಚಿ ಬದಲಾಗದೆ,ಸಂಸ್ಕೃತಿ ಉಳುವಿಗೆ ಸಾಧ್ಯವಿಲ್ಲ : ವಿರೂಪಾಕ್ಷಪ್ಪ ಪಂಡಿತ್ "

ಇಮೇಜ್
ದಾವಣಗೆರೆ: ಯುವಜನರ ಅಭಿರುಚಿ ಬದಲಾಗದ ಹೊರತು ಸಂಸ್ಕೃತಿ ನಾಶವನ್ನ ತಡೆಯಲು ಯಾರಿಂದಲೂ ಸಾದ್ಯವಿಲ್ಲ ಸಂಸ್ಕೃತಿ ನಾಶವನ್ನು ತಡೆಗಟ್ಟುವಲ್ಲಿ ಯುವ ಜನರ ಅಭಿರುಚಿಯನ್ನು ಬದಲಾಯಿಸುವಲ್ಲಿ ಪೋಸಕರು ಶಿಕ್ಷಣವ್ಯವಸ್ಥೆ,ಸಮಾಜ, ಸಮೂಹ ಮಾದ್ಯಮಗಳು ಜವಾಬ್ದಾರಿ ನಿರ್ವಹಿಸುವಲ್ಲಿ ಸೋತಿದೆ ಎಂದು ಹಿರಿಯ ಪತ್ರಕರ್ತ ವಿರೂಪಾಕ್ಷಪ್ಪ ಪಂಡಿತ್ ವಿಷಾದ ವ್ಯಕ್ತ ಪಡಿಸಿದರು. ಅವರು ನಿನ್ನೆ ಇಲ್ಲಿನ ಕುವೆಂಪು ಕನ್ನಡ ಭವನದಲ್ಲಿ ಕರ್ನಾಟಕ ರತ್ನ ದಿ. ಡಾ/ವಿಷ್ಣುವರ್ಧನ್ ರವರ ಜನ್ಮದಿನಾಚರಣೆ ಹಾಗೂ ಗಾಯಕ ದಿ. ಎಸ್.ಪಿ ಬಾಲಸುಬ್ರಹ್ಮಣ್ಯಂ ಹಾಗೂ ದಿ. ಪುನೀತ್ ರಾಜಕುಮಾ‌ರ್ ಸಂಸ್ಮರಣೆ ಆಂಗವಾಗಿ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್, ಐಕ್ಯತಾ ಸಾಸ್ಕೃತಿಕ ಅಕಾಡೆಮಿ ,ಅಕ್ಷರ ನ್ಯೂಸ್ ಯೂಟೂಬ್ ಚಾನಲ್, ವಿಷ್ಣುವರ್ಧನ್ ಅಭಿಮಾನಿಗಳ ಸಂಘದ ಆಶ್ರಯದಲ್ಲಿ ಹಮ್ಮಿಕೊಂಡಿದ್ದ ಗೀತ ನಮನ ರಸಮಂಜರಿ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಪಾಲ್ಗೊಂಡು ಮಾತನಾಡುತ್ತಿದ್ದರು. ಯುವಜನರನ್ನ ಮೊಬೈಲ್ ಓದುವ ಸಂಸ್ಕೃತಿಯಿಂದ ದೂರ ತಳ್ಳಿದೆ. ಪರಿಣಾಕಾರಿಯಾದ ಮಾದ್ಯಮವಾದ ಸಿನಿಮಾ ಮತ್ತು ಅದರ ಸಾಹಿತ್ಯ ಕೂಡ ಲಾಂಗು ಮಚ್ಚು ಗಳನ್ನು ಹಿಡಿಯಲು ಯುವಜನರಿಗೆ ಪ್ರೇರೇಪಿಸುತ್ತಿವೆ ಸಾಮಾನ್ಯ ಜನರಿಗೆ ಮೇಲ್ಪಂಕ್ತಿ ಹಾಕಿಕೊಡಬೇಕಾದ ಸಿನಿಮಾ ನಟರು ಬಾಯಲ್ಲಿ ಹೇಳಿ ಕೇಸರಿ ಎಂದು ಜಾಹೀರಾತು ನೀಡಿ ಯುವಜನರ ಬದುಕನ್ನು ಕೆಸರು ಮಾಡುತ್ತಿದ್ದಾರೆ. ಇಂತಹ ಸಿನಿಮಾ ನಟರಿಂದ ಸಮಾಜ ಏನು ಕಲಿಯಬೇಕು? ಒಬ್ಬ ರೌಡಿ ಸ...

ಬಳ್ಳಾರಿಯ ಪ್ರತಿಭೆ, ಮುಖ್ಯ ಶಿಕ್ಷಕ ಎಚ್ .ತಿಪ್ಪೇಸ್ವಾಮಿಗೆ ಉತ್ತಮ ಶಿಕ್ಷಕ ಪ್ರಶಸ್ತಿ.

ಇಮೇಜ್
ಯಾದಗಿರಿ ಜಿಲ್ಲೆಯ, ತಾಲೂಕಿನ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆ ಮಾವಿನಹಳಿಯ ಪ್ರಭಾರ ಮುಖ್ಯಗುರುಗಳಾದ ತಿಪ್ಪೇಸ್ವಾಮಿ.ಹೆಚ್ ಅವರಿಗೆ ತಾಲೂಕು ಮಟ್ಟದ ಉತ್ತಮ ಶಿಕ್ಷಕ ಪ್ರಶಸ್ತಿ ಲಭಿಸಿದೆ.  ಜಿಲ್ಲಾಡಳಿತ ಮತ್ತು ಜಿಲ್ಲಾ ಪಂಚಾಯತಿ ಯಾದಗಿರಿ ಹಾಗೂ ಕ್ಷೇತ್ರ ಶಿಕ್ಷಣಾಧಿಕಾರಿಗಳ ಕ್ಷೇತ್ರ ಸಮನ್ವಯ ಅಧಿಕಾರಿಗಳ ಕಾರ್ಯಾಲಯ ಶಾಲಾ ಶಿಕ್ಷಣ ಇಲಾಖೆ ಯಾದಗಿರಿ ನೇತೃತ್ವದಲ್ಲಿ 2025 26 ನೇ ಸಾಲಿನ ತಾಲೂಕು ಮಟ್ಟದ ಶಿಕ್ಷಕರ ದಿನಾಚರಣೆ ಮತ್ತು ಉತ್ತಮ ಶಿಕ್ಷಕರಿಗೆ ಸನ್ಮಾನ ಸಮಾರಂಭ ಬಸವೇಶ್ವರ ಕಲ್ಯಾಣ ಮಂಟಪದಲ್ಲಿ ಶನಿವಾರ ಕಾರ್ಯಕ್ರಮ ನಡೆಯಿತು  ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆ ಮಾವಿನಹಳಿಯ ಆವರಣದಲ್ಲಿ ಪ್ರಭಾರ ಮುಖ್ಯಗುರುಗಳಾದ ಇವರು 101 ಮರಗಳ ನೆಟ್ಟು ನೀರು ಹಾಕಿ ಪೋಷಿಸಿದ್ದಾರೆ.ಇನ್ನು ತಿಪ್ಪೇಸ್ವಾಮಿ.ಹೆಚ್ ಅವರು ಮಕ್ಕಳೊಂದಿಗೆ ಮಕ್ಕಳಂತೆ ಇದು ಉತ್ತಮವಾಗಿ ಸೃಜನಾತ್ಮಕವಾಗಿ, ಮಾನವೀಯ ಮೌಲ್ಯಗಳೊಂದಿಗೆ, ಪ್ರಾಯೋಗಿಕ ಬೋಧನೆ ಮಾಡಿ ಗಮನ ಸೆಳೆದಿದ್ದಾರೆ.  ಮೂಲತಃ ಬಳ್ಳಾರಿ ಗ್ರಾಮಾಂತರ ಸಿಂಧವಾಳ ಗ್ರಾಮದ ದಂಪತಿ ಧರ್ಮ ರೆಡ್ಡಿ, ರೇಣಕಮ್ಮ ಅವರ ಎರಡನೇ ಪುತ್ರ ರಾಗಿದ್ದಾರೆ. ಈ ಎಲ್ಲಾ ಸಾಧನೆಗೆ ತಂದೆ ತಾಯಿಗಳು ಮತ್ತು ಪೋಷಕರು ಹಾಗೂ ಯಾದಗಿರಿ ಜಿಲ್ಲೆಯ ಶಿಕ್ಷಣ ಇಲಾಖೆ ಅಧಿಕಾರಿಗಳು ಮತ್ತು ಸಿಬ್ಬಂದಿ ವರ್ಗದವರು ಶಿಕ್ಷಕರು ಪ್ರೋತ್ಸಾಹಕ್ಕೆ ಧನ್ಯವಾದಗಳು ತಿಳಿಸಿದ್ದಾರೆ. ಈ ಸಮಯದಲ್ಲಿ ಬಾಬುರಾವ್ ಚಿಂಚನಸೂರು, ಶಾಸಕರಾದ ಚನ್ನ ...

ಬಳ್ಳಾರಿ ಜಿಲ್ಲೆಯ ಕನ್ನಡದ ಹೊಸ ಕಾವ್ಯ ಪ್ರವರ್ತಕರು ಹಿ.ಮ.ನಾಗಯ್ಯ

ಇಮೇಜ್
  ಕೊಟ್ಟೂರು : ಕನ್ನಡ ಸಾಹಿತ್ಯ ಲೋಕದಲ್ಲಿ ಬಳ್ಳಾರಿ ಜಿಲ್ಲೆಯಲ್ಲಿ ಮೊದಲಿಗೆ ಹೊಸ ಕಾವ್ಯವನ್ನು ರಚಿಸಿದ್ದ ದಿ.ಹಿ.ಮ.ನಾಗಯ್ಯನವರು ಅಂದಿನ ದಿನಗಳಲ್ಲಿ ಹೊಸ ಕಾವ್ಯದ ಪ್ರವರ್ತಕರಾಗಿ ಹೊರ ಹೊಮ್ಮಿದ್ದರು ಎಂದು ಹೊಸಪೇಟೆಯ ಶಿಕ್ಷಕ ಬಿ.ಎಂ.ರಾಜಶೇಖರ ಹೇಳಿದರು. ಪಟ್ಟಣದ ಶ್ರೀ ರೇಣುಕ ಸಭಾಭವನದಲ್ಲಿ ತಾಲೂಕು ಕ.ಸಾ.ಪ. ಆಯೋಜಿಸಿದ್ದ ದಿ.ಹಿ.ಮ.ನಾಗಯ್ಯನವರ ಜನ್ಮ ಶತಮಾನೋತ್ಸವ ಕಾರ್ಯಕ್ರಮದಲ್ಲಿ ಅವರು ಶನಿವಾರ ವಿಶೇಷ ಉಪನ್ಯಾಸ ನೀಡಿದರು.  ಕೂಡ್ಲಿಗಿ ತಾಲೂಕಿನ ಹಿರೇಕುಂಬಳಕುAಟೆ ಗ್ರಾಮದ ಹಿ.ಮ.ನಾ.ಅವರು, ಕವಿ ಮತ್ತು ಕವಿತೆ ಬೇರೆ ಅಲ್ಲ ಎಂದು ಭಾವಿಸಿದ್ದರಿಂದಲೇ ಅವರ ಸಾಹಿತ್ಯ ಸರಳ ಭಾಷೆಯಲ್ಲಿದೆ. ಪತ್ರಕರ್ತರಾಗಿ, ಸ್ವಂತ ಪತ್ರಿಕೆ ನಡೆಸಿ, ಬೆಂಗಳೂರು ಮಹಾ ನಗರ ಪಾಲಿಕೆ ಸದಸ್ಯರಾಗಿ, ಆಸ್ತಿ ತೆರಿಗೆ ಸಮಿತಿ ಅಧ್ಯಕ್ಷರಾಗಿ ಸೇವೆ ಸಲ್ಲಿಸಿದ್ದ ಅವರು ರಾಮಕೃಷ್ಣ ಹೆಗಡೆಯವರಿಗೆ ಆತ್ಮೀಯರಾಗಿದ್ದ ಅವರಿಗೆ ದೊಡ್ಡ ರಾಜಕೀಯ ನಂಟು ಇದ್ದರೂ ಆಮಿಷಕ್ಕೊಳಗಾಗದೇ ಕೊನೆವರೆಗೂ ಸರಳ ಜೀವನ ನಡೆಸಿದ್ದರು ಎಂದರು. ಬಳ್ಳಾರಿ ಜಿಲ್ಲೆಯಲ್ಲಿ ಕನ್ನಡ ಶಾಲೆಗಳನ್ನು ತೆರೆದು, ಭಾಷೆ ಬೆಳಸಿ ರಾಜ್ಯದಲ್ಲಿಯೇ ಉಳಿಯುವಂತೆ ಮಾಡಿದ ಕೀರ್ತಿ ಹಿರಿಯ ಸಾಹಿತಿ ನಾಗೇಶಶಾಸ್ತಿçಗಳಿಗೆ ಸಲ್ಲುತ್ತದೆ. ಅದರಂತೆ ಸಾಹಿತ್ಯ ಕ್ಷೇತ್ರದಲ್ಲಿ ಹೊಸ ಕಾವ್ಯ ರಚನೆ ಆರಂಭವಾಗಿದ್ದರೂ ಜಿಲ್ಲೆಯಲ್ಲಿ ಮೊದಲಿಗೆ ಹೊಸ ಕಾವ್ಯ ರಚಿಸಿದ್ದ ಕೀರ್ತಿ ಹಿ.ಮ.ನಾ.ರದ್ದಾಗಿದೆ. ಸ್ವಾತಂತ್ರö್ಯ ಹೋ...

"ದೇಶದ ಅಭಿವೃದ್ಧಿಗೆ ಕೈಗಾರಿಕೆಗಳು ಅಗತ್ಯವಿದ್ದು ಉದ್ಯೋಗ ಸೃಷ್ಟಿಯಾಗುತ್ತವೆ" : ಸಂಸದ ರಾಜಶೇಖರ ಹಿಟ್ನಾಳ ಕಿರ್ಲೋಸ್ಕರ್ ಕಾರ್ಖಾನೆಯ ಸಾಮಾಜಿಕ ಸೇವೆ ಅನುಕರಣೀಯ

ಇಮೇಜ್
ವರದಿ - ಮಂಜುನಾಥ ಕೋಳೂರು ಕೊಪ್ಪಳ ಕೊಪ್ಪಳ ಸೆ- 18 : - ತಾಲೂಕಿನ ಬೇವಿನಹಳ್ಳಿಯ ಕಿರ್ಲೋಸ್ಕರ್ ಫೆರಸ್ ಕಂಪನಿಯ ಗ್ರಾಮೀಣ ಅಭಿವೃದ್ಧಿ ಸಂಸ್ಥೆಯ ವತಿಯಿಂದ ನಗರದ ಮಧುಶ್ರೀ ಗಾರ್ಡನ್ ನಲ್ಲಿ ಗುರುವಾರ ಏರ್ಪಡಿಸಿದ ಶಿಬಿರದಲ್ಲಿ 395 ಜನರು ಆರೋಗ್ಯ ತಪಾಸನೆ ಮಾಡಿಸಿಕೊಂಡರು . ಕಿರ್ಲೋಸ್ಕರ್ ಗ್ರಾಮೀಣ ಅಭಿವೃದ್ಧಿ ಸಂಸ್ಥೆ , ಹುಬ್ಬಳ್ಳಿಯ ವಿಹಾನ್ ಹೃದಯ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ , ಸ್ಥಳೀಯ ಕೆ. ಎಸ್. ಆಸ್ಪತ್ರೆ , ರೆಡ್ ಕ್ರಾಸ್ ಸಂಸ್ಥೆ , ಸರ್ವೋದಯ ಸಮಗ್ರ ಗ್ರಾಮೀಣ ಅಭಿವೃದ್ಧಿ ಸಂಸ್ಥೆಯ ಸಂಯೋಗದಲ್ಲಿ ಶಿಬಿರವನ್ನು ಸಂಸದ ರಾಜಶೇಖರ ಹಿಟ್ನಾಳ ಉದ್ಘಾಟಿಸಿದರು. ನಂತರ ಮಾತನಾಡಿದ ಅವರು ಯಾವುದೇ ಊರು, ರಾಜ್ಯ , ದೇಶ ಅಭಿವೃದ್ದಿಯಾಗಬೇಕಾದರೆ ಕಾರ್ಖಾನೆಗಳು ಅವಶ್ಯಕ. ಕಾರ್ಖಾನೆಗಳ ಸ್ಥಾಪನೆಯಿಂದ ಉದ್ಯೋಗಗಳು ಸೃಷ್ಟಿಯಾಗುತ್ತವೆ ಕಾರ್ಖಾನೆಗಳ ಮೂಲಕ ಎಲ್ಲ ರೀತಿಯ ಅಭಿವೃದ್ದಿ ಸಾಧ್ಯವಾಗುತ್ತದೆ. ಯಾವುದೇ ಕಾರ್ಖಾನೆಯಿಂದ 90% ರಷ್ಟು ಒಳಿತಾದರೆ 10% ಕೆಡಕು ಇದ್ದದ್ದೇ ಹಾಗಂತ ನಾವು ಎಲ್ಲಾ ಕಾರ್ಖಾನೆಗಳನ್ನು ವಿರೋದಿಸುವುದಕ್ಕಾಗುವುದಿಲ್ಲ. ಕೊಪ್ಪಳ ಜಿಲ್ಲೆಗೆ ಕಾರ್ಖಾನೆಗಳು ಬರುತ್ತಿವೆ. ಎಲ್ಲರ ಅಭಿಪ್ರಾಯ ಎಂದರೆ ಜನವಸತಿ ಪ್ರದೇಶದಿಂದ ಈ ಕಾರ್ಖಾನೆಗಳು ದೂರ ಇರಬೇಕು ಎನ್ನುವದು ಎಂದು ಹೇಳಿದರು.   ಕಿರ್ಲ...

*ಸರ್ಕಾರದಿಂದ ಕೈ ಬಿಟ್ಟು ಹೋದ ಮಾಜಿ ದೇವದಾಸಿಯರ ಸರ್ಕಾರದ ಆದೇಶದಂತೆ ಸಮೀಕ್ಷೆ ಮಾಡಲು ಅಧಿಕಾರಿಗಳಿಗೆ ಕಟ್ಟುನಿಟ್ಟಿನ ಸೂಚನೆ ನೀಡಿದ. ಶಾಸಕರಾದ ಎನ್ ಟಿ ಶ್ರೀನಿವಾಸ್*

ಇಮೇಜ್
ವಿಜಯನಗರ ಜಿಲ್ಲೆ ಕೂಡ್ಲಿಗಿ ಪಟ್ಟಣದ ಪ್ರವಾಸಿ ಮಂದಿರದಲ್ಲಿ ಆಯೋಜನೆ ಮಾಡಲಾಗಿದ್ದ ಮಕ್ಕಳ ಮತ್ತು ಮಹಿಳಾ ಕಲ್ಯಾಣ ಇಲಾಖೆಯ ವತಿಯಿಂದ ಹಾಗೂ ತಾಲೂಕು ಆಡಳಿತ ಇವರ ಸಮ್ಮುಖದಲ್ಲಿ ಮಾನ್ಯ ಶಾಸಕರಾದ ಎನ್‌.ಟಿ ಶ್ರೀನಿವಾಸ್ ಇವರ ಅಧ್ಯಕ್ಷತೆಯಲ್ಲಿ ನಡೆದ ಮಾಜಿ ದೇವದಾಸಿ ಸಮೀಕ್ಷೆಯ ಕುರಿತು ಕೂಡ್ಲಿಗಿ ತಾಲೂಕಿನ ನೂರಾರು ಮಾಜಿ ದೇವದಾಸಿಯರ ಸಮ್ಮುಖದಲ್ಲಿ ಹಾಗೂ ಹಲವು ಇಲಾಖೆಗಳ ಸಮ್ಮುಖದಲ್ಲಿ ಈ ಹಿಂದೆ ಸರ್ಕಾರಿ ಅಧಿಕಾರಿಗಳು ಕೈ ಬಿಟ್ಟು ಹೋದ ಮಾಜಿ ದೇವದಾಸಿಯರ ಮರು ಸಮೀಕ್ಷೆ ಮಾಡಲು ಮಕ್ಕಳ ಮತ್ತು ಮಹಿಳಾ ಕಲ್ಯಾಣ ಇಲಾಖೆ,ಹಾಗೂ ತಾಲೂಕಾಡಳಿತ,ತಾಲೂಕು ಪಂಚಾಯಿತಿ, ಸಮಾಜ ಕಲ್ಯಾಣ ಇಲಾಖೆ, ಹೀಗೆ ಹಲವು ಇಲಾಖೆಗಳ ಸಮ್ಮುಖದಲ್ಲಿ ಮರು ಸಮೀಕ್ಷೆ ಮಾಡಲು ಸರ್ಕಾರ ಆದೇಶ ಹೊರಡಿಸಿದ್ದು.  ಸರ್ಕಾರದ ಆದೇಶದಂತೆ ಮಾಜಿ ದೇವದಾಸಿಯ ಮಹಿಳೆಯರನ್ನು ಸರ್ಕಾರದ ನಿಯಮಗಳ ಪ್ರಕಾರ ಫಲಾನುಭವಿಗಳ ದಾಖಲಾತಿಗಳನ್ನು ಒಳಗೊಂಡಂತೆ ಆನ್ಲೈನ್ ಡಾಟಾ ಮೂಲಕ ಸಮೀಕ್ಷೆ ಪೂರ್ಣಗೊಳಿಸಲಾಗುತ್ತದೆ. ಎಂದು ಸಿಡಿಪಿಓ ಇಲಾಖೆ ಅಧಿಕಾರಿಯಾದ ಮಾಲಂಬಿ ರವರು ತಿಳಿಸಿದರು.  ಹಾಗೆ ಈ ಒಂದು ಸಮೀಕ್ಷೆಗೆ ಸರ್ಕಾರವು ಮಾಜಿದೇವದಾಸಿಯರ ಸರ್ವೆ ಪಟ್ಟಿಗೆ ಸೇರ್ಪಡೆಯಾಗಲು ಅರ್ಹತೆಗೆ ಹಲವು ದಾಖಲಾತಿಗಳನ್ನು ಒಳಗೊಂಡಂತೆ ಸೇರ್ಪಡೆ ಮಾಡಲಾಗುವುದು ಎಂಬ ಆದೇಶವಿದ್ದು,   ಈ ಸಂದರ್ಭದಲ್ಲಿ ಮಾನ್ಯ ಶಾಸಕರು ತಾಲೂಕಿನ ದೇವದಾಸಿ ತಾಯಂದಿರ ಅನೇಕ ಸಮಸ್ಯೆಗಳ ಸವಾಲುಗಳನ್ನು ಹರಿತು ಸರ್ಕಾರ...

ಖಾಸಗಿ ಶಿಕ್ಷಣ ಸಂಸ್ಥೆಗಳ ಕೊಡುಗೆ ಅಪಾರ : ಶಾಸಕ ಬಸವನಗೌಡ ತುರುವಿಹಾಳ

ಇಮೇಜ್
  ಮಸ್ಕಿ : ಖಾಸಗಿ ಶಿಕ್ಷಣ ಸಂಸ್ಥೆಗಳ ಕೊಡುಗೆ ಅಪಾರ ವಾಗಿದೆ ಕಲ್ಯಾಣ ಕರ್ನಾಟಕ ಭಾಗ ಸೇರಿ ರಾಜ್ಯದ ಖಾಸಗಿ ಶಿಕ್ಷಣ ಸಂಸ್ಥೆಗಳ ಎಲ್ಲ ಬೇಡಿಕೆಗಳನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರ ಪ್ರಾಮಾಣಿಕವಾಗಿ ಈಡೇರಿಸಿದೆ' ಎಂದು ಶಾಸಕ, ಖಾದಿ ಗ್ರಾಮೋದ್ಯೋಗ ಮಂಡಳಿ ಅಧ್ಯಕ್ಷ ಆರ್. ಬಸನಗೌಡ ತುರ್ವಿಹಾಳ ಹೇಳಿದರು.  ಪಟ್ಟಣದ ಭ್ರಮರಾಂಬ ದೇವಸ್ಥಾನದಲ್ಲಿ ಮಸ್ಕಿ ತಾಲ್ಲೂಕು ಖಾಸಗಿ ಶಿಕ್ಷಣ ಸಂಸ್ಥೆಗಳ ಆಡಳಿತ ಮಂಡಳಿ ಸದಸ್ಯರ‌ ಸಂಘದ ವತಿಯಿಂದ ನಾಲ್ಕನೇ ವರ್ಷದ ಶಿಕ್ಷಕರ ದಿನಾಚರಣೆ ಹಾಗೂ ಉತ್ತಮ ಶಿಕ್ಷಕರಿಗೆ ಪ್ರಶಸ್ತಿ ಪ್ರಧಾನ ಸಮಾರಂಭ ಉದ್ಘಾಟಿಸಿ ಅವರು ಮಾತನಾಡಿದ ಅವರು ಖಾಸಗಿ ಶಾಲೆ ಕಾಲೇಜು ಗಳು  ಶಿಕ್ಷಣದ ಗುಣಮಟ್ಟ ಹೆಚ್ಚಿಸುವಲ್ಲಿ ಮಹತ್ವದ ಪಾತ್ರವನ್ನು ನಿರ್ವಹಿಸುತ್ತದೆ ಎಂದು ಮೆಚ್ಚುಗೆ ವ್ಯಕ್ತಿ ಪಡಿಸಿದರು. ರಾಜ್ಯದಲ್ಲಿ ಅಧಿಕಾರಕ್ಕೆ ಬಂದ ಕಾಂಗ್ರೆಸ್ ಸರ್ಕಾರ ಶಿಕ್ಷಣಕ್ಕೆ ಹೆಚ್ಚು ಒತ್ತು ನೀಡಿದೆ.ಸಮಾಜದಲ್ಲಿ ಶಿಕ್ಷಕರಿಗೆ ಇರುವ ಸ್ಥಾನಮಾನ ಯಾರಿಗೂ ಇಲ್ಲಾ ಶಿಕ್ಷಕರು ತಮ್ಮ ಸ್ಥಾನಮಾನಗಳಿಗೆ ಧಕ್ಕೆಯಾಗದಂತೆ ಕರ್ತವ್ಯ ನಿರ್ವಹಿಸಬೇಕು ಎಂದರು.‌ ಇದೇ ಸಂದರ್ಭದಲ್ಲಿ ಮಸ್ಕಿ ಚರ್ಚ್ ಫಾಧರ್ಫಾ|| ಕ್ಷೇವಿಯರ್ ರವಿ,ರೋಪ್ಸೊ ಜಿಲ್ಲೆ ಅಧ್ಯಕ್ಷ ಶ್ರೀ ನಿವಾಸ, ಪುರಸಭೆ ಅಧ್ಯಕ್ಷ ಮಲ್ಲಯ್ಯ ಅಂಬಾಡಿ, ಉಪಾಧ್ಯಕ್ಷೆ ಗೀತಾ ಶಿವರಾಜ ಬುಕ್ಕಣ್ಣ, ಕ್ಷೇತ್ರ ಶಿಕ್ಷಣಾಧಿಕಾರಿ ಸುಜಾತ, ವೆಂಕಟರೆಡ್ಡಿ ಹಾಲ...

"ಕಲ್ಯಾಣ ಕರ್ನಾಟಕ ಉತ್ಸವ: ಇತಿಹಾಸ ಮತ್ತು ಮಹತ್ವ"

ಇಮೇಜ್
ಕೊಟ್ಟೂರು ತಾಲೂಕು ಉಜ್ಜನಿ :-ಕಲ್ಯಾಣ ಕರ್ನಾಟಕ ಉತ್ಸವವು ಕರ್ನಾಟಕದ ಈಶಾನ್ಯ ಭಾಗದ (ಹಿಂದಿನ ಹೈದರಾಬಾದ್ ಕರ್ನಾಟಕ) ಸ್ವಾತಂತ್ರ್ಯ ಹೋರಾಟದ ಸ್ಮರಣಾರ್ಥವಾಗಿ ಆಚರಿಸುವ ವಾರ್ಷಿಕ ದಿನಾಚರಣೆಯಾಗಿದೆ.  ಬುಧವಾರದಂದು  ಭಾರತದ ಸ್ವಾತಂತ್ರ್ಯದ ನಂತರವೂ ನಿಜಾಮರ ಆಳ್ವಿಕೆಯಿಂದ ಮುಕ್ತರಾಗಲು ನಡೆದ ಹೋರಾಟದ ತ್ಯಾಗ ಮತ್ತು ಬಲಿದಾನಗಳನ್ನು ನೆನಪಿಸುತ್ತದೆ. ಪ್ರತಿ ವರ್ಷ ಸೆಪ್ಟೆಂಬರ್ 17 ರಂದು ಆಚರಿಸಲಾಗುತ್ತದೆ, ಮತ್ತು ಇಂದು (ಸೆಪ್ಟೆಂಬರ್ 17, 2025) ಇದರ 77ನೇ ವಾರ್ಷಿಕೋತ್ಸವವಾಗಿದೆ. ಸರ್  ಕೊಟ್ಟೂರು ತಾಲೂಕು ಉಜ್ಜಿನಿ ಗ್ರಾಮ ಪಂಚಾಯತ್ ನಲ್ಲಿ ಕರ್ನಾಟಕ ವಿಮೋಚನಾ ಧ್ವಜಾರೋಹಣ ಕಾರ್ಯಕ್ರಮವನ್ನು ಗ್ರಾಮ ಪಂಚಾಯಿತಿ ಅಧ್ಯಕ್ಷರಾದ ಶ್ರೀ ಬಿ ಚೌಡಪ್ಪ ಇವರು ಧ್ವಜಾರೋಹಣವನ್ನು ನೇರವೇರಿಸಿದರು.  ಗ್ರಾಮ ಪಂಚಾಯತಿ ಸರ್ವ ಸದಸ್ಯರುಗಳು ಸಿಬ್ಬಂದಿ  ವರ್ಗದವರು ಹಾಜರಿದ್ದರು

"ಅನಾಥಾಶ್ರಮದಲ್ಲಿ ಬಿಜೆಪಿ ಕಾರ್ಯಕರ್ತರಿಂದ ನರೇಂದ್ರ ಮೋದಿ ಜನ್ಮದಿನ ಆಚರಣೆ "

ಇಮೇಜ್
*ದೇಶ ಧರ್ಮ ಪರಂಪರೆಯ ಉಳಿವಿಗಾಗಿ ಕಂಕಣಕಟ್ಟಿನಿಂತ ಮಹಾ ನಾಯಕ ನರೇಂದ್ರ ದಾಮೋದರ್ ದಾಸ್ ಮೋದಿಯವರ ಅರ್ಥಪೂರ್ಣ ಜನ್ಮದಿನ ಆಚರಣೆ ಮಾಡಿದರು* ಕೊಟ್ಟೂರು : ಧರ್ಮಕ್ಕೆ ಆಪತ್ತು ಬಂದಾಗ ನಾನು ಹುಟ್ಟಿಬರುತ್ತೇನೆ ಎಂದು ಭಗವಂತ ಹೇಳಿರುವಂತೆ ನರೇಂದ್ರ ಮೋದಿಯವರನ್ನು ನೋಡಿದಾಗ ಆ ಭಗವಂತನೇ ನರೇಂದ್ರ ಮೋದಿಯವರ ರೂಪದಲ್ಲಿ ಬಂದು ಧರ್ಮ ರಕ್ಷಣೆ ಹಾಗೂ ದೇಶ ರಕ್ಷಣೆ ಮಾಡುತ್ತಿದ್ದಾರೆ ಎಂದು ಕೊಟ್ಟೂರು ನಗರ ಘಟಕ ಅಧ್ಯಕ್ಷ ರಾದ ಪಂಪಾಪತಿ ಅಂಗಡಿ ಹೇಳಿದರು ಅವರು ಇಲ್ಲಿನ ರುದ್ರಮ್ಮ ಅನಾಥ ಆಶ್ರಮ ದಲ್ಲಿ ನರೇಂದ್ರ ಮೋದಿಯವರ 75ನೇ ಹುಟ್ಟು ಹಬ್ಬದ ಪ್ರಯುತ ಬಿಜೆಪಿ ಹಮ್ಮಿಕೊಂಡಿದ್ದ ಸೇವಾ ಪಾಕ್ಷಿಕ ಕಾರ್ಯಕ್ರಮದಲ್ಲಿ ಮಾತನಾಡಿದರು ಪಟ್ಟಣ ಪಂಚಾಯತ್ ಸದಸ್ಯರಾದ ಬೋರ್ ವೆಲ್ ತಿಪ್ಪೇಸ್ವಾಮಿ ಮಾತನಾಡಿ ನರೇಂದ್ರ ಮೋದಿ ನಾಯಕತ್ವದಿಂದ ದೇಶ ಶಕ್ತಿಶಾಲಿಯಾಗಿದೆ ಎಂದರು ಪಟ್ಟಣ ಪಂಚಾಯತ್ ಉಪಾಧ್ಯಕ್ಷರಾದ ಜಿ ಸಿದ್ದಯ್ಯ. ಮಹಿಳಾ ಘಟಕ ಅಧ್ಯಕ್ಷೆ ಉಮಾ ದೇವರಮನಿ . ವಿಷ್ಣು ಮಣಿಕಂಠ ಮಾತನಾಡಿದರು ಕಾರ್ಯಕ್ರಮದಲ್ಲಿ ಪ್ರಧಾನಕಾರ್ಯದರ್ಶಿ ಅಭಿಷೇಕ್. ಬಿಜೆಪಿ ನಗರ ಘಟಕ ಉಪಾಧ್ಯರಾದ ಬಿ ಆರ್ ಕುಮಾರ್. ಪ್ರಸನ್ನ ಮೂಲಿಮನಿ. ರೈತ ಮೋರ್ಚಾ ಅಧ್ಯಕ್ಷ ಕೆಎಸ್ ರುದ್ರೇಶ್. ಕಾರ್ಯದರ್ಶಿ ಚಂದ್ರು.ವಿನಾಯಕ. ಬಸವರಾಜ್ C. ವಿಶ್ವನಾಥ್ ಬಿ ಎಸ್ . ಬಸವರಾಜ್ ಕೋನಪುರ್ ಕಲ್ಲೇಶ್. ಅರವಿಂದ್.ಸೂರಜ್ ನೆಲಕುದ್ರೆ ಜಗದೀಶ್.ರಾಣಾಮಲ್ ಜೈನ ಮಹಿಳಾ ಘಟಕದ ಶ್ರೀಮತಿ ಪ್ರೇಮಕ್ಕ ಮತ್ತು ಇತರರು...

*ಊಟದ ಜೋಳ ಮತ್ತು ಮೆಕ್ಕೆಜೋಳ ಖರೀದಿ ಕೇಂದ್ರಕ್ಕೆ ಆಗ್ರಹ*

ಇಮೇಜ್
  ಕೊಟ್ಟೂರು ಸ 16: ಕೊಟ್ಟೂರು ತಾಲೂಕು ಕಾರ್ಯಾಲಯದ ಮುಂದೆ ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ರಾಜ್ಯ ಉಪಾಧ್ಯಕ್ಷರಾದ ಎನ್ ಭರಮಣ್ಣನವರು ಊಟದ ಜೋಳ ಮೆಕ್ಕೆಜೋಳ ಖರೀದಿ ಕೇಂದ್ರ ಶೀಘ್ರದಲ್ಲಿ ತೆರೆಯಬೇಕು. ಕೊಟ್ಟೂರು ಮತ್ತು ಸುತ್ತಮುತ್ತಲಿನ ಹಳ್ಳಿಗಳಲ್ಲಿ ಪ್ರಸಕ್ತ 2025-26ನೇ ಸಾಲಿನಲ್ಲಿ ಕೊಟ್ಟೂರು ತಾಲೂಕಿನ ರೈತರು ಊಟದ ಜೋಳ, ಮೆಕ್ಕೆಜೋಳ ಬೆಳೆದಿದ್ದು ಇಂದಿನ ವರ್ಷ ಸರ್ಕಾರದಿಂದ ರೂ 3370 ಬೆಂಬಲ ಬೆಲೆ ಖರೀದಿಸಿದ್ದು, ಆದರೆ ಈ ವರ್ಷ ಇನ್ನೂ ಖರೀದಿ ಕೇಂದ್ರ ತೆರೆದಿರುವುದಿಲ್ಲ. ಎಪಿಎಂಸಿ ಮಾರುಕಟ್ಟೆಯ ಖರೀದಿದಾರರು ಕ್ವಿಂಟಲ್ಲಿಗೆ 1500 ರಿಂದ 2000 ರೂ. ಬರೆಯುತ್ತಿರುವುದರಿಂದ ರೈತರು ತುಂಬಾ ನಷ್ಟ ಅನುಭವಿಸುತ್ತಿದ್ದಾರೆ ಕಾರಣ ಕೂಡಲೇ ಖರೀದಿ ಕೇಂದ್ರ ತೆರೆದು ರೈತರು ಬೆಳೆದ ಊಟದ ಜೋಳ, ಮೆಕ್ಕೆಜೋಳ ಖರೀದಿಸಿ ಮತ್ತು ಕೊಟ್ಟೂರ ತಾಲೂಕಿನ ಈರುಳ್ಳಿ ಬೆಳೆಗಾರರಿಗೆ ಅನ್ಯಾಯವಾಗಿರುವುದನ್ನು ಗಮನಿಸಿ ಈರುಳ್ಳಿ ಬೆಳೆದ ರೈತರ ಹೊಲಕ್ಕೆ ಗ್ರಾಮ ಲೆಕ್ಕಾಧಿಕಾರಿಗಳ ಕಳುಹಿಸಿ ಸರ್ಕಾರಕ್ಕೆ ವರದಿ ಒಪ್ಪಿಸಿ ಒಂದು ಎಕ್ಕರಿಗೆ ಒಂದು ಲಕ್ಷ ರೂಪಾಯಿ ಪರಿಹಾರ ನೀಡುವುದರ ಮೂಲಕ ರೈತರಿಗೆ ನ್ಯಾಯ ಒದಗಿಸಬೇಕೆಂದು ಕರ್ನಾಟಕ ರಾಜ್ಯ ರೈತ ಸಂಘದ ರಾಜ್ಯ ಉಪಾಧ್ಯಕ್ಷರಾದ ಎನ್ ಭರಮಣ್ಣ ಹಾಗೂ ಶ್ರೀಧರ ಎಸ್ ಒಡೆಯರ್ ತಾಲೂಕು ಅಧ್ಯಕ್ಷರು ಹಾಗೂ ಸಂಘದ ಸದಸ್ಯರುಗಳು ಹಾಗೂ ರೈತ ಮುಖಂಡರು ಗ್ರೇಡ್ 2 ತಹಸಿಲ್ದಾರರ ಮೂಲಕ ಮಾನ್ಯ ಜಿಲ್ಲಾಧಿಕಾರಿಗೆ ಮನವಿ...

* ಕಲ್ಯಾಣ ಕರ್ನಾಟಕ ಉತ್ಸವ ಪಟ್ಟಣ ಪಂಚಾಯಿತಿ ವತಿಯಿಂದ ಧ್ವಜಾರೋಹಣ ಕಾರ್ಯಕ್ರಮ*

ಇಮೇಜ್
ಕೊಟ್ಟೂರು ಪಟ್ಟಣ ಪಂಚಾಯಿತಿಯಲ್ಲಿ ಮುಖ್ಯಾಧಿಕಾರಿಗಳು ಹಾಗೂ ಅಧ್ಯಕ್ಷರು , ಉಪಾಧ್ಯಕ್ಷರು ಮತ್ತು ಸರ್ವ ಸದಸ್ಯರು, ಸಿಬ್ಬಂದಿಗಳು ಉಪಸ್ಥಿತಿಯಲ್ಲಿ ಕಲ್ಯಾಣ ಕರ್ನಾಟಕ ಉತ್ಸವ ಪ್ರಯುಕ್ತ ಧ್ವಜಾರೋಹಣ ಕಾರ್ಯಕ್ರಮ ಬುಧವಾರ ನೆರವೇರಿಸಲಾಯಿತು ಹಾಗೂ ಸ್ವಚ್ಛತಾ ಇ ಸೇವೆಯ ಪ್ರತಿಜ್ಞಾವಿಧಿಯನ್ನು ತೆಗೆದುಕೊಳ್ಳಲಾಯಿತು. ಈ ಸಂದರ್ಭದಲ್ಲಿ ವಿಶ್ವಕರ್ಮ ಜಯಂತಿಯನ್ನು ಆಚರಣೆ ಮಾಡಲಾಯಿತು.

"ಪಟ್ಟಣದ ವ್ಯಾಪ್ತಿಯಲ್ಲಿ ಸ್ವಚ್ಛೋತ್ಸವ ಕಾರ್ಯಕ್ರಮ"

ಇಮೇಜ್
ಕೊಟ್ಟೂರು : ಸರ್ಕಾರದ ಆದೇಶದಂತೆ 2025ರ ದಿನಾಂಕ 17- 9- 2025 ರಿಂದ ಅಕ್ಟೋಬರ್ 2 ರವರಿಗೆ ಸ್ವಚ್ಛೋತ್ಸವ ಕಾರ್ಯಕ್ರಮ ಬುಧವಾರದಂದು ನಡೆಸಲಾಗುತ್ತಿದೆ    ಕೊಟ್ಟೂರು ಪಟ್ಟಣದ ವ್ಯಾಪ್ತಿಯಲ್ಲಿ ಬರುವಂತಹ ವಿದ್ಯಾನಗರ ಬಡಾವಣೆಯಲ್ಲಿ ಇರುವ ಪಾರ್ಕ್ ನಲ್ಲಿ ಪಟ್ಟಣ ಪಂಚಾಯಿತಿಯ ಮುಖ್ಯ ಅಧಿಕಾರಿಗಳು ಮತ್ತು ಡಿಎಸ್ಎಸ್ ಮುಖಂಡರಾದ ಮರಿಸ್ವಾಮಿಯವರು ಹಾಗೂ ಪೌರಕಾರ್ಮಿಕ ಮತ್ತು ಕಚೇರಿ ಸಿಬ್ಬಂದಿಯವರು ಎಲ್ಲರೂ ಸಹ ಸ್ವಚ್ಛತಾ ಕಾರ್ಯದಲ್ಲಿ ಭಾಗವಹಿಸಿ ಸ್ವಚ್ಛತಕರನ್ನು ಕೈಗೊಳ್ಳಲಾಯಿತು.

ಕೊಟ್ಟೂರೇಶ್ವರ ಮಹಾವಿದ್ಯಾಲಯದಲ್ಲಿ ಕಲ್ಯಾಣ ಕರ್ನಾಟಕ ಉತ್ಸವ

ಇಮೇಜ್
  ಕೊಟ್ಟೂರು : ಕೊಟ್ಟೂರೇಶ್ವರ ಮಹಾವಿದ್ಯಾಲಯದಲ್ಲಿ ದಿನಾಂಕ 17-09-2025 ರಂದು ಕಲ್ಯಾಣ ಕರ್ನಾಟಕ ಉತ್ಸವವನ್ನು ಭಾವಪೂರ್ಣವಾಗಿ ಆಚರಿಸಲಾಯಿತು. ಈ ಕಾರ್ಯಕ್ರಮದಲ್ಲಿ ಮಹಾವಿದ್ಯಾಲಯದ ಪ್ರಾಂಶುಪಾಲರಾದ ಡಾ. ಎಂ. ರವಿಕುಮಾರ್ ಅವರು ಧ್ವಜಾರೋಹಣ ನೆರವೇರಿಸಿ ಅಧ್ಯಕ್ಷತೆ ವಹಿಸಿದರು. ತಮ್ಮ ಅಧ್ಯಕ್ಷೀಯ ಭಾಷಣದಲ್ಲಿ ಅವರು ಕಲ್ಯಾಣ ಕರ್ನಾಟಕ ಹಾಗೂ ಹೈದರಾಬಾದ್ ವಿಮೋಚನಾ ದಿನಾಚರಣೆ ಕುರಿತು ವಿದ್ಯಾರ್ಥಿಗಳಿಗೆ ಮನದಟ್ಟು ಮಾಡಿಕೊಟ್ಟರು. ಹೈದರಾಬಾದ್ ನಿಜಾಂ ಉಸ್ಮಾನ್ ಅಲಿ ಖಾನ್ ಹಾಗೂ ರಜಾಕ್‌ಕಾರರು ಜನರ ಮೇಲೆ ನಡೆಸಿದ ದಬ್ಬಾಳಿಕೆ, ಅಹಿಂಸೆ, ಲೈಂಗಿಕ ದೌರ್ಜನ್ಯ ಮುಂತಾದ ಹಿಂಸೆಗಳನ್ನು ವಿವರಿಸಿದರು. ಅವರು ಮುಂದುವರೆದು “ಉಕ್ಕಿನ ಮನುಷ್ಯ” ಸರ್ದಾರ್ ವಲ್ಲಭಭಾಯಿ ಪಟೇಲ್ ಹಾಗೂ ಡಾ. ಬಿ.ಆರ್. ಅಂಬೇಡ್ಕರ್ ಅವರ ಪಾತ್ರವನ್ನು ನೆನಪಿಸಿಕೊಂಡರು. ಪಟೇಲ್ ಅವರ ಕಠಿಣ ರಾಜಕೀಯ ತೀರ್ಮಾನಶಕ್ತಿ ಹಾಗೂ ಆಪರೇಷನ್ ಪೋಲೋ ಮೂಲಕ ನಿಜಾಂ ಆಡಳಿತವನ್ನು ಕೊನೆಗೊಳಿಸಲಾಯಿತು. ಅದೇ ವೇಳೆ ಡಾ. ಅಂಬೇಡ್ಕರ್ ಅವರು ಭಾರತದ ಸಂವಿಧಾನದಲ್ಲಿ ಕಲಂ 371(ಜ) ಮೂಲಕ ಕಲ್ಯಾಣ ಕರ್ನಾಟಕ ಪ್ರದೇಶಕ್ಕೆ ವಿಶೇಷ ಹಕ್ಕುಗಳು, ಶೈಕ್ಷಣಿಕ ಹಾಗೂ ಆರ್ಥಿಕ ಅಭಿವೃದ್ಧಿ ಅವಕಾಶಗಳನ್ನು ಒದಗಿಸುವ ದಾರಿ ಮಾಡಿಕೊಟ್ಟರು ಎಂದು ಹೇಳಿದರು. ಅವರು “ಅಂಬೇಡ್ಕರ್ ಅವರ ದೃಷ್ಟಿಕೋನವೇ ಹಿಂದುಳಿದ ವರ್ಗದ ಜನರಿಗೆ ನ್ಯಾಯ, ಶಿಕ್ಷಣ ಹಾಗೂ ಉದ್ಯೋಗದಲ್ಲಿ ಸಮಾನಾವಕಾಶ ಕಲ್ಪಿಸುವ ಕೆಲಸ ಮಾಡಿತು” ಎಂದು ವಿದ್...

ಕಲೆ ಮತ್ತು ವಾಸ್ತಶಿಲ್ಪ ಕ್ಷೇತ್ರಕ್ಕೆ ವಿಶ್ವಕರ್ಮರ ಕೊಡುಗೆ ಅಪಾರ : ತಹಶೀಲ್ದಾರ್ ನಾಗರಾಜ್

ಇಮೇಜ್
ಮಸ್ಕಿ: ವಿಶ್ವಕರ್ಮ ಸಮುದಾಯವು ಲೋಕವನ್ನು ವೈಭವೀಕರಿಸುವ ಸಾಂಸ್ಕೃತಿಕ ಪರಂಪರೆ, ಕಲೆ ಮತ್ತು ವಾಸ್ತಶಿಲ್ಪ ಕ್ಷೇತ್ರಕ್ಕೆ ವಿಶ್ವಕರ್ಮರ ಕೊಡುಗೆ ಅಪಾರವಾಗಿದೆ ಎಂದು ಗುಡದೂರು ಹೋಬಳಿಯ ಉಪ ತಹಶೀಲ್ದಾರ ನಾಗರಾಜ್ ರವರು ತಿಳಿಸಿದರು. ತಾಲೂಕಿನ ಗುಡದೂರು ಗ್ರಾಮದ ನಾಡ ಕಚೇರಿಯಲ್ಲಿ ಕಂದಾಯ ನಿರಿಕ್ಷರು,ಗ್ರಾಮ ಲೆಕ್ಕ ಅಧಿಕಾರಿಗಳು, ಆಪರೇಟರ್ ಸಿಬ್ಬಂದಿಗಳ ಸಮ್ಮುಖದಲ್ಲಿ ವಿಶ್ವಕರ್ಮ ಭಾವಚಿತ್ರಕ್ಕೆ ಪುಷ್ಪಾರ್ಚನೆ ನೆರವೇರಿಸಿ ಅವರು ಮಾತನಾಡಿದರು.  ಹಾಗೆಯೇ ಪಟ್ಟಣದ ಪುರಸಭೆ ಮುಂಭಾಗದ ವಿಶ್ವಕರ್ಮ ವೃತ್ತಕ್ಕೆ ಮಾದೇವಪ್ಪಗೌಡ ಪೊಲೀಸ್ ಪಾಟೀಲ್, ಪುರಸಭೆ ಸದಸ್ಯರಾದ ರವಿಗೌಡ ಪೊಲೀಸ್ ಪಾಟೀಲ, ಚೇತನ ಪಾಟೀಲ,ಸಂತೋಷ ಪತ್ತಾರ, ಪೂಜೆ ಸಲ್ಲಿಸಿ ಸರಳವಾಗಿ ವಿಶ್ವ ಕರ್ಮ ಜಯಂತಿ ಯನ್ನು ಆಚರಣೆ ಮಾಡಲಾಯಿತು. ನಂತರ ಪಿ.ಎಂ.ಶ್ರೀ ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಧನಗರವಾಡಿ ಯಲ್ಲಿ,ಪುರಸಭೆ, ಕೃಷಿ ಪತ್ತಿನ ಸಹಕಾರಿ ಯಲ್ಲಿ,ಶ್ರೀ ಕಾಳಿಕಾದೇವಿ ದೇವಸ್ಥಾನದಲ್ಲಿ,ಕಾಂಗ್ರೆಸ್, ಬಿಜೆಪಿ ಪಕ್ಷದ ಕಛೇರಿಯಲ್ಲಿ, ಹಾಗೂ ತಾಲೂಕಿನ ಸಮಾಜ ಕಲ್ಯಾಣ ಇಲಾಖೆ ಅಡಿಯಲ್ಲಿ ಅಡವಿಭಾವಿ ತಾಂಡಾದಲ್ಲಿ ಕಾರ್ಯ ನಿರ್ವಹಿಸುತ್ತಿರುವ ಭಾರತ ರತ್ನ  ಡಾ.ಅಂಬೇಡ್ಕರ್ ವಸತಿ ಶಾಲೆ,ಜೋಗಿನ ರಾಮಣ್ಣ ಸ್ಮಾರಕ ಪ್ರಾಥಮಿಕ, ಪ್ರೌಢಶಾಲಾ,ಉನ್ನತಿ ಕರಿಸಿದ ಸ. ಹಿ,ಪ್ರಾ.ಶಾಲೆ ಜಂಗಮರ ಹಳ್ಳಿ, ಎಸ್ ರಾಮಲದಿನ್ನಿ, ತುಗ್ಗಲದಿನ್ನಿ, ಜಿನ್ನಾಪುರ, ಉದ್ಬಾಳ, ಸ.ಹಿ.ಪ್ರಾ. ಶಾಲೆ ಕರಿಗುಡ್ಡ(ಮೆ...

ದಲಿತ ಮಹಿಳೆಗೆ ಅವಹೇಳನ ಆರೋಪ : ಯತ್ನಾಳ್ ವಿರುದ್ಧ ಎಫ್ಐಆರ್

ಇಮೇಜ್
   ವರದಿ - ಮಂಜುನಾಥ್ ಕೋಳೂರು, ಕೊಪ್ಪಳ  ಕೊಪ್ಪಳ ಸೆಪ್ಟಂಬರ್ 17 : - ದಲಿತ ಮಹಿಳೆ ಬಗ್ಗೆ ಅವಹೇಳನಕಾರಿಯಾಗಿ ಹೇಳಿಕೆ ನೀಡಿದ ಆರೋಪದ ಮೇಲೆ ವಿಜಯಪುರ ಕ್ಷೇತ್ರದ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ವಿರುದ್ಧ ಇಲ್ಲಿನ ನಗರ ಪೊಲೀಸ್ ಠಾಣೆಯಲ್ಲಿ ಮಂಗಳವಾರ ಎಫ್ಐಆರ್ ದಾಖಲಾಗಿದೆ .  ಯತ್ನಾಳ್ ಸುದ್ದಿ ವಾಹಿನಿ ಯೊಂದಕ್ಕೆ' ನಾಡ ಹಬ್ಬದ ದಸರಾ ಉದ್ಘಾಟನೆ ಮಾಡುತ್ತಿರುವವರ ಬಗ್ಗೆ ಹೇಳಿಕೆ ನೀಡುವ ಬರದಲ್ಲಿ ಯತ್ನಾಳ್ ಸನಾತನ ಧರ್ಮದವರು ಮಾತ್ರ ದಸರಾದಲ್ಲಿ ಚಾಮುಂಡಿ ದೇವಿಗೆ ಹೂ ಮುಡಿಸಬೇಕು ಹೊರತು ದಲಿತ ಮಹಿಳೆಗೂ ಇದಕ್ಕೆ ಅವಕಾಶವಿಲ್ಲ 'ಎಂದಿದ್ದರು.  'ದಲಿತ ಮಹಿಳೆಯರಿಗೆ ಹೂ ಮುಡಿಸಲು ಅವಕಾಶವಿಲ್ಲ ಎಂದು ಬಹಿರಂಗವಾಗಿ ಹೇಳಿಕೆ ನೀಡುವ ಮೂಲಕ ದಲಿತ ಸಮುದಾಯಕ್ಕೆ ಅವರು ಅವಮಾನ ಮಾಡಿದ್ದಾರೆ ಯತ್ನಾಳ್ ನಿತ್ಯ ಪ್ರಚೋದನಕಾರಿ ಹಾಗೂ ಕೋಮು ಸಂಘರ್ಷದ ಹೇಳಿಕೆಗಳನ್ನು ನೀಡುತ್ತಿದ್ದು ,  ಅವರ ವಿರುದ್ಧ ಕಾನೂನು ಕ್ರಮ ಜರುಗಿಸಬೇಕು' ಎಂದು ದಲಿತ ಸಮುದಾಯದ ಯುವ ಮುಖಂಡ ಮಲ್ಲಿಕಾರ್ಜುನ ಪೂಜಾರ ನೀಡಿದ ದೂರಿನ ಮೇರೆಗೆ ಪರಿಶಿಷ್ಟ ಜಾತಿ/ ಪರಿಶಿಷ್ಟ ಪಂಗಡದ ದೌರ್ಜನ್ಯ ತಡೆ ಕಾಯ್ದೆ-1989( U/s- 3(1)(s); ಹಾಗೂ ಭಾರತೀಯ ನ್ಯಾಯ ಸಹಿತ( ಬಿ ಎನ್ ಎಸ್) 2023 (U/s -352) ಕಾಯ್ದೆಅಡಿಯಲ್ಲಿ ಎಫ್ಐಆರ್ ದಾಖಲಾಗಿದೆ.

ಕಿರ್ಲೋಸ್ಕರ್ ಫೆರಸ್ ಗ್ರಾಮೀಣ ಅಭಿವೃದ್ಧಿ ಸಂಸ್ಥೆಯಿಂದ ಆರೋಗ್ಯ ತಪಾಸನೆ ಹಾಗೂ ರಕ್ತದಾನ ಶಿಬಿರ

ಇಮೇಜ್
   ವರದಿ - ಮಂಜುನಾಥ್ ಕೋಳೂರು,  ಕೊಪ್ಪಳ ಕೊಪ್ಪಳ ಸೆ 17 : - ತಾಲೂಕಿನ ಬೇವಿನಹಳ್ಳಿಯ ಕಿರ್ಲೋಸ್ಕರ್ ಫೆರಸ್ ಗ್ರಾಮೀಣಾಭಿವೃದ್ಧಿ ಸಂಸ್ಥೆ ವತಿಯಿಂದ ಉಚಿತ ಆರೋಗ್ಯ ತಪಾಸನೆ ಮತ್ತು ರಕ್ತದಾನ ಶಿಬಿರವನ್ನು ನಗರದ ಹೊಸಪೇಟೆ ರಸ್ತೆಯಲ್ಲಿರುವ ಮಧುಶ್ರೀ ಗಾರ್ಡನ್ ನಲ್ಲಿ ಗುರುವಾರ ಸೆ .18 ರಂದು ಹಮ್ಮಿಕೊಳ್ಳಲಾಗಿದೆ. ಹುಬ್ಬಳ್ಳಿಯ ವಿಹಾನ್ ಹೃದಯ ಮತ್ತು ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ , ನಗರದ ಸ್ಥಳೀಯ ಕೆ .ಎಸ್. ಆಸ್ಪತ್ರೆ ,ರೆಡ್ ಕ್ರಾಸ್ ಸಂಸ್ಥೆ , ಭಾರತೀಯ ವೈದ್ಯಕೀಯ ಸಂಸ್ಥೆ , ಸರ್ವೋದಯ ಸಮಗ್ರ ಗ್ರಾಮೀಣಾಭಿವೃದ್ಧಿ ಸಂಸ್ಥೆಯ ಸಯೋಗದಲ್ಲಿ ಶಿಬಿರ ನಡೆಯುತ್ತದೆ .  ಅಂದು ಬೆಳಗ್ಗೆ 9:00 ಗಂಟೆಯಿಂದ ಸಂಜೆ 4:00 ವರೆಗೆ ನಡೆಯುವ ಶಿಬಿರದಲ್ಲಿ 30 ರಿಂದ 45 ವಯೋಮಾನದವರಿಗೆ ಹೃದಯ ತಪಾಸನೆ , 45 ವರ್ಷ ಮೇಲ್ಪಟ್ಟವರಿಗೆ ಮೂಳೆ ಸಾಂದ್ರತೆಯ ತಪಾಸನೆ ಹಾಗೂ ರಕ್ತದಾನ ಮಾಡಲಾಗುವುದು. ತಪಾಸನಿಗೆ ಬರುವವರು ಕಡ್ಡಾಯವಾಗಿ ಆಧಾರ್ ಕಾರ್ಡನ್ನು ಜೊತೆಯಲ್ಲಿತರಬೇಕು. ಮಾಹಿತಿಗಾಗಿ :- ದೀಪ ಸುನಿಲ ಸಿ.ಇ.ಓ ಸರ್ವೋದಯ ಸಂಸ್ಥೆ - 8123045345 , ಡಾಕ್ಟರ್ ಪ್ರವೀಣ್ ಕುಮಾರ್ ಮೆಡಿಕಲ್ ಆಫೀಸರ್ ಕಿರ್ಲೋಸ್ಕರ್ -8123142049 , ದೇವರಾಜ್ .ಕೆ.ಎನ್ ನರ್ಸಿಂಗ್ ಆಫೀಸರ್ ಕಿರ್ಲೋಸ್ಕರ್- 9449613425 , ಉಮೇಶ್ ಎಚ್. ಆರ್. ಎಸ್ . ಓ.ಕಿರ್ಲೋಸ್ಕರ್ -94...

ಹಕ್ಕು ಪತ್ರ ವಿತರಿಸಿ 22 ವರ್ಷಗಳೇ ಗತಿಸಿದರೂ ನಿವೇಶನ ಭಾಗ್ಯ ಸಿಗದ ಫಲಾನುಭವಿಗಳು ಮುಖ್ಯಾಧಿಕಾರಿ ಮನವಿ ಸಲ್ಲಿಕೆ

ಇಮೇಜ್
ಮಸ್ಕಿ : ಪಟ್ಟಣದ ಪುರಸಭೆ ವ್ಯಾಪ್ತಿಯ ಲಿಂಗಸುಗೂರು ರಸ್ತೆಯಲ್ಲಿನ ಸರ್ವೆ ನಂ 32 ರಲ್ಲಿ 6 ಎಕರೆ ಜಮೀನಿನಲ್ಲಿ 2003-2004 ನೇ ಸಾಲಿನಲ್ಲಿ 151 ಫಲಾನುಭವಿಗಳಿಗೆ ಹಕ್ಕು ಪತ್ರ ನೀಡಿದ್ದು,ಜಮೀನನ್ನು ಅಕ್ಕ-ಪಕ್ಕ ಇರುವ ಜಮೀನು ಮಾಲೀಕರು ಜಾಗವನ್ನು ಒತ್ತುವರಿ ಮಾಡಿಕೊಂಡಿದ್ದು ಅದನ್ನು ತೆರವುಗೊಳಿಸಿ ಮೂಲಭೂತ ಸೌಕರ್ಯಗಳನ್ನು ಒದಗಿಸ ಬೇಕು ಎಂದು  ಕರ್ನಾಟಕ ದಲಿತ ಸಂಘರ್ಷ ಸಮಿತಿ ದಾದಾ ಸಾಹೇಬ್ ಡಾ ಎನ್.ಮೂರ್ತಿ ಸ್ಥಾಪಿತ ನಗರ ಘಟಕ ಮಸ್ಕಿ ವತಿಯಿಂದ ಪುರಸಭೆ ಮುಖ್ಯಾಧಿಕಾರಿಗೆ ಮನವಿ ಪತ್ರವನ್ನು ಸಲ್ಲಿಸಲಾಯಿತು. ಪಟ್ಟಣ ಪಂಚಾಯತ ಸಂದರ್ಭದಲ್ಲಿ ನಿವೇಶನ ಸಹಿತ 151 ಮನೆಗಳ ಪೈಕಿ 2001-2002 ನೇ ಸಾಲಿನ ನವಗ್ರಾಮ ಯೋಜನೆಯಲ್ಲಿ 50 ಮತ್ತು ಎ.ಸಿ.ಎ ಯೋಜನೆಯಲ್ಲಿ 100 ಮನೆಗಳು ಮಂಜುರಾಗಿದ್ದವು, ಅದರಂತೆ 151 ಫಲಾನುಭವಿಗಳಿಗೆ ಆಶ್ರಯ ಯೋಜನೆಯಡಿಯಲ್ಲಿ 151 ಮನೆಗಳನ್ನು ಕಳಪೆಕಾಮಗಾರಿ ನಿರ್ಮಾಣ ಮಾಡಿದ್ದು, ಮನೆಗಳು ವಾಸಕ್ಕೆ ಯೋಗ್ಯವಾಗಿರುವುದಿಲ್ಲ. ಲೋಕೋಪಯೋಗಿ ಇಲಾಖೆಯಿಂದ ಧೃಡೀಕರಣ ಪಡೆದು ಸದರಿ ಮನೆಗಳನ್ನು ಪುರಸಭೆ ವತಿಯಿಂದ ನೆಲಸಮಮಾಡಿರುತ್ತಾರೆ. ಸುಮಾರು 20ವರ್ಷವಾದರು ಇನ್ನು ಫಲಾನುಭವಿಗಳಿಗೆ ಹಕ್ಕು ಪತ್ರ ಮಾತ್ರ ಸಿಕ್ಕಿದ್ದು ಇನ್ನು ತಮ್ಮ ಜಾಗಗಳನ್ನು ಗುರುತಿಸಲಿಕ್ಕೆ ಸಾಧ್ಯವಾಗುತ್ತಿಲ್ಲ ಇದಕ್ಕೆ ಸಂಬಂಧಪಟ್ಟ ಪುರಸಭೆ ಅಧಿಕಾರಿಗಳನ್ನು ಕೇಳಿದರೆ ಅಲ್ಲಿ ಮೂಲಭೂತ ಸೌಕರ್ಯಗಳ ಕೊರತೆ ಇರುವದರಿಂದ ವಾಸಕ್ಕೆ ಯೋಗ್ಯವಿಲ್ಲವೆಂದು ತಿಳಿಸಿ...

ದಸರಾ ಉದ್ಘಾಟನೆಗೆ ಬಾನು ಮುಸ್ತಾಕ್ ಆಯ್ಕೆ ಸರ್ಕಾರ ನಿರ್ಧಾರದ ವಿರುದ್ಧ ಜನರ ಆಕ್ರೋಶ-ತಕ್ಷಣದ ಕ್ರಮಕ್ಕೆ ಮಸ್ಕಿ ಯುವ ಬ್ರಿಗೇಡ್ ಮನವಿ.

ಇಮೇಜ್
  ಮಸ್ಕಿ : ದಸರಾ ಉದ್ಘಾಟನೆಗೆ ಬಾನು ಮುಸ್ತಾಕ್ ಅವರನ್ನು ಆಹ್ವಾನಿಸಿರುವ ಸರ್ಕಾರದ ನಿರ್ಧಾರದ ವಿರುದ್ಧ ಜನರ ಆಕ್ರೋಶ-ತಕ್ಷಣದ ಕ್ರಮಕ್ಕೆ ಒತ್ತಾಯಿಸಿ ಮಸ್ಕಿ ಯುವ ಬ್ರಿಗೇಡ್ ವತಿಯಿಂದ ಮಾನ್ಯ ರಾಜ್ಯಪಾಲರು ರಾಜಭವನ, ಬೆಂಗಳೂರು ಇವರಿಗೆ ತಹಶೀಲ್ದಾರರ ಮೂಲಕ ಮನವಿಯನ್ನು ಸಲ್ಲಿಸಿದರು. ದಸರಾ ಹಬ್ಬವು ನಮ್ಮ ಸಂಸ್ಕೃತಿ ಮತ್ತು ನಮ್ಮ ನಂಬಿಕೆಯ ಗುರುತು. ನಮ್ಮ ಪರಂಪರೆಯ ಪ್ರತೀಕವಾದ ದಸರಾ ಹಬ್ಬದಲ್ಲೂ ರಾಜಕೀಯ ತಂದು, ಹಿಂದೂಗಳ ಭಾವನೆಗೆ ಧಕ್ಕೆ ತರುವ ಹಕ್ಕು ಯಾರಿಗೂ ಇಲ್ಲ. ಆದರೆ ಮುಖ್ಯಮಂತ್ರಿಗಳ ನೇತೃತ್ವದ ರಾಜ್ಯ ಸರ್ಕಾರವು ಜನರ ಭಾವನೆ ಮತ್ತು ನಾಡಿನ ಪರಂಪರೆಯನ್ನು ಲೆಕ್ಕಿಸದೇ, ಹಿಂದೂಗಳ ಶ್ರದ್ದಾ ಭಾವನೆಯನ್ನು ಒಪ್ಪದ, ಗೌರವಿಸದ ಬಾನು ಮುತ್ತಾಕ್ ಅವರನ್ನು ದಸರಾ ಉದ್ಘಾಟನೆಗೆ ಆಹ್ವಾನಿಸುವ ಮೂಲಕ ನೇರವಾಗಿ ಜನರ ಹೃದಯಕ್ಕೆ ಹೊಡೆತ ಕೊಟ್ಟಿದೆ. ಈ ನಿರ್ಧಾರವನ್ನು ನಾವು ಸಹಿಸುವುದಿಲ್ಲ! ಸರ್ಕಾರದ ದುರಾಲೋಚನೆಯ ಈ ನಿರ್ಧಾರ ಜನರ ಕೋಪಕ್ಕೆ ಗುರಿಯಾಗಿದ್ದು, ಸಾರ್ವಜನಿಕರು ಬೀದಿಗಿಳಿದು ಪ್ರತಿಭಟಿಸಿ ಅನ್ಯಾಯದ ವಿರುದ್ಧ ಹೋರಾಡಲು ಸಜ್ಜಾಗಿದ್ದಾರೆ.ಆದ್ದರಿಂದ ರಾಜ್ಯ ಸರ್ಕಾರವು ತಕ್ಷಣ ತನ್ನ ನಿರ್ಧಾರವನ್ನು ಹಿಂಪಡೆಯಬೇಕು. ದಸರಾ ಉದ್ಘಾಟನೆಯ ಗೌರವವು ಹಿಂದೂ ಸಂಸ್ಕೃತಿ ಮತ್ತು ಪರಂಪರೆಯನ್ನು ಪ್ರತಿನಿಧಿಸುವವರ ಪಾಲಾಗಬೇಕು. ಇಲ್ಲದಿದ್ದರೆ ಸರ್ಕಾರವೇ ಜನರ ಕೋಪಕ್ಕೆ ಕಾರಣವಾಗಿ ನಮ್ಮ ಪರಂಪರೆಯನ್ನು ಉಳಿಸಿಕೊಳ್ಳುವ ಪ್ರತಿಭಟನೆಗಳು ರಾಜ್ಯವ್...

ಚಿಕ್ಕದಿನ್ನಿ : ಸ್ವಾಸ್ಥ್ಯ ಸಂಕಲ್ಪ ಕಾರ್ಯಕ್ರಮ ಯಶಸ್ವಿ

ಇಮೇಜ್
  ಮಸ್ಕಿ : ತಾಲೂಕಿನ ತೋರಣದಿನ್ನಿ ವಲಯದ ಚಿಕ್ಕದಿನ್ನಿಯಲ್ಲಿ ಕಾರ್ಯ ಕ್ಷೇತ್ರದಲ್ಲಿ ಸ್ವಾಸ್ಥ್ಯ ಸಂಕಲ್ಪ ಕಾರ್ಯಕ್ರಮ ಹಮ್ಮಿಕೊಂಡಿದ್ದು ಅವರು ದೀಪ ಬೆಳಗಿಸುವ ಮೂಲಕ ಕಾರ್ಯಕ್ರಮ ಪ್ರಾರಂಭ ಮಾಡಿದರು.    ಯೋಜನಾಧಿಕಾರಿಗಳು ಧರ್ಮಸ್ಥಳ ಗ್ರಾಮಾಭಿವೃದ್ಧಿ ವತಿಯಿಂದ ನೀಡಲಾಗುವ ಯೋಜನೆಗಳಿಂದ ಕಾರ್ಯಕ್ರಮಗಳ ಬಗ್ಗೆ ಮಾಹಿತಿ ನೀಡಿದರು. ಮಾನವ ಸಂಪನ್ಮೂಲ ವ್ಯಕ್ತಿ ಗಳಾದ ಶಾಂತಪ್ಪ ಅವರು ಮಕ್ಕಳು ದುಶ್ಚಟದಿಂದ ಹಾಗೂ ಮೊಬೈಲ್ ಬಳಕೆಯಿಂದ ದೂರ ಇರುವುದರ ಬಗ್ಗೆ ಮಾಹಿತಿ ನೀಡಿದರು. ಶಾಲೆಯ ಶಿಕ್ಷಕರು ಆದಂತಹ ಬಸವರಾಜ್ ಅವರು ನಮ್ಮ ಮಕ್ಕಳಿಗೆ ಯೋಜನೆಯಿಂದ ಹಾಗೂ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯಿಂದ ಸೌಲಭ್ಯಗಳು ಎಲ್ಲಾ ಮಕ್ಕಳಿಗೆ ಸಿಗಲಿ ಎಂದು ಹಾರೈಸಿದರು ಇದೇ ಸಂದರ್ಭದಲ್ಲಿ ಯೋಜನಾಧಿಕಾರಿ ಜಗದೀಶ್ ಬಂಡಾರಿ, ಜ್ಞಾನಾಕ್ಷಿ ವಿದ್ಯಾಲಯದ ಮುಖ್ಯೋಪಾಧ್ಯಾಯರಾದ ಶ್ವೇತಾ, ಮಾನವ ಸಂಪನ್ಮೂಲ ವ್ಯಕ್ತಿಗಳಾದ ಶಾಂತಪ್ಪ ವಲಯದ ಮೇಲ್ವಿಚಾರಕರು ಮತ್ತು ಮುದ್ದು ಮಕ್ಕಳು ಇದ್ದರು.

*ಲೋಕಾಯುಕ್ತ ದಾಳಿ ತಾಲೂಕು ಭೂ ದಾಖಲೆಗಳ ಕಚೇರಿ ಮೇಲೆ ದಾಳಿ, ಸಿಕ್ಕಿ ಬಿದ್ದ ಅಧಿಕಾರಿಗಳು*

ಇಮೇಜ್
ವಿಜಯ ನಗರ ಜಿಲ್ಲೆ ಕೂಡ್ಲಿಗಿ ತಾಲೂಕು ಭೂ ದಾಖಲೆಗಳ ಸಹಾಯಕ ನಿರ್ದೇಶಕರ ಕಚೇರಿ ಯಲ್ಲಿಗುರುವಾರ ಸಂಜೆ ಸಮಯ 5.30 ರ ವೇಳೆಯಲ್ಲಿ ಹೊಸಪೇಟೆ ಲೋಕಾಯುಕ್ತ ದಾಳಿ ಡಿ ವೈ ಎಸ್ ಪಿ ಸಚ್ಚಿನ್ ಎಸ್ ಚಲವಾದಿ ಇವರ ನೇತೃತ್ವದಲ್ಲಿ ದಾಳಿ ಈ ಸಂದರ್ಭದಲ್ಲಿ ಪಿ ಐ ಅಂಬ್ರೆಷ್, ಹೊಸಪೇಟೆ ಪಿ ಐ ಸುರೇಶ ಬಳ್ಳಾರಿ ಪಿ ಐ ರಾಜೇಶ್ ರವರು ಹಾಗೂ ದಾಳಿ ಭೂ ಮಾಪನ ಇಲಾಖೆಯ ಸಹಾಯಕ ನಿರ್ದೇಶಕ ತಮ್ಮ ಕಚೇರಿಯಲ್ಲಿ ಸರ್ವೆರ್ ನವೀನ್ ಕುಮಾರ ವಾಲಿ ಇವರು ಪಹಣಿ ಇಂಡಿಕರಣ ಮಾಡಲು 30 ಸಾವಿರ ರೂಪಾಯಿ ಒಪ್ಪಿಗೆ ಮಾಡಿಕೊಂಡು 20 ಸಾವಿರ ರೂಪಾಯಿಗಳು ತೆಗೆದು ಕೊಳ್ಳುತಿದ್ದ ಸಂದರ್ಭದಲ್ಲಿ ಶಿವಪುರ ಗ್ರಾಮದ ಬಾಗಳಿ ತೇಜಸ್,ಎಂಬ ವ್ಯಕ್ತಿಯ ಹತ್ತಿರ ತೆಗೆದು ಕೊಳ್ಳುತ್ತಿರುವ ಸಂದರ್ಭದಲ್ಲಿ ಲೋಕಾಯುಕ್ತರು ದಾಳಿ ನಡೆಸಿದ್ದಾರೆ. ಶಿವಪುರ ಗ್ರಾಮಕ್ಕೆ ಸೇರಿರುವಂತ ಭೂಮಿಯು ಎನ್ ಎಚ್ 50 ರಸ್ತೆಗೆ 28. ಸೆಂಟ್ಸ್ ಸೇರಿರುವಂತ ಪಹಣಿಯನ್ನು *ಇಂಡಿಕರಣ* ಮಾಡುವುದಕ್ಕೆ ಹಣಕ್ಕೆ ಬೇಡಿಕೆ ಇಟ್ಟಿದ್ದರು ಎನ್ನಲಾಗಿದೆ, ಆದರೆ ಎಲ್ಲಾ ದಾಖಲಾತಿಗಳು ಸರಿ ಇದ್ದರು ತಿಂಗಳವರೆಗೂ ಹಲೇದಾಡಿಸಿ ಕೊನೆಗೆ 45 ಸಾವಿರ ರೂಪಾಯಿ. ಹಣವನ್ನು ಕೇಳಿದ್ದಾರೆ ಎಂದು ಪಿರೇದಿದಾರ ವ್ಯಕ್ತಿ ತೇಜಸ್ ತಿಳಿಸಿರುತ್ತಾರೆ, ಹಾಗೆ ಎಡಿಎಲ್ ಆರ್ ವಿಜಯ್ ಕುಮಾರ್ ಇವರನ್ನು ಸಹ ಇವರ ಮೇಲೆ ಅಧಿಕಾರಿಗಳು ಹೆಚ್ಚಿನ ತನಿಖೆಗೆ ಮುಂದಾಗಿದ್ದಾರೆ

"ಕಾಳಾಪುರ ಪಿ.ಡಿ.ಓ. ಲಂಚ ಪಡೆದಿರುವುದು ಸುಳ್ಳು ಆರೋಪ "

ಇಮೇಜ್
ಕೊಟ್ಟೂರು : ಕಾಳಾಪುರ ಗ್ರಾಮ ಪಂಚಾಯಿತಿ ಮೂಲತಃ ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡದ ಬಡ ಕುಟುಂಬಗಳೇ ಹೆಚ್ಚಾಗಿದ್ದು, ತೆರಿಗೆ ವಸೂಲಾತಿಯು ಸಹ ಅಷ್ಟಕ್ಕಷ್ಟೇ ಇದೆ. ಪಂಚಾಯ್ತಿ ವ್ಯಾಪ್ತಿಯ ನೀರುಗಂಟಿ ಹಾಗೂ ಇತರೆ ಸಿಬ್ಬಂದಿಗಳಿಗೆ 5 ವರ್ಷಗಳಿಂದ  ಸರಿಯಾಗಿ ವೇತನ ಪಾವತಿ ಅಗದೆ ಕಾರಣ ಸಮಾನ್ಯ ಸಭೆಯಲ್ಲಿ ಅಡಳಿತತ್ಮಕ ಹಿತದೃಷ್ಟಿಯಿಂದ ಅಬಿವೃದ್ದಿ ಶುಲ್ಕ ಪಡಯುಲು ಸರ್ವಾನುಮತದಿಂದ ತೀರ್ಮಾನಿಸಲಾಯಿತು  ಆದ್ದರಿಂದ ಸಾತಾಳ ಮಂಜಪ್ಪ ಮತ್ತು ಕೊಲ್ಲಪ್ಪ ಅವರಿಂದ ೫೦೦೦ ರೂ. ಗಳನ್ನು ಪಡೆದು, ಸರ್ಕಾರದ ರಸೀದಿ ಕೊಟ್ಟಿದ್ದಾರೆ. ಆದರೆ ಮಾಹಿತಿ ತಿಳಿಯದೆ ಅನಕ್ಷರಸ್ಥರಾಗಿದ್ದು ವ್ಯಕ್ತಿಯಿಂದ  ಹಣ ಪಾವತಿ ಮಾಡಿದ ಬಗ್ಗೆ ತೇಜಾವಧೆ ಮಾಡಲಿಕ್ಕೆ ಅವರಿಗೆ ಬೇಕಾದ ವಿಡಿಯೋ ಪಡೆದು ಯುಟ್ಯೂಬ್‌ನಲ್ಲಿ ಲಂಚ ಪಡೆದಿದ್ದಾರೆಂದು ಸುಳ್ಳು ಆರೋಪ ಮಾಡಿದ್ದಾರೆ ಎಂದು ಗ್ರಾ.ಪಂ ಚುನಾಯಿತ ಪ್ರತಿನಿಧಿಗಳು  ಪತ್ರಿಕೆಗೆ ತಿಳಿಸಿದರು. ಭಾನುವಾರ ಮಧ್ಯಾಹ್ನ ಪತ್ರಿಕಾ ಗೋಷ್ಠಿಯಲ್ಲಿ ಮಾತನಾಡಿದ ಚುನಾಯಿತ ಪ್ರತಿನಿಧಿಗಳಾದ  ಅಧ್ಯಕ್ಷರು,ಉಪಧ್ಯಕ್ಷರು ಹಾಗೂ ಸರ್ವ ಸದಸ್ಯರು ನಮ್ಮ ಪಂಚಾಯಿತಿಯ ಪಿ.ಡಿ.ಓ. ಅವರು ಉತ್ತಮವಾಗಿ ಕೆಲಸ ಮಾಡುತ್ತಿದ್ದಾರೆ. ಅವರು ಯಾರಲ್ಲೂ ಯಾವುದೇ ಕೆಲಸಕ್ಕೂ ಹಣ ಪಡೆದಿಲ್ಲ. ಆಗದೇ ಇರುವವರು ಈ ರೀತಿ ಸುಳ್ಳು ಆರೋಪ ಮಾಡುತ್ತಿದ್ದಾರೆ. ಅಲ್ಲದೇ ಅವರು ಕೊಟ್ಟಿರುವ ೫೦೦೦ ರೂ.ಗಳಿಗೆ ಪಂಚಾಯಿತಿ ವತಿಯಿಂದ ಕೊಟ್ಟಿರುವ ರಸೀದಿ ಸಮೇ...

*ಅವಮಾನವೋ? ಅತಿರೇಖವೋ ..?

ಇಮೇಜ್
 *ಭಾವದಂಗಳ - 60* ನಾವೆಲ್ಲರೂ ಜೀವನದಲ್ಲಿ ಒಂದಲ್ಲ ಒಂದು ಬಾರಿ ಅವಮಾನ, ಟೀಕೆ, ಅಪಹಾಸ್ಯ, ನಿಂದನೆಗಳನ್ನು ಎದುರಿಸಿಯೇ ಇರುತ್ತೇವೆ. ಕೆಲವೊಂದನ್ನು ಮರೆತುಬಿಡುತ್ತೇವೆ ಆದರೆ ಇನ್ನು ಕೆಲವು ಮನಸ್ಸಿನಾಳದಲ್ಲಿ ಉಳಿದು ಹೃದಯವನ್ನು ಇಂಚಿಂಚಾಗಿ ಕೊಲ್ಲುತ್ತಿರುತ್ತದೆ. ನಮಗೆ ಅವಮಾನ ಮಾಡಿದವರು ಅದನ್ನು ಮರೆತರೂ ನಾವು ಮಾತ್ರ ಅದರ ಭಾರವನ್ನು ಹೊತ್ತುಕೊಂಡು ಒದ್ದಾಡುತ್ತೇವೆ. ಅವಮಾನಕ್ಕೆ ಸರಿಯಾದ ಉತ್ತರ ನೀಡಬೇಕು, ಸರಿಯಾದ ಪಾಠ ಕಲಿಸಬೇಕು ಎನ್ನುವ ಹಠಕ್ಕೆ ಬಿದ್ದು ಮನಸ್ಸಿನ ತುಂಬಾ ವಿಷವನ್ನು ತುಂಬಿಕೊಳ್ಳುತ್ತೇವೆ. ಈ ನಿಧಾನ ವಿಷವೇ ಮುಂದೊಂದು ದಿನ ನಮ್ಮ ಸರ್ವನಾಶಕ್ಕೆ ಕಾರಣವಾಗಬಹುದು ಎಂಬ ಕನಿಷ್ಠ ಪ್ರಜ್ಞೆಯೂ ಆ ಸಮಯದಲ್ಲಿ ಮೂಡುವುದಿಲ್ಲ.  *ಕಾಲಕ್ಕೆ ತಕ್ಕ ಬದಲಾಗುವ ಮನಸ್ಥಿತಿ* ಒಂದಂತೂ ಸತ್ಯ ನಮ್ಮ ಮನಸ್ಥಿತಿಗಳು ಕಾಲ ಗತಿಸಿದಂತೆ ಬದಲಾಗುತ್ತಾ ಹೋಗುವುದು. ದಶಕಗಳ ಹಿಂದೆ ಆಡಿದ ಮಾತಿನಲ್ಲಿ ಪಕ್ವತೆ ಇಲ್ಲದೆ ಇರಬಹುದು. ಅಂದಿನ ಮನಸ್ಥಿತಿಗೆ ತಕ್ಕಂತೆ ಇರುವ ನಮ್ಮ ಮಾತು, ವರ್ತನೆ, ನಡತೆ ಬಹಳ ಬಾಲಿಶವಾಗಿರಬಹುದು. ವಯಸ್ಸು ಬಲಿತಂತೆ ಮನಸ್ಸು ಬಲಿಯುವುದು.ನಮ್ಮ ಹಿಂದಿನ ನಡೆ, ನುಡಿ,ವರ್ತನೆಗೆ ನಾವೇ ನಾಚಿ ನಕ್ಕು ಬಿಡಬಹುದು. ಅಪಕ್ವ ಮನಸ್ಥಿತಿ ಕಾಲ ಕಳೆದಂತೆ ಪಕ್ವಗೊಳ್ಳುವುದು. ಬಾಲ್ಯದಲ್ಲಿ ತನ್ನ ಸ್ನೇಹಿತರನ್ನು ನಿಂದಿಸಿರುವುದು, ತನ್ನ ಮನೆಯಲ್ಲಿರುವ ಐಷಾರಾಮಿ ವಸ್ತುಗಳ ಬಗ್ಗೆ ಗರ್ವ ಪಟ್ಟಿರುವುದು, ತಾನು ಪಡೆದುಕೊಂಡ ಅಂಕ...

ವಿಜಯನಗರ ಜಿಲ್ಲಾ ಕವಿಗಳಿಂದ, 'ರೈತರ ಬಗ್ಗೆ' ಕವನ ರಚಿಸುವ ಜಿಲ್ಲಾ ಮಟ್ಟದ ಬೃಹತ್ ಕವಿಗಳ ಕಲರವ !

ಇಮೇಜ್
  ವಿಜಯನಗರ:- ಕೊಟ್ಟೂರು ತಾಲೂಕಿನ ಉಜ್ಜಿನಿ ಗ್ರಾಮದ ಗುಡ್ಡಪ್ಪ. ಬಿ ಜಿಲ್ಲಾಧ್ಯಕ್ಷರು ಕರ್ನಾಟಕ ವಿಕಾಸ ರಂಗ ವಿಜಯನಗರ ಜಿಲ್ಲೆ ವತಿಯಿಂದ ವಿಜಯನಗರ ಜಿಲ್ಲಾ ಕವಿಗಳಿಂದ ಏಕಕಾಲದಲ್ಲಿ 21 ನಿಮಿಷದೊಳಗೆ ರೈತರ ಬಗ್ಗೆ ಕವನ ರಚಿಸುವ ಜಿಲ್ಲಾ ಮಟ್ಟದ ಬೃಹತ್ ಕವಿಗಳ ಕಲರವ -2025 ಕಾರ್ಯಕ್ರಮವನ್ನು ಆಯೋಜಿಸಿದ್ದಾರೆ. ಪ್ರಮಾಣಿಕ ಮನಸ್ಸುಗಳ ಸಂಗಮವೇ! ಈ ಕಾರ್ಯಕ್ರಮದ ಆಶಯ, ಇದು ಸ್ಪರ್ಧೆ ಅಲ್ಲ ಜಿಲ್ಲೆಯ ನಾನಾ ಭಾಗಗಳ ಕವಿಗಳ ಸಂಗಮ ಮತ್ತು ನಮ್ಮ ಅನ್ನದಾತನಿಗೆ ಗೌರವ ಸಲ್ಲಿಸುವ ಸಂಭ್ರಮ ಭಾಗವಹಿಸುವ ಕವಿಗಳು ಕ. ವಿ. ರಂಗ ಸಮಿತಿ, ನಿಯಮಾವಳಿಗೆ ಒಳಪಟ್ಟು ಭಾಗವಹಿಸಲು ವಿನಂತಿಸಿಕೊಂಡಿದ್ದಾರೆ. ಭಾಗವಹಿಸುವ ಕವಿಗಳಿಗೆ ನಿಯಮಾವಳಿಗಳು:- 1) ರೈತರನ್ನು ಕುರಿತು ಕವನ ರಚಿಸಬೇಕು. 24 ಸಾಲುಗಳು ಮಿತಿಯಲ್ಲಿರಬೇಕು. 2) ನಿಗದಿಪಡಿಸಿದ ಅರ್ಧ ಗಂಟೆ ಮೊದಲೇ ಸಭಾಂಗಣದಲ್ಲಿ ಹಾಜರಿರಬೇಕು. 3) ಕರ್ನಾಟಕ ವಿಕಾಸ ರಂಗ, ನೀಡುವ ಬರವಣಿಗೆ ಪ್ರತಿಯಲ್ಲಿರುವ ಸೂಚನೆ ಪಾಲಿಸುತ್ತಾ ಅದರಲ್ಲಿಯೇ ಕವನ ರಚಿಸಬೇಕು. 4) ನಕಲು ‌ಮಾಡಿ ಬರೆಯುವ ಹಾಗಿಲ್ಲ. ಪ್ರಮಾಣಿಕ ಮನಸ್ಸಿನೊಂದಿಗೆ ಭಾಗವಹಿಸಬೇಕು. 5) ಭಾಗವಹಿಸುವ ಕವಿಗಳಿಗೆ ಪ್ರಶಸ್ತಿ ಪತ್ರದೊಂದಿಗೆ ಪುಸ್ತಕ ನೀಡಿ ಗೌರವಿಸಲಾಗುವುದು. 6) ಲಘು ಉಪಾಹಾರದ ವ್ಯವಸ್ಥೆ ಇರುತ್ತದೆ. 7) ಭಾಗವಹಿಸಲು ಇಚ್ಛಿಸುವ ಕವಿಗಳು ಪೂರ್ಣ ವಿಳಾಸದೊಂದಿಗೆ ಮೊದಲೇ ತಮ್ಮ ಹೆಸರು ನೋಂದಾಯಿಸಿಕೊಳ್ಳಬೇಕಾದ ದೂರವಾಣಿ ಸಂಖ್ಯೆ:- ಕರ್ನಾಟಕ ವ...

ಸಮಾಜಕ್ಕೆ ಉತ್ತಮ ಸೇವೆ ಸಲ್ಲಿಸಿ : ಸಿಪಿಐ ಪ್ರಹ್ಲಾದ್ ಆರ್ ಚನ್ನಗಿರಿ.

ಇಮೇಜ್
  ಸರಕಾರಿ ನೌಕರರು ಜನರ ಸೇವಕರು. ಇದನ್ನು ಸದಾ ನೆನಪಿನಲ್ಲಿ ಇಟ್ಟುಕೊಂಡು ಜನರಿಗೆ ಉತ್ತಮ ಸೇವೆ ನೀಡಬೇಕು.‌ ಇಂತಹ ವ್ಯಕ್ತಿಯನ್ನು ಮತ್ತು ಅವರ ಸೇವೆಯನ್ನು ಈ ಸಮಾಜ ಸದಾ ಸ್ಮರಿಸುತ್ತದೆ ಎಂದು ಕೂಡ್ಲಿಗಿ ಸಿಪಿಐ ಪ್ರಹ್ಲಾದ್ ಆರ್ ಚನ್ನಗಿರಿ ಹೇಳಿದರು. ಇವರು ಗುಡೇಕೋಟೆಯ ಪೊಲೀಸ್ ಠಾಣೆಯ ಆವರಣದಲ್ಲಿ ಸೋಮವಾರ ವಯೋ ನಿವೃತ್ತಿ ಹೊಂದಿದ ಎಎಸ್ಐ ಕೆ.ಹೆಚ್.ಯೋಗೇಶ್ ಇವರ ಬೀಳ್ಕೊಡುಗೆ ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಪೊಲೀಸ್ ಇಲಾಖೆ ಜನ ಸ್ನೇಹಿ ಆಗುತ್ತಿದೆ. ಇತ್ತೀಚೆಗೆ ಸರಕಾರ ಮನೆ ಮನೆ ಪೊಲೀಸ್ ಪರಿಕಲ್ಪನೆ ಜಾರಿಗೆ ತಂದಿದೆ. ಇವೆಲ್ಲ ನಾವು ಜನರ ಸೇವೆಗೆ ಮತ್ತಷ್ಟು ತೆರೆದುಕೊಳ್ಳುವ ಕ್ರಮಗಳು. ಇದರಿಂದಾಗಿ ನಮ್ಮ ಸೇವೆ ಜನರಿಗೆ ಸಕಾಲದಲ್ಲಿ ಸಿಗುವಂತಾಗಬೇಕು. ಜೊತೆಗೆ ನಿಮ್ಮ ಆರೋಗ್ಯ ಮತ್ತು ವ್ಯಕ್ತಿತ್ವದ ಉನ್ನತಿಯತ್ತ ಗಮನಹರಿಸಿ ಎಂದರು.‌ ಪಿಎಸ್ ಐ ಸುಬ್ರಮಣ್ಯಂ ಮಾತನಾಡಿ ಇಂದು ನಮ್ಮ ಕರ್ತವ್ಯದಲ್ಲಿ ಅನೇಕ ಸವಾಲುಗಳಿವೆ. ಅದನ್ನೆಲ್ಲ ಸಮರ್ಥವಾಗಿ ಎದುರಿಸಬೇಕು. ಅದಕ್ಕೆ ನಾವು ಸದಾ ಸಿದ್ಧರಿರಬೇಕು ಎಂದರು. ಈ ವೇಳೆ ವಯೋನಿವೃತ್ತಿ ಹೊಂದಿದ ಎಎಸ್ ಐ ಕೆ.ಹೆಚ್.ಯೋಗೇಶ್ ಇವರಿಗೆ ಇಲಾಖೆ, ಸಾರ್ವಜನಿಕರಿಂದ ಸನ್ಮಾನಿಸಿ, ಗೌರವಿಸಲಾಗಿತು. ಸಿಬ್ಬಂಧಿಗಳಾದ ಮಹಾಂತೇಶ್, ಮುತ್ತಣ್ಣ ಕಾಳಗಿ, ಸ್ವರೂಪ್ ಕೊಟ್ಟೂರು ತಮ್ಮ ಅನಿಸಿಕೆಗಳನ್ನು ಹಂಚಿಕೊಂಡರು. ಪ್ರಭುರಾಜ್ ಸಂಡೂರು, ವೀರೇಶ್ ಹಚ್ಚೋಳ್ಳಿ, ಬಂಗಾಳಿ ಓಬಯ್ಯ, ಕೃಷ್ಣಪ್ಪ, ರಾಮದುರ್ಗ ...

ಕ್ರಿಯಾಶೀಲರಾಗಲು ಕ್ರೀಡೆಗಳು ಸಹಕಾರಿ -ಕೆ ನೇಮಿರಾಜನಾಯ್ಕ

ಇಮೇಜ್
  ಕೊಟ್ಟೂರು: ದೈಹಿಕವಾಗಿ ಮತ್ತು ಮಾನಸಿಕವಾಗಿ ಸದೃಡವಾಗಲು ಕ್ರೀಡೆಗಳು ಸಹಕಾರಿ ಎಂದು ಶಾಸಕ ಕೆ.ನೇಮಿರಾಜನಾಯ್ಕ ಹೇಳಿದರು. ತಾಲ್ಲೂಕಿನ ಕೋಗಳಿ ಗ್ರಾಮದಲ್ಲಿ ಸರ್ಕಾರಿ ಪದವಿ ಪೂರ್ವ ಕಾಲೇಜಿನ ಆಶ್ರಯದಲ್ಲಿ ಬುಧವಾರ ಏರ್ಪಡಿಸಿದ್ದ ತಾಲ್ಲೂಕು ಮಟ್ಟದ ಪದವಿ ಪೂರ್ವ ಕಾಲೇಜುಗಳ ಕ್ರೀಡಾ ಕೂಟವನ್ನು ಉದ್ಘಾಟಿಸಿ ಮಾತನಾಡಿ ಪಿಯು ಹಂತ ವಿದ್ಯಾರ್ಥಿ ಜೀವನದಲ್ಲಿ ಮುಖ್ಯ ಘಟ್ಟವಾಗಿದ್ದು ಪಠ್ಯೇದ ಜೊತೆ ಪಠ್ಯೇತರ ಚಟುವಟಿಕೆಗಳಲ್ಲಿ ಪಾಲ್ಗೊಂಡಾಗ ಸರ್ವಾಂಗೀಣ ಅಭಿವೃದ್ಧಿ ಹೊಂದಲು ಸಾಧ್ಯ ಎಂದರು. ಸೋಲು ಗೆಲುವುಗಳನ್ನು ಸಮಾನವಾಗಿ ಸ್ವೀಕರಿಸಿ ಕ್ರೀಡೆಗಳಲ್ಲಿ ಭಾಗವಹಿಸುವಂತಹ ಮನೋಭಾವ ವಿದ್ಯಾರ್ಥಿಗಳಲ್ಲಿರಬೇಕು ಎಂದರು. ಈ ಸಂದರ್ಭದಲ್ಲಿ ತಾಲ್ಲೂಕು ಪಂಚಾಯ್ತಿ ಕಾರ್ಯನಿರ್ವಾಹಕ ಅಧಿಕಾರಿ ಬಿ.ಆನಂದಕುಮಾರ್, ಗ್ರಾ.ಪಂ.ಅಧ್ಯಕ್ಷೆ ರೇಣುಕಾ ಪಿ.ಸಮಾದೆಪ್ಪ, ಉಪನ್ಯಾಸಕರ ಸಂಘದ ಜಿಲ್ಲಾಧ್ಯಕ್ಷ ಗೌಡ್ರು ಬಸವರಾಜ್, ತಾಲ್ಲೂಕು ಅಧ್ಯಕ್ಷ ಜಗದೀಶ ಚಮದ್ರ ಭೋಸ್, ಪಿ.ಎ.ಸಿ.ಎಸ್. ಅಧ್ಯಕ್ಷ ಎನ್.ಹೇಮಗಿರಿಗೌಡ, ವಿ.ಎಸ್.ಎಸ್.ಎನ್. ಅಧ್ಯಕ್ಷ ಕೆ.ಚಂದ್ರಶೇಖರ್, ಪಿ.ಯು. ಕಾಲೇಜುಗಳ ಪ್ರಾಂಶುಪಾಲರಾದ ಜಿ.ಸೋಮಶೇಖರ್, ಎಂ.ಎಚ್. ಪ್ರಶಾಂತಕುಮಾರ್, ಕೆ.ಎಂ.ಜಯಣ್ಣ, ಬಿ.ಪಿ.ತಿಪ್ಪೇಸ್ವಾಮಿ, ನಿರ್ಮಲಶಿವನಗುತ್ತಿ, ಅನುಪಮ ಭೂಸನೂರಮಠ್, ಪವನ್ ಕುಮಾರ್, ಆರ್.ಮಧುಸೂಧನ್, ಪಿ.ಟಿ. ಸಂತೋಷ್ ಕುಮಾರ್, ರೇಣುಕಾ ಹೊಸಮನಿ, ಹಾಗೂ ಉಪನ್ಯಾಸಕರು, ದೈಹಿಕ ಶಿಕ್ಷಣ ನಿರ್ದೇಶಕರು ಮುಖಂ...