ಸುಜ್ಞಾನ ನಿಧಿ ಶಿಷ್ಯವೇತನದಿಂದ ಮಕ್ಕಳ ಭವಿಷ್ಯ ಉಜ್ವಲ - ಸಿದ್ದಲಿಂಗ ಶ್ರೀ ಅಭಿಮತ
ಕೊಟ್ಟೂರು: ಪಟ್ಟಣದ ಡೋಣೂರು ಚಾನುಕೋಟಿ ಮಠದ ಸಮುದಾಯ ಭವನದಲ್ಲಿ ೨೦೨೪ -೨೫ ನೇ ಸಾಲಿನ ೧೧೫ ವಿದ್ಯಾರ್ಥಿಗಳಿಗೆ ಸುಜ್ಞಾನ ನಿಧಿ ಶಿಷ್ಯ ವೇತನ ಮಂಜೂರಾತಿ ಪತ್ರ ವಿತರಣಾ ಕಾರ್ಯಕ್ರಮ ಹಮ್ಮಿಕೊಂಡಿದ್ದು
ಕಾರ್ಯಕ್ರಮದಲ್ಲಿ ದಿವ್ಯ ಸಾನಿಧ್ಯ ಡಾ. ಶ್ರೀ ಸಿದ್ದಲಿಂಗ ಶಿವಾಚಾರ್ಯ ಸ್ವಾಮಿಯವರು ಹಾಗು ಮಾಜಿ ಜಿಲ್ಲಾ ಪಂಚಾಯತ್ ಸದಸ್ಯರು ಎಂ ಎಂ ಜೆ ಹರ್ಷವರ್ದನ್ ರವರು ಕಾರ್ಯಕ್ರಮವನ್ನು ದೀಪ ಬೆಳಗಿಸುವ ಮೂಲಕ ಉದ್ಘಾಟನೆ ಮಾಡಿದರು.
ಜಿಲ್ಲಾ ನಿರ್ದೇಶಕರು ಸತೀಶ್ ಶೆಟ್ಟಿ ಯವರು ಧರ್ಮಸ್ಥಳದಿಂದ ನಡೆಯುವ ಚತುರ್ವಿಧ ದಾನಗಳಾದ ಅನ್ನದಾನ, ವಿದ್ಯಾದಾನ, ಅರೋಗ್ಯದಾನ, ಹಾಗು ಅಭಯ ದಾನಗಳ ಬಗ್ಗೆ ತಿಳಿಸಿದರು ಸುಜ್ಞಾನ ನಿಧಿ ಶಿಷ್ಯ ವೇತನ ಕಾರ್ಯಕ್ರಮವನ್ನು ಕಳೆದ ೧೯ ವರ್ಷಗಳಿಂದ ನಿರಂತರವಾಗಿ ನೆಡೆದುಕೊಂಡು ಬರುತ್ತಿದೆ ಹಾಗು ನಿರ್ಗತಿಕರಿಗೆ ಮಾಶಾಸನ ತಿಂಗಳಿಗೆ ೧೦೦೦ ರೂ ಅಂತೆ ನೀಡಲಾಗುತ್ತಿದೆ ವಿಜಯನಗರ ಜಿಲ್ಲೆಯಲ್ಲಿ ೮೦೦ ವಿದ್ಯಾರ್ಥಿಗಳಿಗೆ ಹಾಗು ನಮ್ಮ ಕೊಟ್ಟೂರು ತಾಲ್ಲೂಕಿನಲ್ಲಿ ಕಳೆದ ವರ್ಷ ೧೦೭ ಮತ್ತು ಈ ವರ್ಷ ೧೧೫ ಒಟ್ಟು ೨೨೨ ವಿದ್ಯಾರ್ಥಿಗಳಿಗೆ ೧೪,೫೨,೦೦೦ ಮೊತ್ತ ವನ್ನು ವಾರ್ಷಿಕವಾಗಿ ಹಣ ವಿದ್ಯಾರ್ಥಿಗಳ ಖಾತೆಗೆ ಹಾಕಲಾಗುತ್ತಿದೆ. ರಾಜ್ಯದಲ್ಲಿ ೯೫೦ ಕೆರೆಗಳನ್ನು ನಮ್ಮ ಊರು ನಮ್ಮ ಕೆರೆ ಕಾರ್ಯಕ್ರಮದಲ್ಲಿ ಕೆರೆ ಪುನಶ್ಚೇತನಗೊಳಿಸಲಾಗಿದೆ ರಾಜ್ಯದಲ್ಲಿ ೧೦೫೦ ಜ್ಞಾನದೀಪಾ ಯೋಜನೆಯಡಿ ಸರ್ಕಾರಿ ಶಾಲೆಗಳಿಗೆ ಶಿಕ್ಷಕರನ್ನು ನೀಡಲಾಗಿದೆ ಎಂದು ತಿಳಿಸಿದರು.
ಎಂ.ಎಂ.ಜೆ. ಹರ್ಷವರ್ಧನ್ ರವರು ಮಾತನಾಡಿ ವಿದ್ಯಾರ್ಥಿಗಳು ಒಳ್ಳೆಯ ಶಿಕ್ಷಣ ಪಡೆದು ತಂದೆ ತಾಯಿಗಳಿಗೆ ಒಳ್ಳೆದು ಮಾಡಿ ಎಂದು ಶುಭ ಹಾರೈಸಿ ಹಾಗು ಯೋಜನೆಯು ಒಳ್ಳೆಯ ಕಾರ್ಯಕ್ರಮಗಳನ್ನು ಮಾಡುತ್ತಿದೆ ಎಂದು ತಿಳಿಸಿ ಮಕ್ಕಳಿಗೆ ಮಂಜೂರಾತಿ ಪತ್ರ ವಿತರಣೆ ಮಾಡಿದರು.ಡಾ. ಶ್ರೀ ಸಿದ್ದಲಿಂಗ ಶಿವಾಚಾರ್ಯ ಸ್ವಾಮಿಯವರು ಮಾತನಾಡುತ್ತ ಸುಜ್ಞಾನ ನಿಧಿ ಶಿಷ್ಯ ವೇತನ ಕಾರ್ಯಕ್ರಮ ವಿದ್ಯಾರ್ಥಿಗಳ ಭವಿಷ್ಯವನ್ನು ಕಟ್ಟಿಕೊಳ್ಳುವ ಕಾರ್ಯಕ್ರಮವಾಗಿದ್ದು ಈ ಕಾರ್ಯಕ್ರಮವನ್ನು ವಿದ್ಯಾರ್ಥಿಗಳು ಸದುಪಯೋಗ ಪಡಿಸಿಕೊಳ್ಳಬೇಕೆಂದು ಶುಭ ಹಾರೈಸಿದರು.
ಕಾರ್ಯಕ್ರಮದಲ್ಲಿ ಜಿಲ್ಲಾ ಜನಜಾಗೃತಿ ವೇದಿಕೆ ಸದಸ್ಯರುಗಳು ರೇವಣಸಿದ್ಧಪ್ಪ, ಯೋಗೇಶ್ವರದಿನ್ನೇ, ಮಲ್ಲಿಕಾರ್ಜುನಪ್ಪ, ನೇತ್ರಾವತಿ, ಮಲ್ಲಿಕಾರ್ಜುನ್ ಎಂ ಯೋಜನಾಧಿಕಾರಿ ನವೀನ್ ಕುಮಾರ್ ನಾಗರಾಜ್ ಶಿಕ್ಷಕರು, ರುದ್ರೇಶ್, ಮಹಾಂತೇಶ್, ನಾರದಮುನಿ ಸೇವಾಪ್ರತಿನಿಧಿಗಳು ಪ್ರೇಮ ಲಕ್ಷ್ಮಿ ಹಾಗು ವಿದ್ಯಾರ್ಥಿಗಳು ಮತ್ತು ಪೋಷಕರು ಭಾಗವಹಿಸಿದ್ದರು.



ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ