ಸಮಾಜಕ್ಕೆ ಉತ್ತಮ ಸೇವೆ ಸಲ್ಲಿಸಿ : ಸಿಪಿಐ ಪ್ರಹ್ಲಾದ್ ಆರ್ ಚನ್ನಗಿರಿ.
ಸರಕಾರಿ ನೌಕರರು ಜನರ ಸೇವಕರು. ಇದನ್ನು ಸದಾ ನೆನಪಿನಲ್ಲಿ ಇಟ್ಟುಕೊಂಡು ಜನರಿಗೆ ಉತ್ತಮ ಸೇವೆ ನೀಡಬೇಕು. ಇಂತಹ ವ್ಯಕ್ತಿಯನ್ನು ಮತ್ತು ಅವರ ಸೇವೆಯನ್ನು ಈ ಸಮಾಜ ಸದಾ ಸ್ಮರಿಸುತ್ತದೆ ಎಂದು ಕೂಡ್ಲಿಗಿ ಸಿಪಿಐ ಪ್ರಹ್ಲಾದ್ ಆರ್ ಚನ್ನಗಿರಿ ಹೇಳಿದರು.
ಇವರು ಗುಡೇಕೋಟೆಯ ಪೊಲೀಸ್ ಠಾಣೆಯ ಆವರಣದಲ್ಲಿ ಸೋಮವಾರ ವಯೋ ನಿವೃತ್ತಿ ಹೊಂದಿದ ಎಎಸ್ಐ ಕೆ.ಹೆಚ್.ಯೋಗೇಶ್ ಇವರ ಬೀಳ್ಕೊಡುಗೆ ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಪೊಲೀಸ್ ಇಲಾಖೆ ಜನ ಸ್ನೇಹಿ ಆಗುತ್ತಿದೆ. ಇತ್ತೀಚೆಗೆ ಸರಕಾರ ಮನೆ ಮನೆ ಪೊಲೀಸ್ ಪರಿಕಲ್ಪನೆ ಜಾರಿಗೆ ತಂದಿದೆ. ಇವೆಲ್ಲ ನಾವು ಜನರ ಸೇವೆಗೆ ಮತ್ತಷ್ಟು ತೆರೆದುಕೊಳ್ಳುವ ಕ್ರಮಗಳು. ಇದರಿಂದಾಗಿ ನಮ್ಮ ಸೇವೆ ಜನರಿಗೆ ಸಕಾಲದಲ್ಲಿ ಸಿಗುವಂತಾಗಬೇಕು. ಜೊತೆಗೆ ನಿಮ್ಮ ಆರೋಗ್ಯ ಮತ್ತು ವ್ಯಕ್ತಿತ್ವದ ಉನ್ನತಿಯತ್ತ ಗಮನಹರಿಸಿ ಎಂದರು. ಪಿಎಸ್ ಐ ಸುಬ್ರಮಣ್ಯಂ ಮಾತನಾಡಿ ಇಂದು ನಮ್ಮ ಕರ್ತವ್ಯದಲ್ಲಿ ಅನೇಕ ಸವಾಲುಗಳಿವೆ. ಅದನ್ನೆಲ್ಲ ಸಮರ್ಥವಾಗಿ ಎದುರಿಸಬೇಕು. ಅದಕ್ಕೆ ನಾವು ಸದಾ ಸಿದ್ಧರಿರಬೇಕು ಎಂದರು.
ಈ ವೇಳೆ ವಯೋನಿವೃತ್ತಿ ಹೊಂದಿದ ಎಎಸ್ ಐ ಕೆ.ಹೆಚ್.ಯೋಗೇಶ್ ಇವರಿಗೆ ಇಲಾಖೆ, ಸಾರ್ವಜನಿಕರಿಂದ ಸನ್ಮಾನಿಸಿ, ಗೌರವಿಸಲಾಗಿತು. ಸಿಬ್ಬಂಧಿಗಳಾದ ಮಹಾಂತೇಶ್, ಮುತ್ತಣ್ಣ ಕಾಳಗಿ, ಸ್ವರೂಪ್ ಕೊಟ್ಟೂರು ತಮ್ಮ ಅನಿಸಿಕೆಗಳನ್ನು ಹಂಚಿಕೊಂಡರು. ಪ್ರಭುರಾಜ್ ಸಂಡೂರು, ವೀರೇಶ್ ಹಚ್ಚೋಳ್ಳಿ, ಬಂಗಾಳಿ ಓಬಯ್ಯ, ಕೃಷ್ಣಪ್ಪ, ರಾಮದುರ್ಗ ಮಲ್ಲಿಕಾರ್ಜುನ, ಐಶ್ವರ್ಯ, ಬಿಂದು ಶ್ರೀ ಮುಂತಾದವರು ಇದ್ದರು.



ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ