ಪೋಸ್ಟ್‌ಗಳು

ನವೆಂಬರ್, 2025 ರಿಂದ ಪೋಸ್ಟ್‌ಗಳನ್ನು ತೋರಿಸುತ್ತಿದೆ

ದೇವೇಗೌಡ 2 ನಾಲಿಗೆ ಮನುಷ್ಯ

 ಸುದೀರ್ಘ ದಿನಗಳ ನಂತರ ಮಾಜಿ ಪ್ರಧಾನಮಂತ್ರಿ ಎಚ್ ಡಿ ದೇವೇಗೌಡರು ತಮ್ಮ ರಾಜಕೀಯ ಕಡುವೈರಿ ಎನಿಸಿದ್ದ ಮಾಜಿ ಮುಖ್ಯಮಂತ್ರಿ ದಿ. ರಾಮಕೃಷ್ಣ ಹೆಗಡೆ ಅವರನ್ನು ಗುಣಗಾನ ಮಾಡಿರುವುದು ಹಾಸ್ಯಾಸ್ಪದ ಎಂದು ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಡಿ. ಬಸವರಾಜ್ ಅವರು ಟೀಕಿಸಿದ್ದಾರೆ. ರಾಮಕೃಷ್ಣ ಹೆಗಡೆ ಅವರು ಬದುಕಿದ್ದಾಗ ಒಂದು ರೀತಿ ಕಷ್ಟ ಕೊಟ್ಟು ಅವರನ್ನು ಪಕ್ಷದಿಂದಲೇ ಉಚ್ಛಟನೆ ಮಾಡಿಸಿದ್ದ ದೇವೇಗೌಡ ರು ಈಗ ಆತ್ಮೀಯತೆಯ ಮಾತಾಡಿರುವುದು ಎರಡು ಬಗೆಯ ನಾಲಿಗೆಗೆ ಉದಾಹರಣೆಯಾಗಿದೆ. ದೇವೇಗೌಡರು ರಾಮಕೃಷ್ಣ ಹೆಗ್ಗಡೆಯವರಿಗೆ ಮೋಸ ಮಾಡಿದ್ದಾರೆ 1994 ರಲ್ಲಿ ಮುಖ್ಯಮಂತ್ರಿ, 1996 ರಲ್ಲಿ ಪ್ರಧಾನಿಯಾಗಬೇಕಿದ್ದದ್ದು ದೇವೇಗೌಡರಲ್ಲ ಬದಲಾಗಿ ರಾಮಕೃಷ್ಣ ಹೆಗ್ಗಡೆಯವರು.1994 ರಲ್ಲಿ ಜನಾತಾಪಕ್ಷ ಅಧಿಕಾರಕ್ಕೆ ಬಂದಾಗ ವಿಧಾನಸೌಧದ ಸುತ್ತಲೂ ಸೇರಿದ್ದ ಅರ್ತಾತ್ ಸೇರಿಸಿದ್ದ ಜನಸಂದಣಿ ಯಾರ ವಿರುದ್ದ ಎಂಬುದು ಇತಿಹಾಸದಲ್ಲಿ ದಾಖಲಾಗಿದೆ ಹಾಗೆಯೇ ಹೆಗಡೆಯವರು ಮುಂದೆ ಹಾಸನದಲ್ಲಿ ಲೋಕ ಶಕ್ತಿ ಪಕ್ಷದ ಪ್ರಚಾರಕ್ಕೆ ಹೋದಾಗ ಹೆಗಡೆಯವರ ಮೇಲಾದ ಕಲ್ಲೆಸೆತದ ಹಿಂದೆ ಯಾರಿದ್ದರು ಎಂಬುದು ನಿಮ್ಮ ಊಹೆಗೆ ಬಿಟ್ಟಿದ್ದು.  ವೀರೇಂದ್ರ ಪಾಟೀಲರು, ರಾಮಕೃಷ್ಣ ಹೆಗ್ಗಡೆ, ದೇವೇಗೌಡರು ಹಾಗೂ ಬೊಮ್ಮಯಿ ಈ ನಾಲ್ವರೂ ಒಬ್ಬರಿಗೊಬ್ಬರು ಪರಮ ಮಿತ್ರರು ಮೇಲಾಗಿ ನಿಜಲಿಂಗಪ್ಪನವರ ಪರಮ ಶಿಷ್ಯರು. ದೇವೇಗೌಡರು ಜನತಾ ಪಕ್ಷದ ಅಧ್ಯಕ್ಷರಾಗಿದ್ದ ಸಮಯದಲ್ಲಿ ದೇವೇಗೌಡರು ನೀಡಿದ ಕಿ...

ಅಫ್ಘಾನ್ ಕರೆನ್ಸಿ ಮುಂದೆಯೂ ಮಂಡಿಯೂರಿತು ರೂಪಾಯಿ!

ಇಮೇಜ್
  ಹಿಂದೊಮ್ಮೆ ಬಿಜೆಪಿಯ ರಾಜ್ಯಾಧ್ಯಕ್ಷರಾಗಿದ್ದವರು ಭಾರತದ ಕರೆನ್ಸಿ ಮುಂದೆ ಅಮೆರಿಕ ಡಾಲರ್ ಪಾತಾಳಕ್ಕೆ ಇಳಿಯುತ್ತೆ ಅಂದಿದ್ದರು. ಇಂದು ಒಂದು ಅಮೆರಿಕ ಡಾಲರ್ ಖರೀದಿಸಲು ನಾವು 88.81 ರೂ. ಕೊಡಬೇಕು! ವಿಷಯ ಅದಲ್ಲ; ಆ ಲೀಡರು ಏನೋ ಹೇಳಿದ ಅಂತ 2014ರಲ್ಲಿ ನಾವು ಸಾಲಾಗಿ ನಿಂತು ವೋಟ್ ಹಾಕಿ ಅವರ ಪಕ್ಷ ಗೆಲ್ಲಿಸಿದೆವು. ಇಂದು ಭಾರತದ ರೂಪಾಯಿ ದಿನದಿಂದ ದಿನಕ್ಕೆ ಪಾತಾಳಕ್ಕೆ ಇಳಿಯುತ್ತಿದೆ. 2014ಕ್ಕೂ ಮುನ್ನ ಡಾಲರ್ ಬೆಲೆ 61 _ 63 ರೂಪಾಯಿ ಆಸುಪಾಸಿನಲ್ಲಿ ಇತ್ತು ಇಂದು 90 ರುಪಾಯಿಗೆ ರೂಪಾಯಿ ಇಳಿದಿದೆ. ಇದು ದೊಡ್ಡ ವಿಷಯ ಅಲ್ಲ ಅನ್ನೋಣ ಬಿಡಿ. ಇದಕ್ಕೆ ನಮ್ಮ ವಿತ್ತ ಸಚಿವರು ಹೇಳೋದು ಬೇರೇನೇ ಇದೆ. ಈಗ ರೂಪಾಯಿ ವಿಷಯದಲ್ಲಿ ಮತ್ತೊಂದು ರೋಚಕ (ನಾಚುವಂತಹ) ವಿಷಯ ಇಲ್ಲಿ ಹಂಚಿಕೊಳ್ಳಬೇಕಿದೆ. ಅದೇನೆಂದರೆ ನಮ್ಮ ರೂಪಾಯಿ ಈಗ ಅಫ್ಘಾನಿಸ್ತಾನದ ಅಫ್ಘಾನ್ ಮುಂದೆಯೂ ಮಂಡಿಯೂರಿದೆ! ಒಂದು ಅಫ್ಘಾನ್ ಬೆಲೆ ಈಗ 1 ರೂಪಾಯಿ 36 ಪೈಸೆಗೆ ಏರಿದೆ. ಇದೇ ಕರೆನ್ಸಿ 2014ರಲ್ಲಿ 93 ಪೈಸೆ ಇತ್ತು. ನಾವೆತ್ತ ಸಾಗುತ್ತಿದ್ದೇವೆ ನೀವೇ ಯೋಚಿಸಿ

ಮನ ಸೆಳೆದ ತೊಗಲು ಬೊಂಬೆಯಾಟ

ಇಮೇಜ್
ಬಳ್ಳಾರಿ: ಶ್ರೀ ಹುಲಿಕುಂಟೆರಾಯ ತೊಗಲುಗೊಂಬೆ ಕಲಾ ತಂಡ ವತಿಯಿಂದ ರಾಜ್ತೋತ್ಸವ ಸಂಭ್ರಮದಡಿಯಲ್ಲಿ ಬಳ್ಳಾರಿ ನಗರದ ಗುಗ್ಗರಹಟ್ಟಿಯ ಶ್ರೀ ಶ್ರೀಶೈಲ ಭ್ರಮರಾಂಬ ಮಲ್ಲಿಕಾರ್ಜುನ ಸ್ವಾಮಿ ಶಿವದೀಕ್ಷಾ ಮಂದಿರದಲ್ಲಿ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಿತು. ವೀರಶೈವ ವಿದ್ಯಾವರ್ಧಕ ಸಂಘದ ಕಾರ್ಯಕಾರಿ ಸಮಿತಿ ಸದಸ್ಯ ಚೋರಚೂರು ಕೊಟ್ರಪ್ಪ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ಕನ್ನಡದ ಮೇಲೆ ಅಭಿಮಾನ ಮೂಡಿಸುವಂತಹದ್ದೇ ಕನ್ನಡ ರಾಜ್ಯೋತ್ಸವ ಆಚರಣೆ. ಕನ್ನಡ ರಾಜ್ಯೋತ್ಸವ ಆಚರಣೆ ಮಾಡುವ ಮೂಲಕ ಕನ್ನಡದ ಪ್ರೇಮ ಮೂಡಿಸಬೇಕು. ನಮ್ಮ ಜೀವನದ ಬದುಕಿಗೆ ಎಲ್ಲ ಭಾಷೆಗಳು ಬೇಕು. ಆದ್ರೆ ನಮ್ಮ ಮಾತೃ ಭಾಷೆ ಕನ್ನಡವನ್ನು ಉಳಿಸಿ ಬೆಳೆಸಬೇಕು. ನಮ್ಮ ಕನ್ನಡ ಭಾಷೆಗೆ ಹೆಚ್ಚಿನ ಒತ್ತು ಕೊಡಬೇಕು. ಅಧಿಕಾರದಲ್ಲಿ ಕನ್ನಡ ಭಾಷೆ ಹೆಚ್ಚು ಬಳಕೆ ಆಗಬೇಕು ಎಂದರು.  ಸಂಸ್ಕೃತಿ ಮತ್ತು ಸಂಸ್ಕಾರ ಬಹಳ ಮುಖ್ಯ. ಸಂಗೀತ, ಸಾಹಿತ್ಯ, ಶಿಲ್ಪ ಕಲೆ ಸೇರಿದಂತೆ ಯಾವುದಾದರೂ ಒಂದು ಕಲೆಯಲ್ಲಿ ಮಕ್ಕಳು ತಮ್ಮನ್ನು ತೊಡಗಿಸಿಕೊಳ್ಳಬೇಕು. ಅಂದಾಗ ಮಾತ್ರ ಮಕ್ಕಳು ಸರ್ವತೋಮುಖ ಅಭಿಯಾಗಲು ಸಾಧ್ಯ ಎಂದರು. ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಬಳ್ಳಾರಿ ಜಿಲ್ಲಾ ಕೈಗಾರಿಕಾ ಸಂಘದ ಅಧ್ಯಕ್ಷ ವಿ.ರಾಮಚಂದ್ರ ಅವರು ಮಾತನಾಡಿ, ಈ ಹಿಂದೆ ತೊಗಲುಗೊಂಬೆ ಆಡಿಸುವುದು ಬಹಳ ಕಷ್ಟದ ಕೆಲಸ. ಮುಖಕ್ಕೆ ಬಣ್ಣ ಹಾಕಿ ಅಭಿನಯಿಸೋದು ಸುಲಭ. ಪರದೆ ಹಿಂದೆ ನಿಂತು ತೊಗಲುಗೊಂಬೆ ಕುಣಿಸೋದು ಕಷ್ಟದ ಕೆಲಸ. ಆದ್ರೂ ಅಂತಹ...

ರಾಷ್ಟ್ರಪತಿಗೆ ಗಡುವು ಸರಿ ಅಲ್ಲ

ಇಮೇಜ್
  ಕೇಂದ್ರದಲ್ಲಿ ಯಾವುದೇ ಸರ್ಕಾರ ಬಂದರೂ ರಾಜ್ಯಪಾಲರ ಮೂಲಕ ಕೇಂದ್ರದಲ್ಲಿ ಆಡಳಿತ ನಡೆಸುವ ಪಕ್ಷದ ವಿರೋಧ ಪಕ್ಷಗಳು ಆಳ್ವಿಕೆ ನಡೆಸುವ ರಾಜ್ಯಗಳಲ್ಲಿ ರಾಜ್ಯಪಾಲರ ಮೂಲಕ ಕಿರುಕುಳ ಕೊಡುವ ಸಮಸ್ಯೆಗೆ ಪರಿಹಾರ ಸಿಕ್ಕಬಹುದು ಎಂಬ ಆಶಯ ಹುಸಿ ಆಗಿದೆ. ತಮಿಳುನಾಡು ಡಿಎಂಕೆ ಸರ್ಕಾರ ಮತ್ತು ರಾಜ್ಯಪಾಲರ ನಡುವೆ ನಡೆಯುತ್ತಿದ್ದ ಶೀತಲ ಸಮರಕ್ಕೆ ಈ ಏಪ್ರಿಲ್ 8, 2025ರಂದು ಜಸ್ಟೀಸ್ ಜಿ. ಬಿ. ಪರ್ದಿವಾಲ, ಜಸ್ಟೀಸ್ ಆರ್ ಲ್. ಮಹಾದೇವನ್ ಮಹತ್ವದ ತೀರ್ಪು ನೀಡಿ, ರಾಜ್ಯಪಾಲರು ಅಂಕಿತ ಹಾಕಲು ಹಾಡುವ ವಿಧಿಸಿದ್ದರು. ಅಷ್ಟರ ಒಳಗಾಗಿ ರಾಜ್ಯಪಾಲರು ಸಹಿ ಹಾಕಬೇಕು. ಗಡುನಿನ ಒಳಗೆ ಸಹಿ ಹಾಕದೆ ಇದ್ದರೆ ಮಸೂದೆ ಅಂಗೀಕೃತ ಎಂದು ಭಾವಿಸಬಹುದು ಎಂದು ತೀರ್ಪು ನೀಡಲಾಗಿತ್ತು. ಇದು ಪರೋಕ್ಷವಾಗಿ ರಾಷ್ಟ್ರಪತಿ ಅವರ ವಿವೇಚನಾ ಅಧಿಕಾರ ಮೊಟಕುಗೊಳಿಸುವ ರೀತಿ ಇತ್ತು. ತಮಿಳುನಾಡಿನ 10 ಮಸೂದೆಗಳು ರಾಷ್ಟ್ರಪತಿ ಅವರ ಬಳಿ ಅಂಕಿತಕ್ಕೆ ಹಲವಾರು ವರ್ಷ ಕಾದುಕೊಂಡು ಇದ್ದವು. ಸುಪ್ರೀಂ ತೀರ್ಮಾನದಿಂದ ಈ 10 ಮಸೂದೆಗಳು ಅಂಗೀಕಾರ ಆದಂತೆ ಆಗಿತ್ತು. ಇದು ರಾಜಕೀಯ ವಲಯದಲ್ಲಿ ತೀವ್ರ ಚರ್ಚೆಗೆ ಕಾರಣವಾಗಿದೆ ಎಡೆಮಾಡಿಕೊಟ್ಟಿತ್ತು. ತೀರ್ಪಿನಲ್ಲಿ ನ್ಯಾಯಾಲಯ ರಾಷ್ಟ್ರಪತಿಗಳು ಅಗತ್ಯ ಎನ್ನಿಸಿದಾಗ ಸುಪ್ರೀಂ ಕೋರ್ಟ್ ಅಭಿಪ್ರಾಯ ಕೇಳಬೇಕು ಎಂದು ಸಹ ಹೇಳಿತ್ತು. ಇದೀಗ ಸುಪ್ರೀಂ ಕೋರ್ಟಿನ ಮುಖ್ಯ ನ್ಯಾಯಮೂರ್ತಿ ಜಸ್ಟೀಸ್ ಬಿ.ಆರ್. ಗವಾಯ್ ಅವರ ಐದು ಜನರ ಪೀಠ ಇದು ಸಂವಿಧಾನಕ್ಕ...

ದಲಿತ, ಆದಿವಾಸಿ, ಮಹಿಳೆ ಮತ್ತು ಅಲ್ಪಸಂಖ್ಯಾತರ ಮೇಲಿನ ದೌರ್ಜನ್ಯ ಖಂಡಿಸಿ ಪ್ರತಿಭಟನಾ ದಿನ ಆಚರಣೆ

ಇಮೇಜ್
ಕೊಟ್ಟೂರು ಪಟ್ಟಣದ ವಾಲ್ಮೀಕಿ ನಗರದಲ್ಲಿ ಭಾರತ ಕಮ್ಯುನಿಸ್ಟ್ ಪಕ್ಷ ರಾಜ್ಯ ಮಂಡಳಿ ವತಿಯಿಂದ ನವೆಂಬರ್ ೧೮ರ ಅಖಿಲ ಭಾರತ ಪ್ರತಿಭಟನಾ ದಿನವನ್ನು ಆಚರಣೆ ಮಾಡಲಾಯಿತು. ಭಾರತದ ಇತಿಹಾಸದಲ್ಲಿ ಶತಮಾನಗಳಿಂದಲೂ ದಬ್ಬಾಳಿಕೆ, ಅಸ್ಪೃಶ್ಯತಾ ಮತ್ತು ಶೋಷಣೆಗೆ ಬಲಿಯಾದ ದಲಿತ, ಆದಿವಾಸಿ ಮತ್ತು ಮಹಿಳಾ ಸಮುದಾಯಗಳು ಇಂದಿಗೂ ದೌರ್ಜನ್ಯಗಳಿಂದ ಬಿಡುಗಡೆಯಾಗಿಲ್ಲ ಬದಲಿಗೆ ಇವತ್ತಿಗೂ ಅವು ಎಗ್ಗಿಲ್ಲದೇ ನಡೆಯುತ್ತಿವೆ. ಸಂವಿಧಾನ ಬಂದು ೭೫ ವರ್ಷಗಳಾದರೂ ಸಹ ಇದುವರೆಗೂ ಮನುಸ್ಮೃತಿಯ ಪಳೆಯುಳಿಕೆಗಳು ಈ ನೆಲದಲ್ಲಿ ಉಳಿದಿರುವ ಕಾರಣಕ್ಕೆ ಈ ಶೋಷಣೆಗಳು ನಡೆಯುತ್ತಿವೆ.  ಭಾರತೀಯ ಸಮಾಜವನ್ನು ಶ್ರೇಣೀಕೃತ ಜಾತಿ, ಉಪಜಾತಿಗಳೆಂದು ವಿಂಗಡಿಸಿ, ದಲಿತ ಸಮುದಾಯದಿಂದ ಅವರ ಮೂಲಭೂತ ಹಕ್ಕುಗಳನ್ನು ಕಸಿದುಕೊಂಡು ಅವರನ್ನು ಪ್ರಾಣಿಗಿಂತಲೂ ಕಡೆಯಾಗಿ ನಡೆಸಿಕೊಳ್ಳುತ್ತಲೇ ಬಂದಿದೆ. ಈ ನೆಲದಲ್ಲಿ ಸಂವಿಧಾನ ಜಾರಿಯಾದಾಗಿನಿಂದ ನಾವಿನ್ನೂ ಕೊಂಚ ಉಸಿರಾಡುತ್ತಿದ್ದೇವೆ. ಸ್ವಾತಂತ್ರ್ಯ ಬಂದು ಪ್ರಜಾಪ್ರಭುತ್ವವನ್ನು ಭಾರತಕ್ಕೆ ಅರ್ಪಿಸಿಕೊಂಡ ಮೇಲೂ ಸಹ ಈ ದೌರ್ಜನ್ಯಗಳು, ದಬ್ಬಾಳಿಕೆಗಳು ನಿಲ್ಲುವ ಲಕ್ಷಣಗಳೇ ಗೋಚರಿಸುತ್ತಿಲ್ಲ. ಬದಲಾಗಿ ಹಿಂಸೆಯ ಕರಾಳ ಮುಖಗಳು ಒಂದೊಂದಾಗಿ ಅನಾವರಣಗೊಳ್ಳುತ್ತಿವೆ. ಕೋಮುಗಲಭೆಗಳುಂಟಾಗಿ ಸಮಾಜದಲ್ಲಿ ಸಾಕಷ್ಟು ನೆತ್ತರು ಹರಿಯುವುದಕ್ಕೆ ಮೇಲು-ಕೀಳು, ಬಹುಸಂಖ್ಯಾ-ಅಲ್ಪಸಂಖ್ಯಾತ, ಹಿಂದೂ-ಮುಸ್ಲಿಂ ಎಂಬ ಭೇದಭಾವಗಳೇ ಈ ನೆಲದಲ್ಲಿ ಇನ್ನೂ ರಾರಾಜಿಸುತ್ತ...

ರಾಜ್ಯೋತ್ಸವ ಕಾರ್ಯಕ್ರಮಕ್ಕೆ ಆಹ್ವಾನ ನೀಡದ ಪಿಡಿಓ,ಕಾರ್ಯದರ್ಶಿ

ಇಮೇಜ್
  *ಏಕಮುಖವಾಗಿ ತಮಗೆ ಬೇಕಾದ ಹಾಗೆ ಕನ್ನಡ ರಾಜ್ಯೋತ್ಸವ ಕಾರ್ಯಕ್ರಮವನ್ನು ಆಚರಿಸಿದ ಕಾಳಾಪುರ ಪಿಡಿಓ ಜಯಮ್ಮ..?* "ಗ್ರಾಮ ಪಂಚಾಯಿತಿಯ ಪಿಡಿಓ, ಕಾರ್ಯದರ್ಶಿಯವರನ್ನು ಕೂಡಲೇ ಅಮಾನತ್ತಿಗೆ ಗ್ರಾಮ ಪಂಚಾಯಿತಿ ಸದಸ್ಯರು ಒತ್ತಾಯ" ಕೊಟ್ಟೂರು ತಾಲ್ಲೂಕು ಕಾಳಾಪುರ ಗ್ರಾಮ ಪಂಚಾಯಿತಿಯಲ್ಲಿ ರಾಜ್ಯೋತ್ಸವ ಕಾರ್ಯಕ್ರಮಕ್ಕೆ ಯಾವುದೇ ಪೂರ್ವಭಾವಿ ಸಭೆ ಕರೆಯದೇ, ಸದಸ್ಯರನ್ನು ಸದರಿ ಕನ್ನಡ ರಾಜ್ಯೋತ್ಸವಕ್ಕೆ ಆಹ್ವಾನಿಸದೇ ಪ್ರೊಟೋಕಾಲ್ ಸರಿಯಾಗಿ ಪಾಲಿಸಿಲ್ಲದ ಕಾರಣ ಹತ್ತು ಮಂದಿ ಮಂಜುನಾಥ್ ಪೂಜಾರ್ ಕಾಳಾಪುರ, ನಾಗಪ್ಪ ಕನ್ನಕಟ್ಟೆ ಕಾಳಾಪುರ,ಸಾತಾಳ ಅಂಜಿನಪ್ಪ ಚೀನ್ನೇನಹಳ್ಳಿ, ಮಾರಕ್ಕ ಕಾಳಾಪುರ, ಭರಮಪ್ಪ ಹಾರಕನಾಳು, ಶಿವಮ್ಮಚೀನ್ನೇನಹಳ್ಳಿ,ಸಿ ನಾಗರಾಜ್ ಗೌಡ ನಡುಮಾವಿನಹಳ್ಳಿ,ನಿಂಗಮ್ಮಹಾರಕನಾಳು,ನಾಗರಾಜ ಹಿರೇ ವಡ್ಡರಹಳ್ಳಿ ,ಗೀತಮ್ಮ ನಡುಮಾವಿನಹಳ್ಳಿ,ಗ್ರಾಮ ಪಂಚಾಯಿತಿ ಸದಸ್ಯರು ಹಕ್ಕುಚ್ಯುತಿ ಮಂಡಿಸಿದ್ದಾರೆ. ಕಾರ್ಯನಿರ್ವಾಹಕ ಅಧಿಕಾರಿಗಳಿಗೆ ಹತ್ತು ಮಂದಿ ಗ್ರಾಮ ಪಂಚಾಯಿತಿ ಸದಸ್ಯರು ಸಲ್ಲಿಸಿರುವ ಹಕ್ಕುಚ್ಯುತಿ ಪತ್ರದಲ್ಲಿ ಈ ಹಿಂದೆ ಪಿಡಿಓ ಅಧ್ಯಕ್ಷರು, ಉಪಾಧ್ಯಕ್ಷರು ಹಾಗೂ ಸರ್ವ ಸದಸ್ಯರನ್ನು ಪೂರ್ವಭಾವಿ ಸಭೆಗೆ ಹಾಜರಾಗುವಂತೆ ಕರೆಯೋಲೆ ನೀಡಿ ಕಾರ್ಯಕ್ರಮದ ರೂಪುರೇಷೆಗಳನ್ನು ಚರ್ಚಿಸಿ ನಂತರ ಸದರಿ ಕಾರ್ಯಕ್ರಮಕ್ಕೆ ಎಲ್ಲರೂ ಹಾಜರಾಗುವಂತೆ ಆಹ್ವಾನ ಪತ್ರಿಕೆಯನ್ನು ನೀಡಿ ಕಾರ್ಯಕ್ರಮಕ್ಕೆ ಕರೆಯುವ ಪದ್ಧತಿ ಇತ್ತು.  *ಬೇಕಾ ಬಿಟ್ಟ...