ಪತ್ತಿನ ಸಹಕಾರಿ ಸಂಘದ ಅಧ್ಯಕ್ಷರಾಗಿ ನಾಗಭೂಷಣ ಬಾರಿಕೇರ್,ಉಪಾಧ್ಯಕ್ಷರಾಗಿ ನಿರ್ಮಲಾ ಎಸ್ ಸರ್ ಗಣಾಚಾರಿ ಅಧಿಕಾರ ಸ್ವೀಕಾರ
ಮಸ್ಕಿ : ಇಂದು ಅಧಿಕಾರ ಸ್ವೀಕಾರ ಹಿನ್ನೆಲೆ ಬೆಳ್ಳಂ ಬೆಳಿಗ್ಗೆಯಿಂದಲೇ ಮನೆ ದೇವರುಗಳಿಗೆ ಪೂಜಾ ಕಾರ್ಯಕ್ರಮ ಮುಗಿಸಿ 10 ಗಂಟೆಗೆ ಸಕಲ ಸದಸ್ಯರು ಹಾಗೂ ಅಧಿಕಾರಿಗಳು ಹಾಗೂ ಪ್ರಮುಖ ಮುಖಂಡರುಗಳ ಸಮ್ಮುಖದಲ್ಲಿ ವಿಶೇಷ ರೀತಿಯಲ್ಲಿ ವಿವಿಧೋದ್ದೇಶ ಸಹಕಾರ ಸಂಘದ ಅಧ್ಯಕ್ಷ ಮತ್ತು ಉಪಾಧ್ಯಕ್ಷ ಸ್ಥಾನಕ್ಕೆ ಅಧಿಕಾರ ಸ್ವೀಕಾರ ಮಾಡಲಾಯಿತು. ತೀವ್ರ ಕುತೂಹಲ ಕೆರಳಿಸಿದ್ದಇಲ್ಲಿನ ವಿವಿಧೋದ್ದೇಶ ಪ್ರಾಥಮಿಕ ಗ್ರಾಮೀಣ ಕೃಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷ ಹಾಗೂ ಉಪಾಧ್ಯಕ್ಷರ ಸ್ಥಾನಕ್ಕೆ ನಡೆದ ಅಧ್ಯಕ್ಷ ಚುನಾವಣೆಯಲ್ಲಿ ಸಾಲಗಾರರಲ್ಲದ ಕ್ಷೇತ್ರದಿಂದ ಕಾಂಗ್ರೆಸ್ ಬೆಂಬಲಿತ ಅಭ್ಯರ್ಥಿ ನಾಗಭೂಷಣ ಬಾರಿಕೇರ್ ಅಧ್ಯಕ್ಷರಾಗಿ ಹಾಗೂ ಉಪಾಧ್ಯಕ್ಷರಾಗಿ ನಿರ್ಮಲಾ ಎಸ್ ಸರ್ ಗಣಾಚಾರಿ ಗೆಲುವು ಸಾಧಿಸಿದ್ದರಿಂದ ಅವರು ತಮ್ಮ ಅಪಾರ ಬೆಂಬಲಿಗರೊಂದಿಗೆ ಶುಕ್ರವಾರ ಅಧಿಕಾರ ಸ್ವೀಕರಿಸಿದರು. ಇದೇ ಸಂದರ್ಭದಲ್ಲಿ ದೊಡ್ಡಪ್ಪ ಕಡಬೂರು, ಜಗದೀಶ್ ಸ್ವಾಮಿ ಹಾಲಾಪೂರು,ಎರ್ರಿಸ್ವಾಮಿ ಹಾಲಾಪೂರು,ಬಸನಗೌಡ ಪೊಲೀಸ್ ಪಾಟೀಲ್,ಅಂದಾನಪ್ಪ ಗುಂಡಳ್ಳಿ,ಎಂ.ಅಮರೇಶ್,ಮಂಜುನಾಥ ನಂದಿಹಾಳ,ನೀಲಕಂಠಪ್ಪ ಗೋನಾಳ, ಬಿ.ಜಿ ನಾಯಕ,ಮಲ್ಲಪ್ಪ ಬಾರಿಕೇರ,ಮಲ್ಲಯ್ಯ ಮುರಾರಿ, ರವಿ ಮಡಿವಾಳ, ಮಲ್ಲಿಕ್ ಮುರಾರಿ,ಮಲ್ಲಯ್ಯ ನಾಯಕ,ಬಸವರಾಜ ನಾಯಕ ಕಡಬೂರು,ಕೃಷ್ಣ ಚಿಗರಿ,ನಾಗರಾಜ್ ಗುಡಿಸಿಲಿ,ಪಂಪಾಪತಿ ಗಣಾಚಾರಿ ಸೇರಿದಂತೆ ಕಾಂಗ್ರೆಸ್ ಪಕ್ಷದ ಪ್ರಮುಖಮುಖಂಡರು,ಕಾಂಗ್ರೆಸ್ ಪಕ್ಷದ ಕಾರ್ಯಕರ್ತರು ಸೇರಿದಂತ...