ಸಹಕಾರಿ ಸಂಘದ ಚುನಾವಣೆ ಕಾಂಗ್ರೆಸ್, ಬಿಜೆಪಿ ಸಮಬಲ ಯಾರಿಗೆ ಒಲಿವದು ಸಹಕಾರಿ ಅಧ್ಯಕ್ಷ್ ಪಟ್ಟ..?
ವರದಿ : ಗ್ಯಾನಪ್ಪ ದೊಡ್ಡಮನಿ
ಮಸ್ಕಿ : ತೀವ್ರ ಕುತೂಹಲ ಕೆರಳಿಸಿದ್ದ ಇಲ್ಲಿನ ವಿವಿಧೋದ್ದೇಶ ಪ್ರಾಥಮಿಕ ಗ್ರಾಮೀಣ ಕೃಷಿ ಪತ್ತಿನ ಸಹಕಾರ ಸಂಘದ 12 ಸ್ಥಾನಗಳಿಗೆ ನಡೆದ ಚುನಾವಣೆಯಲ್ಲಿ ಕಾಂಗ್ರೆಸ್ ಹಾಗೂ ಬಿಜೆಪಿ ಬೆಂಬಲಿತ ತಲಾ ಆರು ಸದಸ್ಯರು ಆಯ್ಕೆ.
ಮಸ್ಕಿ ವಿವಿಧೋದ್ದೇಶ ಪ್ರಾಥಮಿಕ ಪತ್ತಿನ ಸೌಹಾರ್ದ ಸಹಕಾರಿ ಬ್ಯಾಂಕ್ ನೂತನ ಅಧ್ಯಕ್ಷ, ಉಪಾಧ್ಯಕ್ಷ ಆಯ್ಕೆಗೆ ಚುನಾವಣಾ ದಿನಾಂಕ ಇನ್ನಷ್ಟೇ ನಿಗದಿಯಾಗಬೇಕಿದೆ.
ಅಧಿಕಾರದ ಗದ್ದುಗೆ ಏರಲು ಕಾಂಗ್ರೆಸ್, ಬಿಜೆಪಿ ತೆರೆಮರೆಯಲ್ಲಿ ಭರ್ಜರಿ ಕಸರತ್ತು ನಡೆಸಿವೆ. ಕಾಂಗ್ರೇಸ್ ಪಕ್ಷ ಸಹಕಾರಿ ಯಲ್ಲಿ ತನ್ನ ಸಂಖ್ಯೆಯನ್ನು ಸಮಬಲ ಹೊಂದಿದ್ದರಿಂದ ಸಹಕಾರಿ ನಿರ್ದೇಶಕರ ಮತ ಕಾಂಗ್ರೆಸ್ ಗೆ ಒಲಿಯುವುದು ಎಂಬ ಮಾತು ಕೇಳಿ ಬರುತ್ತಿದೆ. ಬಿಜೆಪಿ ಪಕ್ಷದ ನಡೆ ತೀವ್ರ ಕುತೂಹಲ ಮೂಡಿಸಿದೆ..!
ಇವೆಲ್ಲದರ ಮಧ್ಯೆ ಸಾಲಗಾರರಲ್ಲದ ಕ್ಷೇತ್ರದಿಂದ ಕಾಂಗ್ರೆಸ್ ಬೆಂಬಲಿತ ಅಭ್ಯರ್ಥಿ ನಾಗಪ್ಪ ಬಾರಿಕೇರ್ (ನಾಗಭೂಷಣ) ಲಾಟರಿ ಚೀಟಿ ಎತ್ತುವ ಮೂಲಕ ಅದೃಷ್ಟದ ಗೆಲವು ಸಾಧಿಸಿದ್ದು ಇವರಿಗೆ ಕಾಂಗ್ರೆಸ್ ಪಕ್ಷದ ಅಧ್ಯಕ್ಷ ರಾಗುವ ಅವಕಾಶ ಸಿಗಬಹುದು ಎಂದು ಕಾಂಗ್ರೆಸ್ ಪಕ್ಷದಲ್ಲಿ ಬಲ್ಲ ಮೂಲಗಳ ಮಾಹಿತಿ ಇದ್ದು ಕಾಂಗ್ರೆಸ್ ಪಕ್ಷದ ನಿಷ್ಠಾವಂತ ಕಾರ್ಯಕರ್ತ ರಾಗಿ ಪಕ್ಷದಲ್ಲಿ ಗುರುತಿಸಿಕೊಂಡಿದ್ದಾರೆ.
ಅದೇ ರೀತಿ ಕಾಂಗ್ರೆಸ್ ಬೆಂಬಲದಿಂದ ಸ್ಪರ್ಧಿಸಿದ ಸಂಘದ ಮಾಜಿ ಅಧ್ಯಕ್ಷೆ ವೀರಶೈವ ಸಮುದಾಯದ ಪೂರ್ಣಿಮಾ ವಿ. ಪಾಟೀಲ ಹಾಗೂ ಅವರ ಪತಿ ವೀರೇಶ ಪಾಟೀಲ ಆಯ್ಕೆ ಯಾಗಿದ್ದು
ರಾಜಕೀಯ ಕ್ಷೇತ್ರದಲ್ಲಿ ತಮ್ಮದೇ ಆದ ಪ್ರಭಾವ ಇರುವ ಇವರಿಗೆ ಅಧ್ಯಕ್ಷ ಸ್ಥಾನ ಸಿಗುವುದು ಎಂದು ವಲಸೆ ಕಾಂಗ್ರೆಸ್ ಪಾಳಯದಲ್ಲಿ ಪಿಸು ಮಾತು ಕೇಳಿ ಬರುತ್ತಿದೆ.ಮೂಲ ಕಾಂಗ್ರೆಸ್ ಪಟ್ಟಿಯಲ್ಲಿ ಹಿಂದುಳಿದ ಸಮುದಾಯಕ್ಕೆ ಸೇರಿದ ನಾಗಪ್ಪ ಬಾರಿಕೇರ,ನೀಲಕಠಪ್ಪ ಗೋನಾಳ ರವರ ಹೆಸರು ಕೂಡ ಕಾಂಗ್ರೆಸ್ ಪಾಳೆಯಲ್ಲಿ ಮುನ್ನೆಲೆಯಲ್ಲಿ ಕೇಳಿ ಬರುತ್ತಿದೆ.
ವಿವಿಧೋದ್ದೇಶ ಪ್ರಾಥಮಿಕ ಪತ್ತಿನ ಸೌಹಾರ್ದ ಸಹಕಾರಿ ಬ್ಯಾಂಕ್ ನ ನೂತನ ಅಧ್ಯಕ್ಷ, ಉಪಾಧ್ಯಕ್ಷ ಚುನಾವಣೆ ಇನ್ನೇನು ಎರಡುಮೂರು ದಿನಗಳಲ್ಲಿ ಜರುಗಲಿದ್ದು, ಮೂಲ ಕಾಂಗ್ರೆಸ್ ಹಾಗೂ ವಲಸೆ ಕಾಂಗ್ರೆಸ್ಸಿಗರ ಮಧ್ಯೆ ಬಾರೀ ಪೈಪೋಟಿ ಇದ್ದು ಇದಕ್ಕೆ ಕಾಂಗ್ರೆಸ್ ಪಕ್ಷ ಯಾರಿಗೆ ಮಣೆ ಹಾಗುತ್ತದೆ ಎಂಬುದು ಚುನಾವಣೆವರೆಗೂ ಕಾದು ನೋಡಬೇಕಿದೆ.
ಹೇಳಿಕೆ ೧
ಶಾಸಕರು ಹಾಗೂ ಕಾಂಗ್ರೆಸ್ ಪಕ್ಷದ ಅಧ್ಯಕ್ಷರು ಸೂಚಿಸಿದ ಅಭ್ಯರ್ಥಿಗಳನ್ನು ಕಾರ್ಯಕರ್ತರ ಸಭೆ ನೆಡೆಸಿ ಅಂತಿಮ ತೀರ್ಮಾನ ಮಾಡಲಾಗುತ್ತದೆ.ಹನುಮಂತಪ್ಪ ಮುದ್ದಾಪುರ ಮಸ್ಕಿ ಬ್ಲಾಕ್ ಕಾಂಗ್ರೆಸ್ ಗ್ರಾಮೀಣ ಘಟಕದ ಅಧ್ಯಕ್ಷರು

ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ