ಗುರುಗುಂಟ ಮೌಂಟ್ ಕಾರ್ಮೆಲ್ ಆಂಗ್ಲ ಮಾಧ್ಯಮ ಶಾಲೆಯಲ್ಲಿ 76ನೇ ಗಣರಾಜ್ಯೋತ್ಸವ ಆಚರಣೆ.
ಗುರುಗುಂಟ;ಜ-26 ಗುಡುಗುಂಟ ಮೌಂಟ್ ಕಾರ್ಮೆಲ್ ಆಂಗ್ಲ ಮಾಧ್ಯಮ ಶಾಲೆಯಲ್ಲಿ ೭೬ನೇ ಗಣರಾಜ್ಯೋತ್ಸವವನ್ನು ಗುರುಗುಂಟದ ಮೌಂಟ್ ಕಾರ್ಮೆಲ್ ಆಂಗ್ಲ ಮಾಧ್ಯಮ ಶಾಲೆಯಲ್ಲಿ ೭೬ನೇ ಗಣರಾಜ್ಯೋತ್ಸವ ಕಾರ್ಯಕ್ರಮವನ್ನು ಅತ್ಯಂತ ಅದ್ದೂರಿಯಾಗಿ ಆಚರಣೆ ಮಾಡಲಾಯಿತು.
ಇದರ ನಿಮಿತವಾಗಿ.ಶಾಲೆಯ ಮಂತ್ರಿಮಂಡಲ ಹೌಸ್ ವೈಸ್ ವಿದ್ಯಾರ್ಥಿಗಳಿಂದ ದೈಹಿಕ ಶಿಕ್ಷಕರಾದ ಅಂತೋನಿರಾಯ್ ಇವರ ಮಾರ್ಗದರ್ಶನದಿಂದ ಮಾರ್ಚ್ ಫಾಸ್ಟ್ ಪೆರೇಡ್ ನಡೆಯಿತು.
ಕಾರ್ಯಕ್ರಮದ ಮುಖ್ಯ ಅತಿಥಿಗಳಾದ
ಡಾ||ಮರಿಸ್ವಾಮಿ ಹಿರಿಯ ವಕೀಲರು ಸಿಂಧನೂರು ಇವರು ೭೬ನೇ ಗಣರಾಜ್ಯೋತ್ಸವದ ಧ್ವಜಾರೋಹಣವನ್ನು ನೆರವೇರಿಸಿದರು.ನಂತರ ಮಹಾತ್ಮ ಗಾಂಧೀಜಿ ಹಾಗೂ ಡಾಕ್ಟರ್ ಬಿ ಆರ್ ಅಂಬೇಡ್ಕರ್ ರವರ ಫೋಟೋಗಳಿಗೆ ಮೌಂಟ್ ಕಾರ್ಮೆಲ್ ಆಂಗ್ಲ ಮಾಧ್ಯಮ ಶಾಲೆಯ ಮುಖ್ಯಸ್ಥರು ಹಾಗೂ ಮುಖ್ಯ ಉಪಾಧ್ಯಾಯರಾದ ಫಾದರ್ ರಾಬರ್ಟ್ ಫಾಲ್ ಪುಸಮಿ.ಹಾಗೂ ಬೋಧಕರು ಮತ್ತು ಶಾಲೆಯ ಸಿಬ್ಬಂದಿ ವರ್ಗದವರು ಸಹಕರಿಸಿದ್ದರು.
ನಂತರ ಕಾರ್ಯಕ್ರಮದ ಕುರಿತು 9ನೇ ತರಗತಿ ವಿದ್ಯಾರ್ಥಿಗಳಾದ ಶಾಂಭವಿ.ಸುಪ್ರೀತ. ಆಂಗ್ಲ ಭಾಷೆಯಲ್ಲಿ ತಮ್ಮ ಅನಿಸಿಕೆಗಳನ್ನು ವ್ಯಕ್ತಪಡಿಸಿದರು.ಕನ್ನಡ ಭಾಷೆಯಲ್ಲಿ ವೆಂಕಟೇಶ್ 7ನೇ ತರಗತಿ ತಮ್ಮ ಅನಿಸಿಕೆಗಳನ್ನು ವ್ಯಕ್ತಪಡಿಸಿದರು.ನಂತರ ಶಾಲಾ ಮಕ್ಕಳಿಂದ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆದವು.ಶಿಕ್ಷಕರಾದ ಪೆಡಿಲಿಸ್(ಪುಷ್ಪರಾಜ್) ದೇಶದ ಹಿರಿಮೆಯನ್ನು ತಮ್ಮ ಅನಿಸಿಕೆಯಲ್ಲಿ ವ್ಯಕ್ತಪಡಿಸಿದರು. ತದನಂತರ ಮುಖ್ಯ ಅತಿಥಿಯಾಗಿ ಆಗಮಿಸಿದ.ಡಾ|| ಮರಿಸ್ವಾಮಿ ಹಿರಿಯ ವಕೀಲರು ಸಿಂಧನೂರು ಇವರು.ಮಕ್ಕಳನ್ನು ಉದ್ದೇಶಿಸಿ ಮಾತನಾಡಿ.ಮಕ್ಕಳು ತಮ್ಮ ಜೀವನದಲ್ಲಿ ಸಂಸ್ಕಾರ ಮತ್ತು ಸಂಸ್ಕೃತಿಯನ್ನು ಅಳವಡಿಸಿಕೊಳ್ಳುವುದು ಮುಖ್ಯ ಎಂದು ಹೇಳಿದರು.ಶಾಲೆಯ ಮುಖ್ಯಸ್ಥರು. ಪ್ರೌಢಶಾಲೆಯ ಮುಖ್ಯ ಉಪಾಧ್ಯಾಯರಾದ
ಫಾದರ್ ರಾಬರ್ಟ್ ಪಾಲ್ ಪೂಸಮಿ ಮಾತನಾಡಿ.ಸವಿಧಾನವು ಧಾರ್ಮಿಕ ಗ್ರಂಥಗಳಿಗೆ ಸರ್ವ ಸಮಾನವಾಗಿದೆ.ಹಾಗೆಯೇ ಸಂವಿಧಾನವು ದೇಶದ ಪ್ರತಿಯೊಬ್ಬ ಪ್ರಜೆಗೆ ಬದುಕುವ (ಜೀವಿಸುವ)ಹಕ್ಕನ್ನು ನೀಡಿದೆ.ಸಂವಿಧಾನ ನಮ್ಮ ದೇಹದ ನರನಾಡಿಗಳಲ್ಲಿ ಹರಿಯುವ ರಕ್ತವಾಗಿದೆ ಎಂದು ತಮ್ಮ ಮಾತುಗಳಲ್ಲಿ ತಿಳಿಸಿದರು.
ಕಾರ್ಯಕ್ರಮದ ನಿರೂಪಣೆಯನ್ನು ಸಿಸ್ಟರ್ ನಿರ್ಮಲ ನೆರವೇರಿಸಿದರು. ಶಿಕ್ಷಕರಾದ ಸೋಮಶೇಖರ್. ಶಂಕರ್ ಸರ್.ಸಿಸ್ಟರ್ ಪ್ರಭ ಮುಖ್ಯ ಗುರುಗಳು ಶ್ರೀಮತಿ ಶಾಂತಿ ಗುರುಗಳು ಹಾಗೂ ಶಾಲೆಯ ಮುದ್ದು ವಿದ್ಯಾರ್ಥಿಗಳು ೭೬ನೇ ಗಣರಾಜ್ಯೋತ್ಸವದ ಧ್ವಜಾರೋಹಣ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.


ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ