ಅರ್ಚಕರಿಗೆ ತಸ್ತೀಕ್ ಭತ್ಯೆ ಪಾವತಿಸುವ ಸಂಬಂಧ ಆನ್-ಲೈನ್ ಅರ್ಜಿ ಸಲ್ಲಿಸುವ ಮಾಹಿತಿ ಸಭೆ
ಮಸ್ಕಿ : ಪಟ್ಟಣದ ತಹಶೀಲ್ದಾರರ ಕಾರ್ಯಾಲಯದಲ್ಲಿ ಅರ್ಚಕರಿಗೆ ಡಿ.ಬಿ.ಟಿ. ಮೂಲಕ ತಸ್ತೀಕ್ ಭತ್ಯೆ ಪಾವತಿಸುವ ಸಂಬಂಧ ಆನ್-ಲೈನ್ ಅರ್ಜಿ ಸಲ್ಲಿಸುವ ಕುರಿತು ಮಾಹಿತಿ ಸಭೆ ನಡೆಯಿತು.
ಸಭೆಯ ಅಧ್ಯಕ್ಷತೆಯನ್ನು ವಹಿಸಿದ್ದ ಗ್ರೇಡ್ ೨ ತಹಶೀಲ್ದಾರರಾದ ಅಶೋಕ ಪವಾರ್ ರವರು ಮಾತನಾಡಿ, ಮಾನ್ಯ ಆಯುಕ್ತರು ಹಿಂದೂ ಧಾರ್ಮಿಕ ದತ್ತಿ ಇಲಾಖೆ ಬೆಂಗಳೂರು ಹಾಗೂ ಮಾನ್ಯ ಜಿಲ್ಲಾಧಿಕಾರಿಗಳು ರಾಯಚೂರ ರವರ ಆದೇಶದನ್ವಯ ಅರ್ಚಕರಿಗೆ ಡಿ.ಬಿ.ಟಿ. ಮೂಲಕ ತಸ್ತಿಕ್ ಭತ್ಯೆ ಪಾವತಿಸಲು ತಾಲೂಕಿನ ಎಲ್ಲಾ ಆರ್ಚಕರು ತಮ್ಮ ಅರ್ಜಿಗಳನ್ನು ಸೇವಾ ಸಿಂಧೂ ವೆಬ್ ಪೋರ್ಟಲ್ ಮೂಲಕ ಆನ್-ಲೈನ್ ನಲ್ಲಿ ಅರ್ಜಿಗಳನ್ನು ಸಲ್ಲಿಸಬೇಕಾಗಿರುತ್ತದೆ.
ಅದುದರಿಂದ ಸಂಬಂದಪಟ್ಟ ಆರ್ಚಕರು ತಮ್ಮ ಅರ್ಜಿಗಳನ್ನು ಸೇವಾ ಸಿಂಧೂ ವೆಬ್ ಪೋರ್ಟಲ್ ಮೂಲಕ ಆನ್-ಲೈನ್ ಅರ್ಜಿ ಸಲ್ಲಿಸಲು ಮಸ್ಕಿ ತಾಲೂಕಿನ ತಸ್ತಿಕ್ ಭತ್ಯೆ ಪಡೆಯುತ್ತಿರುವ ಎಲ್ಲಾ ಅರ್ಚಕರಿಗೆ ಅವರವರ ಕೆ.ವೈ.ಸಿ. ದಾಖಲೆ ಆಧಾರ ಕಾರ್ಡ,ಮತ್ತು ಬ್ಯಾಂಕ ಪಾಸ ಬುಕ್ ಇನಾಂ ಪ್ರತಿ ಹಾಗೂ ದೇವಸ್ಥಾನದೊಂದಿಗೆ ಅರ್ಚಕರಿರುವ ಛಾಯಚಿತ್ರದೊಂದಿಗೆ ) ಸಂಬಂಧಿಸಿದ ಕಂದಾಯ ನಿರೀಕ್ಷಕರು ಹಾಗೂ ಗ್ರಾಮ ಆಡಳಿತ ಅಧಿಕಾರಿಗಳ ಮೂಲಕ ತಹಶೀಲ್ದಾರರಿಂದ ಆರ್ಚಕರ ಪ್ರಮಾಣ ಪತ್ರ ನೀಡಿ (ತಹಶೀಲ್ದಾರರಿಂದ ಅರ್ಚಕರ ಪ್ರಮಾಣ ಪತ್ರದ ಧೃಢೀಕರಣ ಪ್ರಮಾಣ ಪಡೆದು ಕೊಂಡು
ಸೇವಾ ಸಿಂಧೂ ಪೋರ್ಟಲ್ ನಲ್ಲಿ ಅರ್ಜಿ ಸಲ್ಲಿಸಬೇಕು ಮುಂದೆ ಅರ್ಚಕರ ಕುಂದುಕೊರತೆಗಳ ಸಭೆ ಕರೆದು ಅರ್ಚಕರ ಸಮಸ್ಯೆಗಳನ್ನು ಪರಿಹರಿಸುವ ನಿಟ್ಟಿನಲ್ಲಿ ಕ್ರಮ ಕೈಗೊಳ್ಳುವೆ ಎಂದರು.
ಇದೇ ಸಂರ್ಭದಲ್ಲಿ ಕಂದಾಯ ಅಧಿಕಾರಿಗಳಾದ ಶರಣೇಗೌಡ,ವಿಷಯ ನಿರ್ವಾಹಕರಾದ ಹನುಮಂತ ಗುರಿಕಾರ,ಗ್ರಾಮ ಲೆಕ್ಕ ಅಧಿಕಾರಿಗಳಾದ ಗಂಗಪ್ಪ , ಅನಿತಾ , ರವಿ ಬಳ್ಳೂರು,ಅಮರೇಶ ಬಳಗಾನೂರ,ಸೇರಿದಂತೆ ಮಸ್ಕಿ ಮಲ್ಲಿಕಾರ್ಜುನ ದೇವಸ್ಥಾನದ ಅರ್ಚಕರಾದ ಸಿದ್ದಯ್ಯ ಹೆಸರೂರು ಹಿರೇಮಠ, ವಟಗಲ್ ಬಸವೇಶ್ವರ ದೇವಸ್ಥಾನದ ಬಸವ ಸ್ಬಾಮಿ,ಮರಿಸ್ವಾಮಿ,ಚಿಲ್ಕರಾಗಿ ಬಸವೇಶ್ವರ ದೇವಸ್ಥಾನದ ಘನಮಠದಯ್ಯ ಸ್ವಾಮಿ,ಇರಕಲ್ಲ,ಬಸಾಪುರ,ಗುಡಿಹಾಳ,ಪಾಮನ ಕಲ್ಲೂರು,ಮಲ್ಲದಗುಡ್ಡ,ಸೇರಿದಂತೆ ತಾಲೂಕಿನ ಕಂದಾಯ ನಿರೀಕ್ಷಕರು , ಗ್ರಾಮ ಆಡಳಿತ ಅಧಿಕಾರಿಗಳು ತಾಲೂಕಿನ ಅನೇಕ ಅರ್ಚಕರು ಇದ್ದರು.


ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ