ಬಾಲಕಿ ಮೇಲೆ ದೊಡ್ಡಪ್ಪ ನಿಂದ ಅತ್ಯಾಚಾರ ಗರ್ಭಿಣಿ ಯಾದ ಬಾಲಕಿ : ಪ್ರಕರಣ ದಾಖಲು
ಮಸ್ಕಿ : ತಾಲ್ಲೂಕಿನ ಸಂತೆಕೆಲ್ಲೂರು ಗ್ರಾಮದಲ್ಲಿ 15 ವರ್ಷದ ಬಾಲಕಿ ಅತ್ಯಾಚಾರ ನಡೆಸಿದ ಆರೋಪದ ಮೇಲೆ ಆಕೆಯ ದೊಡ್ಡಪ್ಪ ನನ್ನು ಪೊಲೀಸರು ಬಂಧಿಸಿದ್ದಾರೆ.
ಎರಡು ದಿನಗಳ ಹಿಂದಷ್ಟೇ ಈ ಆಘಾತಕಾರಿ ಘಟನೆ ಬೆಳಕಿಗೆ ಬಂದಿದೆ.15 ವರ್ಷದ ಬಾಲಕಿಯು ಹೊಟ್ಟೆ ನೋವು ಎಂದು ಆಸ್ಪತ್ರೆಗೆ ದಾಖಲಾಗಿದ್ದು ಬಾಲಕಿ ಗರ್ಬಿಣಿಯಾಗಿದ್ದಾಳೆ ಎಂದು ತಿಳಿದು ಬಂದಿದೆ.
ನಾನು 5 ವರ್ಷದವಳಿದ್ದಾಗ ತಂದೆ-ತಾಯಿ ಬೇರೆ ಬೇರೆ ಮದುವೆ ಮಾಡಿಕೊಂಡು ಹೊಗಿದ್ದು ನನ್ನನ್ನು ಅಜ್ಜಿ ಸಾಕಿದ್ದು, ನಾನು ಆಗಾಗ ನನ್ನ ದೊಡ್ಡಮ್ಮಳ ಮನೆಗೆ ಹೊಗಿ ಬರುತ್ತಿದ್ದೆ, ದಿನಾಂಕ 26.01.2024 ರಂದು ನಾನು ದೊಡ್ಡಮ್ಮಳ ಮನೆಗೆ ಹೋದಾಗ ನನ್ನ ದೊಡ್ಡಪ್ಪನಾದ ದೇವಪ್ಪ ಮಧ್ಯಾಹ್ನ ಮನೆಯಲ್ಲಿ ನನ್ನನ್ನು ಬಲತ್ಕಾರವಾಗಿ ಅತ್ಯಾಚಾರ ಮಾಡಿ ಈ ವಿಷಯವನ್ನು ಯಾರಿಗಾದರೂ ಹೇಳಿದರೆ ನೀನ್ನ ಜೀವ ತೆಗೆಯುತ್ತೆನೆ ಅಂತಾ ಜೀವ ಬೆದರಿಕೆ ಹಾಕಿ ಪದೇ ಪದೇ ಅತ್ಯಾಚಾರ ಮಾಡಿದ್ದಾನೆ ಅಷ್ಟೇ ಅಲ್ಲದೆ ನಾನು
ಸಂತೆಕಲ್ಲೂರು ಗ್ರಾಮದಲ್ಲಿದ್ದಾಗ ಪ್ರತಿ ಬುಧವಾರ ಸಂತೆಗೆ ಬಂದಾಗ ಮನೆಗೆ ಬಂದು ಅತ್ಯಾಚಾರ ಮಾಡಿರುತ್ತಾನೆ. ಎಂದು ಬಾಲಕಿ ಮಸ್ಕಿ ಪೊಲೀಸ್ ಠಾಣೆಗೆ ನೀಡಿದ ದೂರಿನಲ್ಲಿ ತಿಳಿಸಿದ್ದಾಳೆ.
ಪೊಲೀಸರು ಬಾಲಕಿಯ ಹೇಳಿಕೆ ಪ್ರಕಾರ ಕೇಸ್ ಸಂಖ್ಯೆ 04/2025 ಸೆಕ್ಷೆನ್ ಕಲಂ 376, 506 ಐಪಿಸಿ ಹಾಗೂ 4 & 6 ಪೋಕ್ಸೋ ಕಾಯ್ದೆ 2012 ರ ಪ್ರಕಾರ ಪ್ರಕರಣ ದಾಖಲೆ ಮಾಡಿದ್ದು ಹೆಚ್ಚಿನ ತನಿಖೆ ಕೈಗೊಂಡಿದ್ದಾರೆ.


ಇತವನಿಗೆ ಗಲ್ಲು ಶೀಕ್ಷೆ ಕೋಡಿಸಿ ಆ ಬಾಲಕಿಗೆ ನ್ಯಾಯ ಕೋಡುಸಿ ಸರ್
ಪ್ರತ್ಯುತ್ತರಅಳಿಸಿ