" ಶ್ರೀ ಗುರು ಕೊಟ್ಟೂರೇಶ್ವರ ಕಾರ್ತಿಕೋತ್ಸವದಲ್ಲಿ ಜಿಲ್ಲಾಧಿಕಾರಿಗಳು ಭಕ್ತಿ ಸಮರ್ಪಣೆ "
*ವಿಜೃಂಭಣೆಯಿಂದ ಜರುಗಿದ ಶ್ರೀ ಗುರುವಿನ ಕಾರ್ತಿಕೋತ್ಸವ*
ಕೊಟ್ಟೂರು :ಪಟ್ಟಣದ ಶ್ರೀ ಗುರು ಕೊಟ್ಟೂರೇಶ್ವರ ಸ್ವಾಮಿಯ ಕಾರ್ತಿಕೋತ್ಸವ ಅಸಂಖ್ಯಾತ ಭಕ್ತರ ಸಮ್ಮುಖದಲ್ಲಿ ಸೋಮವಾರ ವಿಜೃಂಭಣೆಯಿಂದ ಜರುಗಿತು.
ದೇವಸ್ಥಾನದ ಮುಂಭಾಗದ ಆವರಣದಲ್ಲಿ ಸಾಲಾಗಿ ಜೋಡಿಸಿದ್ದ ಮಣ್ಣಿನ ಪ್ರಣತಿಯಲ್ಲಿ ಸಂಜೆ ೬ ಗಂಟೆ ಹೊತ್ತಿಗೆ ಸ್ವಾಮೀಜಿಗಳು, ಅಧಿಕಾರಿಗಳು, ಪ್ರಮುಖರು ದೀಪ ಹಚ್ಚುವ ಮೂಲಕ ಚಾಲನೆ ನೀಡಿದರು.
ನಂತರದಲ್ಲಿ ಸ್ವಾಮಿಯ ಭಕ್ತರು ಪ್ರಣತಿಯಲ್ಲಿ ಎಣ್ಣೆ, ಬತ್ತಿ ಹಾಕಿ ಭಕ್ತಿ ಸಮರ್ಪಿಸಿದರು. ಹರಕೆ ರೂಪದಲ್ಲಿ ಭಕ್ತರು ಕೊಬ್ಬರಿ ಸುಟ್ಟರು. ಕಾರ್ತಿಕೋತ್ಸವಕ್ಕೆ ಕ್ರಿಯಾಮೂರ್ತಿಗಳಾದ ಶ್ರೀ ಶಿವಪ್ರಕಾಶ ಕೊಟ್ಟೂರು ದೇವರು, ಸೋಮಶಂಕರ ಸ್ವಾಮಿಗಳು, ಜಿಲ್ಲಾಧಿಕಾರಿ ಕವಿತಾ ಮನ್ನಿಕೇರಿ,ಪಿ.ಎಚ್.ದೊಡ್ಡರಾಮಣ್ಣ, ಬಿ.ಡಿ.ಸಿ.ಸಿ.ಬ್ಯಾಂಕ್ ಐ ದಾರುಕೇಶ್, ಕಾಂಗ್ರೆಸ್ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಅಡಿಕೆ ಮಂಜುನಾಥ್, ಧರ್ಮಕರ್ತ ಎ.ಕೆ ಶೇಖರಯ್ಯ, ಧಾರ್ಮಿಕ ಇಲಾಖೆ ಎಸಿ ಪ್ರಕಾಶರಾವ್, ದೇವಸ್ಥಾನ ಇಒ ಮಲ್ಲಪ್ಪ, ಹಾಗೂ ಮುಖಂಡರು, ದೇವಸ್ಥಾನದ ಸಿಬ್ಬಂದಿಯವರು ಇದ್ದರು.


ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ