ಪಡಿತರ ವಿತರಣೆಯಲ್ಲಿ ಸರ್ವರ್ ದೋಷ ಕಾದುಕುಳಿತ ಬಡ ಕುಟುಂಬಗಳು
ಕೊಟ್ಟೂರು : ರಾಜ್ಯದಲ್ಲಿ ಪಡಿತರದಿಂದಲೇ ತಮ್ಮ ನಿತ್ಯ ಜೀವನ ನಡೆಸುವ ಹಲವಾರು ಕುಟುಂಬಗಳಿವೆ. ಪ್ರತಿ ತಿಂಗಳು ಪಡಿತರ ತಂದು ಮನೆಯಲ್ಲಿ ಊಟ ಮಾಡುವ ಎಷ್ಟೋ ಕುಟುಂಬಗಳು ಇದನ್ನೇ ನಂಬಿಕೊಂಡಿವೆ. ಆದರೆ ಈ ತಿಂಗಳ ಪಡಿತರ ವಿತರಣೆಯಲ್ಲಿ ಆನ್‌ಲೈನ್ ಸರ್ವರ್ ದೋಷ ಬಂದಿರುವುದರಿಂದ ಪಡಿತರ ವಿತರಣೆಗೆ ಅಡಚಣೆ ಉಂಟಾಗಿದೆ. ಕೊಟ್ಟೂರಿನ ಅಕ್ಕಿ ವಿತರಣಾ ಹಲವು ಕೇಂದ್ರದಲ್ಲಿ ಬೆಳಗಿನಿಂದಲೂ ತಮ್ಮ ಕೆಲಸ ಕಾರ್ಯಗಳನ್ನು ಬಿಟ್ಟು ಪಡಿತರ ವಿತರಣಾ ಕೇಂದ್ರಗಳ ಬಳಿ ಬಂದು ಕಾದು ಕಾದು ಸುಸ್ತಾಗಿದ್ದಾರೆ.
ಆಹಾರ ಇಲಾಖೆಯ ಅಧಿಕಾರಿಗಳು ಏನು ಮಾಡುತ್ತಿದ್ದಾರೆ ಎಂಬ ಅನುಮಾನ ಮೂಡಿದೆ. ಮೇಲಾಧಿಕಾರಿಗಳು ಇತ್ತ ಗಮನ ಹರಿಸಿ, ಶೀಘ್ರವೇ ಸರ್ವರ್ ದೋಷಗಳನ್ನು ಪರಿಹರಿಸಲು ಮುಂದಾಗಬೇಕಿದೆ.
ಆಹಾರ ಇಲಾಖೆಯ ಉಪನಿರ್ದೇಶಕರಿಗೆ ಕರೆ ಮಾಡಿದರೆ, ಫೋನ್ ಸ್ವೀಕರಿಸುತ್ತಿಲ್ಲ, ನಮ್ಮ ಕಷ್ಟ ಕೇಳುವವರು ಯಾರು ಎಂದು ಪತ್ರಿಕಾ ಮೂಲಕ ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದರು
ಸರ್ವರ್ ದೋಷವಿರುವುದನ್ನು ಸರಿಪಡಿಸಲು ಸಂಬಂಧಪಟ್ಟ ಅಧಿಕಾರಿಗಳಿಗೆ ಸೂಚನೆ ನೀಡಿ, ಸರಿಪಡಿಸಲು ಕ್ರಮ ವಹಿಸುವೆ. ವಿಜಯನಗರ ಜಿಲ್ಲಾಧಿಕಾರಿಗಳು
ನಮ್ಮ ಲಾಗಿನ್ ಮತ್ತು ಪಬ್ಲಿಕ್ ಲಾಗಿನ್ ಇರುವುದಿಲ್ಲ ಆದರೂ ಕೂಡ ಸರ್ವರ್ ಡೌನ್ ಆಗಿದ್ದು, ಈ ಬಗ್ಗೆ ಮೇಲಾಧಿಕಾರಿಗಳಿಗೆ ವರದಿ ಮಾಡಲಾಗಿದೆ. ಶೀಘ್ರವೇ ಇರುವ ದೋಷವನ್ನು ಸರಿಪಡಿಸಿ ಶೀಘ್ರ ಪಡಿತರ ವಿತರಣೆಗೆ ಕ್ರಮ ವಹಿಸಲಾಗುವುದು
ಮಂಜುನಾಥ್ ಆಹಾರ ನಿರೀಕ್ಷಕ, ಕೊಟ್ಟೂರು



ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ