ಪೋಸ್ಟ್‌ಗಳು

Vijayanagara News ಲೇಬಲ್ ಜೊತೆಗೆ ಪೋಸ್ಟ್‌ಗಳನ್ನು ತೋರಿಸಲಾಗುತ್ತಿದೆ

*ಮಳೆಗಾಗಿ ಶ್ರೀ ಆಂಜನೇಯ ಸ್ವಾಮಿಗೆ ಪ್ರಾರ್ಥನೆ ಸಲ್ಲಿಸಿದ ದಲಿತ ಮುಖಂಡರು*

ಇಮೇಜ್
ದಾವಣಗೆರೆ:- ಕೂಡ್ಲಿಗಿ ತಾಲೂಕಿನ ಕಾನ ಹೊಸಹಳ್ಳಿ ಗ್ರಾಮದ ದಲಿತ ಸಮುದಾಯದವರ ಮದುವೆಯ ಕಾರ್ಯಕ್ರಮಕ್ಕೆ ದಾವಣಗೆರೆ ಜಿಲ್ಲೆ, ದಾವಣಗೆರೆ ತಾಲೂಕು ಮಳಲ್ಕೆರೆ ಗ್ರಾಮಕ್ಕೆ ಕಾನಹೊಸಹಳ್ಳಿ ದಲಿತ ಮುಖಂಡರು ಆಗಮಿಸಿದ್ದರು. ಮೊಳಲ್ಕೆರೆ   ಗ್ರಾಮದಲ್ಲಿ ಉತ್ತಮ ಮಳೆಯಾಗಿದ್ದು ಕಂಡು ನಮ್ಮ ತಾಲೂಕಿನಲ್ಲಿ ಅಲ್ಲಲ್ಲಿ ಅಲ್ಪ ಸ್ವಲ್ಪ ಮಳೆಯಾಗಿದೆ. ಬೆತ್ತಲೆ ಕೂಡ ಕಡಿಮೆ ಪ್ರಮಾಣದಲ್ಲಿ ಆಗಿದೆ ಎಂದು ಹೊಸಹಳ್ಳಿಯ ದಲಿತ ಮುಖಂಡರು ಮೊಳಲು ಕೆರೆ ಗ್ರಾಮದ ಶ್ರೀ ಆಂಜನೇಯ ದೇವಸ್ಥಾನಕ್ಕೆ ತೆರಳಿ ಶ್ರದ್ಧೆ ಭಕ್ತಿಯಿಂದ ಕಾನ ಹೊಸಹಳ್ಳಿ ಸೇರಿದಂತೆ ಸುತ್ತಮುತ್ತಲಿನ ಗ್ರಾಮಗಳಿಗೆ ಮತ್ತು ಕೂಡ್ಲಿಗಿ ತಾಲೂಕಿನಾದ್ಯಂತ ಉತ್ತಮ ಮಳೆ ಹಾಗೂ ಬೆಳೆಯಾಗಲಿ ಎಂದು ಪ್ರಾರ್ಥನೆ ಸಲ್ಲಿಸಿದರು

ಓಬಳಾಪುರ ಗ್ರಾಮದಲ್ಲಿಹೋಳಿಗೆ ಅಮ್ಮನ ಹಬ್ಬಆಚರಣೆ

ಇಮೇಜ್
ಕೊಟ್ಟೂರು: ಕೂಡ್ಲಿಗಿ ಯ ಕಾನ ಹೊಸಹಳ್ಳಿ: -ಸಮೀಪದ ಹುರುಳಿಹಾಳ್ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಓಬಳಾಪುರ ಗ್ರಾಮದಲ್ಲಿ ಆಷಾಢ ಮಾಸದ ಅಂಗವಾಗಿ ಶುಕ್ರವಾರ ಸಡಗರ ಸಂಭ್ರಮದಿಂದ ಹೋಳಿಗೆ ಅಮ್ಮನ ಹಬ್ಬವನ್ನು ಆಚರಿಸಲಾಯಿತು. ಉತ್ತಮ ಮಳೆ ಬಂದು ರೈತರ ಬದುಕು ಹಸನಾಗಲಿ, ರೈತಾಪಿ ವರ್ಗದ ಜನರ ಬಿತ್ತನೆ ಮಾಡಿದ ಬೆಳೆಗಳು ಸಮೃದ್ಧಿಯಾಗಿ ಬೆಳೆಯಲಿ, ಮನೆಗಳಲ್ಲಿನ ಧನ ಕರುಗಳು ಚೆನ್ನಾಗಿರಲಿ, ರೈತರ ಆರೋಗ್ಯ ವೃದ್ಧಿಯಾಗಿ ಗ್ರಾಮದಲ್ಲಿ ಶಾಂತಿ ನೆಮ್ಮದಿ ನೆಲೆಸಲೆಂದು ಹಬ್ಬ ಆಚರಿಸಿದರು. ಮನೆಯಲ್ಲಿರುವ ಮಕ್ಕಳಿಗೆ ಅಮ್ಮ, ದಡಾರ, ಪ್ಲೇಗ್‌, ಸಿಡುಬು ಸೇರಿದಂತೆ ಸಾಂಕ್ರಾಮಿಕ ರೋಗಗಳು ಹರಡದಂತೆ, ದುಷ್ಟಶಕ್ತಿ ಊರೊಳಗೆ ಬಾರದಂತೆ ಹಾಗೂ ಕಾಲಕಾಲಕ್ಕೆ ಮಳೆ ಆಗುವುದಕ್ಕಾಗಿ ಹುಟ್ಟಿಕೊಂಡಿದ್ದೇ ಈ ಹೋಳಿಗೆ ಅಮ್ಮ ಈ ಹಬ್ಬವನ್ನು ಹಿರಿಯರಿಂದ ಕಿರಿಯರವರೆಗೂ ಭಯ, ಭಕ್ತಿಯಿಂದ ಆಚರಿಸುತ್ತಾ ಬರಲಾಗಿದೆ ಎನ್ನುವುದು ವಿಶೇಷ. ಬಿದಿರಿನ ಮರದಲ್ಲಿ ಕುಡಿ ಬಾಳೆದೆಲೆ ಹಾಸಿ ಅದರ ಮೇಲೆ ಕುಂಬಾರನ ಮನೆಯಿಂದ ತಂದ ಮಣ್ಣಿನ ಕುಡಿಕೆಗೆ, ಬೇವಿನ ಸೊಪ್ಪು, ಅರಿಶಿನ ಕುಂಕುಮ, ಬಳೆ, ಹೋಳಿಗೆ, ಮೊಸರಿನ ಎಡೆ ಮಾಡಿ, ಗ್ರಾಮದಲ್ಲಿ ಹೋಳಿಗೆ ಅಮ್ಮನ ಗದ್ದಿಗೆಯ ಬೇವಿನ ಮರದ ಇಟ್ಟು ಸಾಮೂಹಿಕವಾಗಿ ಪೂಜಿಸಿ ಎಡೆ ಅರ್ಪಿಸಿದರು. ನಂತರ ಗ್ರಾಮದ ಹೊರವಲಯದ ಗಡಿ ಅಂಚಿನ ಹೊರೆಗೆ ಹೋಗಿ ಹೋಳಿಗೆ ಅಮ್ಮನ ಗದ್ದಿಗೆಯ ಬೇವಿನ ಮರದಡಿ ಇಟ್ಟು ಸಾಮೂಹಿಕವಾಗಿ ಪೂಜಿಸಿ ಎಡೆ ಅರ್ಪಿಸಿ ನಂತರ ಹಿಂದಕ್ಕೆ ತಿರುಗಿ ನ

ಪಟ್ಟಣ ಪಂಚಾಯಿತಿ ಅವರಿಂದ ಹುಚ್ಚು ನಾಯಿಯನ್ನು ಸೆರೆ ಹಿಡಿಯಲಾಯಿತು.

ಇಮೇಜ್
  ಕೊಟ್ಟೂರು ಪಟ್ಟಣ ಪಂಚಾಯಿತಿ ವ್ಯಾಪ್ತಿಯಲ್ಲಿ ಶನಿವಾರ ಸಾಕು ನಾಯಿಯೊಂದಕ್ಕೆ ಹುಚ್ಚು ಹಿಡಿದಿದ್ದು ಪಟ್ಟಣದಲ್ಲಿ ತಿರುಗಾಡುತ್ತಿತ್ತು ಸಿಕ್ಕಸಿಕ್ಕ ಸಾರ್ವಜನಿಕರಿಗೆ ಕಚ್ಚಿರುವ ಘಟನೆಗಳು ನಡೆದಿದ್ದು ಪಟ್ಟಣ ಪಂಚಾಯಿತಿ ಇಲಾಖೆಯವರು ಇಂದು ಬೆಳಿಗ್ಗೆಯಿಂದಲೂ ಹುಚ್ಚು ನಾಯಿ ಹಿಡಿಯಲು ಎಲ್ಲಾ ರೀತಿಯು ಕ್ರಮ ಕೈಗೊಳ್ಳಲಾಯಿತು. ಆದರೆ ಇಲಾಖೆಯವರು ಹರ ಸಾಹಸ ಮಾಡಿ ಹುಚ್ಚು ನಾಯಿ ಒಂದನ್ನು ಪಟ್ಟಣ ಪಂಚಾಯಿತಿ ಮುಖ್ಯ ಅಧಿಕಾರಿಗಳು ಹಾಗೂ ಸಿಬ್ಬಂದಿ ವರ್ಗದವರು ನಾಯಿ ಹಿಡಿಯುವ ಕಾರ್ಯಾಚರಣೆ ಯಶಸ್ವಿಯಾಗಿದ್ದಾರೆ. ಆತಂಕದಲ್ಲಿರುವ ಸಾರ್ವಜನಿಕರಿಗೆ ಸಂಜೆ 7:00 ಗಂಟೆ ಸುಮಾರಿಗೆ ಹುಚ್ಚುನಾಯಿಯನ್ನು ಸೆರೆ ಹಿಡಿಯಲಾಯಿತು. ಎಂದು ಪಟ್ಟಣ ಪಂಚಾಯಿತಿ ಮುಖ್ಯ ಅಧಿಕಾರಿಗಳು ಪತ್ರಿಕೆಗೆ ತಿಳಿಯಪಡಿಸಿದರು.

ಕೊಟ್ಟೂರಿನಲ್ಲಿ ಹುಚ್ಚು ನಾಯಿ ಯಿಂದ 9 ಜನರಿಗೆ ಕಡಿತ

ಇಮೇಜ್
  ಹುಚ್ಚು ನಾಯಿ ಕಂಡ ಕೂಡಲೇ ಕೊಟ್ಟೂರು ಪಟ್ಟಣ ಪಂಚಾಯತಿ ಇಲಾಖೆಯವರಿಗೆ ತಿಳಿಯಪಡಿಸಲು ಸಾರ್ವಜನಿಕರಲ್ಲಿ ಕೋರಲಾಗಿದೆ. ಕೊಟ್ಟೂರಿನ ತಾಲ್ಲೂಕಿನ ಹೌಸಿಂಗ್ ಬೋರ್ಡ್ ಕಾಲೋನಿಯಲ್ಲಿ ರಿಟರ್ಡ್ ಫೈರ್ ಆಫೀಸರ್ ಮಲ್ಕನಾಯ್ಕ್ ಅವರಿಗೆ ರೈಲ್ವೆ ಸ್ಟೇಷನ್ ಕಡೆಗೆ ವಾಯು ವಿಹಾರಕ್ಕೆ ಎಂದು  ಹೋದಾಗ ನಾಯಿಗಳು ಹಿಂಬಾಲಿಸಿ ಅವರನ್ನು ಕೆಡವಿ ಕಚ್ಚಿ ಕಚ್ಚಿ ತುಂಬಾ  ಹಾನಿ ಗಾಯಗಳು ಆಗಿರುತ್ತದೆ.ಮತ್ತು ಲಾಲ್ ಬಹದ್ದೂರ್ ಶಾಸ್ತ್ರಿ ಬಡಾವಣೆ ಇನ್ನು ಅನೇಕ ಕಡೆ ಹುಚ್ಚು ನಾಯಿ ಕಡಿದಿದೆ ಎಂದು ತಿಳಿಸಲಾಗಿದೆ. ಈ ಹಿಂದೆ ಪತ್ರಿಕೆಯವರು ಸುಮಾರು 20 ದಿನದಿಂದ ಪತ್ರಿಕೆಯಲ್ಲಿ ಪಟ್ಟಣದಲ್ಲಿ  ಬೀದಿ  ನಾಯಿಗಳ ಹಾವಳಿ ಹೆಚ್ಚಾಗಿದೆ ಎಂದು ವರದಿ ಮಾಡಲಾಯಿತು. ಪಟ್ಟಣ ಪಂಚಾಯಿತಿ  ಅಧಿಕಾರಿಗಳು ಹಾಗೂ ಸಿಬ್ಬಂದಿ ವರ್ಗದವರು ಬೇಜವಾಬ್ದಾರಿ ತೋರಿದ್ದು ಪ್ರತಿದಿನ ಒಬ್ಬರಿಗಾದರೂ ನಾಯಿಗಳು ಕಚ್ಚಿ ತೊಂದರೆ ಕೊಟ್ಟಿದ್ದು ಪ್ರಾಣ ಹಾನಿಯಾಗುವ ಸಂಭವವಿದೆ. ಈಗಲಾದರೂ ಸಂಬಂಧಪಟ್ಟ ಇಲಾಖೆ ಎಚ್ಚೆತ್ತುಕೊಂಡು  ನಾಯಿಗಳನ್ನು ಹಿಡಿಯುವ ಕೆಲಸ ಮಾಡಬೇಕು. ಸಾರ್ವಜನಿಕರ  ಪ್ರಾಣಕ್ಕೆ ತೊಂದರೆಯಾಗದಂತೆ ಇಲಾಖೆಯೂ ಜವಾಬ್ದಾರಿ ವಹಿಸಬೇಕಾಗಿದೆ. ಹಳ್ಳಿ ವೀರಣ್ಣ ತಂದೆ ಸಣ್ಣವೀರಪ್ಪ 73 ವರ್ಷ ಬಸವೇಶ್ವರನ ನಗರ ನಾಯಿಂದ ಕಚ್ಚಿದ್ದು 9901337508 ಇಲ್ಲಿಯವರೆಗೂ ಕೊಟ್ಟೂರು ಪಟ್ಟಣದಲ್ಲಿ ಹುಚ್ಚು ನಾಯಿ ಒಂದು ಒಂಬತ್ತು ಜನರಿಗೆ ಕಡೆದಿದ್ದು ಪಟ್ಟಣ ಪಂಚಾಯಿತಿ ಇಲಾಖೆಯವರು ನಾಯಿ ಹಿಡಿಯುವ ಕಾರ್ಯಾಚರಣೆ

ಕೊಟ್ಟೂರು ಪಟ್ಟಣ ಪಂಚಾಯಿತಿಯನ್ನು ಪುರಸಭೆಯನ್ನಾಗಿ ಮಾಡಲು ಒತ್ತಾಯ

ಇಮೇಜ್
ಕೊಟ್ಟೂರು :ಈ ಹಿಂದೆ ಪುರಸಭೆಯಾಗಿ, ವಿಧಾನಸಭಾ ಕ್ಷೇತ್ರವಾಗಿಯೂ ಇತ್ತು. ಆದರೆ ನಂತರದ ದಿನಗಳಲ್ಲಿ ಪುರಸಭೆ ಸ್ಥಾನ, ವಿಧಾನಸಭಾ ಕ್ಷೇತ್ರ ಎರಡೂ ಕೈತಪ್ಪಿದವು. ಪುರಸಭೆಯಿಂದ ಪಟ್ಟಣ ಪಂಚಾಯಿತಿಗೆ ಹಿಮ್ಮುಖ ಚಲನೆಗೆ ಕೊಟ್ಟೂರು ಒಳಗಾಯಿತು. ಪ್ರಸ್ತುತ ವಿಜಯನಗರ ಜಿಲ್ಲೆಯಲ್ಲಿಯೇ ಪರಿಣಾಮಾತ್ಮಕ ರಾಜಸ್ವ ಸಂಗ್ರಹವಾಗುವುದರ ಜೊತೆಗೆ ಐತಿಹಾಸಿಕ ಹಿನ್ನೆಲೆ, ಪೌರಾಣಿಕ ಹಿನ್ನೆಲೆಯಿದ್ದರೂ ಸಹ ಪಟ್ಟಣ ಪಂಚಾಯಿತಿಯಾಗಿಯೇ ಉಳಿದಿದೆ. ಪುರಸಭೆಗೆ ಇರುವ ಎಲ್ಲ ಅರ್ಹತೆಗಳಾದ ಜನಸಂಖ್ಯೆ, ಮೂಲಭೂತ ಸೌಲಭ್ಯ, ಪಟ್ಟಣ ಬೆಳೆಯುತ್ತಿರುವ ವೇಗ ಇವೆಲ್ಲವೂ ಗಣನೀಯವಾಗಿ ಏರುಮುಖವಿದ್ದರೂ ಸಹ ಕೊಟ್ಟೂರನ್ನು ಪುರಸಭೆಯಾಗಿ ಮೇಲ್ದರ್ಜೆಗೇರಿಸಲು ಸರ್ಕಾರದ ಇಚ್ಛಾಶಕ್ತಿಯ ಕೊರತೆ ಎದ್ದುಕಾಣುತ್ತಿದೆ ಎಂದು ಸಾರ್ವಜನಿಕರು ಬೇಸರ ವ್ಯಕ್ತಪಡಿಸಿದರು. ಈ ಹಿಂದೆಯೇ ಕೊಟ್ಟೂರನ್ನು ಪುರಸಭೆಯನ್ನಾಗಿ ಮಾಡಲು ಶ್ರಮಿಸಿದರೂ ಅದು ಕೈಗೂಡದೇ ಅರ್ಧಕ್ಕೆ ನಿಂತುಬಿಟ್ಟಿತು.  ಸಾಮಾಜಿಕ ಬದ್ಧತೆಯನ್ನು ಒಳಗೊಂಡಂತೆ ಗ್ಯಾರಂಟಿಗಳನ್ನು ಈಡೇರಿಸುವುದರ ಮೂಲಕ ಜನರ ಭರವಸೆಯನ್ನು ಹೆಚ್ಚಿಸಿರುವ ಸಿದ್ಧರಾಮಯ್ಯನವರ ಕಾಂಗ್ರೆಸ್ ಸರ್ಕಾರ ಜನರ ಆಶೋತ್ತರಗಳಿಗೆ ತಕ್ಕಂತೆ ಕೆಲಸ ಮಾಡುವಂತೆ ಕಾಣಿಸುತ್ತಿರುವ ಪ್ರಯುಕ್ತ ಈ ಭಾಗದ ಜನರ ಆಸೆ ಈಗ ಚಿಗುರೊಡೆದಿದೆ. ವಿಶೇಷವಾಗಿ ವಿಜಯನಗರ ಜಿಲ್ಲಾ ಉಸ್ತುವಾರಿ ಸಚಿವರಾದ ಜಮೀರ್ ಅಹಮದ್ ಖಾನ್ ಕೂಡಲೇ ಈ ಬಗ್ಗೆ ಕಾರ್ಯಪ್ರವೃತ್ತರಾಗಿ ಕೊಟ್ಟೂರಿಗೆ ಆಡಳಿತಾತ್ಮಕವಾಗಿ ಸಿಗ

ಇನ್ಶೂರೆನ್ಸ್ ನೆಪದಲ್ಲಿ ಖಾತೆಯ ಹಣ ಗುಳುಂ ಮಾಡಿದ ಹೆಚ್.ಡಿ.ಎಫ್.ಸಿ. ಬ್ಯಾಂಕ್??

ಇಮೇಜ್
  ಕೊಟ್ಟೂರು: ಬ್ಯಾಂಕ್‌ಗಳಲ್ಲಿ ಗ್ರಾಹಕರು ಹಣ ಇಡುವುದೇ ಕಷ್ಟಕಾಲಕ್ಕೆ ಅನುವಾಗಲೆಂದು ಆದರೆ, ಕೊಟ್ಟೂರಿನ ಹೆಚ್.ಡಿ.ಎಫ್.ಸಿ. ಬ್ಯಾಂಕ್ ಗ್ರಾಹಕರೊಬ್ಬರ ಖಾತೆಯಲ್ಲಿನ ಹಣವನ್ನು ಇನ್ಸೂರೆನ್ಸ್ ಹೆಸರಿನಲ್ಲಿ ಗ್ರಾಹಕರ ಗಮನಕ್ಕೆ ತಾರದೇ ಅವರ ಖಾತೆಯಲ್ಲಿನ ಹಣದಲ್ಲಿ ಇನ್ಸೂರೆನ್ಸ್ ಪಾಲಿಸಿ ಮಾಡಿಸಿದ್ದಾರೆ. ಕೊಟ್ಟೂರಿನ ಅಮರನಾಥ್ ಎಂಬುವವರು ತಮ್ಮ ಖಾತೆಯಲ್ಲಿ ದಿಡೀರನೆ ಹಣ ಕಡಿತವಾದ ಪ್ರಯುಕ್ತ ಬ್ಯಾಂಕಿಗೆ ಹೋಗಿ ವಿಚಾರಿಸಿದಾಗ ಇನ್ಸೂರೆನ್ಸ್ ಮಾಡಿಸಿದ್ದೇವೆ. ಹಾಗಾಗಿ ನಿಮ್ಮ ಹಣ ಕಡಿತವಾಗಿದೆ ಎಂದು ತಿಳಿಸಿದ್ದಾರೆ. ನನ್ನ ಅನುಮತಿ ಇಲ್ಲದೇ ಹೇಗೆ ಕಡಿತ ಮಾಡಿದಿರಿ ಎಂದು ಕೇಳಿದಾಗ ಯಾವುದೇ ಉತ್ತರ ನೀಡಲಿಲ್ಲ. ನಂತರ ಇನ್ಸೂರೆನ್ಸ್ ಪ್ರತಿ ನೀಡಿ, ನಿಮ್ಮ ಹಣವನ್ನು ವಾಪಸ್ ನಿಮ್ಮ ಖಾತೆಗೆ ಜಮಾ ಮಾಡುತ್ತೇವೆ ಎಂದು ಹೇಳಿದ್ದಾರೆ ತಮ್ಮ ಬಳಿ ಇನ್ಸೂರೆನ್ಸ್ ಕಾಪಿ ಸಿಗದೇ ಇದ್ದ ಕಾರಣಕ್ಕೆ ಬ್ಯಾಂಕಿನ ವ್ಯವಸ್ಥಾಪಕರು ತಮ್ಮ ಪರ್ಸನಲ್ ಹಣ ಕೊಡುತ್ತೇನೆ ಎಂದು ಹೇಳಿದ್ದಾರೆ.  ಇದಕ್ಕೆ ಒಪ್ಪದ ಅಮರನಾಥ್ ನಿಮ್ಮ ಹಣ ನನಗೆ ಬೇಡ ನನ್ನ ಖಾತೆಯ ಹಣ ನನಗೆ ಬೇಕು ಎಂದು ಪಟ್ಟು ಹಿಡಿದಿದ್ದಾರೆ. ಇನ್ಸುರೆನ್ಸ್ ರದ್ದುಮಾಡಿ ನನ್ನ ಹಣ ಕೊಡಿ ಎಂದು ಕೇಳಿದ್ದಾರೆ. ಬ್ಯಾಂಕಿನ ಸಿಬ್ಬಂದಿಯಿಂದ ಅಕ್ರಮ ನಡೆದಿಲ್ಲವಾದರೆ ಪರ್ಸನಲ್ ದುಡ್ಡು ಕೊಡುತ್ತೇನೆ ಎಂದು ಏಕೆ ಹೇಳುತ್ತಾರೆ? ಎಂದು ಅಮರನಾಥ್ ಪತ್ರಿಕೆಗೆ ತಿಳಿಸಿದರು. ಇನ್ಸೂರೆನ್ಸ್ ಕಂಪನಿಗಳ ದಾಹಕ್ಕೆ ಕಟ್ಟುಬಿದ್ದು ಹೀಗೆ

ವಿದ್ಯುತ್‌ನಿಂದಾಗಿ ಕಾಡುಹಂದಿಗಳ ಮರಣ

ಇಮೇಜ್
ಕೊಟ್ಟೂರು ತಾಲ್ಲೂಕಿನ ರಾಂಪುರ ಗ್ರಾಮದಲ್ಲಿ ಎರಡು ಕಾಡುಹಂದಿಗಳು ಮೃತಪಟ್ಟಿವೆ. ಪಕ್ಕದಲ್ಲಿಯೇ ಚಿರಿಬಿ ಕಾಯ್ದಿಟ್ಟ ಅರಣ್ಯವಿದ್ದು, ಅದರ ಪಕ್ಕದಲ್ಲಿಯೇ ಇರುವ ಸರ್ವೆ ನಂ. ೫೩೯ ರ ಮಾಲೀಕರಾದ ಪ್ರವೀಣ್ ತಂದೆ ಎಂ.ಎಂ.ಜೆ. ಚಂಡ್ರಜ್ಜ, ಎಂ.ಎಂ.ಜೆ. ಗಿರಿಜಮ್ಮ ಗಂಡ ಎಂ.ಎಂ.ಜೆ. ಚಂಡ್ರಜ್ಜ ಇವರು ತಮ್ಮ ಜಮೀನುಗಳಿಗೆ ಅಳವಡಿಸಿರುವ ವಿದ್ಯುತ್ ತಂತಿಗಳಲ್ಲಿ ಅತಿ ಹೆಚ್ಚು ವಿದ್ಯುತ್ ಸಂವಹನದಿಂದಾಗಿ ಕಾಡುಹಂದಿಗಳು ಮೃತಪಟ್ಟಿವೆ. ಕಾಡುಪ್ರಾಣಿಗಳು ಆಹಾರ ಅರಸುತ್ತಾ ಜಮೀನುಗಳಿಗೆ ಹೋದಾಗ ಈ ಘಟನೆಯಾಗಿದೆ. ಕಾಡುಪ್ರಾಣಿಗಳಿಗೆ ಯಾವುದೇ ಪ್ರಾಣಹಾನಿಯಾಗದಂತೆ ವಿದ್ಯುತ್ ಪ್ರವಹಿಸುವ ಬದಲು ಅತಿ ಹೆಚ್ಚು ವಿದ್ಯುತ್ ಪ್ರವಾಹದಿಂದಾಗಿ ಹಂದಿಗಳು ಮೃತಪಟ್ಟಿದ್ದರಿಂದ ಅರಣ್ಯ ಇಲಾಖೆ ಅಧಿಕಾರಿಗಳು ಕಾರ್ಯಪ್ರವೃತ್ತರಾಗಿ ಚಿರಿಬಿ ಶಾಖೆಯ ಚಿರಿಬಿ ಗಸ್ತುವಿನ ವ್ಯಾಪ್ತಿಯಲ್ಲಿ ಬರುವ ಕೊಟ್ಟೂರು ತಾಲೂಕಿನ ರಾಂಪುರ ಕಂದಾಯ ಗ್ರಾಮದ ಎಂ.ಎಂ.ಜೆ. ಗಿರಿಜಮ್ಮ ಗಂಡ ಚಂಡ್ರಜ್ಜ ಎಂ.ಎಂ.ಜೆ. ರವರಿಗೆ ಸೇರಿದ ಜಮೀನಿನ ಸರ್ವೆ ನಂ. ೫೩೯ ರಲ್ಲಿ ತಂತಿಬೇಲಿಗೆ ಅಕ್ರಮವಾಗಿ ವಿದ್ಯುತ್ ಹಾಯಿಸಿ ಕಾಡುಹಂದಿಗಳನ್ನು ಸಾಯಿಸಿದ ಬಗ್ಗೆ ಖಚಿತ ವರ್ತಮಾನದ ಮಾಹಿತಿ ಇದ್ದು, ಕಾರಣ ಸದರಿ ಘಟನಾ ಸ್ಥಳದ ಸ್ಥಳ ಪರಿಶೀಲನೆಗೆ ಆಗಮಿಸಿ, ವರದಿ ನೀಡಲು ಕೋರಿರುತ್ತಾರೆ.  ಕೋಟ್-೧  ಶಾಖಾಧಿಕಾರಿಗಳ ನಿರ್ಲಕ್ಷ್ಯದಿಂದ ಜಮೀನಿನ ಮಾಲೀಕರು ಅಕ್ರಮವಾಗಿ ಹೆಚ್ಚೆಚ್ಚು ವಿದ್ಯುತ್ ಪ್ರವಹಿಸಿ ಕಾಡುಹಂದಿಗಳ ಹರಣಕ್

12 ನೇ ಶತಮಾನದ ಶರಣೆ ಅಕ್ಕಮಹಾದೇವಿ ಮೊದಲ ಬಂಡಾಯ ಮಹಿಳಾ ಸಾಹಿತಿ

ಇಮೇಜ್
ಕೊಟ್ಟೂರು ..ಸಮಾದಲ್ಲಿನ ಅನೇಕ ತಪ್ಪುಗಳನ್ನು ನೇರವಾಗಿ ಮತ್ತು ನಿಷ್ಟುರವಾಗಿ ಹೇಳಿದ, ಶರಣರೊಂದಿಗೆ ದೈರ್ಯದಿಂದ ಚರ್ಚೆ ನಡೆಸಿದ್ದ ೧೨ನೇ ಶತಮಾನದ ಶರಣೆ ಅಕ್ಕಮಹಾದೇವಿ ಮೊದಲ ಬಂಡಾಯ ಸಾಹಿತಿಯಾಗಿದ್ದಾರೆ ಎಂದು ಗಂಗೋತ್ರಿ ಕಾಲೇಜು ಪ್ರಾಚಾರ್ಯೆ ನಿರ್ಮಲಾ ಶಿವನಗುತ್ತಿ ಅಭಿಪ್ರಾಯಪಟ್ಟರು. ಪಟ್ಟಣದ ಮಹದೇವ ಪದವೀ ಪೂರ್ವ ಕಾಲೇಜಿನಲ್ಲಿ ತಾಲೂಕು ಕಸಾಪ ಹಮ್ಮಿಕೊಂಡಿದ್ದ ಕನ್ನಡ ಸಾಹಿತ್ಯಕ್ಕೆ ಬಂಡಾಯ ಸಾಹಿತಿಗಳ ಕೊಡುಗೆ ಹಾಗೂ ಜೈನಕವಿಗಳ ಕೊಡುಗೆ ವಿಷಯದಲ್ಲಿ ಅವರು ಬುಧವಾರ ದತ್ತಿ ಉಪನ್ಯಾಸ ನೀಡಿದರು. ಸಮಾಜದಲ್ಲಿ ಸಮರ್ಥವಾದ ವ್ಯವಸ್ಥೆ ರೂಪುಗೊಳ್ಳುವುದಕ್ಕೆ ಬಂಡಾಯ ಸಾಹಿತಿಗಳ ಪಾತ್ರ ಅಪಾರವಾಗಿದೆ. ಬಂಡಾಯ ಸಾಹಿತ್ಯಕ್ಕೆ ನೇರ, ನಿಷ್ಠರುವಾಗಿ ಹೇಳುವ, ಸಮಾಜದಲ್ಲಿನ ತಪ್ಪುಗಳನ್ನು ತಿದ್ದಿ ಸರಿದಾರಿಗೆ ತರುವ ಶಕ್ತಿ ಅದಕ್ಕಿದೆ. ರಾಜ್ಯದಲ್ಲಿ ಅನೇಕ ಸಾಹಿತಿಗಳು ಬಂಡಾಯ ಸಾಹಿತ್ಯದ ಮೂಲಕ ಸಮಾಜಕ್ಕೆ, ಸರಕಾರಕ್ಕೆ ಎಚ್ಚರಿಸುವ ಕೆಲಸವನ್ನು ಮಾಡುತ್ತಲೇ ಬಂದಿದ್ದಾರೆ. ಬಂಡಾಯ ಸಾಹಿತ್ಯದಿಂದಲೇ ಅನೇಕ ಜನಪರ ಹೋರಾಟಗಳೂ ರೂಪುಗೊಂಡಿದ್ದವು. ಸಾಹಿತ್ಯಕ್ಕೆ ಸಮಾಜದ ಅಂಕುಡೊAಕುಗಳನ್ನು ತಿದ್ದುವ ಪ್ರಬಲ ಶಕ್ತಿಯನ್ನೂ ಹೊಂದಿದೆ. ಅಲ್ಲದೇ ಮಹಿಳೆಯರಲ್ಲಿ ಆತ್ಮಸ್ಥೆöÊರ್ಯ ತುಂಬುತ್ತದೆ. ಸಾಹಿತ್ಯ ಕ್ಷೇತ್ರಕ್ಕೆ ಬಹು ಹಿಂದಿನಿAದಲೂ ಅನೇಕ ಜೈನ ಕವಿಗಳು ದೊಡ್ಡ ಕೊಡುಗೆ ನೀಡಿದ್ದಾರೆ. ಕನ್ನಡ ನಾಡಿನ ಕಲೆ, ಸಾಧನೆಗಳನ್ನು ಸಾಹಿತ್ಯದ ಮೂಲಕ ಸಾರಿದ್ದಾರೆ. ಹಳೆಗನ್ನಡದಲ್

ರಾಜ್ಯಪಾಲ ರಾದ ಥಾವರ್ ಚಂದ್ ಗೆಹ್ಲೊಟ್ ರವರಿಂದ ಚಿನ್ನದ ಪದಕ ಸ್ವೀಕಾರ : ತನುಜಾ ಶಾನಭೋಗರ

ಇಮೇಜ್
ಕೊಟ್ಟೂರು:ಗಂಗೋತ್ರಿ ಬಿ ಎಸ್ ಡಬ್ಲ್ಯೂ ಪದವಿ ಮಹಾವಿದ್ಯಾಲಯದ ವಿದ್ಯಾರ್ಥಿನಿ ತನುಜಾ ಶಾನಭೋಗರ ಇವರು ಬಿ ಎಸ್ ಡಬ್ಲ್ಯೂ ಪದವಿಯಲ್ಲಿ ಪ್ರಥಮ ರಾಂಕ್ ಪಡೆದಿರುತ್ತಾರೆ.. ದಿನಾಂಕ 13.07.2023ರಂದು ನಡೆದ ವಿಜಯನಗರ ಶ್ರೀಕೃಷ್ಣದೇವರಾಯ ವಿಶ್ವವಿದ್ಯಾಲಯ ಬಳ್ಳಾರಿ ಯಲ್ಲಿ ನಡೆದ 11 ನೇ ಘಟಿಕೋತ್ಸವ ಸಮಾರಂಭದಲ್ಲಿ ರಾಜ್ಯಪಾಲ ರಾದ ಥಾವರ್ ಚಂದ್ ಗೆಹ್ಲೊಟ್ ರವರಿಂದ ಚಿನ್ನದ ಪದಕ ಪಡೆದುಕೊಂಡಿದ್ದಾರೆ ಎಂದು  ಪ್ರಾಚಾರ್ಯರಾದ ಗುರು ಬಸವರಾಜ್ ಎ .ಎಂ ಎಂ. ಪತ್ರಿಕಾ ಪ್ರಕಟಣೆ ತಿಳಿಸಿದ್ದಾರೆ. ಈ ವಿದ್ಯಾರ್ಥಿಯ ಸಾಧನೆಗೆ ಸಹಕರಿಸಿದ ಉಪನ್ಯಾಸಕರು ಹಾಗೂ ಪೋಷಕರಿಗೆ ಕಾಲೇಜಿನ ಆಡಳಿತ ಮಂಡಳಿಯ ಪರವಾಗಿ ಶ್ರೀ ಚಟ್ರಿಕಿ ಬಸವರಾಜ ಅದ್ಯಕ್ಷರು ಗಂಗೋತ್ರಿ ಶಿಕ್ಷಣ ಸಂಸ್ಥೆ ಇವರು ಅಭಿನಂದನೆ ಸಲ್ಲಿಸಿದರು. ಗಂಗೋತ್ರಿ ಪದವಿ ಪೂರ್ವ ಕಾಲೇಜಿನ ಪ್ರಾಚಾರ್ಯರಾದ ಶ್ರೀಮತಿ ನಿರ್ಮಲಾ ಶಿವನಗುತ್ತಿ ಹಾಗೂ ಉಪನ್ಯಾಸಕರಿಂದ ವಿದ್ಯಾರ್ಥಿನಿಗೆ ಅಭಿನಂದನೆಗಳನ್ನು ಸಲ್ಲಿಸಲಾಯಿತು.. ವಿದ್ಯೆ ಸಾಧಕರ ಸ್ವತ್ತು ಎಂಬಂತೆ ಅತ್ಯಂತ ಕಡು  ಬಡತನದಿಂದ ಅಭ್ಯಾಸ ಮಾಡಿ ಪದವಿಯಲ್ಲಿ ಪ್ರಥಮ ರ್ಯಾಂಕ್ ಪಡೆದುಕೊಂಡಿರುತ್ತಾರೆ....  ಪ್ರಯತ್ನ ನಿಮ್ಮದು ಪ್ರೋತ್ಸಾಹ ನಮ್ಮದು ನಿಮ್ಮ ಆಯ್ಕೆ ಗಂಗೋತ್ರಿ ಬಿ ಎಸ್ ಡಬ್ಲ್ಯೂ ಕಾಲೇಜು ಆಗಿರಲಿ....ಎಂದು ಸಂಸ್ಥೆಯ ಕಾರ್ಯದರ್ಶಿ ಸಿ. ಬಿ.ರಜತ್ ಆಶಯ ವ್ಯಕ್ತಪಡಿಸಿದರು

*ಹಿಂದೂ ಕಾರ್ಯಕರ್ತರ ಹತ್ಯೆ ಖಂಡಿಸಿ ಮನವಿ*

ಇಮೇಜ್
ಕೊಟ್ಟೂರು: ಕೂಡ್ಲಿಗಿ ತಾಲೂಕಿನ ಕಾನಾಹೊಸಹಳ್ಳಿ: ಟಿ.ನರಸಿಪುರದ ಯುವ ಬ್ರಿಗೇಡ್ ಕಾರ್ಯಕರ್ತ ವೇಣುಗೋಪಾಲ ನಾಯಕ್ ಹಾಗೂ ಜೈನ ಮುನಿ ಹತ್ಯೆ ಖಂಡಿಸಿ ಕಾನಾಹೊಸಹಳ್ಳಿ ನಾಡ ಕಚೇರಿ ಸಿಬ್ಬಂದಿಗೆ ಕಾನಾಹೊಸಹಳ್ಳಿ ಯುವ ಬ್ರಿಗೇಡ್ ಹಾಗೂ ವಿವಿಧ ಹಿಂದೂ ಪರ ಸಂಘಟನೆಗಳು ಭುಧವಾರ ಮನವಿ ಸಲ್ಲಿಸಿದರು. ಹಿರೇಕುಂಬಳಗುಂಟೆಯ ನಾಗರಾಜ್ ಗೌಡ ಮಾತನಾಡಿ, ಟಿ ನರಸಿಪುರದ ಯುವ ಬ್ರಿಗೇಡ್ ಕಾರ್ಯಕರ್ತ ವೇಣುಗೋಪಾಲ ಅವರ ಹತ್ಯೆ ಹಾಗೂ ಜೈನಮುನಿಗಳ ಹತ್ಯೆ ಸೇರಿ ಹಿಂದೂ ಕಾರ್ಯಕರ್ತರ ಹತ್ಯೆಗಳು ನಿರಂತರವಾಗಿ ನಡೆಯುತ್ತಿರುವುದು ವಿಷಾಧನಿಯ ಸಂಗತಿ ಎಂದರು. ಹಿಂದೂಗಳ ಮೇಲೆ ನಡೆಯುತ್ತಿರುವ ಹತ್ಯೆಗಳ ಕಡಿವಾಣ ಬಿಳಬೇಕಿದೆ, ತಪ್ಪಿತಸ್ತರಿಗೆ ಕಠಿಣ ಶಿಕ್ಷೆ ನೀಡುವ ಮೂಲಕ ಮೃತರ ಕುಟುಂಬಗಳಿಗೂ ಹಾಗೂ ಹಿಂದೂಗಳಿಗೆ ನ್ಯಾಯ ಸಿಗಬೇಕಿದೆ ಎಂದರು. ಈ ಸಂದರ್ಭದಲ್ಲಿ ಸುಭಾಷ್ ಚಂದ್ರ, ಕೊಲಮೆಹಟ್ಟಿ ವೆಂಕಟೇಶ್,ಹನುಮಜ್ಜರು ನಾಗೇಶ್, ಕೆಂಚಮ್ಮನಹಳ್ಳಿ ಬಸವರಾಜ್, ನಾಗೇಂದ್ರ ಸ್ಮಾಟಿ,ಮೆಡಿಕಲ್ ಶ್ರೀಧರ , ವಿಶ್ವನಾಥ ಕೆ.ಎಸ್, ವಿರೇಶ್ ಕಿಟ್ಟಪ್ಪನವರ್, ಕೆಂಚನಲ್ಲನಹಳ್ಳಿ ಬಸವರಾಜ್, ವಿನೋದ್, ಕೆ.ಎಸ್,ಯೊಗೀಶ್, ಬಸವರಾಜ್, ಶರತ್, ಗಾಡಿ ರಮೇಶ್, ಬಸವರಾಜ ವಿ, ಪೋಟೊ ನಾಗರಾಜ, ವಿರೇಶ್.ಕೆ,ಬಸವರಾಜ್, ಗುರುಮೂರ್ತಿ, ಸಿದ್ದಲಿಂಗಪ್ಪ, ಕಾನಾಮಡುಗು ಸುರೇಶ್,ಮಾಳೇಶ್, ಸೇರಿದಂತೆ ನೂರಾರು ಕಾರ್ಯಕರ್ತರು ನಾಡಕಚೇರಿ ಸಿಬ್ಬಂದಿ ಅನಿತಾಪೂಜಾರ್ ಸೇರಿದಂತೆ ಇತರರಿದ್ದರು.

ಕ್ಷಯ ಮುಕ್ತ ಜಿಲ್ಲೆಯನ್ನಾಗಿಸಲು ಜವಾಬ್ದಾರಿಯುತವಾಗಿ ಕಾರ್ಯನಿರ್ವಹಿಸಿ: ಸಿಇಒ ಶಶಿಧರ ಕುರೇರ

ಇಮೇಜ್
ರಾಯಚೂರು,ಜು.೧೨(ಕ.ವಾ):- ಜು.೧೭ ರಿಂದ ಆ.೦೨ರವರೆಗೆ ನಡಯುವ ಕ್ಷಯರೋಗ ಪತ್ತೆ ಹಚ್ಚುವ ಆಂದೋಲನ ಕಾರ್ಯಕ್ರಮವನ್ನು ಯಶಸ್ವಿಗೊಳಿಸಿ ಕ್ಷಯ ಮುಕ್ತ ಜಿಲ್ಲೆಯನ್ನಾಗಿ ಮಾಡಲು ಜವಾಬ್ದಾರಿಯುತವಾಗಿ ಕಾರ್ಯನಿರ್ವಹಿಸಬೇಕೆಂದು ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಖಾರಿ ಶಶಿಧರ ಕುರೇರ ಅವರು ಹೇಳಿದರು.  ಅವರು ಜು.೧೨ರ(ಬುಧವಾರ)ದಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿಗಳ ಕಾರ್ಯಲಯದಲ್ಲಿ ಜಿಲ್ಲಾ ಟಾಸ್ಕ್ ಫೋರ್ಸ ಸಭೆಯ ಅಧ್ಯಕ್ಷತೆ ವಹಿಸಿ ಕ್ಷಯ ರೋಗದ ಕುರಿತಾದ ಜಾಗೃತಿ ಮೂಡಿಸುವ ಪೋಸ್ಟರ್‌ಗಳನ್ನು ಬಿಡುಗಡೆಗೊಳಿಸಿ ಮಾತನಾಡಿದರು.  ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿ ಡಾ. ಸುರೇಂದ್ರಬಾಬು ಅವರು ಮಾತನಾಡಿ, ನಮ್ಮ ಇಲಾಖೆಯ ಸಿಬ್ಬಂದಿಗಳಿAದ ಮನೆ ಮನೆಗೆ ಭೇಟಿ ನೀಡಿ ಸಾರ್ವಜನಿಕರಿಗೆ ಎರಡು ವಾರಕ್ಕಿಂತ ಕೆಮ್ಮು ರಾತ್ರಿ ಸಮಯದಲ್ಲಿ ಜ್ವರ ಬರುವದು ತೂಕ ಕಡಿಮೆಯಾಗುವದು ಹಸಿವುಯಾಗದಿರುವದು ಇಂತಹ ಲಕ್ಷಣಗಳು ಕಂಡುಬAದಲ್ಲಿ ತಕ್ಷಣವೇ ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿಗಳ ಹತ್ತಿರ ಕರೆದುಕೊಂಡು ಹೋಗಿ ಸೂಕ್ತ ಚಿಕಿತ್ಸೆ ನೀಡಲಾಗುತ್ತದೆ ಎಂದರು. ಜಿಲ್ಲಾ ಕ್ಷಯರೋಗ ನಿರ್ಮೂಲನಾಧಿಕಾರಿ ಡಾ.ಮಹ್ಮದ ಶಾಕೀರ ಮೊಹಿದ್ದೀನ ಅವರು ಮಾತನಾಡಿ, ಕ್ಷಯರೊಗದ ತ್ವರಿತ ಪತ್ತೆಗಾಗಿ ಎಲ್ಲಾ ಜಿಲ್ಲಾ ಆಸ್ಪತ್ರೆ ಹಾಗೂ ವೈದ್ಯಕೀಯ ಕಾಲೇಜು ಆಸ್ಪತ್ರೆಗಳಿಗೆ ಸಿಬಿಎನ್‌ಎಎಟಿ ಯಂತ್ರಗಳನ್ನು ಪೂರೈಸಲಾಗಿದೆ ಕ್ಷಯರೋಗಿಯು ಕೆಮ್ಮುವಾಗ

ಕೂಡ್ಲಿಗಿ ಶಾಸಕ ಡಾ ಎನ್. ಟಿ‌. ಶ್ರೀನಿವಾಸ್ ಅವರ ಅಧಿವೇಶನದ ಮೊದಲ ಭಾಷಣ.

ಇಮೇಜ್
  ಗುಡೇಕೋಟೆ: ಗೌರವಾನ್ವಿತ ಮಾನ್ಯ ರಾಜ್ಯ ಪಾಲರ ಭಾಷಣಕ್ಕೆ ಅವಕಾಶ ಮಾಡಿಕೊಟ್ಟಿದ್ದಕ್ಕೆ ಮೊದಲನೆಯದಾಗಿ  ಅವರನ್ನು ಅಭಿನಂಧಿಸುತ್ತೇನೆ. ರಾಜ್ಯಪಾಲರ ಭಾಷಣಕ್ಕೆ ನಾನು  ಸಂಪೂರ್ಣವಾಗಿ   ಸಹಮತ  ವ್ಯಕ್ತಪಡಿಸುತ್ತೇನೆ. ಆ ಮೂಲಕ  ಚರ್ಚೆಗೆ ಬರುತ್ತೇನೆ‌‌.   ಕರ್ನಾಟಕದ  ಘನ ಸರಕಾರ ಇವತ್ತು ಜಾರಿಗೆ ತಂದ ಐದು ಗ್ಯಾರಂಟಿ ಯೋಜನೆಗಳನ್ನು ಬಡವರು ಮತ್ತು ಧೀನ ದಲಿತರಿಗೆ  ಘೋಷಣೆ ಮಾಡಿದೆ. ಅದಕ್ಕೆ ಅತ್ಯಂತ ಖುಷಿ ಪಡುವಂತಹ ತಾಲೂಕು ಅಂದರೇ ಅದು ನಮ್ಮ ತಾಲೂಕು. ಯಾಕೆಂದರೇ  ನಂಜುಂಡಪ್ಪ ವರದಿ ಪ್ರಕಾರ ಅತಿ ಹಿಂದುಳಿದ ತಾಲೂಕು ಪಟ್ಟಿಗಳಲ್ಲಿ ಒಂದು.  ನಮ್ಮ ವಿಜಯ ನಗರ ಜಿಲ್ಲೆಯಲ್ಲಿ ಕೂಡ್ಲಿಗಿ ತಾಲೂಕು ಒಂದು. ಅಂತಹ ಜನರು ಇರುವ ತಾಲೂಕಿಗೆ ಇಂತಹ ಒಂದು ಒಳ್ಳೆಯ ಕಾರ್ಯಕ್ರಮಗಳು ನಿಜವಾಗಲು ತುಂಬಾ ಫಲ ತರುತ್ತವೆ. ಇದಕ್ಕೆ ನಾನು  ಸಂಪೂರ್ಣ ಸಹಮತ ವ್ಯಕ್ತಪಡಿಸ್ತೀನಿ.  ಮತ್ತೇ ನಮ್ಮ ಸ್ನೇಹಿತರು ನಮ್ಮ ತಾಲೂಕಿನ ಬಗ್ಗೆ ವಿಶ್ಲೇಷವಾಗಿ ಮಾತನಾಡಿದ್ದಾರೆ.  ಅಂದರೇ ಇದು ಅತಿ ಹಿಂದುಳಿದ ತಾಲೂಕು ಆದರೂ ಹೃದಯ ವೈಶಾಲ್ಯತೆ ಮತ್ತು ಇತಿಹಾಸಕ್ಕೆ ಕಡಿಮೆ  ಇಲ್ಲಾ. ವಿಜಯನಗರದ ಇತಿಹಾಸ ಉಳ್ಳ ನಮ್ಮ ಜಿಲ್ಲೆ.  ಅಂತಹ ಇತಿಹಾಸ ಉಳ್ಳ  ಹಾಳು ಹಂಪೆ ಹೇಗೆ  ಇದೆಯೋ  ನಮ್ಮ ಪರಿಸ್ಥಿತಿ ಹಾಗೇ ಆಗಿದೆ. ಇವತ್ತು  ಕೃಷಿಕರು ಇರುವ ಒಣಭೂಮಿಯನ್ನು ನಂಬಿಕೊಂಡು ಬಂದಿರುವ  ಜನ. ಯಾವುದೇ ಕೆರೆ ಮತ್ತು ಯೋಜನೆಗಳು ಅಲ್ಲಿ ಇಲ್ಲಾ.  ಮತ್ತೇ ಶಾಲಾ ಕಾಲೇಜುಗಳು , ಕಟ್ಟಡಗಳು ಮತ್ತು  ಆರ

ಪೌಷ್ಟಿಕಾಂಶ ಕೊರತೆಯಿಂದ ಕಾಯಿಲೆ ಬರುತ್ತವೆ

ಇಮೇಜ್
ಬಳ್ಳಾರಿ:ಪೌಷ್ಟಿಕಾಂಶ ಕೊರತೆಯಿಂದ ವಿದ್ಯಾರ್ಥಿಗಳಲ್ಲಿ ಸಾಮಾನ್ಯ ಕಾಯಿಲೆಗಳಾದ ಜ್ವರ, ಕೆಮ್ಮು, ನಗಡಿ,ಹೊಟ್ಟೆನೋವು,ದೃಷ್ಟಿದೋಷ,ಕಿವುಡು ಇತ್ಯಾದಿ ಕಂಡುಬರುವ ಮಕ್ಕಳು ತಕ್ಷಣವೇ ಹತ್ತಿರದ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಹೋಗಿ ವೈದ್ಯರಿಂದ ಚಿಕಿತ್ಸೆ ಪಡೆಯಬೇಕೆಂದು ಎಂ.ಬಿ.ಬಿ.ಎಸ್. ವೈದ್ಯರಾದ ಡಾಕ್ಟರ್ ಫ್ರುಖಾನ್ ಮಕ್ಕಳಿಗೆ ತಿಳಿಸಿದರು. ತಾಲ್ಲೂಕಿನ ಸಂಜೀವರಾಯನಕೋಟೆ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಒಂದನೇ ತರಗತಿಯಿಂದ ಎಂಟನೇ ತರಗತಿವರೆಗಿನ 406 ಮಕ್ಕಳಿಗೆ ಆರ್. ಬಿ.ಎಸ್. ಕೆ.ಅವರಿಂದ ಹಮ್ಮಿಕೊಂಡಿದ್ದ ವೈದ್ಯಕೀಯ ತಪಾಸಣೆ ಕಾರ್ಯಕ್ರಮದಲ್ಲಿ ಮಕ್ಕಳಿಗೆ ತಿಳಿಸಿದರು. ಶಾಲೆಯ ಮುಖ್ಯ ಗುರುಗಳು ಡಾಕ್ಟರ್ ಬಿ.ಸಿ.ರಾಯ್ ಅವರ ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸಿ ಚಾಲನೆ ನೀಡಿದರು. ಶಾಲೆಯ ಮುಖ್ಯ ಗುರುಗಳಾದ ರವಿ ಚೆಳ್ಳೇಗುರ್ಕಿ, ವೈದ್ಯರಾದ ಡಾಕ್ಟರ್ ಪ್ರಸನ್ನಕುಮಾರ್ RBSK, ಶಿಕ್ಷಕರಾದ ಬಸವರಾಜ,ಸಿಸ್ಟರ್ ಸುನೀತಾ, ವಿದ್ಯಾರ್ಥಿ ಪ್ರತಿನಿಧಿ ಮಹೇಶ್. ಮನೋಹರ್ ಮುಂತಾದವರು ಉಪಸ್ಥಿತರಿದ್ದರು.

ಕೊಟ್ಟೂರು ತಾಲೂಕಿನ 14 ಗ್ರಾಮ ಪಂಚಾಯಿತಿಯ ಅಧ್ಯಕ್ಷ ಮತ್ತು ಉಪಾಧ್ಯಕ್ಷರ ಚುನಾವಣೆಗೆ ಸಿದ್ಧತೆ

ಇಮೇಜ್
ಕೊಟ್ಟೂರು ಗ್ರಾಮ ಪಂಚಾಯತಿ ಅಧ್ಯಕ್ಷ ಮತ್ತು ಉಪಾಧ್ಯಕ್ಷ ಹುದ್ದೆಗಳ ಸಾರ್ವತ್ರಿಕ ಚುನಾವಣೆ 2020ರ ಮೊದಲನೇ ಅವಧಿ 30 ತಿಂಗಳು  ಮುಕ್ತಾಯಗೊಂಡ ಹಿನ್ನೆಲೆಯಲ್ಲಿ ಎರಡನೇ ಅವಧಿಯ ಮೀಸಲಾತಿಯನ್ನು ಈಗಾಗಲೇ ಪ್ರಕಟಣೆಗೊಂಡಿದ್ದು ಇದರ ಅನ್ವಯ ಒಟ್ಟು 14 ಗ್ರಾಮ ಗ್ರಾಮಪಂಚಾಯಿಯ ಚುನಾವಣೆಗೆ ಸಿದ್ಧತೆಯನ್ನು  ಮಾಡಲಾಗಿದೆ.  ಚುನಾವಣಾ ಆಯೋಗದ ನಿರ್ದೇಶನದಂತೆ 5 ಗ್ರಾಮ ಪಂಚಾಯಿತಿಗಳ ಅಧ್ಯಕ್ಷ ಮತ್ತು ಉಪಾಧ್ಯಕ್ಷರ ಚುನಾವಣೆಗೆ   ಸಮಾಜ ಕಲ್ಯಾಣ ಸಹಾಯಕ ನಿರ್ದೇಶಕ ಜಗದೀಶ ದಿಡಗೂರ್  ಇವರನ್ನು  ನೇಮಕಮಾಡಿದ್ದು. ಉಜ್ಜಿನಿ ಗ್ರಾಪಂ ಅಧ್ಯಕ್ಷ ಉಪಾಧ್ಯಕ್ಷರ ಚುನಾವಣೆ ಜುಲೈ 20. ತೂಲಹಳ್ಳಿ ಗ್ರಾಪಂ ಜುಲೈ 24. ನಿಂಬಳಗೆರೆ ಗ್ರಾಪಂ ಜುಲೈ 26. ಕೆ. ಅಯ್ಯನಹಳ್ಳಿ ಜುಲೈ 28ರಂದು ಅಧ್ಯಕ್ಷ ಉಪಾಧ್ಯಕ್ಷ ಸ್ಥಾನಕ್ಕೆ ಚುನಾವಣೆ ನಡೆಯಲಿದೆ ಎಂದು ಪತ್ರಿಕೆ ಪ್ರಕಟಣೆ