"ಕರ್ನಾಟಕ ಸಂಸ್ಕೃತಿ ನಾಡಿನ ಪರಂಪರೆಯ ತಾಣ"
ಕೊಟ್ಟೂರು: ರಾಜ್ಯ ಸೇರಿ ಪಕ್ಕದ ರಾಜ್ಯಗಳಲ್ಲಿಯೂ ಹರಿದು ಹಂಚಿ ಹೋಗಿದ್ದ ಕನ್ನಡ ಭಾಷೆ ನೆಲಗಳನ್ನು ಒಗ್ಗೂಡಿಸುವ ಉದ್ದೇಶದಿಂದ ನಡೆದ ಕರ್ನಾಟಕ ಏಕೀಕರಣ ಹೋರಾಟ ಕನ್ನಡಿಗರಿಗದು ಎಂದಿಗೂ ಅಸ್ಮಿತೆಯಾಗಿದೆ ಎಂದು ಹಿರಿಯ ವಿದ್ವಾಂಸ ಡಾ.ಕೆ.ರವೀಂದ್ರನಾಥ ಹೇಳಿದರು.
ಪಟ್ಟಣದ ಡಾ.ಎಚ್.ಜಿ.ರಾಜ್ ಭವನದಲ್ಲಿ ಕನ್ನಡ ಸಾಹಿತ್ಯ ಪರಿಷತ್ ತಾಲೂಕು ಘಟಕ ಆಯೋಜಿಸಿದ್ದ ೬೯ನೇ ಕನ್ನಡ ರಾಜ್ಯೋತ್ಸವ ಕಾರ್ಯಕ್ರಮದಲ್ಲಿ ಅವರು ಕರ್ನಾಟಕ ಏಕೀಕರಣದ ಮಹತ್ವ ಕುರಿತು ಶನಿವಾರ ವಿಶೇಷ ಉಪನ್ಯಾಸ ನೀಡಿದರು.
ಬ್ರಿಟಿಷ್ ಆಡಳಿತದಲ್ಲಿ ೨೦ಕ್ಕೂ ಹೆಚ್ಚು ಪ್ರಾಂತ್ಯಗಳಾಗಿ ಕನ್ನಡ ನಾಡು ಹರಿದು ಹಂಚಿ ಹೋಗಿತ್ತು. ನಮ್ಮ ಭಾಷಿಕರೇ ಅಧಿಕವಾಗಿದ್ದ ಪ್ರದೇಶಗಳಲ್ಲಿದ್ದ ಕನ್ನಡಿಗರಿಗೆ ಭಾಷಿಕವಾಗಿ, ಸಾಮಾಜಿಕವಾಗಿ, ಆಡಳಿತಾತ್ಮಕವಾಗಿ ಅನೇಕ ವಿಭಿನ್ನ ಸಮಸ್ಯೆಗಳು ಎದುರಾಗಿದ್ದವು. ಇಂತಹ ಸಮಸ್ಯೆಗಳಿಗೆ ಮುಕ್ತಿ ಕಾಣಿಸುವ ಉದ್ದೇಶಕ್ಕಾಗಿ, ಕನ್ನಡ ಭಾಷೆಯ ಆಧಾರದ ಮೇಲೆ ಅಖಂಡ ಕರ್ನಾಟಕ ನಾಡನ್ನು ಸ್ಥಾಪಿಸುವ ಉದ್ದೇಶಕ್ಕಾಗಿ ನಾಡಿನ ಸಾಹಿತಗಳು, ಕಲಾವಿದರು, ಪತ್ರಿಕೆಗಳು, ಸಂಘ ಸಂಸ್ಥೆಗಳು ನಡೆಸಿದ ಏಕೀಕರಣ ಹೋರಾಟ ಕನ್ನಡಿಗರ ಅಸ್ಮಿತೆ ಕಥೆಯಾಗಿದೆ ಎಂದರು.
ಕರ್ನಾಟಕ ಸಂಸ್ಕೃತಿಕೆ ನಾಡಿನ ಅರಸರು ಬಹು ದೊಡ್ಡ ಕೊಡುಗೆಯನ್ನೇ ನೀಡಿದ್ದಾರೆ. ಏಕೀಕರಣದ ನಂತರ ಭಾಷಿಕ ಮತ್ತು ಶೈಕ್ಷಣಿಕ ಕ್ಷೇತ್ರಗಳಲ್ಲಿ ಕನ್ನಡದ ಪ್ರತಿನಿಧಿಕತೆಯನ್ನು ಪುನರಾವಲೋಕನ ಮಾಡಿಕೊಳ್ಳುವುದ ಅವಶ್ಯವಾಗಿದೆ. ರಾಜ್ಯದಲ್ಲಿ ನಡೆದಿದ್ದ ಏಕೀಕರಣ ಹೋರಾಟಕ್ಕೆ ಬೆಂಬಲವಾಗಿ ಕೊಟ್ಟೂರಿನಲ್ಲಿ ಮಾಜಿ ಸಚಿವ ದಿ.ಎಂಎAಜೆ ಸದ್ಯೋಜಾತ, ದಿ.ಅ.ನಂಜಪ್ಪ ಅವರು ದೊಡ್ಡ ಸಂಘಟನೆ ಮಾಡಿ ಹೋರಾಟ ನಡಿಸಿದ್ದರು ಎಂದು ಹೋರಾಟಗಾರರನ್ನು ಸ್ಮರಿಸಿದರು.
ಕಾರ್ಯಕ್ರಮ ಉದ್ಘಾಟಿಸಿದ ವರ್ತಕ ಪಿ.ಶ್ರೀಧರಶೆಟ್ಟಿ ಮಾತನಾಡಿ, ಐದು ಸಾವಿರ ಇತಿಹಾಸ ಹೊಂದಿರುವ ಕನ್ನಡ ಭಾಷೆ ನಮ್ಮೆಲ್ಲರ ಅನ್ನದ ಮತ್ತು ಹೃದಯ ಭಾಷೆಯಾಗಬೇಕು. ಬದಲಾದ ಕಾಲಕ್ಕೆ ತಕ್ಕಂತೆ ಎಲ್ಲವೂ ಉನ್ನತೀಕರಣಗೊಳ್ಳಬೇಕು. ತಾಲೂಕು ಕಸಾಪ ಎಂದಿಗೂ ಚಟುವಟಿಕೆಯಿಂದ ಕಾರ್ಯ ನಿರ್ವಹಿಸುತ್ತಿದೆ ಎಂದರು.
ತಾಲೂಕು ಕಸಾಪ ಅಧ್ಯಕ್ಷ ದೇವಮನಿ ಕೊಟ್ರೇಶ ಮಾತನಾಡಿ, ಈ ಬಾರಿಯ ರಾಜ್ಯೋತ್ಸವ ಸಂದರ್ಭಕ್ಕೆ ಐವರು ದಾನಿಗಳಿಂದ ದತ್ತಿ ಪಡೆದಿದ್ದು, ಮುಂದಿನ ಎರಡು ವರ್ಷದಲ್ಲಿ ೫೦ ದಾನಿಗಳಿಂದ ಕಸಾಪಕ್ಕೆ ದತ್ತಿ ಪಡೆಯುವ ಗುರಿ ಹೊಂದಿದೆ ಎಂದರು ಹೇಳಿದರು.
ಅಧ್ಯಕ್ಷತೆ ವಹಿಸಿದ್ದ ಜಿಲ್ಲಾ ಕಸಾಪ ಅಧ್ಯಕ್ಷ ನಿಷ್ಠಿ ರುದ್ರಪ್ಪ ಮಾತನಾಡಿ, ಅಖಂಡ ಜಿಲ್ಲೆಯಲ್ಲಿ ಎಲ್ಲ ಘಟಕಗಳು ರಚನಾತ್ಮಕವಾಗಿ ಕಾರ್ಯ ನಿರ್ವಹಿಸುತ್ತಿವೆ. ಕೊಟ್ಟೂರು ಘಟಕದ ಅಧ್ಯಕ್ಷರಾದಿಯಾಗಿ ಎಲ್ಲ ಪದಾಧಿಕಾರಿಗಳ ಶ್ರಮ ಶ್ಲಾಘನೀಯ. ಐದು ದತ್ತಿ ದಾನಿಗಳನ್ನು ಈ ಬಾರಿ ಕಸಾಪಕ್ಕೆ ನೀಡಿರುವ ತಾಲೂಕು ಅಧ್ಯಕ್ಷರು ಇನ್ನೂ ಹೆಚ್ಚು ಕಾರ್ಯ ನಿರ್ವಹಿಸಲಿ ಎಂದರು.
ದತ್ತಿ ದಾನಿಗಳಾದ ಬಿಎಸ್ ಕೊಟ್ರೇಶ್, ಜೆ.ಎಂ. ಧನಂಜಯ, ಪಿ.ಶ್ರೀಧರಶೆಟ್ಟಿ, ಕೆ.ಎಸ್.ಈಶ್ವರಗೌಡರನ್ನು ಗೌರವಿಸಲಾಯಿತು. ಚಿತ್ರ ನಟ ಬಿ.ಎಚ್.ಸುದರ್ಶನ, ರಾಷ್ಟç ಮಟ್ಟದ ಖೋಖೋ ಆಟಗಾರ್ತಿ ಜಿ.ಪ್ರತಿಕ್ಷಾ, ಎಂಎA ನಟರಾಜ ಅವರನ್ನು ಸನ್ಮಾನಿಸಲಾಯಿತು. ಪ.ಪಂ.ಉಪಾಧ್ಯಕ್ಷ ಜಿ.ಸಿದ್ದಯ್ಯ, ಡಿಎಸ್‌ಎಸ್ ಮುಖಂಡ ಬದ್ದಿ ಮರಿಸ್ವಾಮಿ, ಪ್ರಾಚಾರ್ಯ ಪ್ರಶಾಂತಕುಮಾರ ಇದ್ದರು.
ಕಸಾಪ ಕಾರ್ಯದರ್ಶಿ ಅರವಿಂದ ಬಸಾಪುರ ಪ್ರಾಸ್ತಾವಿಕ ಮಾತನಾಡಿದರು. ಶಾಲಾ ವಿದ್ಯಾರ್ಥಿಗಳು ಕನ್ನಡ ಪರ ಹಾಡುಗಳಿಗೆ ನೃತ್ಯ ಪ್ರದರ್ಶಿಸಿದರು.
ಗೌರವ ಖಜಾಂಚಿ, ಈಶ್ವರಪ್ಪ ತುರಕಾಣಿ, ಪದಾಧಿಕಾರಿ ಅಜ್ಜಣ್ಣ, ಬಿ.ಎಂ.ಗಿರೀಶ್ ನಿರ್ವಹಿಸಿದರು.
ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ