"ಕೊಟ್ಟೂರಿನಲ್ಲಿ ಈರುಳ್ಳಿ ರಸ್ತೆಗೆ ಚೆಲ್ಲಿ ಮುಖ್ಯ ಹೆದ್ದಾರಿಯಲ್ಲಿ ಪ್ರತಿಭಟನೆ "

*ಕರ್ನಾಟಕ ರಾಜ್ಯದಲ್ಲಿ ಈರುಳ್ಳಿ ಬೆಳೆಗಾರರ ಸಂಪೂರ್ಣ ಸಾಲ ಮನ್ನಾ ಮಾಡಿ ಮತ್ತು ಈರುಳ್ಳಿ ಬೆಳೆ ನಾಶಕ್ಕೆ ಪರಿಹಾರ ನೀಡುವ ಕುರಿತು ಮುಖ್ಯ ಹೆದ್ದಾರಿಯಲ್ಲಿ ಈರುಳ್ಳಿ ರಸ್ತೆಗೆ ಚೆಲ್ಲಿ ಪ್ರತಿಭಟನೆ*

ಕೊಟ್ಟೂರು: ಕರ್ನಾಟಕ ರಾಜ್ಯದ ಈರುಳ್ಳಿ ಬೆಳೆಗಾರರ ಸಂಘದ ವತಿಯಿಂದ ರಾಜ್ಯದ ರೈತರ ಪರವಾಗಿ ಈ ಮೂಲಕ ತಮ್ಮಲ್ಲಿ ವಿನಂತಿಸಿಕೊಳ್ಳುವುದೇನೆಂದರೆ, ಕರ್ನಾಟಕ ರಾಜ್ಯಾದಾದ್ಯಂತ ಹಲವಾರು ಭಾಗಗಳಲ್ಲಿ ಕನಿಷ್ಟ ಮೂವತ್ತು ಲಕ್ಷಕ್ಕೂ ಹೆಚ್ಚು ಈರುಳ್ಳಿ ಬೆಳೆಗಾರ ರೈತರಿದ್ದು ದೇಶದಲ್ಲಿ ನಮ್ಮ ರಾಜ್ಯವು 2ನೇ ಸ್ಥಾನದಲ್ಲಿದೆ. 

ನಮ್ಮ ಕರ್ನಾಟಕ ರಾಜ್ಯದಲ್ಲಿ ವಿಜಯನಗರ ಜಿಲ್ಲೆಯ ಕೊಟ್ಟೂರು, ಹೂವಿನಹಡಗಲಿ, ಹಗರಿಬೊಮ್ಮನಹಳ್ಳಿ, ಹರಪನಹಳ್ಳಿ, ಕೂಡ್ಲಿಗಿ ಮತ್ತು ಹೊಸಪೇಟೆ ತಾಲೂಕುಗಳ ಕೆಲವು ಭಾಗಗಳಲ್ಲಿ ಈರುಳ್ಳಿ ಬೆಳೆಯುತ್ತಿದ್ದು ಈರುಳ್ಳಿ ಬೆಳೆಗೆ ಈಗಾಗಲೇ ಬೆಳೆ ಇನ್ಸುರೆನ್ಸ್ ಕಟ್ಟಿರುತ್ತೇವೆ. ಜಿಲ್ಲೆಯಲ್ಲಿ ಸಾಕಷ್ಟು ಮಳೆಯಾದ್ದರಿಂದ ಈರುಳ್ಳಿ ಬೆಳೆ ಕೊಳೆತು ಹೊಗಿರುತ್ತದೆ. ಇದ್ದರೆನ್ಸ್ ಕಂಪನಿಯವರು ಬೆಳೆ ವಿಮೆ ಕೊಟ್ಟಿರುವುದಿಲ್ಲ ಅದಕ್ಕೆ ಸಂಬಂಧ ಪಟ್ಟ ಅಧಿಕಾರಿಗಳಿಗೆ ತಕ್ಷಣವಾಗಿ ಬೆಳೆ ವಿಮೆ ಕೊಡಿಸಬೇಕೆಂದು ಮತ್ತು ಸರ್ಕಾರದಿಂದ ಒಂದು ಎಕರೆಗೆ ರೂ. 25,000/- ಪರಿಹಾರ ಕೊಡಬೇಕೆಂದು ಕರ್ನಾಟಕ ರಾಜ್ಯ ಈರುಳ್ಳಿ ಬೆಳೆಗಾರರ ಸಂಘ (ರಿ) ಬೆಂಗಳೂರು ಹಾಗೂ ಕೊಟ್ಟೂರು ತಾಲೂಕು ಘಟಕ ವತಿಯಿಂದ ಬೃಜತ್ ಪ್ರತಿಭಟನೆ ಮಾಡುವ ಮೂಲಕ

ಸನ್ಮಾನ್ಯ ಶ್ರೀ ಸಿದ್ದರಾಮಯ್ಯ ನವರು, ಮುಖ್ಯಮಂತ್ರಿಗಳು, ಸರ್ಕಾರಕ್ಕೆ ಕೊಟ್ಟೂರು ತಾಸಿಲ್ದಾರ್ ಅವರಿಗೆ ಮೂಲಕ ಮನವಿ ಪತ್ರ ಸೋಮವಾರ ಸಲ್ಲಿಸಲಾಯಿತು . ರಾಜ್ಯದಾದ್ಯಂತ ರೈತರು ಪ್ರತಿಭಟನೆ ಮಾಡಬೇಕಾಗುತ್ತದೆ. ಇಲ್ಲದಿದ್ದರೇ

ಮುಂದಿನ ದಿನಗಳಲ್ಲಿ ಉಗ್ರವಾದ ಹೋರಾಟ ಮಾಡಬೇಕಾಗುತ್ತದೆ. ರೈತ ಈರುಳ್ಳಿ ಬೆಳೆಗಾರರ ಸಂಘದ ವತಿಯಿಂದ ಕಾರ್ಯಕರ್ತರೊಂದಿಗೆ ಎಚ್ಚರಿಕೆ ನೀಡಿದರು.

ಕಾಮೆಂಟ್‌ಗಳು

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

ಕ್ರಿಕೆಟ್ ಬೆಟ್ಟಿಂಗ್ ದಂಧೆಕೋರರ ಎಡೆಮುರಿ ಕಟ್ಟಿದ : ಪಿಎಸ್ಐ ಗೀತಾಂಜಲಿ ಶಿಂಧೆ

ಮಲೆನಾಡಲ್ಲಿ ಮಳೆ:ಭದ್ರಾ ಒಳ ಹರಿವು ಹೆಚ್ಚಳ

ಕೊಟ್ಟೂರು ಪೊಲೀಸ್ ಠಾಣೆಗೆ ಮೊದಲ ಬಾರಿಗೆ ಮಹಿಳಾ ಪಿಎಸ್ಐ ಗೀತಾಂಜಲಿ ಶಿಂಧೆ