ನನ್ನ ಭವಿಷ್ಯ ನನ್ನ ಆಯ್ಕೆ "ಜಿಲ್ಲಾ ಮಟ್ಟದ ಉದ್ಘಾಟನಾ ಕಾರ್ಯಕ್ರಮ ಯಶಸ್ವಿ
ವಿಜಯಪುರ : ಸೋಮವಾರ ಕರ್ನಾಟಕ ಸರಕಾರ ವಸತಿ ಶಿಕ್ಷಣ ಸಂಸ್ಥೆಗಳ ಸಂಘ ಬೆಂಗಳೂರು ಹಾಗೂ ಅನಾಹತ ಯುನೈಟೆಡ್ ಎಫರ್ಟ್ ಪೌಂಡೆಶೆನ್ ಬೆಂಗಳೂರು ಇವರುಗಳ ಸಹಯೋಗದಲ್ಲಿ ಜಿಲ್ಲಾ ಹಂತದ “ನನ್ನ ಭವಿಷ್ಯ ನನ್ನ ಆಯ್ಕೆ” ಎಂಬ ಸಮಾರಂಭದ ಉದ್ಘಾಟನೆ ಕಾರ್ಯಕ್ರಮ ನಗರದ ಗಾಂಧಿ ಭವನದಲ್ಲಿ ಯಶಸ್ವೀಯಾಗಿ ಜರುಗಿತು.
ಕಾರ್ಯಕ್ರಮದ ಉದ್ಘಾಟಕರಾಗಿ ಶ್ರೀ. ಪುಂಡಲಿಕ್ ಮಾನವರ ಜಿಲ್ಲಾ ಉಪ-ನಿದೇರ್ಶಕರು ಸಮಾಜ ಕಲ್ಯಾಣ ಇಲಾಕ್ಯ ವಿಜಯಪುರ, ಕಾರ್ಯಕ್ರಮದ ಅಧ್ಯಕ್ಷತೆಯನ್ನು ಡಿ.ಎಮ್.ಚಲವಾದಿ, ಜಿಲ್ಲಾ ಸಮನ್ವಯ ಅಧಿಕಾರಿಗಳು ಕ.ವ.ಶಿ.ಸ.ಸಂ.ವಿಜಯಪುರ, ಮುಖ್ಯ ಅಥಿತಿಗಳಾಗಿ ಅನೀಲ ಕುಮಾರ ಬಿ.ಎಮ್ ವಿಭಾಗೀಯ ಮುಖ್ಯಸ್ಥರು, ಅನಾಹತ ಯುನೈಟೆಡ್ ಎಫರ್ಟ್ ಪೌಂಡೆಶೆನ್ ಬೆಂಗಳೂರು. ಅಥಿತಿಗಳಾಗಿ ದೀಪಕ್ .ಎಸ್. ಜಿಲ್ಲಾಧಿಕಾರಿ ಹಿಂದೂಳಿದ ವರ್ಗಗಳ ಇಲಾಖೆ ವಿಜಯಪುರ,
ಕಾರ್ಯಕ್ರಮದ ಕುರಿತು ಮಾತನಾಡಿದರೇ,ಪುಂಡಲಿಕ್ ಮಾನವರ ಜಿಲ್ಲಾ ಉಪ-ನಿದೇರ್ಶಕರು ಸಮಾಜ ಕಲ್ಯಾಣ ಇಲಾಖೆ ವಿಜಯಪುರ ಗಿಡಕ್ಕೆ ನೀರು ಹಾಕುವುದರಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.
ನಂತರ ಕಾರ್ಯಕ್ರಮದ ಕುರಿತು ಮಾತನಾಡಿದ ಅವರು ಮಕ್ಕಳ ಪ್ರತಿಭೆಯನ್ನು ಕಂಡುಕ್ಕೊಳ್ಳಲು ೨೧ನೇ ಶತಮಾನದ ಹೊಸ ಶಿಕ್ಷಣ ನೀತಿಯ ಕೌಶಲ್ಯಗಳ ಪ್ರಕಾರ ಈ ಪಠ್ಯ ವಿಷಯವು ರಚಿತವಾಗಿರುವುದು.
ಇದು ಪ್ರೌಢಶಾಲಾ ಮಕ್ಕಳಿಗೆ ಅತಿ ಮೌಲ್ಯಯುತ ವೃತ್ತಿ ಯೋಜನಾ ವಿಷಯವಾಗಿದ್ದು, ವಿಶೇಷವಾಗಿ ನಮ್ಮ ವಸತಿ ಶಾಲೆಗಳಲ್ಲಿ ಆರ್ಥಿಕವಾಗಿ ಹಿಂದೂಳಿದ ಮಕ್ಕಳಿಗೆ ಈ ಕಾರ್ಯಕ್ರಮ ಅನುಷ್ಠಾನಗೊಳುತ್ತಿರುವುದು ನಮಗೆ ಸಂತಸದ ವಿಷಯವಾಗಿದೆ. ಇದು ಮಕ್ಕಳು ತಮ್ಮ ಭವಿಷ್ಯದ ಯೋಜನೆ ರೂಪಿಸಿಕೊಂಡು ಭವಿಷ್ಯದ ಹುದ್ದೆಗೆ ಅಥವಾ ಭವಿಷ್ಯದ ಜೀವನಕ್ಕೆ ತಮ್ಮ ಉತ್ತಮ ಪೂರ್ವ ಯೋಜನೆಯನ್ನು ರೂಪಿಸಿಕೊಳ್ಳಲು ಭುನಾದಿಯಾಗಿ, ಮಾರ್ಗದರ್ಶಿಯಾಗಿ ನನ್ನ ಭವಿಷ್ಯ ನನ್ನ ಯೋಜನೆ ಕಾರ್ಯಕ್ರಮ ಪ್ರತಿ ವಸತಿ ಶಾಲೆಗಳ ಮಕ್ಕಳಲ್ಲಿ ಸಹಕಾ ರಿಯಾಗಿದೆ .
ಪ್ರಸ್ತುತ ಸ್ಪರ್ಧಾತ್ಮಕ ಜಗತ್ತಿನಲ್ಲಿ ಅಂತರಾಷ್ಡ್ರೀಯ ಖಾಸಗಿ ಶಾಲೆಗಳಲ್ಲಿ ನೀಡುವ ಪಠ್ಯ ವಿಷಯದ ತರಬೇತಿಯನ್ನು ನಮ್ಮ ಅನಾಹತ ಯುನೈಟೆಡ್ ಎಫರ್ಟ್ ಫೌಂಡೇಶನ್ರವರು ನಮ್ಮ ಕರ್ನಾಟಕ ವಸತಿ ಶಿಕ್ಷಣ ಸಂಸ್ಥೆಯೊಂದಿಗೆ ಸೇರಿ ಈ ಕಾರ್ಯಕ್ರಮ ಶಿಕ್ಷಕರಿಗೆ ಉತ್ತಮ ತರಬೇತಿ ಕೊಟ್ಟು ನಮ್ಮ ವಸತಿ ಶಾಲೆಗಳಲ್ಲಿ ಅನುಷ್ಠಾನ ಮಾಡುತ್ತಿದ್ದು ಇದಕ್ಕೆ ಪೂರಕವಾಗಿ ತರಬೇತಿ ಪಡೆದ ಎಲ್ಲ ವಸತಿ ಶಾಲೆಯ ಶಿಕ್ಷಕರು ಮತ್ತು ಪ್ರಾಂಶುಪಾಲರು ತಮ್ಮ ಶಾಲೆಗಳಲ್ಲಿ ಈ ಕಾರ್ಯಕ್ರಮವು ಯಶಸ್ವಿ ಮತ್ತು ಪರಿನಾಮಕಾರಿ ಅನುಷ್ಠಾನಕ್ಕೆ ಸೂಚಿಸಿದರು ಹಾಗೂ ಜಿಲ್ಲಾ ಹಂತದ ಸಹಾಯ ಸಹಕಾರ ನಿಮ್ಮಗೆ ಸದಾ ಇರುತ್ತದೆ ಎಂದು ಹೇಳಿದರು. ಮುಖ್ಯ ಅಥಿತಿಗಳಾಗಿ ಶ್ರೀ.ಅನೀಲ ಕುಮಾರ ಬಿ.ಎಮ್ ವಿಭಾಗೀಯ ಮುಖ್ಯಸ್ಥರು, ಅನಾಹತ ಯುನೈಟೆಡ್ ಎಫರ್ಟ್ ಪೌಂಡೆಶೆನ್ ಬೆಂಗಳೂರು ಇವರು ಕಾರ್ಯಕ್ರಮದಲ್ಲಿ ಭಾಗವಹಿಸಿದ ವಿಜಯಪುರ ಜಿಲ್ಲೆಯ ವಸತಿ ಶಾಲೆಯ ಪ್ರಾಂಶುಪಾಲರು ಹಾಗೂ ತರಬೇತಿ ಪಡೆದ ಶಿಕ್ಷಕರಿಗೆ ನನ್ನ ಭವಿಷ್ಯ ವೃತ್ತಿ ಯೋಜನೆಯ ಕುರಿತು ಸಂಸ್ಥೆಯ ಹಿನ್ನೆಲೆ, ಸಂಸ್ಥೆಯ ಗುರಿ ಮತ್ತು ಉದ್ದೇಶ, ಹಾಗೂ ಪ್ರಾಂಶುಪಾಲರ ಜವಾಬ್ದಾರಿಗಳ ಕುರಿತು ಮತ್ತು “ನನ್ನ ಭವಿಷ್ಯ ನನ್ನ ಯೋಜನೆ” , ನನ್ನ ವೃತ್ತಿ ನನ್ನ ಆಯ್ಕೆ ಕಾರ್ಯಕ್ರಮದ ಪರಿಚಯ, ಸಂಸ್ಥೆಯ ಆಢಳಿತ ಮಂಡಳಿ ಕುರಿತು, ಸವಿಸ್ತಾರವಾದ ಮಾಹಿತಿಯನ್ನು ನೀಡಿದರು
ಶ್ರೀ.ಡಿ.ಎಮ್.ಚಲವಾದಿ, ಜಿಲ್ಲಾ ಸಮನ್ವಯ ಅಧಿಕಾರಿಗಳು ಕ.ವ.ಶಿ.ಸ.ಸಂ.ವಿಜಯಪುರ,ತಮ್ಮ ಅಧ್ಯಕ್ಷಪರ ಮಾತುಗಳನಾಡಿದರು ನನ್ನ ಭವಿಷ್ಯ ನನ್ನ ಆಯ್ಕೆ ಕಾರ್ಯಕ್ರಮವನ್ನು ನಮ್ಮ ವಿಜಯಪುರ ಜಿಲ್ಲೆಯ ವಸತಿ ಶಾಲೆಯ ಮಕ್ಕಳಿಗೆ ಉಪಯುಕ್ತವಾದ ಕಾರ್ಯಕ್ರಮವೆಂದು ನೇರೆದ ಪ್ರಾಂಶುಪಾಲರಿಗೆ ಮತ್ತು ಶಿಕ್ಷಕರಿಗೆ ತಿಳಿಸಿ ಹೇಳುವುದರ ಮುಖಾಂತರ ಈ ಕಾರ್ಯಕ್ರಮವನ್ನು ಜಿಲ್ಲಾ ಹಂತದಲ್ಲಿ ಯಶಸ್ವಿಗೊಳಿಸಲು ಸಹಾಯ ಸಹಕಾರ ಮಾಡುತ್ತೇವೆ ಎಂದು ಹೆಳಿದರು.
ಇದೇ ಸಂದರ್ಭದಲ್ಲಿ ತರಬೇತಿಪಡೆದ ಶಿಕ್ಷಕರು ಹಾಗೂ ಪ್ರಾಂಶುಪಾಲರು, ಬಾಗಲಕೋಟ ಮತ್ತು ವಿಜಯಪುರ ಜಿಲ್ಲೆಯ ಮಾರ್ಗದರ್ಶಕ ನಾಯಕರಾದ ಸಮೇಲ್ ಗಾಡೀಕಾರ, ಪ್ರಾಂಶುಪಾಲರಾದ ದಯಾನಂದ ನಿರೂಪಿಸಿದರೇ, ಡಿ.ಎಮ್.ಚಲವಾದಿ ಸ್ವಾಗತಿಸಿದರೇ ಕಾರ್ಯಕ್ರಮದ ವಂದನಾರ್ಪಣೆಯನ್ನು ಪ್ರಾಂಶುಪಾಲರಾದ ಗುಪ್ತಾ ನೇರವೇರಿಸಿದರು.
ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ