*ಉಜ್ಜನಿಯಲ್ಲಿ ನಡೆದ ಕ್ರಿಕೇಟ್ ಟೂರ್ಲಿಮೆಂಟ್ :ಬಿ.ಕೆ. ಬ್ರದರ್ಸ್ ದಾವಣಗೆರೆ ತಂಡ ಭರ್ಜರಿ ಗೆಲುವು*
"ನಗದು=೨೦೦೦೦/-ರೂ ಹಾಗೂ ಅತ್ಯಕರ್ಷಕ ಟ್ರೋಫಿ ಪ್ರಥಮ ಬಹುಮಾನ ವಿಜೇತೆ "
ಕೊಟ್ಟೂರು ತಾಲೂಕು ಉಜ್ಜಯಿನಿ ಗ್ರಾಮದಲ್ಲಿ ದೀಪಾವಳಿ ಹಬ್ಬದ ಪ್ರಯುಕ್ತ ೪ನೇ ವರ್ಷದ ಟೂರ್ಲಿಮೆಂಟ್ಸ್ನ್ನು ಉಜ್ಜಯಿನಿ ಬಾಯ್ಸ್ ತಂಡದವರು ಅಯೋಜಿಸಿದ್ದರು. ಕ್ರಿಕೇಟ್ ಟೂರ್ಲಿಮೆಂಟ್ಸ್ನ್ನು ಜ್ಞಾನಗುರು ವಿದ್ಯಾಪೀಠದ ಕಾರ್ಯದರ್ಶಿ ಎಂ.ಎA.ಜೆ. ಹರ್ಷವರ್ಧನ್ ಹಾಗೂ ಸರ್ ಎಂ. ಗುರುಸಿದ್ದನಗವಢ್ರು , ಗ್ರಾಮ ಪಂಚಾಯಿತಿ ಅಧ್ಯಕ್ಷರಾದ ಓಬಣ್ಣ ಸೇರಿ ಟೂರ್ಲಿಮೆಂಟ್ಸ್ ಗೆ ಚಾಲನೆ ನೀಡಿದರು.
ಅಕ್ಟೋಬರ್ ೩೧ ರಿಂದ ನವಂಬರ್ ೩ರವರೆಗೆ ನಡೆಸಿರುವ ಕ್ರಿಕೆಟ ಟೂರ್ನಿಯಲ್ಲಿ ಒಟ್ಟು ೩೦ ತಂಡಗಳು ಭಾಗವಹಿಸಿದ್ದವು ಅದರಲ್ಲಿ ಪ್ರಥಮ ಸ್ಥಾನವನ್ನು ಮುಡುಗೇರಿಸಿಕೊಂಡ ಬಿ.ಕೆ. ಬ್ರದರ್ಸ್ ದಾವಣಗೆರೆ. ಪ್ರಥಮ ಬಹುಮಾನವಾಗಿ ನಗದು=೨೦೦೦೦/-ರೂ ಹಾಗೂ ಅತ್ಯಕರ್ಷಕ ಟ್ರೋಫಿಯನ್ನು ನೀಡಿ ಗೌರವಿಸಲಾಯಿತು.
ಉಜ್ಜಿನಿ ಬಾಯ್ಸ್ ಉಜ್ಜಿನಿ. ತಂಡ ದ್ವಿತೀಯ ಸ್ಥಾನಕ್ಕೆ ತೃಪ್ತಿ ಪಡಬೇಕಾಯಿತು ಅವರಿಗೂ ಕೂಡ ದ್ವಿತೀಯ ಬಹುಮಾನವಾಗಿ ನಗದು ೧೦೦೦೦/- ರೂ, ಆಕರ್ಷಕ ಟ್ರೋಫಿಯನ್ನು ತಮ್ಮ ಮುಡಿಗೇರಿಸಿಕೊಂಡರು.
ಸಮಾರೋಪ ಸಮಾರಂಭದಲ್ಲಿ. ಸಂದರ್ಭದಲ್ಲಿ ಶ್ರೀಯುತ ಪ್ರಕಾಶ್ ಶೆಟ್ಟಿ ಎಂ ಉಜಿನಪ್ಪ ವಿ ಲೋಕೇಶ್ ಬಿ ಹನುಮಂತಪ್ಪ, ಚನ್ನವೀರ ಸ್ವಾಮಿ ಶಿಕ್ಷಕರು, ಟಿ ಆರ್ ಏಕಾಂತರಾಜ್ ಶೆಟ್ಟಿ, ಡಾಕ್ಟರ್ ವೆಂಕಟೇಶ್, ಪ್ರಾಂಶುಪಾಲರಾದ ತಿಪ್ಪೇಸ್ವಾಮಿ ಸರ್, ಗೊಂಗಡಿ ಮಂಜುನಾಥ್ ಸ್ವಾಮಿ, ವಸುಂಧರ್ ಲೋಕಪ್ಪ, ಲೈಬ್ರರಿ ನಾಗರಾಜ್,ಗ್ರಾಮ ಪಂಚಾಯಿತಿ ಅಧ್ಯಕ್ಷರು ಓಬಣ್ಣ ಇನ್ನು ಅನೇಕ ಗಣ್ಯಾತಿ ಗಣ್ಯರು ಉಪಸ್ಥಿತರಿದ್ದರು.
ಈ ಒಂದು ಸಂದರ್ಭದಲ್ಲಿ ಉಜ್ಜಿನಿ ಬಾಯ್ಸ್ ಉಜ್ಜಿನಿ ತಂಡದವರು ಈ ಒಂದು ಕ್ರೀಡೆಗೆ ಪ್ರತ್ಯಕ್ಷವಾಗಿ ಮತ್ತು ಪರೋಕ್ಷವಾಗಿ ಸಹಕರಿಸಿದತದ ಎಲ್ಲಾ ಕ್ರೀಡಾಭಿಮಾನಿಗಳಿಗೆ ಹಾಗೂ ಕ್ರೀಡಾ ಪ್ರೋತ್ಸಾಹಕರಿಗೆ ಸನ್ಮಾನ ಮಾಡಿ ಗೌರವಿಸಿದರು.
ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ