ಕರ್ನಾಟಕ ಪ್ರದೇಶ ಕೃಷಿಕ ಸಮಾಜದ ಕಾರ್ಯಕಾರಿ ಸಮಿತಿ ಚುನಾವಣೆಗೆ ಅಭ್ಯರ್ಥಿಗಳ ಅರ್ಜಿಗೆ ಮನವಿ
ಮಸ್ಕಿ : ಕರ್ನಾಟಕ ಪ್ರದೇಶ ಕೃಷಿಕ ಸಮಾಜದ ಕಾರ್ಯಕಾರಿ ಸಮಿತಿಯ 5 ವರ್ಷಗಳ ಅವಧಿಗೆ ಏರ್ಪಡಿಸುವ ತಾಲ್ಲೂಕು ಮತ್ತು ಜಿಲ್ಲಾ ಕೃಷಿಕ ಸಮಾಜಗಳ ಚುನಾವಣೆಯನ್ನು ಮಾನ್ಯ ಉಚ್ಚ ನ್ಯಾಯಾಲಯ ಆದೇಶದ ಅನ್ವಯ ಘೋಷಣೆ ಮಾಡಲಾದ ಚುನಾವಣೆ ಪ್ರಯುಕ್ತ ಜರುಗುವ 2024 ನೇ ಸಾಲಿನ ಚುನಾವಣೆಗೆ ಅರ್ಜಿ ಸಲ್ಲಿಸಲು ಮನವಿ.
2024 -25 ನೇ ಸಾಲಿನಕರ್ನಾಟಕ ಪ್ರದೇಶ ಕೃಷಿಕ ಸಮಾಜದ ಕಾರ್ಯಕಾರಿ ಸಮಿತಿಯ 5 ವರ್ಷಗಳ ಅವಧಿಗೆ ಏರ್ಪಡಿಸುವ ತಾಲ್ಲೂಕು ಮತ್ತು ಜಿಲ್ಲಾ ಕೃಷಿಕ ಸಮಾಜಗಳ ಚುನಾವಣೆ ಯೂ ಡಿರಸೆಂಬರ್ ಹಾಗೂ ಭಾನುವಾರ ರಂದು ಬೆಳಿಗ್ಗೆ 8:00 ರಿಂದ ಮಧ್ಯಾಹ್ನ 3:00 ಗಂಟೆವರೆಗೆ ಮಸ್ಕಿ ತಾಲ್ಲೂಕು ಕೃಷಿಕ ಸಮಾಜದ ಚುನಾವಣೆಯನ್ನು ನಿಗಧಿಪಡಿಸಿರುತ್ತಾರೆ. ತಾಲ್ಲೂಕಿನ ಎಲ್ಲಾ ಸದಸ್ಯರ ಪಟ್ಟಿಯನ್ನು ರೈತ ಸಂಪರ್ಕ ಕೇಂದ್ರ ಮಸ್ಕಿಯಲ್ಲಿ ಹಾಗೂ ಮಸ್ಕಿ ತಾಲ್ಲೂಕಿನ ಆಯಾ ರೈತ ಸಂಪರ್ಕ ಕೇಂದ್ರಗಳ ಸೂಚನಾ ಫಲಕದಲ್ಲಿ ಪ್ರಕಟಿಸಲಾಗಿರುತ್ತದೆ. ತಾಲ್ಲೂಕು ಕೃಷಿಕ ಸಮಾಜದ ಚುನಾವಣೆ ನಾಮಪತ್ರಗಳನ್ನು ಅರ್ಜಿ ಮೂಲಕ ರೂ. 250/- ಗಳ ಠೇವಣಿ ಪಾವತಿಸಿದ ಮೂಲ ರಸೀದಿ, ಪಹಣಿ ಪ್ರತಿಕೆಯೊಂದಿಗೆ ಸಲ್ಲಿಸಬೇಕು. ಚುನಾವಣೆಯ ಪ್ರಕ್ರಿಯೆಯು ನವೆಂಬರ್ 30 ರಿಂದ ಡಿಸೆಂಬರ್ 6 ರವರೆಗೆ ಪ್ರಾರಂಭಗೊಂಡು ಬೆಳಿಗ್ಗೆ 11:00 ರಿಂದ ಮಧ್ಯಾಹ್ನ 3:00 ಗಂಟೆಯವರೆಗೆ ನಾಮ ಪತ್ರ ಸಲ್ಲಿಸುವುದು. ಡಿಸೆಂಬರ್ 07 ರಂದು ಬೆಳಿಗ್ಗೆ 11-00 ರಿಂದ ಮಧ್ಯಾಹ್ನ 3:00 ಗಂಟೆಯವರೆಗೆ ನಾಮ ಪತ್ರಗಳನ್ನು ಪರಿಶೀಲಿಸುವುದು ಹಾಗೂ ತಿರಸ್ಕೃತಗೊಂಡ ನಾಮ ಪತ್ರಗಳನ್ನು ಸಂಜೆ: 5:00 ಗಂಟೆಯ ನಂತರ ಸೂಚನಾ ಫಲಕದಲ್ಲಿ ಪ್ರಕಟಿಸಲಾಗುವುದು ಡಿಸೆಂಬರ್ 09 ರಂದು ನಾಮಪತ್ರಗಳನ್ನು ವಾಪಸ್ಸು ಪಡೆಯುವುದು.ಅದೇ ದಿನ ಅಂತಿಮ ಉಮೇದುವಾರರ ಪಟ್ಟಿಯನ್ನು ಪ್ರಕಟಣೆ ಮಾಡಲಾಗುವುದು.ಮಸ್ಕಿ ತಾಲ್ಲೂಕಿನಿಂದ 15 ಕಾರ್ಯಕಾರಿ ಸಮಿತಿಯ ಸದಸ್ಯರ ಉಮೇದುವಾರಿಕೆಗೆ ತಾಲ್ಲೂಕು ಕೃಷಿ ಸಮಾಜದ ಚುನಾವಣೆಯನ್ನು ರೈತ ಸಂಪರ್ಕ ಕೇಂದ್ರ ಮಸ್ಕಿ ಕಛೇರಿಯಲ್ಲಿ ನಡೆಸಲಾಗುವುದು. ಹೆಚ್ಚಿನ ಮಾಹಿತಿಗಾಗಿ ರೈತ ಸಂಪರ್ಕ ಕೇಂದ್ರ ಮಸ್ಕಿ ಹಾಗೂ ಜಂಟಿ ಕೃಷಿ ನಿರ್ದೇಶಕರ ಕಛೇರಿ ರಾಯಚೂರು, ಇವರನ್ನು ಸಂಪರ್ಕಿಸಲು ಪತ್ರಿಕಾ ಹೇಳಿಕೆ ಮೂಲಕ ಮಸ್ಕಿ ತಾಲೂಕಿನ ಕರ್ನಾಟಕ ಪ್ರದೇಶ ಕೃಷಿಕ ಸಮಾಜದ ಚುನಾವಣೆಯಲ್ಲಿ ಆಸಕ್ತ ಅಭ್ಯರ್ಥಿಗಳು ಅರ್ಜಿ ಸಲ್ಲಿಸಿ ಭಾಗವಹಿಸಿ ಎಂದು ಚುನಾವಣಾಧಿಕಾರಿ ಸುಪ್ರೀತ್ ಪಾಟೀಲ್ ಪತ್ರಿಕಾ ಹೇಳಿಕೆ ಮೂಲಕ ತಿಳಿಸಿದ್ದಾರೆ.
ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ