ಹಟ್ಟಿ ಚಿನ್ನದ ಗಣಿಯ ಯೇಸುವಿನ ಪವಿತ್ರ ಹೃದಯ ದೇವಾಲಯದಲ್ಲಿ ಸುವಾರ್ತೆ ಪ್ರಚಾರ ಭಾನುವಾರ ಆಚರಣೆ.

 

ಹಟ್ಟಿ ಚಿನ್ನದ ಗಣಿ:ಯೇಸುವಿನ ಪವಿತ್ರ ಹೃದಯದ ದೇವಾಲಯ ಹಟ್ಟಿ ಚಿನ್ನದ ಗಣಿಯಲ್ಲಿ ಇಂದು ಮುಂಜಾನೆ ಚರ್ಚಿನ ಆವರಣದಲ್ಲಿ ಪ್ರತಿ ವರ್ಷ ಅಕ್ಟೋಬರ್ ಆಗು ನವೆಂಬರ್ ತಿಂಗಳಲ್ಲಿ ಆಚರಿಸುವ(ಮಿಷನ್ ಸಂಡೇ)ಸುವಾರ್ತ ಪ್ರಚಾರ ಭಾನುವಾರವನ್ನು ಹಟ್ಟಿ ಚಿನ್ನದ ಗಣಿಯ ಗಾಂಧಿ ಮೈದಾನ.ಜತ್ತಿ ಲೈನ್.ಜಿ ಆರ್.ಜೆ ಪಿಕಾಲೋನಿ. ಅಬ್ದುಲ್ಲ ಕಾಲೋನಿ. ರಾಮ್ ರಹೀಮ್ ಕಾಲೋನಿ.ಹಾಗೂ ಹಟ್ಟಿ ವಿಲೇಜ್.ನ ಯೇಸುವಿನ ಪವಿತ್ರ ಹೃದಯದ ದೇವಾಲಯದ ಕ್ರೈಸ್ತರು ಚರ್ಚಿನ ಆವರಣದಲ್ಲಿ ಅನೇಕ ಪೆಂಡಾಲ್ ಗಳನ್ನು ಹಾಕಿ ವಿಧವಿಧವಾದ ತಿಂಡಿ ತಿನಿಸುಗಳನ್ನು ಸಿದ್ಧಪಡಿಸಿರುತ್ತಾರೆ ಕ್ರೈಸ್ತರು ಹಾಗೂ ಸರ್ವಜನಿಕರು ಗುಂಪು ಗುಂಪಾಗಿ ಬಂದು ಆಟಗಳಲ್ಲಿ ಭಾಗವಹಿಸಿ ಸಂತೋಷ ವ್ಯಕ್ತಪಡಿಸುತ್ತಾರೆ.

ಸುವಾರ್ತೆ ಪ್ರಚಾರ ಭಾನುವಾರವನ್ನು ಕುರಿತು.ವಂದನೆಯ ಸ್ವಾಮಿ ಡಾ|| ವಿಜಯಕುಮಾರ್ ಪಿ. ಮಾತನಾಡಿ1926ರಲ್ಲಿ ಅಂದಿನ ವಿಶ್ವ ಗುರುಗಳಾಗಿದ್ದ11ನೇ ಪಾಯಸ್ ರವರು ಮೊದಲ ಬಾರಿಗೆ ಪ್ರಾರಂಭಿಸಿದರು.

ಇದು 98ನೇ ವರ್ಷದ ಸುವಾರ್ತೆ ಭಾನುವಾರ ಪ್ರಭು ಯೇಸುವಿನ ಪ್ರೀತಿ.ಕ್ಷಮೆ. ಸಮಾನತೆಯನ್ನು ಸಾರುವುದೇ ಇದರ ಪ್ರಮುಖ ಉದ್ದೇಶ. ಹಾಗೂ ವಿಶ್ವದಲ್ಲಿ ಇರುವ ಪ್ರತಿ ಮಾನವನು ಭ್ರಾತೃತ್ವವನ್ನು ಬೆಳಗಿಸುವುದು ಜೀವಿಸುವಂತಹ ಪ್ರಭು ಕ್ರೈಸ್ತರ ಕರುಣೆಯನ್ನು ಜಗತ್ತಿಗೆ ಸಾರುವುದೇ ಇದರ ಉದ್ದೇಶ.ಈ ಸುವಾರ್ತೆ ಜಾರ ಭಾನುವಾರವನ್ನು ಪ್ರತಿವರ್ಷ ಅಕ್ಟೋಬರ್ ಅಥವಾ ನವಂಬರ್ ತಿಂಗಳಲ್ಲಿ ಆಚರಿಸಲಾಗುವುದು. ಈ ವರ್ಷ ವಿಶ್ವಗುರುಗಳಾಗಿರುವ ಫ್ರಾನ್ಸಿಸ್ ರವರು ಪ್ರತಿಯೊಬ್ಬರನ್ನು ಪ್ರಭು ಕ್ರಿಸ್ತರು ಪ್ರೀತಿಯ ಔತಣಕ್ಕೆ ಬರಬೇಕು ಎಂಬ ವಾಕ್ಯವನ್ನು ಪ್ರತಿ ವರ್ಷ ದಿನ ಪವಿತ್ರ ಹೃದಯ ದೇವಾಲಯ ಹಟ್ಟಿ ಚಿನ್ನದ ಗಣಿಯಲ್ಲಿ ಆಚರಿಸಲಾಗುತ್ತದೆ ಎಂದು ವಂದನೆಯ ಸ್ವಾಮಿ ಡಾಕ್ಟರ್ ವಿಜಯಕುಮಾರ್ ಪಿ ಕಾರ್ಯಕ್ರಮದ ಕುರಿತು ಮಾತನಾಡಿದರು. ಕಾರ್ಯಕ್ರಮಕ್ಕೆ

ಹಟ್ಟಿ ಪಟ್ಟಣ ಪಂಚಾಯಿತಿಯ ಉಪಾಧ್ಯಕ್ಷರಾದ ಶ್ರೀಮತಿ ನಾಗರತ್ನ ಶರಣಗೌಡ ಗುರಿಕಾರ್ ಆಗಮಿಸಿ ಕ್ರೈಸ್ತ ವಿಶ್ವಾಸಿಗಳ ಸಂತೋಷದಲ್ಲಿ ಭಾಗಿಗಳಾದರು.ಹಾಗೂ ಪಾಲನಾ ಸಮಿತಿಯಿಂದ ಆಗಮಿಸಿದ ಅತಿಥಿಗಳಿಗೆ ಸನ್ಮಾನಿಸಲಾಯಿತು.

ಈ ಸಂದರ್ಭದಲ್ಲಿ ಪಾಲನ ಸಮಿತಿಯ ಅಧ್ಯಕ್ಷರಾದ ಫಾದರ್ ಡಾಕ್ಟರ್ ವಿಜಯಕುಮಾರ್ ಪಿ. ಕಾರ್ಯದರ್ಶಿ ರಾಜಪಾಲ.ಪಾಲನ ಸಮಿತಿ ಸದಸ್ಯರು.ಯುವಕರ ಅಧ್ಯಕ್ಷ ಕ್ರಿಸ್ತ ರಾಜ. ಕಾರ್ಯದರ್ಶಿ ಕುಮಾರಿ ಅನಿತ.ಮೀನಾಕ್ಷಿ ರೋನಿತ್.ಹಾಗೂ ಕ್ರೈಸ್ತ ವಿಶ್ವಾಸಿಗಳು ಭಾಗವಹಿಸಿದ್ದರು.

ಕಾಮೆಂಟ್‌ಗಳು

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

ಕ್ರಿಕೆಟ್ ಬೆಟ್ಟಿಂಗ್ ದಂಧೆಕೋರರ ಎಡೆಮುರಿ ಕಟ್ಟಿದ : ಪಿಎಸ್ಐ ಗೀತಾಂಜಲಿ ಶಿಂಧೆ

ಮಲೆನಾಡಲ್ಲಿ ಮಳೆ:ಭದ್ರಾ ಒಳ ಹರಿವು ಹೆಚ್ಚಳ

ಕೊಟ್ಟೂರು ಪೊಲೀಸ್ ಠಾಣೆಗೆ ಮೊದಲ ಬಾರಿಗೆ ಮಹಿಳಾ ಪಿಎಸ್ಐ ಗೀತಾಂಜಲಿ ಶಿಂಧೆ