4000 ಬಸ್ಸುಗಳ ಖರೀದಿ
ಬೆಂಗಳೂರು: ಈಗಾಗಲೇ 5 ರ ಪೈಕಿ ಮೂರು ಗ್ಯಾರಂಟಿಗಳನ್ನು ಕೊಟ್ಟಿದ್ದೇವೆ. ಶಕ್ತಿ ಯೋಜನೆಯನು ಜೂನ್ 11 ರಿಂದ ಜಾರಿಗೆ ಕೊಟ್ಟಿದ್ದೇವೆ. ಈ ರಾಜ್ಯದ ಹೆಣ್ಣುಮ್ಕಳು ಖುಷಿಯಾಗಿದ್ದಾರೆ. ಇವರಿಗೆ ಮಾತ್ರ ಅಸಂತೋಷ. 49.6 ಲಕ್ಷ ಮಹಿಳೆಯರು ಪ್ರತಿನಿತ್ಯ ಓಡಾಡುತ್ತಿದ್ದಾರೆ. ಉಚಿತ ಬಸ್ಸುಗಳ ಪ್ರಯಾಣ ಹೆಚ್ಚಾಗಿ ನಮ್ಮ ಆದಾಯ ಕೂಡ ಜಾಸ್ತಿಯಾಗಿದೆ. ಕೆಎಸ್‍ಆರ್ ಟಿ ಸಿ ಯಲ್ಲಿ ಪ್ರಯಾಣ ಮಾಡಿರುವ ಟಿಕೆಟ್ ದರವನ್ನು ಸಾರಿಗೆ ಸಂಸ್ಥೆಗೆ ಸರ್ಕಾರ ಕಟ್ಟಿಕೊಡಲಿದೆ. ಈ ಬಗ್ಗೆ ಸಂಶಯ ಬೇಡ ಎಂದರು. 2800 ಕೋಟಿ ರೂ.ಗಳನ್ನು ಸಾರಿಗೆ ಸಂಸ್ಥೆಗೆ ಒದಗಿಸುತ್ತೇವೆ. 13 ಸಾವಿರ ಸಿಬ್ಬಂದಿ ನೇಮಕಾತಿ ಮಾಡಲು ತೀರ್ಮಾನ ಮಾಡಿದ್ದು 4000 ಹೊಸ ಬಸ್ಸುಗಳನ್ನು ಖರೀದಿ ಮಾಡಲಾಗುವುದು ಎಂದರು. . ಪುರುಷರಿಗೆ, ವಿದ್ಯಾರ್ಥಿಗಳಿಗೆ ತೊಂದರೆಯಾಗಬಾರದು. ಈ ಕಾರ್ಯಕ್ರಮ ಬಹಳ ಯಶಸ್ವಿಯಾಗಿ ಜಾರಿಯಾಗುತ್ತಿದೆ. ಷರತ್ತುಗಳನ್ನು ಹಾಕಿದ್ದೇವೆ. ಘೋಷಣೆ ಮಾಡಿದಾಗ ಷರತ್ತುಗಳನ್ನು ಹಾಕಿ ವಿವರ ನೀಡಲಾಗುವುದಿಲ್ಲ. ಈಗ ಮಾಡಿದ್ದೇವೆ. ಮಹಿಳೆಯರು ಖುಷಿಯಾಗಿದ್ದಾರೆ. 50 ಕೋಟಿ ಮಹಿಳೆಯರ ಸಬಲೀಕರಣದ ಕಾರ್ಯಕ್ರಮವಲ್ಲವೇ? ಆ ದುಡ್ಡು ಉಳಿದರೆ, ದೇವಸ್ಥಾನ, ತವರು ಮನೆ, ಸ್ನೇಹಿತರ ಮನೆಗೆ ಹೋಗುತ್ತಾರೆ. ಹೊರಗೆ ಹೋಗುತ್ತಿದ್ದಾರೆ. ಆನರಿಗೆ ದುಡ್ಡಿರಬೇಕು. ಅದಿದ್ದರೆ ತಾನೇ ಹೊರಗೆ ಹೋಗುತ್ತಾರೆ? ಅದರಿಂದ ತೆರಿಗೆ ಬರುತ್ತದೆ. ಉದ್ಯೋಗ ಸೃಷ್ಟಿಯಾಗುತ್ತದೆ. ಜಿಡಿಪಿ ಬೆಳವಣಿಗೆಯಾಗುತ್ತದೆ. ಅದ