ಭತ್ತ,ತೊಗರಿ ಕೇಂದ್ರ ತೆರೆದು, ಬೆಳೆ ಹಾನಿಯಾದ ರೈತರಿಗೆ ಪರಿಹಾರ ನೀಡಬೇಕು ಎಂದು ತಹಶೀಲ್ದಾರ್ ಅವರಲ್ಲಿ ಕರ್ನಾಟಕ ರೈತ ಸಂಘ ಮನವಿ
ಮಸ್ಕಿ : ಪಟ್ಟಣದ ಬಸವೇಶ್ವರ ನಗರದ ತಹಶೀಲ್ದಾರರ ಕಚೇರಿಯಲ್ಲಿ ಭತ್ತ, ತೊಗರಿ ಖರೀದಿ ಕೇಂದ್ರ ಶೀಘ್ರಗತಿಯಲ್ಲಿ ತೆರೆಯಬೇಕು ಹಾಗು ದಿ:14-11-2024 ಕ್ಕೆ ಸುರಿದ ಭಾರಿ ಮಳೆಗೆ ಭತ್ತದ ಬೆಳೆ ನೆಲಕಚ್ಚಿದ್ದು, ಭತ್ತ ಹಾನಿಯಾದ ರೈತರಿಗೆ ಬೆಳೆ ನಷ್ಟ ಪರಿಹಾರ ಒದಗಿಸಿ ಮತ್ತು ರೈತರ ಕೃಷಿ ಉತ್ಪನ್ನಗಳ ಮಾರಾಟಗಳಿಗೆ ಅನುಕೂಲ ಕಲ್ಪಿಸಿ ರೈತರ ನೆರವಿಗೆ ಧಾವಿಸಬೇಕು ಎಂದು ತಹಶೀಲ್ದಾರ್ ಮೂಲಕ ರಾಜ್ಯದ ಮುಖ್ಯಮಂತ್ರಿಗಳಿಗೆ ಮನವಿ ಮಾಡಿದರು.
ತುಂಗಭದ್ರ ಅಚ್ಚುಕಟ್ಟು ಪ್ರದೇಶದ ವ್ಯಾಪ್ತಿಯ ರಾಯಚೂರು ಮತ್ತು ಕೊಪ್ಪಳ ಬಳ್ಳಾರಿ ಜಿಲ್ಲೆಗಳಲ್ಲಿ ಕಳೆದ 20 ದಿನಗಳಿಂದ ಭತ್ತ ಕಟಾವು ಪ್ರಾರಂಭಗೊಂಡಿದೆ. ಸರ್ಕಾರ ಅತ್ಯಂತ ತೀವ್ರ ಗತಿಯಲ್ಲಿ ಭತ್ತ ಹಾಗು ತೊಗರಿ ಖರೀದಿ ಕೇಂದ್ರ ತೆರೆಯಬೇಕು. ಸರ್ಕಾರ ಪ್ರತಿ ವರ್ಷ ರೈತರ ಭತ್ತ, ತೊಗರಿ ಖಾಲಿಯಾದ ಮೇಲೆ ಖರೀದಿ ಕೇಂದ್ರ ತೆರೆದು ವರ್ತಕರಿಗೆ ಹಾಗು ದಲ್ಲಾಳಿಗಳಿಗೆ ಅನುಕೂಲ ಮಾಡಿದಂತೆ ಆಗುತ್ತದೆ. ತಾವುಗಳು ಈ ರೈತ ವಿರೋಧಿ ಧೋರಣೆಗಳಿಗೆ ಕಡಿವಾಣ ಹಾಕಬೇಕಾಗಿದೆ. ಸ್ಥಳೀಯ ಅಧಿಕಾರಿಗಳು ದಲ್ಲಾಳಿಗಳೊಂದಿಗೆ ಶಾಮೀಲಾಗಿ ರೈತರಿಗೆ ನಷ್ಟವುಂಟು ಮಾಡುತ್ತಾರೆ.
ದಿನಾಂಕ: 04-11-2024 ರಂದು ರಾಯಚೂರಿನಲ್ಲಿ ನಡೆದ ಕೆ.ಡಿ.ಪಿ. ಸಭೆಯಲ್ಲಿ ಭತ್ತ ತೊಗರಿ ಖರೀದಿ ಕೇಂದ್ರತೆರೆಯುವ ಕುರಿತು ನಮ್ಮ ಜಿಲ್ಲೆಯ ಉಸ್ತುವಾರಿ ಮಂತ್ರಿ ಶರಣು ಪ್ರಕಾಶ ಪಾಟೀಲ್ ಮತ್ತು ಸಣ್ಣ ನೀರಾವರಿ ಸಚಿವರಾದ ಎನ್.ಎಸ್. ಬೋಸರಾಜ್ ಮಾತನಾಡದಿರುವುದು ಅತ್ಯಂತ ನೋವಿನ ಸಂಗತಿ ಜೋಳ ಖರೀದಿ ಕೇಂದ್ರದ ಬಗ್ಗೆ ಮಾತ್ರ ಮಾತನಾಡಿದ್ದಾರೆ. ಈ ಸದ್ಯದಲ್ಲಿ ಭತ್ತ, ತೊಗರಿ ಖರೀದಿ ಕೇಂದ್ರದ ಅಗತ್ಯವಿದ್ದರು ಸಹ ಯಾವ ಕಾರಣದಿಂದ ಮಾತನಾಡಲಿಲ್ಲ..? ಅವರ ಈ ಧೋರಣೆ ಅರ್ಥವಾಗುತ್ತಿಲ್ಲ. ಕನಿಷ್ಠ ಬೆಂಬಲ ಬೆಲೆ ಪ್ರತಿ ಕ್ವಿಂಟಲ್‌ಗೆ ರೂ.2.300/- ಇದ್ದರೂ ಕೂಡ ದಲ್ಲಾಳಿಗಳು ಅತ್ಯಂತ ಕಡಿಮೆ ಬೆಲೆಗೆ ಖರೀದಿಸುತ್ತಾರೆ. ತಾವುಗಳು ಕೇಂದ್ರ ಕೃಷಿ ಮಂತ್ರಿ ಶಿವರಾಜ್ ಚೌವ್ಹಾಣ್‌ಗೆ ಪತ್ರ ಬರೆದು ಕರ್ನಾಟಕದಲ್ಲಿ ಬೆಳೆದ ಎಲ್ಲಾ ಭತ್ತ, ತೊಗರಿ ಇತರೆ ಕೃಷಿ ಉತ್ಪನ್ನಗಳನ್ನು ಯಾವುದೇ ನಿಬರ್ಂಧವಿಲ್ಲದೆ, ಖರೀದಿಸಲು ಒತ್ತಾಯಿಸಬೇಕು. ಸರ್ಕಾರ ತಕ್ಷಣ ಖರೀದಿ ಕೇಂದ್ರ ತೆರೆದು ರೈತರ ನೆರವಿಗೆ ಬಾರದಿದ್ದರೆ, ನೀರಾವರಿ ಪ್ರದೇಶದಲ್ಲೂ ಕೂಡ ರೈತರ ಆತ್ಮಹತ್ಯೆಗಳು ಸಂಭವಿಸುವ ಸಾಧ್ಯತೆ ಇದೆ ಯಾಕೆಂದರೆ ಭತ್ತ, ತೊಗರಿ ಉತ್ಪಾದನಾ ವೆಚ್ಚ ಮೂರು ಪಟ್ಟು ಹೆಚ್ಚಾಗಿದೆ.
ಆದರೆ, ಬೆಂಬಲ ಬೆಲೆ ವರ್ಷಕ್ಕೆ ರೂ.100 ರಿಂದ 200 ರ ವರೆಗೆ ಹೆಚ್ಚು ಮಾಡುವುದು ಅತ್ಯಂತ ಅವೈಜ್ಞಾನಿಕವಾಗಿದೆ. ಕೇಂದ್ರ ಸರ್ಕಾರ ಡಾ। ಸ್ವಾಮಿನಾಥನ್ ವರದಿಯನ್ನಾಧರಿಸಿ ಬೆಲೆಯನ್ನು ನಿಗಧಿ ಮಾಡುತ್ತೇವೆನ್ನುವುದು ಸುಳ್ಳಾಗಿದೆ.ಇದಲ್ಲದೆ ಈ ಭಾಗದಲ್ಲಿ 20:20:13 ರಸ ಗೊಬ್ಬರ ಕೊರತೆಯಿಂದ ಹಿಂಗಾರು ಜೋಳ ಬಿತ್ತನೆ ಮಾಡಿದ ರೈತರು ತೀವ್ರ ತೊಂದರೆ ಅನುಭವಿಸುತ್ತಿದ್ದಾರೆ. ಕೇಂದ್ರ ಸರ್ಕಾರ ಗೊಬ್ಬರ ಕಂಪನಿಗಳಿಗೆ ಕೊಡಬೇಕಾದ ಸಬ್ಸಿಡಿ ಬಾಕಿ ಹಣವನ್ನು ಉಳಿಸಿಕೊಂಡಿರುವುದರಿಂದ ಕಂಪನಿಗಳು ಈ ರಸಗೊಬ್ಬರವನ್ನು ಸರಬರಾಜು ಮಾಡುತ್ತಿಲ್ಲವೆಂದು ಗೊತ್ತಾಗಿದೆ. ರಾಯಚೂರು ಜಿಲ್ಲೆಯ ರೈತರು ಭತ್ತ, ತೊಗರಿ ಕೇಂದ್ರಕ್ಕೆ ಒತ್ತಾಯಿಸಿ ಕರ್ನಾಟಕ ರೈತ ಸಂಘ (ಕೆ.ಆರ್.ಎಸ್) ನೇತೃತ್ವದಲ್ಲಿ ತಹಶೀಲ್ದಾರ್ ಡಾ.ಮಲ್ಲಪ್ಪ. ಕೆ. ಯರಗೋಳ ಅವರ ಮೂಲಕ ಮುಖ್ಯಂತ್ರಿಗಳಿಗೆ ಮನವಿ ಪತ್ರವನ್ನು ಸಲ್ಲಿಸಿದರು.
ಇದೇ ಸಂದರ್ಭದಲ್ಲಿ ಯಮನೂರಪ್ಪ ತಾ.ಕಾರ್ಯದರ್ಶಿ, ಗಿಡ್ಡಪ್ಪ ಕಾರ್ಯದರ್ಶಿ,ಛತ್ರಗೌಡ ತಾಲೂಕ ಅಧ್ಯಕ್ಷರು,ಬಸನಗೌಡ ಗೌ.ಅಧ್ಯಕ್ಷರೂ,ರಾಮಣ್ಣ ನಾಯಕ ಸಂಘಟಕರು,ವಿರುಪಣ್ಣ ನಾಯಕ ಸಂಘಟಕರು,ಬಿ.ಎನ್ ಯರದಿಹಾಳ ಜಿಲ್ಲಾ ಕಾರ್ಯದರ್ಶಿ,ರಮೇಶ್ ಜಿಲ್ಲಾ ಉಪಾಧ್ಯಕ್ಷರು,ಚಿಟ್ಟಿಬಾಬು ಜಿಲ್ಲಾ ಕಾರ್ಯದರ್ಶಿ,ನಾಗರಾಜ,ಪಾಂಡಪ್ಪ,ಯಂಕಪ್ಪ, ಮಾನಪ್ಪ,ಹುಲಿಗೆಮ್ಮ,ಹನುಮಂತ,ಚಾಂದ್ ಪಾಷ,ರಾಘವೇಂದ್ರ,ರಮೇಶ್,ಮರಿಯಪ್ಪ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.
ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ