ಪೋಸ್ಟ್‌ಗಳು

BALLARI NEWS ಲೇಬಲ್ ಜೊತೆಗೆ ಪೋಸ್ಟ್‌ಗಳನ್ನು ತೋರಿಸಲಾಗುತ್ತಿದೆ

ಬಳ್ಳಾರಿಯಿಂದ ವಂದೇ ಭಾರತ್ ರೈಲು ಆರಂಭಿಸಲು ಸ್ವಾಮಿ ಒತ್ತಾಯ

ಇಮೇಜ್
  ಬ ಬಳ್ಳಾರಿ;ಬಳ್ಳಾರಿಯಿಂದ ಬೆಂಗಳೂರು, ಬಿಜಾಪುರ ಮುಂತಾದ ಕಡೆ ವಂದೇ ಭಾರತ್ ರೈಲು ಸಂಚರಿಸುವಂತೆ ಮಾಡಲು ರೈಲ್ವೆ ಕ್ರಿಯಾ ಸಮಿತಿ ಅಧ್ಯಕ್ಷ ಮಹೇಶ್ವರ ಸ್ವಾಮಿ ಪ್ರಧಾನಿ ನರೇಂದ್ರ ಮೋದಿ, ರಲ್ವೆ ಸಚಿವ, ಅಧಿಕಾರಿಗಳಿಗೆ ಪತ್ರ ಬರೆದಿದ್ದಾರೆ. ಈ ಕುರಿತು ಪತ್ರಿಕಾ ಹೇಳಿಕೆ ನೀಡಿರುವ ಅವರು, ಸಾವಿರಾರು ಕೋಟಿ ರು. ಆದಾಯ ನೀಡುವ ಬಳ್ಳಾರಿಯಿಂದ ವಂದೇ ಭಾರತ್ ರೈಲು ಆರಂಭಿಸಬೇಕು. ವಂದೇ ಭಾರತ್ ರೈಲು ಬೆಳಗಿನ ಜಾವ 4 ಗಂಟೆಗೆ ಹುಬ್ಬಳ್ಳಿ, ಇಲ್ಲವೇ ಬಿಜಾಪುರದಿಂದ ಸಂಚಾರ ಆರಂಭಿಸಬೇಕು. ಬೆಳಗಿನ ಜಾವ 5.30ಕ್ಕೆ ಹೊಸಪೇಟೆ ತಲುಪಬೇಕು. ಬೆಳಗ್ಗೆ 6.30ಕ್ಕೆ ಬಳ್ಳಾರಿಗೆ ಬಂದು ಗುಂತಕಲ್, ಅನಂತಪುರ ಮೂಲಕ ಬೆಂಗಳೂರಿಗೆ ಹೋಗಬೇಕು.  ಮಧ್ಯಾಹ್ನ 12 ಗಂಟೆಗೆ ಬೆಂಗಳೂರು ತಲುಪುವ ಹಾಗೆ ಮತ್ತು ರಾತ್ರಿ 10 ಗಂಟೆ ವೇಳೆಗೆ ಬಳ್ಳಾರಿ ತಲುಪಬೇಕು. ವಿಶ್ವ ವಿಖ್ಯಾತ ಹಂಪಿ ನೋಡಲು ಬರುವ ಪ್ರವಾಸಿಗರಿಗೆ ಈ ರೈಲು ಸಹಕಾರಿ. ಅಷ್ಟೇ ಅಲ್ಲ ಯಲಹಂಕ ರೈಲು ನಿಲ್ದಾಣದಿಂದ ಬೆಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಬರೀ 10 ಕಿಮೀ ದೂರ ಇರುವುದರಿಂದ ಈ ಭಾಗದ ಜನರು ಅಂತಾರಾಷ್ಟ್ರೀಯ ವಿಮಾನದಲ್ಲಿ ಪಯಣಿಸಬಹುದು. ಶಿವಮೊಗ್ಗ, ಹುಬ್ಬಳ್ಳಿ, ಮೈಸೂರಿನಿಂದ ಬೆಂಗಳೂರಿಗೆ ಉದಯ ರೈಲು ಇವೆ. ಬಳ್ಳಾರಿಯಿಂದ ಇಲ್ಲ. ಈಗಾಗಲೇ ನೈರುತ್ಯ ರಲ್ವೇ ವಲಯದಿಂದ ಚೆನ್ನೈನಿಂದ ಬೆಂಗಳೂರು, ಮೈಸೂರಿನಿಂದ ಚೆನ್ನೈಗೆ ವಂದೇ ಭಾರತ್ ರೈಲು ಸಂಚಾರ ಆರಂಭಿಸಿವೆ. ಧಾರವಾಡದಿಂದ ಬೆಂಗಳೂರಿಗೆ ಸಹ ರೈಲು ಇದ

ಈತ ಓದಿದ್ದು ಬರೀ 7 ಕ್ಲಾಸ್-ಆದರೆ ತಿಂಗಳ ವೇತನ ಬರೋಬ್ಬರಿ 3.6 ಲಕ್ಷ ರೂ!

ಇಮೇಜ್
ನಮ್ಮೊಳಗಣ ಸಾಮಾನ್ಯರು- ಅಸಾಮಾನ್ಯ ಸಾಧಕರು! ಬಳ್ಳಾರಿ:ಇಲ್ಲೊಬ್ಬ 7ನೇ ಕ್ಲಾಸ್ ಪಾಸಾದ ವ್ಯಕ್ತಿ ತಿಂಗಳಲ್ಲಿ ಒಂಭತ್ತು ದಿನ ಕೆಲಸಮಾಡಿ 3.6 ಲಕ್ಷ ರೂ. ವೇತನ ಪಡೆಯುತ್ತಿದ್ದಾನೆ! ಅದ್ಯಾರೋ ಇಂಜಿನಿಯರ್ ಅಥವಾ ಪೇಟೆಂಟ್ ಹೊಂದಿದ ವಿಜ್ಞಾನಿ ಕತೆ ಇದಲ್ಲ. ಮಾಮೂಲಿ ಮನುಷ್ಯನ ಕತೆ. ಈತನ ಹೆಸರು ಕರೇಕಲ್ಲು ಕಟ್ಟೇಬಸವ; ಈತ ಜೆಸಿಬಿ ರೀತಿಯ ರೋಬೋಟ್‌ನಿಂದಲೇ ನಡೆಸುವ ಬ್ರೂಕ್ ಎಂಬ ಮೆಷಿನ್‌ನ ಆಪರೇಟರ್ ಆಗಿ ಕೆಲಸಮಾಡುವ ಸಾಧಕನದ್ದು. ಈ ಬ್ರೂಕ್ ಕಂಪನಿಯ ಸಣ್ಣ ಮೆಷಿನ್ ಬೆಲೆಯೇ 2 ಕೋಟಿ ರೂ.! ಬರೀ ವಿದ್ಯೆಯಿದ್ದರೆ ಮಾತ್ರ ಸಾಧನೆ ಸಾಧ್ಯ ಎಂಬುದಲ್ಲ. ಬುದ್ದಿ ಇದ್ದವನೂ ದೊಡ್ಡ ಸಾಧನೆ ಮಾಡಬಹುದು ಎಂಬುದಕ್ಕೆ ಇವರು ಸಾಕ್ಷö್ಯ ಒದಗಿಸಿದ್ದಾರೆ. ಈತ ಓದಿದ್ದು 7ನೇ ಕ್ಲಾಸು. ಹಾಲಿ 39 ವರ್ಷದ ಕಟ್ಟೇಬಸವ ಇದೀಗ ತಾನು ಮಾತ್ರವಲ್ಲ ಇನ್ನೂ ನಾಲ್ಕಾರು ಜನಕ್ಕೆ ಕೆಲಸಕೊಟ್ಟು, ಕೈ ತುಂಬ ಸಂಬಳ ನೀಡುತ್ತಿದ್ದಾರೆ. ಈತ ನಡೆಸುವ ಬ್ರೂಕ್ ಮೆಷಿನ್ ಮನುಷ್ಯ ನಿಯಂತ್ರಿತ ಹಿತಾಚಿ, ಜೆಸಿಬಿ, ಲೋಡರ್ ಮುಂತಾದ ವಾಹನಗಳು ಹೋಗದ ಜಾಗದಲ್ಲಿ ಕೆಲಸ ಮಾಡುವ ಮೆಷಿನ್. ಈ ಮೆಷಿನ್ ಸಂಪೂರ್ಣ ರಿಮೋಟ್ ಕಂಟ್ರೋಲ್‌ನಲ್ಲಿ(ರೋಬೋಟೆಕ್) ಕೆಲಸಮಾಡುತ್ತದೆ. ಅತೀ ಅಪಾಯಕಾರಿ ಜಾಗಗಳಲ್ಲಿ ಈ ಮೆಷಿನ್ ಕೆಲಸಮಾಡುತ್ತದೆ. ಆಳದ ಗಣಿಗಾರಿಕೆ, ಅತೀ ಶಾಖ ಇರುವ ಕಡೆ ಕೆಲಸಮಾಡಲು ಈ ಮೆಷಿನ್ ಬಳಕೆ ಆಗುತ್ತದೆ. ಸ್ಟೀಲ್, ಐರಾನ್ ಕೈಗಾರಿಕೆಗಳಲ್ಲಿ ಸೋರಿಕೆಯಾಗುವ ಅದಿರಿನ ಕಾದ ದ್ರಾವಣದ ಅವಶೇಷವನ್ನು ಬಗೆ

ಕಾಂಗ್ರೆಸ್ ರೈತರ ಯೋಜನೆ ನಿಲ್ಲಿಸಿದೆ:ಬಿಜೆಪಿ

ಇಮೇಜ್
ಬಳ್ಳಾರಿ: ಕಾಂಗ್ರೆಸ್ ಸರ್ಕಾರ ಜಾರಿಗೆ ಬಂದ ಮೇಲೆ ರೈತ ಪರ ಹಲವು ಯೋಜನೆಗಳನ್ನು ರದ್ದು ಮಾಡಲಾಗಿದೆ ಎಂದು ಬಿಜೆಪಿ ರೈತ ಮೋರ್ಚಾ ರಾಜ್ಯ ಪ್ರಧಾನ ಕಾರ್ಯದರ್ಶಿ ಗುರುಲಿಂಗನಗೌಡ ಆರೋಪಿಸಿದ್ದಾರೆ. ನಗರದ ಬಿಜೆಪಿ ಕಚೇರಿಯಲ್ಲಿ ಹಮ್ಮಿಕೊಂಡ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ರೈತ ಎಲ್ಲಿ ಬೇಕಿದ್ದರೂ ತಮ್ಮ ಉತ್ಪನ್ನ ಮಾರಿಕೊಳ್ಳಲು ಅನುಕೂಲ ಕಲ್ಪಿಸುವ ರೀತಿ ಎಪಿಎಂಸಿ ಕಾಯ್ದೆ ತಿದ್ದುಪಡಿ ಮಾಡಲಾಗಿತ್ತು. ಈಗ ಕಾಯ್ದೆ ಹಿಂಪಡೆಯಲು ನಿರ್ಧರಿಸಿದೆ. ಇದರಿಂದ 8% ನಷ್ಟ ರೈತರಿಗೆ ಆಗಲಿದೆ. ಇದು ಅಲ್ಲದೆ ಅನೇಕ ತೊಂದರೆ ಆಗಲಿವೆ. ಮಳೆ, ಗಾಳಿ, ದೂಳಿನ ಸಮಸ್ಯೆ ಎದುರಾಗಲಿವೆ ಎಂದರು. ಇನ್ನು ಏಕಾಏಕಿ ಕೃಷಿ ಅಧಾರಿತ ಕೈಗಾರಿಕೆಗಳಾದ ಅಕ್ಕಿ ಮಿಲ್, ಬೆಲ್ಲದ ಕಾರ್ಖಾನೆ, ಹತ್ತಿ ಮಿಲ್ ಗಳಿಗೆ ವಿಧಿಸುವ ವಿದ್ಯುತ್ ದರವನ್ನು ಯುನಿಟ್ ಗೆ 70 ಪೈಸೆ ಏರಿಸಲಾಗಿದೆ. ಜೊತೆಗೆ ಕನಿಷ್ಠ ಪಾವತಿ ಪ್ರಮಾಣವನ್ನು ಹೆಚ್ಚಳ ಮಾಡಲಾಗಿದೆ. ಇದು ನೇರ ರೈತರ ಮೇಲೆ ಬೀಳಲಿದೆ ಎಂದು ಅವರು ತಿಳಿಸಿದರು. ಇನ್ನು ಪ್ರತಿ ಹಳ್ಳಿಯಲ್ಲಿ ಒಂದು ಗೋಮಾಳ ನಿರ್ಮಾಣ ಮಾಡುವ ಗುರಿ ಇತ್ತು. ಇದನ್ನು ತಡೆಹಿಡಿಯಲಾಗಿದೆ. ಇದೆ ರೀತಿ ಕಿಸಾನ್ ಸಮ್ಮಾನ ಯೋಜನೆ ನಿಲ್ಲಿಸುವ ಚಿಂತನೆ ಇದೆ ಅಂತೆ. ಯಡಿಯೂರಪ್ಪ ಸರ್ಕಾರ ಇದ್ದಾಗ ಕೇಂದ್ರದ 6 ಸಾವಿರ ರೂ. ಜೊತೆಗೆ 4 ಸಾವಿರ ರೂಪಾಯಿ ಘೋಷಣೆ ಮಾಡಿದ್ದರು. ಇದನ್ನು ಸಹ ನಿಲ್ಲಿಸುವ ಆಲೋಚನೆಯಲ್ಲಿ ಸರ್ಕಾರ ಇದೆ. ಇದರಿಂದ 51ಲಕ್ಷ ಜನ ರೈತರು ಲಾಭ ಪಡೆದುಕೊ

ನದಿಗೆ ಬಂತು ಮತ್ತೆ ಒಂದೂವರೆ ಟಿಎಂಸಿ ನೀರು

ಇಮೇಜ್
ಬಳ್ಳಾರಿ:ತುಂಗಾ ಜಲಾಶಯದಿಂದ ನೀರಿನ ಹರಿವಿನ ಪ್ರಮಾಣ ಇಳಿಕೆಯಾದರೂ ತುಂಗಭದ್ರಾ ಜಲಾಶಯಕ್ಕೆ ನಿನ್ನೆ 1.48 ಟಿಎಂಸಿ ನೀರು ಹರಿದುಬಂದಿದೆ. ಬುಧವಾರ ಬೆಳಗ್ಗೆ 9 ಗಂಟೆ ಸುಮಾರಿಗೆ ಜಲಾಶಯದಲ್ಲಿ ಒಟ್ಟು 6.89 ಟಿಎಂಸಿ ನೀರು ಶೇಖರಣೆ ಆಗಿದೆ. ನಿನ್ನೆ ಈ ಪ್ರಮಾಣ 5.41 ಟಿಎಂಸಿಯಷ್ಟು ಇತ್ತು. ಮಂಗಳವಾರ ಬೆಳಗಿನ ಜಾವ 9 ಗಂಟೆ ವೇಳೆಗೆ 13,842 ಕುಸೆಕ್ನೀ ರು ಹರಿದುಬಂದಿತ್ತು. ಇಂದು ಬೆಳಗ್ಗೆ 9 ಗಂಟೆ ವೇಳೆಗೆ 17,383 ಕುಸೆಕ್ ನೀರು ಹರಿದುಬಂದಿತ್ತು. ತುಂಗಾ ಒಳ ಹರಿವು ಬುಧವಾರ 4690 ಕುಸೆಕ್ ಗೆ  ಇಳಿದಿದೆ.  ತುಂಗಾ ಜಲಾಶಯದಿಂದ ಹೊರ ಹರಿವು ಇಳಿಕೆಯಾದರೂ ಸಹ ತುಂಗಭದ್ರಾ ಜಲಾಶಯಕ್ಕೆ ಒಳ ಹರಿವಿನ ಪ್ರಮಾಣ ಹೆಚ್ಚಿರುವುದು ತುಂಗಾ ನಂತರ ನದಿ ಪಾತ್ರದಲ್ಲಿ ಉತ್ತಮ ಮಳೆ ಆಗುತ್ತಿದೆ ಎಂಬುದನ್ನು ತೋರುತ್ತದೆ.

ಎಸ್. ಜೆ.ಕೋಟೆಯಲ್ಲಿ ಫಕ್ರುದ್ದೀನ್ ಅಲಿ ಅಹ್ಮದ್ ಸ್ಮರಣೆ

ಇಮೇಜ್
ಬಳ್ಳಾರಿ:ಭಾರತ ಸಂವಿಧಾನದ 352ನೇ ವಿಧಿ ಅನ್ವಯ ಅಂದಿನ ಪ್ರಧಾನಮಂತ್ರಿ ಇಂದಿರಾ ಗಾಂಧಿಯವರ ಸಲಹೆಯಂತೆ 25ನೇ ಜೂನ್ 1975 ರ ಮಧ್ಯ ರಾತ್ರಿಯಿಂದ 21ನೇ ಮಾರ್ಚ್ 1977 ರ ವರೆಗೆ ದೇಶದಲ್ಲಿ ಮೊಟ್ಟ ಮೊದಲ ಬಾರಿಗೆ ಆಂತರಿಕ ತುರ್ತು ಪರಿಸ್ಥಿತಿ ಹೇರಿದವರು ಐದನೇ ರಾಷ್ಟ್ರಪತಿ ಫಕ್ರುದ್ದೀನ್ ಅಲಿ ಅಹ್ಮದ್ ಅವರು ಎಂದು ಕರ್ನಾಟಕ ರಾಜ್ಯ ಕ್ರಿಯಾಶೀಲ ಶಿಕ್ಷಕರ ವೇದಿಕೆ ಬಳ್ಳಾರಿ ಜಿಲ್ಲಾ ಘಟಕದ ಅಧ್ಯಕ್ಷ ರವಿಚೇಳ್ಳಗುರ್ಕಿ ಹೇಳಿದರು. ತಾಲ್ಲೂಕಿನ ಸಂಜೀವರಾಯನಕೋಟೆ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಹಮ್ಮಿಕೊಂಡಿದ್ದ ಫಕ್ರುದ್ದೀನ್ ಅಲಿ ಅಹ್ಮದ್ ಅವರ ಜೀವನ ಸಾಧನೆ ಪರಿಚಯ ಹಾಗೂ ಶಾಲೆಯ ಸ್ವಚ್ಛತೆ ಕಡೆ ಸದಾ ಆಸಕ್ತಿ ವಹಿಸುವ ವಿದ್ಯಾರ್ಥಿಗಳಿಗೆ ಬಹುಮಾನ ವಿತರಣೆ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಅಲಿಯವರ ಭಾವಚಿತ್ರಕ್ಕೆ ಮಾಲಾರ್ಪಣೆ ಮಾಡಿ ಮಾತನಾಡಿದ ಅವರು 1976 ರಲ್ಲಿ ಸಂವಿಧಾನದ 42ನೇ ತಿದ್ದುಪಡಿ ತಂದು ಮೂಲಭೂತ ಕರ್ತವ್ಯಗಳನ್ನು ಅನುಷ್ಠಾನಕ್ಕೆ ತಂದದ್ದು ಇವರ ಅವಧಿಯಲ್ಲಿ ಎಂದು ಹೇಳಿದರು. ಆದ್ದರಿಂದ ವಿದ್ಯಾರ್ಥಿಗಳು ಭಾರತ ಸಂವಿಧಾನದಲ್ಲಿನ ಪ್ರಸ್ತಾವನೆ, ವಿಧಿಗಳ ಬಗ್ಗೆ ಪ್ರಾಥಮಿಕ ಹಂತದಲ್ಲೇ ಸರಿಯಾಗಿ ತಿಳಿದು ಕೊಳ್ಳಬೇಕೆಂದು ಹೇಳಿದರು. ಎಂಟನೇ ತರಗತಿಯ ಗೋವರ್ಧನ, ತರುಣ,ವಿಜಯ, ಗಣೇಶ, ಜ್ಯೋತಿ, ಉಮ,ಸಂಗೀತ ಅವರಿಗೆ ಬಹುಮಾನ ನೀಡಲಾಯಿತು. ಶಿಕ್ಷಕರಾದ ಮುನಾವರ ಸುಲ್ತಾನ, ದಿಲ್ಷಾದ್ ಬೇಗಂ, ಮೋದಿನ್ ಸಾಬ್, ಚನ್ನಮ್ಮ, ಸುಧಾ, ಉಮ್ಮೆಹಾನಿ, ಶಶಮ್ಮ