ಈತ ಓದಿದ್ದು ಬರೀ 7 ಕ್ಲಾಸ್-ಆದರೆ ತಿಂಗಳ ವೇತನ ಬರೋಬ್ಬರಿ 3.6 ಲಕ್ಷ ರೂ!

ನಮ್ಮೊಳಗಣ ಸಾಮಾನ್ಯರು- ಅಸಾಮಾನ್ಯ ಸಾಧಕರು!

ಬಳ್ಳಾರಿ:ಇಲ್ಲೊಬ್ಬ 7ನೇ ಕ್ಲಾಸ್ ಪಾಸಾದ ವ್ಯಕ್ತಿ ತಿಂಗಳಲ್ಲಿ ಒಂಭತ್ತು ದಿನ ಕೆಲಸಮಾಡಿ 3.6 ಲಕ್ಷ ರೂ. ವೇತನ ಪಡೆಯುತ್ತಿದ್ದಾನೆ!

ಅದ್ಯಾರೋ ಇಂಜಿನಿಯರ್ ಅಥವಾ ಪೇಟೆಂಟ್ ಹೊಂದಿದ ವಿಜ್ಞಾನಿ ಕತೆ ಇದಲ್ಲ. ಮಾಮೂಲಿ ಮನುಷ್ಯನ ಕತೆ. ಈತನ ಹೆಸರು ಕರೇಕಲ್ಲು ಕಟ್ಟೇಬಸವ; ಈತ ಜೆಸಿಬಿ ರೀತಿಯ ರೋಬೋಟ್‌ನಿಂದಲೇ ನಡೆಸುವ ಬ್ರೂಕ್ ಎಂಬ ಮೆಷಿನ್‌ನ ಆಪರೇಟರ್ ಆಗಿ ಕೆಲಸಮಾಡುವ ಸಾಧಕನದ್ದು. ಈ ಬ್ರೂಕ್ ಕಂಪನಿಯ ಸಣ್ಣ ಮೆಷಿನ್ ಬೆಲೆಯೇ 2 ಕೋಟಿ ರೂ.!

ಬರೀ ವಿದ್ಯೆಯಿದ್ದರೆ ಮಾತ್ರ ಸಾಧನೆ ಸಾಧ್ಯ ಎಂಬುದಲ್ಲ. ಬುದ್ದಿ ಇದ್ದವನೂ ದೊಡ್ಡ ಸಾಧನೆ ಮಾಡಬಹುದು ಎಂಬುದಕ್ಕೆ ಇವರು ಸಾಕ್ಷö್ಯ ಒದಗಿಸಿದ್ದಾರೆ. ಈತ ಓದಿದ್ದು 7ನೇ ಕ್ಲಾಸು. ಹಾಲಿ 39 ವರ್ಷದ ಕಟ್ಟೇಬಸವ ಇದೀಗ ತಾನು ಮಾತ್ರವಲ್ಲ ಇನ್ನೂ ನಾಲ್ಕಾರು ಜನಕ್ಕೆ ಕೆಲಸಕೊಟ್ಟು, ಕೈ ತುಂಬ ಸಂಬಳ ನೀಡುತ್ತಿದ್ದಾರೆ.

ಈತ ನಡೆಸುವ ಬ್ರೂಕ್ ಮೆಷಿನ್ ಮನುಷ್ಯ ನಿಯಂತ್ರಿತ ಹಿತಾಚಿ, ಜೆಸಿಬಿ, ಲೋಡರ್ ಮುಂತಾದ ವಾಹನಗಳು ಹೋಗದ ಜಾಗದಲ್ಲಿ ಕೆಲಸ ಮಾಡುವ ಮೆಷಿನ್. ಈ ಮೆಷಿನ್ ಸಂಪೂರ್ಣ ರಿಮೋಟ್ ಕಂಟ್ರೋಲ್‌ನಲ್ಲಿ(ರೋಬೋಟೆಕ್) ಕೆಲಸಮಾಡುತ್ತದೆ. ಅತೀ ಅಪಾಯಕಾರಿ ಜಾಗಗಳಲ್ಲಿ ಈ ಮೆಷಿನ್ ಕೆಲಸಮಾಡುತ್ತದೆ. ಆಳದ ಗಣಿಗಾರಿಕೆ, ಅತೀ ಶಾಖ ಇರುವ ಕಡೆ ಕೆಲಸಮಾಡಲು ಈ ಮೆಷಿನ್ ಬಳಕೆ ಆಗುತ್ತದೆ. ಸ್ಟೀಲ್, ಐರಾನ್ ಕೈಗಾರಿಕೆಗಳಲ್ಲಿ ಸೋರಿಕೆಯಾಗುವ ಅದಿರಿನ ಕಾದ ದ್ರಾವಣದ ಅವಶೇಷವನ್ನು ಬಗೆದು ತೆಗೆಯುವ ಕೆಲಸಕ್ಕೆ ಈ ಮೆಷಿನ್ ಬಳಕೆಯಾಗುತ್ತದೆ. ಈ ಮೆಷಿನ್ ಆಪರೇಟರ್‌ಗಳು ರಾಜ್ಯದಲ್ಲಿ ಇರುವುದು ಬೆರಳೆಣಕೆಯಷ್ಟು. ಈ ಪೈಕಿ ಕಟ್ಟೇಬಸವ ಅತೀ ಸೀನಿಯರ್. ನಮ್ಮ ರಾಜ್ಯ ಮಾತ್ರವಲ್ಲ ಆಂಧ್ರಪ್ರದೇಶ ಸೇರಿದಂತೆ ದೂರ ದೂರದ ಗಣಿ ಕಂಪನಿಗಳಲ್ಲಿನ ಬ್ರೂಕ್ ಮೆಷಿನ್‌ನ ಖಾಯಂ ಆಪರೇಟರ್ ನಮ್ಮ ಕಟ್ಟೇಬಸವ. ಈತ ಲಭ್ಯವಿಲ್ಲವಾದರೆ ಉತ್ತರ ಭಾರತದಿಂದ ಕೆಲಸಗಾರರನ್ನು ಕರೆಯಿಸಬೇಕಾದ ಸ್ಥಿತಿ ಇದೆ.

ತಿಂಗಳಲ್ಲಿ ಮೂರು ದಿನ ಒಂದೊAದು ಕಾರ್ಖಾನೆಯಲ್ಲಿ ಕೆಲಸಮಾಡುವ ಈತ ದಿನವೊಂದಕ್ಕೆ 40 ಸಾವಿರ ರೂ. ಶುಲ್ಕ ಪಡೆಯುತ್ತಾನೆ. ತಿಂಗಳಿಗೆ ಕನಿಷ್ಠ 9 ದಿವಸ ಕೆಲಸಮಾಡುತ್ತಾನೆ.

ಶಿಕ್ಷಣದಲ್ಲಿ ಸಾಧಿಸಲಾಗದ 16ನೇ ವಯಸ್ಸಿನಲ್ಲಿ ಕಟ್ಟೇಬಸವ ಬಳ್ಳಾರಿಯ ಲಾರಿ ಟರ್ಮಿನಲ್‌ನಲ್ಲಿ ಲಾರಿ ಕ್ಲೀನರ್ ಆಗಿ ಕೆಲಸ ಆರಂಭಿಸಿದರು. ಬಳಿಕ ಸಹಾಯಕ ಆಗಿ, ಜೆಸಿಬಿ ಆಪರೇಟರ್ ಆಗಿ ಕೆಲಸ ಮಾಡಿದ. ಸಂಡೂರು ತಾಲ್ಲೂಕು ಜಯಸಿಂಗಪುರದಲ್ಲಿ ಅನೂಪ್ ಮೈನಿಂಗ್ ಕಂಪನಿಯಲ್ಲಿ ಜೆಸಿಬಿ ಆಪರೇಟರ್ ಆಗಿ ಕೆಲಸಮಾಡಿದ. ಅದಾದ ಬಳಿಕ ಜಾನಕಿ ಕಾರ್ಖಾನೆಯಲ್ಲಿ ಲೋಡರ್, ಹಿತಾಚಿ ಆಪರೇಟರ್ ಆಗಿ ಕೆಲಸ ಮಾಡಲು ಆರಂಭಿಸಿದರು. ಅಷ್ಟೊತ್ತಿಗೆ ಆಗಲೇ ಜೆಸಿಬಿ, ಹಿತಾಚಿ. ಜಾನಕಿ ಕಂಪನಿಯರು ಕಟ್ಟೇಬಸವನಲ್ಲಿ ಇದ್ದ ಬಹುಮುಖ ಪ್ರತಿಭೆ ಅರಿತು ರೋಬೊ ಬ್ರೂಕ್ ಇಂಜಿನ್ ಆಪರೇಟರ್ ಆಗಿ ತರಬೇತಿ ಪಡೆದ. ಅಲ್ಲಿಂದ ಈವರೆಗೆ ಸುಮಾರು 20 ವರ್ಷದಿಂದ ಇದೇ ವೃತ್ತಿಯಲ್ಲಿ ಕಟ್ಟೇಬಸವ ಇದ್ದಾರೆ.

ಸಾಧಿಸುವ ಮನಸ್ಸು ಒಂದೇ ಇದ್ದರೆ ಸಾಕು. ಸಾಧನೆಯ ಮಾರ್ಗ ತಾನಾಗಿಯೇ ತೆರೆದುಕೊಳ್ಳುತ್ತದೆ ಎಂಬುದಕ್ಕೆ ಕಟ್ಟೇಬಸವ ಉತ್ತಮ ಉದಾಹರಣೆ. ಇವರು ಇನ್ನಷ್ಟು ಜನಕ್ಕೆ ಪ್ರೇರಣೆ ಆಗಬೇಕು. ಕೇವಲ ಶಿಕ್ಷಣ ಒಂದರಿAದಲೇ ಭಾರೀ ಮೊತ್ತದ ವೇತನ ಪಡೆದು ಜೀವನ ಸಾಧಿಸುವ ಕನಸು ಕಾಣುವವರು ಒಂದು ವೇಳೆ ಶಿಕ್ಷಣದಲ್ಲಿ ವಿಫಲರಾದರೆ ಎದೆಗುಂದದೆ ಇಂತಹವರನ್ನು ನೋಡಿ ಜೀವನ ಕಲಿಯಬೇಕಿದೆ.

ಕಾಮೆಂಟ್‌ಗಳು

ಕಾಮೆಂಟ್‌‌ ಪೋಸ್ಟ್‌ ಮಾಡಿ

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

ಕ್ರಿಕೆಟ್ ಬೆಟ್ಟಿಂಗ್ ದಂಧೆಕೋರರ ಎಡೆಮುರಿ ಕಟ್ಟಿದ : ಪಿಎಸ್ಐ ಗೀತಾಂಜಲಿ ಶಿಂಧೆ

ಮಲೆನಾಡಲ್ಲಿ ಮಳೆ:ಭದ್ರಾ ಒಳ ಹರಿವು ಹೆಚ್ಚಳ

ಕೊಟ್ಟೂರು ಪೊಲೀಸ್ ಠಾಣೆಗೆ ಮೊದಲ ಬಾರಿಗೆ ಮಹಿಳಾ ಪಿಎಸ್ಐ ಗೀತಾಂಜಲಿ ಶಿಂಧೆ