ದಿನಕ್ಕೊಂದು ವಚನ-ಬಸವಣ್ಣನವರ 432ನೆಯ ವಚನ
ಕಂದಿದೆನಯ್ಯಾ ಎನ್ನ ನೋಡುವವರಿಲ್ಲದೆ;
ಕುಂದಿದೆನಯ್ಯಾ ಎನ್ನ ನುಡಿಸುವವರಿಲ್ಲದೆ;
ಡಬವಾದೆನಯ್ಯಾ ಎನ್ನ ತನು, ಮನ, ಧನವ ಬೇಡುವವರಿಲ್ಲದೆ
ಕಾಡುವ ಬೇಡುವ ಶರಣರ ತಂದು
ಕಾಡಿಸು ಬೇಡಿಸಯ್ಯಾ ಕೂಡಲಸಂಗಮದೇವಾ.
ಬಸವಣ್ಣನವರ ಈ ವಚನ ಅಂದಿನ ಕಾಲದಲ್ಲಿ ಇದ್ದ ಸಾಮಾಜಿಕ ಭೇಧ, ಭಾವಗಳನ್ನು ಎತ್ತಿಹಿಡಿಯುತ್ತದೆ. ಮೇಲು ಜಾತಿಗೆ ಸೇರಿದ ಬಸವಣ್ಣನವರನ್ನು ಜನ ನೋಡುತ್ತಿದ್ದ ಪರಿಯನ್ನು ಈ ವಚನದಲ್ಲಿ ತಿಳಿಸಿದ್ದಾರೆ.
ನನ್ನನ್ನು ಜನ ನೋಡುತ್ತಿಲ್ಲ, ಮಾತನಾಡಿಸುತ್ತಿಲ್ಲ, ನನ್ನಲ್ಲಿರುವುದನ್ನು ಬೇಡಿ ಕೇಳುವುದಿಲ್ಲ. ಪ್ರೀತಿ, ಮನಸ್ಸು, ಹಣ ಕೇಳುವುದಿಲ್ಲ ಎಂದು ಕೂಡಲಸಂಗನಲ್ಲಿ ಬೇಡುವ ಬಸವಣ್ಣ ಜೊತೆಗೆ ಕಾಡುವ, ಬೇಡುವ ಶರಣರ ತಂದು ಕಾಡಿಸು ಬೇಡಿಸಯ್ಯಾ ಎನ್ನುತ್ತಾರೆ.
ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ