ಭದ್ರಾ ಜಲಾಶಯದ ಒಳ ಹರಿವು ಹೆಚ್ಚಳ
ದಾವಣಗೆರೆ:ಮಲೆನಾಡಿನಲ್ಲಿ ಮತ್ತೆ ಮಳೆ ಪ್ರಮಾಣ ಹೆಚ್ಚಿದ ಕಾರಣ ಭದ್ರಾ ಜಲಾಶಯಕ್ಕೆ ಹರಿದು ಬರುತ್ತಿರುವ ನೀರಿನ ಪ್ರಮಾಣ ಮತ್ತೆ ಹೆಚ್ಚಾಗಿದೆ.
ನಿನ್ನೆ 24 ಸಾವಿರದ 704 ಕ್ಯೂಸೆಕ್ ಇದ್ದ ಒಳ ಹರಿವಿನ ಪ್ರಮಾಣ ಇಂದು 28 ಸಾವಿರದ 296 ಕ್ಯೂಸೆಕ್ ಗೆ ಏರಿದೆ.
186 ಅಡಿ ಎತ್ತರದ ಜಲಾಶಯದಲ್ಲಿ ಹಾಲಿ 158 ಅಡಿ ನೀರು ಸಂಗ್ರಹ ಆಗಿದೆ. ಒಟ್ಟು 71.53 ಟಿಎಂಸಿ ನೀರು ಸಂಗ್ರಹ ಸಾಮರ್ಥ್ಯ ಇರುವ ಜಲಾಶಯದಲ್ಲಿ ಇಂದು ಬೆಳಗಿನ ಜಾವ 6 ಗಂಟೆ ವೇಳೆಗೆ 41 ಟಿಎಂಸಿ ನೀರು ಸಂಗ್ರಹ ಆಗಿದೆ. ಇನ್ನು 32 ಟಿಎಂಸಿ ನೀರು ಜಲಾಶಯಕ್ಕೆ ಬರಬೇಕಿದೆ.
ಇಂದು ಮತ್ತು ಇನ್ನು ಮೂರು ದಿನ ಉತ್ತಮ ಮಳೆ ಆಗುವ ಲಕ್ಷಣ ಇದ್ದು ಈ ವರ್ಷ ಸಹ ಜಲಾಶಯ ತುಂಬುವುದು ಖಚಿತ ಎನ್ನಲಾಗುತ್ತಿದೆ.
Ballry
ಪ್ರತ್ಯುತ್ತರಅಳಿಸಿ