ಸಮಾಜಶಾಸ್ತ್ರದ ಮಹತ್ವ ತಿಳಿಸಿದ ಹಿರಿಮೆ ಲೇಖಕ
ಕಾನ ಹೊಸಹಳ್ಳಿ: ಸಮಾಜದ ನಾನಾ ಸಮಸ್ಯೆಗಳಿಗೆ ಕಾರಣ ಹುಡುಕಿ ಅವುಗಳನ್ನು ಎಲ್ಲ ನೆಲೆಗಳಿಂದ ಅಧ್ಯಯನ ಮಾಡಿ, ಸಮಾಜಕಾರ್ಯದ ಮಹತ್ವವನ್ನು ಕನ್ನಡಿಗರಿಗೆ ಶಾಸ್ತ್ರೀಯವಾಗಿ ಹೇಳಿಕೊಟ್ಟ ಹಿರಿಮೆ ಹೊಂದಿದ್ದ ಲೇಖಕ, ಸಮಾಜಶಾಸ್ತ್ರಜ್ಞ ಡಾ.ಎಚ್.ಎಂ.ಮರುಳಸಿದ್ದಯ್ಯ ಅವರಿಗೆ ಸಲ್ಲುತ್ತದೆ' ಎಂದು ನಿವೃತ್ತ ಉಪನ್ಯಾಸಕ ಎಚ್. ವಸಂತಸಜ್ಜನ್ ಅಭಿಪ್ರಾಯ ವ್ಯಕ್ತಪಡಿಸಿದರು. ಸಮೀಪದ ಹಿರೇ ಕುಂಬಳಗುಂಟೆ ಗ್ರಾಮದ ಪುಸ್ತಕ ಮನೆಯಲ್ಲಿ ಆಯೋಜಿಸಿದ್ದ ಪರಮಪೂಜ್ಯ ಶ್ರೀ ಎಚ್.ಎಂ. ಮರುಳಸಿದ್ದಯ್ಯ ನವರ ೯೨ ನೇ ಹುಟ್ಟುಹಬ್ಬದ ಧನ್ಯತಾ ಸ್ಮರಣೆಯ ಕಾರ್ಯಕ್ರಮದಲ್ಲಿ ಅವರಿಗೆ ನುಡಿನಮನ ,ಪುಷ್ಪನಮನ ಸಲ್ಲಿಸಿ ಮಾತನಾಡಿದರು. ನಿವೃತ್ತ ಬ್ಯಾಂಕ್ ವ್ಯವಸ್ಥಾಪಕ ಜೆ. ಎಂ. ಧನಂಜಯ, ಜಿ.ಎಂ. ನಾಗರಾಜಗೌಡ, ಕೃಷಿ ಇಲಾಖೆ ನಿವೃತ್ತ ಅಧಿಕಾರಿ ಪ್ರತಿಭಾ ಉಮೇಶ್ ಮಾತನಾಡಿದರು.
ಹಿರೇಕುಂಬಳಗುಂಟೆಯ ಎರಡು ಚೇತನಗಳಾದ ಹಿ.ಮ. ನಾಗಯ್ಯ ಹಾಗೂ ಡಾ. ಎಚ್. ಎಂ.ಮರುಳಸಿದ್ಧಯ್ಯನವರ ಸ್ಮರಣೆಗಾಗಿ ತಾಲ್ಲೂಕು ಕೇಂದ್ರದ ವೃತ್ತಗಳಿಗೆ ಅವರ ಹೆಸರನ್ನು ನಾಮಕರಣಗೊಳಿಸಬೇಕೆಂದು ಸರ್ಕಾರಕ್ಕೆ
ಒತ್ತಾಯಿಸಿದರು. ಈ ಸಂದರ್ಭದಲ್ಲಿ ಶಿಕ್ಷಕ ಸಿ. ನಾಗೇಶ್ ಕಾರ್ಯಕ್ರಮ ನಿರೂಪಿಸಿದರು. ಗ್ರಾಮದ ಮುಖಂಡರಾದ ಎಂ. ಕರಿಯಣ್ಣ ಗೌಡ್ರು, ಎಚ್. ಎಂ. ಗುರುಬಸವರಾಜ್, ಮಹೇಶ್, ಉಮೇಶ್ ಸೇರಿದಂತೆ ಇತರರಿದ್ದರು.
ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ