ದೇಶಕ್ಕೆ ನಾವೇ ಸಂವಿಧಾನ ಕೊಟ್ಟೆವು ಎಂಬ ಹೆಗ್ಗಳಿಕೆ ಗಳಿಕೆ ಧಾವಂತ ನೆಹರುಗೆ ಇತ್ತು
ಅಂಬೇಡ್ಕರ್ ಬಗ್ಗೆ ನಮಗೆ ತಿಳಿಸಿದ್ದು ಅತಿ ಕಡಮೆ. ಅವರನ್ನು ಓರ್ವ ಸಂವಿಧಾನ ಶಿಲ್ಪಿ ಅಂತಲೂ ಓರ್ವ ದಲಿತ ನಾಯಕ ಆಂತಲೂ ಮಾತ್ರ ಹೇಳಿದ್ದುಂಟು. ಅದರಾಚೆ ಅಂಬೇಡ್ಕರ್ ಇದ್ದಾರೆ. ಅವರೊಬ್ಬ ಆರ್ಥಿಕ ತಜ್ಞ, ಸಾಮಾಜಿಕ ಚಿಂತಕ, ಜಗತ್ತಿನ ಶ್ರೇಷ್ಠ ಮಾನವತಾವಾದಿಗಳ ಸಾಲಿನಲ್ಲಿ ನಿಲ್ಲಬಲ್ಲ ಮಹಾನ್ ವಿಶ್ವ ನಾಯಕ. ಅವರ ಚಿಂತನೆಯನ್ನು ಆಳವಾಗಿ ತಿಳಿಸುವ ಒಂದು ಸಣ್ಣ ಯತ್ನ ಇದು. ಅವರ ಬದುಕು ಮತ್ತು ಬರಹದ ಕುರಿತು ಸರಳೀಕರಿಸಿದ ಲೇಖನಗಳನ್ನು ಇನಿದಿಂದ ನಿಯಮಿತವಾಗಿ ಪ್ರಕಟಿಸುತ್ತೇವೆ. ಓದಿ ಇತರರಿಗೆ ಹಂಚಿ.
#ambedkarmotilalnehru #ambedkarchintane #ambedkarkuritu #ambedkarbadukubaraha
ದೇಶಕ್ಕೆ ಸಂವಿಧಾನ ಕೊಟ್ಟದ್ದು ನಾವೇ ಎಂದು ಹೇಳಿಕೊಳ್ಳುವ ಉಮೇದಿಯಲ್ಲಿ ಪಂಡಿತ್ ಮೋತಿಲಾಲ್ ನೆಹರು ಸಮಿತಿ ಹಿಂದ್ ರಾಜ್ ವರದಿ ಸಿದ್ಧಪಡಿಸಿತ್ತು. ಇಲ್ಲಿ ಯಾವುದೇ ಸದುದ್ದೇಶ ಆಗಲಿ, ದೂರದೃಷ್ಟಿ ಆಗಲಿ ಇರಲಿಲ್ಲ ಎಂಬ ವಾದವನ್ನು ಅಂಬೇಡ್ಕರ್ ಮುಂದಿಡುತ್ತಾರೆ.
ದೇಶದಲ್ಲಿರುವ ಅಲ್ಪಸಂಖ್ಯಾತ ಹಿಂದುಗಳಿಗೆ ಹಕ್ಕು, ಅಧಿಕಾರ ನೀಡಿದರೆ ಬ್ರಾಹ್ಮಣರ ಮೇಲೆ ತಿರುಗಿಬಿದ್ದು, ಅವರೊಟ್ಟಿಗೆ ಹೋರಾಟ ಮಾಡಿ ಸಾಯಬಹುದು ಇಲ್ಲವೇ ಸಾಯಿಸಬಹುದು. ಹೀಗಾಗಿ ಅವರ ಕೈಗೆ ಅಧಿಕಾರ ನೀಡಬಾರದು ಬದಲಿಗೆ ಮುಸ್ಲಿಂರೊAದಿಗೆ ಅಧಿಕಾರ ಹಂಚಿಕೊಳ್ಳಬೇಕು. ಆಗ ಯಾವುದೇ ಸಮಸ್ಯೆ ಇರದು. ಮುಸ್ಲಿಮರು ಅಧಿಕಾರ ಸಿಕ್ಕ ಖುಷಿಯಲ್ಲಿ ಬ್ರಾಹ್ಮಣರನ್ನು ದ್ವೇಷಿಸುವುದಿಲ್ಲ ಎಂಬ ಉಮೇದಿ ಮೋತಿಲಾಲ್ ನೆಹರು ಅವರಲ್ಲಿ ಇತ್ತು ಎಂಬುದನ್ನು ಅಂಬೇಡ್ಕರ್ ತಮ್ಮ ಬರಹದಲ್ಲಿ ವ್ಯಕ್ತಪಡಿಸುತ್ತಾರೆ.
ಯಾವತ್ತು ಧರ್ಮ ಸತ್ತೆ, ರಾಜಕೀಯ ಸತ್ತೆಯ ಸಖ್ಯ ಮುರಿಯುತ್ತದೆ ಅಂದರೆ ಬಾಹ್ಮಣರ ಕೈಯ ರಾಜಕೀಯ ಸತ್ತೆ ಬ್ರಾಹ್ಮಣೇತರರ ಕೈ ಸೇರುವುದೋ, ಆ ದಿನ ಬ್ರಾಹ್ಮಣರ ಕೊಡ ತುಂಬಲಿದೆ. ಹಿಂದುಳಿದ ಹಿಂದೂಗಳಿಗೆ ಅಸ್ಪೃಶ್ಯರಿಗೆಂದು ಕಾದಿರಿಸಿದ ಸ್ಥಳ ಕೊಡಲ್ಪಟ್ಟರೆ, ಆ ಪಮಾಣದಲ್ಲಿ, ಬ್ರಾಹ್ಮಣರ ರಾಜಕೀಯ ವರ್ಚಸ್ಸು ಕಡಿಮೆಯಾಗಲಿದೆ. ಅಸ್ಪೃಶ್ಯರು ಹಾಗೂ ಹಿಂದುಳಿದ ಹಿಂದೂಗಳನ್ನು ರಾಜಕೀಯ ಸತ್ತೆಯಿಂದ ದೂರ ಇರಿಸಿದ್ದಲ್ಲದೆ, ಬಾಹ್ಮಣರ ವರ್ಚಸ್ಸು ಸ್ಥಿರವಾಗಿ ಉಳಿಯದು, ಎಂಬುದು ಬಾಹ್ಮಣರಿಗೂ, ಅವರ ಸಮಾನರಿಗೂ ತಿಳಿದಿದೆ. ನೆಹರೂ ಕಮಿಟಿಯ ಹಿಂದೂ ಸಭಾಸದರಲ್ಲಿ, ಬ್ರಾಹ್ಮಣರೂ ಅವರಿಗೆ ಸಮಾನರೂ ಆದವರ ಸಂಖ್ಯೆ ದೊಡ್ಡದಿದೆ. ಅರ್ಥಾತ್, ಕಮಿಟಿಯಲ್ಲಿ ತಮ್ಮ ಸಬಾಸದಸ್ಯತ್ವದ ಲಾ¨s À ಪಡೆವಷ್ಟು ಸ್ವಾರ್ಥವನ್ನು sಅವರು ಸಾಧಿಸದೆ ಬಿಡುವುದಿಲ್ಲ. ಹಿಂದುಳಿದ ಹಿಂದೂಗಳಿಗೂ, ಅಸ್ಪೃಶ್ಯರಿಗೂ ಕಾದಿರಿಸಿದ ಸ್ಥಳವನ್ನು ಕೊಡದಿರುವುದು, ಅವರ ಸ್ವಾರ್ಥತನದ ಉಪಾಯವೇ ಆಗಿದೆ. ಹೀಗಾಗಿ, ನಾವು
ಹೇಳುವುದೆಂದರೆ, ನೆಹರೂ ಕಮಿಟಿಯು ಸೂಚಿಸಿದ ಮತದಾರ ಸಂಘದ ಪದ್ಧತಿಯು, ಸರಳ ರಾಜಕಾರಣವಾಗಿರದೆ, ಬಾಹ್ಮಣ್ಯದ ಕಾರಸ್ಥಾನವೇ ತುಂಬಿಕೊAಡಿದೆ ಎಂದು ಅಂಬೇಡ್ಕರ್ ವಾದ ಮಂಡಿಸುತ್ತಾರೆ.
1917ರಲ್ಲೇ ಕಾಂಗ್ರೆಸ್ -ಮುಸ್ಲಿಂ ಲೀಗ್ ನಡುವೆ ಒಪ್ಪಂದ ಆಗಿದೆ. ಲಕ್ನೋದಲ್ಲಿ ನಡೆದ ಈ ಒಪ್ಪಂದಲ್ಲಿ ಹಿಂದು ಅಲ್ಪಸಂಖ್ಯಾತರನ್ನು ಅಂದರೆ ದಲಿತ, ಶೋಷಿತರನ್ನು ಬಿಟ್ಟು ಬ್ರಾಹ್ಮಣ, ಮುಸ್ಲಿಮರ ನಡುವೆ ಅಧಿಕಾರ ಹಂಚಿಕೊಳ್ಳುವ ಸೂತ್ರ ಸಿದ್ಧಗೊಂಡಿತ್ತು. ಇಲ್ಲಿ ಜಾತಿ ಆಧಾರದಲ್ಲಿ ಏನಾದರೂ ಪ್ರತಿನಿಧಿಗಳ ಆಯ್ಕೆಗೆ ಅವಕಾಶ ಕೊಟ್ಟರೆ ಬ್ರಾಹ್ಮಣರು ಕಡಮೆ ಆಗಿ ಮುಸ್ಲಿಮರು ಹೆಚ್ಚಾಗುವ ಸಾಧ್ಯತೆ ಇದೆ ಎಂಬುದನ್ನು ಅರಿತ ನೆಹರು ಸಮಿತಿ ಅದಕ್ಕೇ ಅನ್ಯ ಮಾರ್ಗದಲ್ಲಿ ತಮ್ಮ ಅಧಿಕಾರ ಉಳಿಸಿಕೊಳ್ಳುವ ಯತ್ನಮಾಡಿತು ಎಂಬ ಗಂಭೀರ ಆರೋಪವನ್ನು ಅಂಬೇಡ್ಕರ್ ಮಾಡುತ್ತಾರೆ.
ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ