ತುಂಗಭದ್ರ ಕಾಲುವೆಗಳಿಗೆ ನೀರು ಬಿಡಲು ಸರ್ಕಾರಕ್ಕೆ ಆಗ್ರಹ
ಕೊಪ್ಪಳ: ಈ ಭಾಗದ ರೈತರ ಜೀವನಾಡಿ ತುಂಗಭದ್ರೆ ಜಲಾಶಯ, ಕಳೆದ ಬಾರಿ ವಾಡಿಕೆಗಿಂತ ಈ ಸಾರಿ ಮಳೆ ಸರಿಯಾದ ರೀತಿಯಲ್ಲಿ ಆಗದ ಕಾರಣದಿಂದ ಶೀಘ್ರವಾಗಿ ಜಲಾಶಯದಿಂದ ಕಾಲುವೆಗಳಿಗೆ ನೀರು ಬಿಡಬೇಕೆಂದು ಕೃಷಿ ಕರ್ನಾಟಕ ರಾಜ್ಯ ರೈತ ಸಂಘದ ರಾಜ್ಯಾಧ್ಯಕ್ಷ ಬಸವರಾಜ ಬಿಲ್ಗಾರ ರಾಜ್ಯ ಸರ್ಕಾರವನ್ನು ಆಗ್ರಹಿಸಿದರು.
ನಗರದಲ್ಲಿ ಪತ್ರಿಕಾಗೋಷ್ಠಿಯನ್ನು ನಡೆಸಿ ಮಾತನಾಡಿದ ಅವರು, ಈಗಾಗಲೇ ಸುಮಾರು 49.76 ಟಿ.ಎಂ.ಸಿ ನೀರು ಸಂಗ್ರಹವಾಗಿದೆ. ನೀರಿನ ಪ್ರಮಾಣ ದಿನದಿಂದ ದಿನಕ್ಕೆ ಒಳ ಹರಿವು ಹೆಚ್ಚಾಗುತ್ತಿರುವ ಹಿನ್ನಲೆಯಲ್ಲಿ, ವರ್ಷದ ಮೊದಲನೇ ಹಂತದ ಬೆಳೆಗಳಿಗೆ ನೀರು ಕಾಲುವೆಗಳಿಗೆ ಹರಿಸಬೇಕು. ಈ ಕುರಿತು ತುಂಗಭದ್ರ ಅಚ್ಚುಕಟ್ಟು ಪ್ರದೇಶಾಭಿವೃದ್ಧಿ ಮಂಡಳಿಯಿಂದ ಶೀಘ್ರ ಸಭೆ ಕರೆದು, ರೈತರ ಜಮೀನುಗಳಿಗೆ ನೀರು ಬಿಡಿಸುವ ಕಾರ್ಯ ಬೇಗನೆಯಾಗಬೇಕು. ಈ ಕುರಿತು ಸಂಸದ, ಶಾಸಕ, ಸಚಿವರು ಸೇರಿ ಮುಖ್ಯಮಂತ್ರಿಗಳೊಂದಿಗೆ ಚರ್ಚಿಸಿ, ಜಲಾಶಯದಿಂದ ಶೀಘ್ರವಾಗಿ ನೀರು ಬಿಡಸಬೇಕೆಂದು ಅವರು ಆಗ್ರಹಿಸಿದರು. ಇದೇ ಸಂದರ್ಭದಲ್ಲಿ ಕೃಷಿ ಕರ್ನಾಟಕ ರಾಜ್ಯ ರೈತ ಸಂಘಕಲ್ಯಾಣ ಕರ್ನಾಟಕ ವಿಭಾಗದ ಅಧ್ಯಕ್ಷರಾದ ಹನುಮಂತ ಹಂಚಿನಾಳ ಕ್ಯಾಂಪ್ ಮಾತನಾಡುತ್ತಾ ಸರಿಯಾದ ಸಮಯದಲ್ಲಿ ರೈತರಿಗೆ ನೀರು ಬಿಡದಿದ್ದರೆ ಬೆಳೆಗಳಿಗೆ ಸರಿಯಾದ ರೀತಿಯಲ್ಲಿ ನೀರು ಉಣಿಸಲು ರೈತರಿಗೆ ತೊಂದರೆಯಾಗಿ ರೈತರು ಹಾಕಿರುವಂತ ಫಸಲಿಗೆ ಸರಿಯಾದ ಬೆಳೆ ಬರದೇ ಮತ್ತೆ ರೈತರು ರಾಜ್ಯದಲ್ಲಿ ಸಾಲಗಾರರಾಗುವ ಸ್ಥಿತಿ ಒದಗಿದೆ . ಕನಕಗಿರಿ ಭಾಗದ ಸುಳೆಕಲ್ ವ್ಯಾಪ್ತಿಯಲ್ಲಿ ಕರಡಿ ಡ್ಯಾಮಕ್ಕೆ ಮೀಸಲಿಸಿದ ಸ್ಥಳದಲ್ಲಿ ಧಾಮವನ್ನು ಮಾಡಬೇಕು . ವನ್ಯಜೀವಿಗಳನ್ನು ಸಂರಕ್ಷಿಸುವುದು ನಮ್ಮ ಆದ್ಯ ಕರ್ತವ್ಯಾದರಿಂದ ಕರಡಿ ದಾಮಕ್ಕೆ ಸೂಕ್ತವಾದ ಸ್ಥಳ ನಿಗದಿಯಾಗಿದ್ದ ಸ್ಥಳದಲ್ಲಿಯೇ ಕರಡಿ ದಾಮವನ್ನು ನಿರ್ಮಿಸಬೇಕು. ಇದಕ್ಕೆ ನಮ್ಮ ಸಂಘಟನೆಯಿಂದ ಸಂಪೂರ್ಣ ಬೆಂಬಲ ಇದೆ .ಒಂದು ವೇಳೆ ಕರಡಿ ದಾಮವನ್ನು ಮಾಡದಿದ್ದರೆ ಉಗ್ರ ಹೋರಾಟ ಮಾಡುತ್ತೇವೆ ಮತ್ತು ರೈತರಿಗೆ ನೀರಿಗೋಸ್ಕರ ನಾವು ಸರ್ಕಾರಕ್ಕೆ ಪರಿಪರಿಯಾಗಿ ಬೇಡುವ ಸ್ಥಿತಿ ಬಂದು ಒದಗಿದೆ . ಇನ್ನಾದರೂ ಸರ್ಕಾರ ಎಚ್ಚೆತ್ತುಕೊಂಡು ರೈತರಿಗೆ ನೀರು ಬಿಟ್ಟು ಸಬಲರಾಗಲು ಅವಕಾಶ ಮಾಡಬೇಕು ಇಲ್ಲದಿದ್ದರೆ ನಾವು ಉಗ್ರ ಹೋರಾಟ ಮಾಡುತ್ತೇವೆ ಎಂದರು. ಪತ್ರಕಾಗೋಷ್ಠಿಯಲ್ಲಿ ರಾಜ್ಯ ಗೌರವಅಧ್ಯಕ್ಷ ಕುಪೆಂದ್ರ ನಾಯಕ, ರಾಜ್ಯ ಉಪಾಧ್ಯಕ್ಷ ಮೋಹನ ಹಾಲಸಮುದ್ರ, ಪ್ರಧಾನ ಕಾರ್ಯದರ್ಶಿ ಕಕ ವಿಭಾಗ ರಮೇಶ್ ಕಂಪ್ಲಿ,, ಜಿಲ್ಲಾಧ್ಯಕ್ಷ ಶಂಕ್ರಪ್ಪ, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಮಲ್ಲಪ್ಪ ಸೇರಿದಂತೆ ಇತರರು ಉಪಸ್ಥಿತರಿದ್ದರು.
ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ