ಜಿಪಂ ಸಿಇಓ ಅವರಿಂದ ಪ್ರತಿ ಮಂಗಳವಾರ ತಾಪಂ ಕಚೇರಿಗೆ ಭೇಟಿ-ಅಹವಾಲು ಚರ್ಚೆ
ಕೊಪ್ಪಳ: ಜಿಲ್ಲಾ ಪಂಚಾಯತಗೆ ಸಂಬಂಧಿಸಿದಂತೆ ಕುಂದು ಕೊರತೆಗಳ ಕುರಿತು ಸಾರ್ವಜನಿಕರಿಂದ ಹಾಗೂ ಜನ ಪ್ರತಿನಿಧಿಗಳಿಂದ ಅಹವಾಲು ಆಲಿಸಲು ಜಿಲ್ಲಾ ಪಂಚಾಯತಿ ಮುಖ್ಯ ಕಾರ್ಯ ನಿರ್ವಹಣಾಧಿಕಾರಿಗಳಾದ ರಾಹುಲ್ ರತ್ನಂ ಪಾಂಡೆ ಅವರು ಇನ್ಮುಂದೆ ಪ್ರತಿ ವಾರ ಆಯಾ ತಾಲೂಕು ಪಂಚಾಯತ್ ಕಾರ್ಯಾಲಯಗಳಿಗೆ ಭೇಟಿ ನೀಡಲಿದ್ದಾರೆ.
ತಾಪಂ ಕಾರ್ಯಾಲಯಕ್ಕೆ ಭೇಟಿ ನೀಡಿದ ದಿನ ಬೆಳಗ್ಗೆ 11 ಗಂಟೆಯಿಂದ ಮಧ್ಯಾಹ್ನ 12 ಗಂಟೆವರೆಗೆ ಅಹವಾಲುಗಳ ಕುರಿತು ಚರ್ಚಿಸಲಿದ್ದಾರೆ. ಆದ್ದರಿಂದ ಆಯಾ ತಾಲೂಕಿನ ವ್ಯಾಪ್ತಿಗೆ ಬರುವ ಸಾರ್ವಜನಿಕರು ಹಾಗೂ ಜನ ಪ್ರತಿನಿಧಿಗಳು ಜಿಪಂ ಸಿಇಓ ಅವರನ್ನು ಭೇಡಿ ಮಾಡಿ ತಮ್ಮ ತಮ್ಮ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳಲು ಅವಕಾಶ ಕಲ್ಪಿಸಲಾಗಿದ್ದು ಈ ಅವಕಾಶವನ್ನು ಸದುಪಯೋಗ ಪಡೆದುಕೊಳ್ಳಬೇಕು ಎಂದು ಜಿಲ್ಲಾ ಪಂಚಾಯತ ಯೋಜನಾ ನಿರ್ದೇಶಕರಾದ ಕೃಷ್ಣಮೂರ್ತಿ ಪಿ ಅವರು ಮನವಿ ಮಾಡಿದ್ದಾರೆ.
*ಆಗಸ್ಟ್ 1ರಂದು ಗಂಗಾವತಿಗೆ ಭೇಟಿ:* ಪ್ರತಿ ವಾರ ತಾಪಂ ಕಾರ್ಯಾಲಯ ಭೇಟಿಯ ಮೊದಲ ಕಾರ್ಯಕ್ರಮವನ್ನು ಜಿಪಂ ಸಿಇಓ ಅವರು ಗಂಗಾವತಿ ತಾಲೂಕಿನ ಮೂಲಕ ಆರಂಭಿಸುತ್ತಿದ್ದಾರೆ. ಆಗಸ್ಟ್ 1ರ ಬೆಳಗ್ಗೆ 11 ಗಂಟೆಯಿಂದ ಮಧ್ಯಾಹ್ನ 12 ಗಂಟೆವರೆಗೆ ಗಂಗಾವತಿ ತಾಲೂಕಿನ ತಾಪಂ ಕಾರ್ಯಾಲಯದಲ್ಲಿ ಹಾಜರಿದ್ದು ಗಂಗಾವತಿ ತಾಲೂಕು ವ್ಯಾಪ್ತಿಯ
ಸಾರ್ವಜನಿಕರಿಂದ ಹಾಗೂ ಜನಪ್ರತಿನಿಧಿಗಳಿಂದ ಅಹವಾಲುಗಳ ಕುರಿತು ಚರ್ಚಿಸಲಿದ್ದಾರೆ.
ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ