ಮಾಕನಡಕುಗ್ರಾಪಂ ಅಧ್ಯಕ್ಷ ರಾಗಿ ಜೆಎಂ ರಾಜೇಶ್ ನಾಯ್ಕ್ ಉಪಾಧ್ಯಕ್ಷರಾಗಿ ಮಾಲಾಶ್ರೀ ಚಂದ್ರು

ಕಾನ ಹೊಸಹಳ್ಳಿ: ಸಮೀಪದ ಚಿಕ್ಕಜೋಗಿಹಳ್ಳಿ ಗ್ರಾಮದಲ್ಲಿರುವ ಮಾಕ ನಡಕು ಗ್ರಾಮ ಪಂಚಾಯಿತಿಗೆ 2ನೇ ಅವಧಿಗೆ ಅಧ್ಯಕ್ಷ ಮತ್ತು ಉಪಾಧ್ಯಕ್ಷರ ಚುನಾವಣೆ ಜರುಗಿತು.

 ಅಧ್ಯಕ್ಷ ಸ್ಥಾನಕ್ಕೆ ಜೆಎಂ ರಾಜೇಶ್ ನಾಯ್ಕ್ ಮತ್ತು ಉಪಾಧ್ಯಕ್ಷ ಸ್ಥಾನಕ್ಕೆ ಮಾಲಶ್ರೀ ಚಂದ್ರು ನಾಮಪತ್ರ ಸಲ್ಲಿಸಿದ್ದರು.

 ಗ್ರಾಮ ಪಂಚಾಯಿತಿಯಸದಸ್ಯರ ಸಂಖ್ಯೆ ಒಟ್ಟು 20 ಇದ್ದು  ಅಧ್ಯಕ್ಷ ಮತ್ತು ಉಪಾಧ್ಯಕ್ಷರ ಸ್ಥಾನಗಳಿಗೆ ಜೆಎಂ ರಾಜೇಶ್ ನಾಯ್ಕ್ ಮತ್ತು ಮಾಲಶ್ರೀ ಚಂದ್ರ ಇವರಿಬ್ಬರೂ ಹೊರತುಪಡಿಸಿ ಬೇರೆ ಯಾವ ಸದಸ್ಯರು ನಾಮಪತ್ರವನ್ನು ಸಲ್ಲಿಸಿರಲಿಲ್ಲ ಅಧ್ಯಕ್ಷ ಸ್ಥಾನಕ್ಕೆ  ಜೆ.ಎಂ ರಾಜೇಶ್ ನಾಯ್ಕ್, ಉಪಾಧ್ಯಕ್ಷರ ಸ್ಥಾನಕ್ಕೆ ಮಾಲಶ್ರೀಚಂದ್ರು ನಾಮಪತ್ರ ಸಲ್ಲಿಸಿದ್ದರಿಂದ ಮಾಕನಡಕು ಗ್ರಾಮ ಪಂಚಾಯಿತಿ ಅಧ್ಯಕ್ಷರಾಗಿ  ಜೆಎಂ ರಾಜೇಶ್ ನಾಯ್ಕ್. ಉಪಾಧ್ಯಕ್ಷರಾಗಿ ಮಾಲಶ್ರೀಚಂದ್ರು ಅವಿರೋಧವಾಗಿ ಆಯ್ಕೆಯಾಗಿದ್ದಾರೆ ಎಂದು  ಚುನಾವಣೆ ಅಧಿಕಾರಿಯಾಗಿ ಕರ್ತವ್ಯ ನಿರ್ವಹಿಸಿದ ಮಲ್ಲಿಕಾರ್ಜುನ ಸಹಾಯಕ ಕಾರ್ಯ ನಿರ್ವಾಹಕ ಅಭಿಯಂತರರು   ಪಂ. ರಾಜ್.ಇo. ಉಪ -ವಿಭಾಗ ಕೂಡ್ಲಿಗಿ ಇವರು ಘೋಷಿಸಿದ್ದಾರೆ. ಈ ಸಂದರ್ಭದಲ್ಲಿ ಗ್ರಾಫಂ ಅಭಿವೃದ್ಧಿ ಅಧಿಕಾರಿ ಭರತ್ ಕುಮಾರ್. ಗುಡಡೆ ಕೋಟಿ ಪಿ ಎಸ್ ಐ ಮಲಿಕ್ ಸಾಬ್. ಸೇರಿದಂತೆ ಗ್ರಾಮ ಪಂಚಾಯತಿ ಸಿಬ್ಬಂದಿ ವರ್ಗ, ಪಂಚಾಯಿತಿ ಸದಸ್ಯರು, ಇತರರು ಇದ್ದರು.

ಕಾಮೆಂಟ್‌ಗಳು

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

ಕ್ರಿಕೆಟ್ ಬೆಟ್ಟಿಂಗ್ ದಂಧೆಕೋರರ ಎಡೆಮುರಿ ಕಟ್ಟಿದ : ಪಿಎಸ್ಐ ಗೀತಾಂಜಲಿ ಶಿಂಧೆ

ಮಲೆನಾಡಲ್ಲಿ ಮಳೆ:ಭದ್ರಾ ಒಳ ಹರಿವು ಹೆಚ್ಚಳ

ಕೊಟ್ಟೂರು ಪೊಲೀಸ್ ಠಾಣೆಗೆ ಮೊದಲ ಬಾರಿಗೆ ಮಹಿಳಾ ಪಿಎಸ್ಐ ಗೀತಾಂಜಲಿ ಶಿಂಧೆ