ಕೃಷಿ ವಿವಿಯ ಹನ್ನೆರಡನೇ ಘಟಿಕೋತ್ಸವ ಸಮಾರಂಭ

 


ಕೃಷಿ ಶಿಕ್ಷಣ ಪಡೆದ ವಿದ್ಯಾರ್ಥಿಗಳು ದೇಶದ ಹಿತಕ್ಕೆ ಶ್ರಮಿಸಿ: ಥಾವರ್ ಚಂದ್ ಗೆಹ್ಲೋಟ್

ರಾಯಚೂರು,ಜು.೨೮:- ಭಾರತವು ಕೃಷಿ ಪ್ರಧಾನ ರಾಷ್ಟçವಾಗಿದ್ದು, ಕೃಷಿ ವಿಜ್ಞಾನಗಳ ವಿಶ್ವವಿದ್ಯಾಲಯದಲ್ಲಿ ಕೃಷಿ ಶಿಕ್ಷಣ ಪಡೆದು ಸ್ವಹಿತ, ಜನ ಹಿತ ಹಾಗೂ ದೇಶದ ಹಿತಕ್ಕೆ ಶ್ರಮಿಸಬೇಕೆಂದು ರಾಜ್ಯಪಾಲರೂ ಹಾಗೂ ರಾಯಚೂರು ಕೃಷಿ ವಿಜ್ಞಾನಗಳ ವಿಶ್ವವಿದ್ಯಾಲಯದ ಕುಲಾಧಿಪತಿಗಳಾದ ಥಾವರ್‌ಚಂದ್ ಗೆಹ್ಲೋಟ್ ಅವರು ಹೇಳಿದರು. 

ಅವರು ಜು.೨೮ರ(ಶುಕ್ರವಾರ)ದಂದು ನಗರದ ಕೃಷಿ ವಿಜ್ಞಾನಗಳ ವಿಶ್ವವಿದ್ಯಾಲಯದ ಪ್ರೇಕ್ಷಾಗೃಹದಲ್ಲಿ ಹಮ್ಮಿಕೊಂಡಿದ್ದ ಕೃಷಿ ವಿಜ್ಞಾನಗಳ ವಿಶ್ವವಿದ್ಯಾಲಯದ ಹನ್ನೆರಡನೇ ಘಟಿಕೋತ್ಸವ ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡಿದರು. 

ರಾಯಚೂರು ಕೃಷಿ ವಿಶ್ವವಿದ್ಯಾಲಯವು ಕಲ್ಯಾಣ ಕರ್ನಾಟಕ ಭಾಗದ ಕೃಷಿ ಅಭಿವೃದ್ಧಿಗೆ ಮಹತ್ತರವಾದ ಪಾತ್ರವನ್ನು ವಹಿಸುತ್ತದೆ. ಈ ವಿಶ್ವವಿದ್ಯಾಲಯದಲ್ಲಿ ಕಲಿತಂತ ವಿದ್ಯಾರ್ಥಿಗಳು ರೈತರ ಆದಾಯವನ್ನು ಮತ್ತು ಕೃಷಿ ಚಟುವಟಿಕೆಗಳ ಅಭಿವೃದ್ಧಿಗೆ ಪೂರಕವಾಗಿ ಕಾರ್ಯನಿರ್ವಹಿಸಬೇಕು ಮತ್ತು ವಿಶ್ವಿದ್ಯಾಲಯದಿಂದ ಪಡೆದ ಜ್ಞಾನವನ್ನು ದೇಶ ಹಾಗೂ ಸಮಾಜಹದ ಹಿತಕ್ಕಾಗಿ ಸಮರ್ಪಿಸಬೇಕು ಎಂದು ತಿಳಿಸಿದರು. 

ಭಾರತ ದೇಶವು ಕೃಷಿ ಪ್ರಧಾನ ರಾಷ್ಟçವಾಗಿದ್ದು, ಭಾರತದ ಆರ್ಥಿಕತೆಗೆ ಕೃಷಿಯು ಮಹತ್ವಪೂರ್ಣವಾಗಿದೆ. ಕೃಷಿಯ ಅಭಿವೃದ್ಧಿಗೆ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಅನೇಕ ಯೋಜನೆಗಳನ್ನು ಜಾರಿಗೆ ತಂದಿದ್ದು, ಕೃಷಿಕರು ಈ ಯೋಜನೆಗಳನ್ನು ಸದುಪಯೋಗಪಡೆದುಕೊಂಡು ಕೃಷಿಯಲ್ಲಿ ಅಭಿವೃದ್ಧಿ ಹೊಂದಿ ಮತ್ತೊಬ್ಬರಿಗೆ ಕೆಲಸ ನೀಡುವಂತಾಗಬೇಕು ಎಂದರು. 

ಕೃಷಿ ಉತ್ಪನ್ನಗಳ ಉತ್ಪಾಧನೆಯಲ್ಲಿ ದೇಶವು ಅಗ್ರಗಣ್ಯ ಸ್ಥಾನದಲ್ಲಿದ್ದು, ವ್ಯವಸಾಯ ಮತ್ತು ಪಶುಪಾಲನೆಯಲ್ಲಿ ಆಧುನೀಕರಣ ತರುವುದಕ್ಕಾಗಿ ಸಾಕಷ್ಟು ಸೌಲಭ್ಯಗಳನ್ನು ಜಾರಿಗೆ ತರಲಾಗಿದ್ದು, ಇದರಿಂದ ಕೃಷಿಯಲ್ಲಿ ರೈತರು ಹೆಚ್ಚಿನ ಆದಾಯವನ್ನು ಪಡೆಯಬಹುದಾಗಿದೆ ಎಂದರು. 

ಕೃಷಿಯಲ್ಲಿ ಮಾಹಿತಿ ತಂತ್ರಜ್ಞಾನವು ಅತ್ಯಂತ ಮಹತ್ತರ ಪಾತ್ರವನ್ನು ವಹಿಸುತ್ತದೆ. ಮಾಹಿತಿ ತಂತ್ರಜ್ಞಾನದ ಸಹಾಯದಿಂದ ಸುಧಾರಿತ ಉತ್ಪಾದಕತೆ, ರೈತರಿಗೆ ಇತ್ತೀಚಿನ ತಳಿಗಳು ಮತ್ತು ಬದಲಾಗುತ್ತಿರುವ ಹವಮಾನ ಮಾದರಿಗಳು, ಬೆಳೆ ಉತ್ಪದನಾ ತಂತ್ರಗಳು ಮತ್ತು ಅವುಗಳ ಉತ್ಪಾದಿಸುವ ಕೃಷಿ ಪದ್ದತಿಗಳ ಬಗ್ಗೆ ಮಾಹಿತಿ ನೀಡುತ್ತದೆ ಎಂದು ಹೇಳಿದರು. 

ಭಾರತವು ಸ್ವತಂತ್ರö್ಯವನ್ನು ಪಡೆದು ೭೫ ವರ್ಷಗಳನ್ನು ಪೂರ್ಣಗೊಳಿಸಿದ್ದು, ಪ್ರತಿಯೊಂದು ಕ್ಷೇತ್ರದಲ್ಲಿಯೂ ಅಭಿವೃದ್ಧಿ ಮತ್ತು ವೇಗವನ್ನು ಪಡೆದುಕೊಂಡಿದೆ. ಮತ್ತು ಈ ವೇಗವು ಮುಂದಿನ ೨೫ ವರ್ಷಗಳಲ್ಲಿ ಹೆಚ್ಚಳವಾಗಬೇಕಿದೆ ಎಂದರು. 

ದೇಶದಲ್ಲಿ ವಾಯು ಸಂರಕ್ಷಣೆ, ಜಲ ಸಂರಕ್ಷಣೆ ಮತ್ತು ಭೂ ಸಂರಕ್ಷಣೆ ಮಾಡುವ ಮೂಲಕ ಮುಂದಿನ ಪೀಳಿಗೆಗೆ ಉತ್ತಮವಾದ ಪರಿಸರವನ್ನು ನಿಡುವುದು ಪ್ರತಿಯೊಬ್ಬರ ಕರ್ತವ್ಯವಾಗಿದೆ ಎಂದರು. 

ಇದೇ ವೇಳೆ ಭಾರತೀಯ ಕೃಷಿ ಅನುಸಂದಾನಪರಿಷತ್ತಿನ ಮಹಾನಿರ್ದೇಶಕರಾದ ಡಾ.ಹಿಮಾಂಶು ಪಾಠಕ್ ಅವರು ಮಾತನಾಡಿ, ಮುಂಚೆ ಆಹಾರಕ್ಕಾಗಿ ಭಾರತವು ಬೇರೆ ದೇಶಗಳ ಮೇಲೆ ಅವಲಂಬಿತವಾಗಿತ್ತು ಆದರೆ ಪ್ರಸ್ತುತ ದಿನಗಳಲ್ಲಿ ದೇಶವು ಕೃಷಿಯಲ್ಲಿ ಅಭಿವೃದ್ಧಿ ಹೊಂದಿ ಆಹಾರ ಉತ್ಪಾದನೆಯಲ್ಲಿ ಮುಂಚೂಣಿಯಲ್ಲಿದ್ದು, ಬೇರೆ ದೇಶಗಳು ಭಾರತದ ಮೇಲೆ ಅವಲಂಬಿತವಾಗುವAತೆ ದೇಶದಲ್ಲಿ ಕೃಷಿ ಅಭಿವೃದ್ಧಿ ಹೊಂದಿದೆ ಎಂದರು. 

ಆದಾಯ, ವಾತಾವರಣ, ಮಣ್ಣು, ಪೌಷ್ಠಿಕಾಂಶದ ಸವಾಲುಗಳನ್ನು ಎದುರಿಸುತ್ತಾ ಭಾರತಿಐ ಕೃಷಿ ಪದ್ದತಿಯು ಉತ್ತಮವಾಗಿ ನಡೆಯುತ್ತಲಿದ್ದು, ಕೃಷಿ ಶಿಕ್ಷಣವನ್ನು ಪಡೆದ ವಿದ್ಯಾರ್ಥಿಗಳು ಕೃಷಿಯಲ್ಲಿ ದೇಶವು ಇನ್ನೂ ಹೆಚ್ಚಿನ ಅಭಿವೃದ್ಧಿ ಹೊಂದಲು ಶ್ರಮಿಸಬೇಕು ಎಂದು ತಿಳಿಸಿದರು. 

ಮುಂದಿನ ೨೫ ವರ್ಷಗಳಲ್ಲಿ ಭಾರತವು ಅಮೃತ ಕಾಲವನ್ನು ಕಾಣಲಿದ್ದು, ಭಾರತವು ವಿಕಸಿತ ರಾಷ್ಟçವಾಗಲಿದೆ. ಪ್ರತಿಯೊಬ್ಬರು ಜೊತೆಗೂಡಿ ಕೃಷಿ ಕ್ಷೇತ್ರದ ಸವಾಲುಗಳು ಹಾಗೂ ಸಮಸ್ಯೆಗಳನ್ನು ಪರಿಹರಿಸಿ ಅಮೃತ ಕಾಲಕ್ಕೆ ಸಿದ್ಧವಾಗಬೇಕಾಗಿದೆ ಹಾಗೂ ಭಾರತವನ್ನು ಅಭಿವೃದ್ಧಿ ಹೊಂದಿದ ರಾಷ್ಟçವನ್ನಾಗಿ ಪರಿವರ್ತಿಸಬೇಕಾಗಿದೆ ಎಂದು ತಿಳಿಸಿದರು.

ಕೃಷಿ ಅಭಿವೃದ್ಧಿಗೆ ಪೂರಕವಾದ ಕಾರ್ಯಗಳಿಗೆ ಕೃಷಿ ಅನುಸಂದಾನ ಪರಿಷತ್ತು ಮತ್ತು ಸರ್ಕಾರ ಕೃಷಿ ವಿಜ್ಞಾನಗಳ ವಿಶ್ವವಿದ್ಯಾಲಯಕ್ಕೆ ಎಲ್ಲಾ ರೀತಿಯ ಸಹಕಾರವನ್ನು ನೀಡಲಿದೆ ಎಂದರು. 

ಪದವಿ ಪ್ರದಾನ: ಈ ಘಟಿಕೋತ್ಸವದಲ್ಲಿ ೩೩೨ ವಿದ್ಯಾರ್ಥಿಗಳಿಗೆ ಸ್ನಾತಕ (Uಉ) ಪದವಿಯನ್ನು, ೧೦೬ ವಿದ್ಯಾರ್ಥಿಗಳಿಗೆ ಸ್ನಾತಕೋತ್ತರ (Pಉ) ಪದವಿಯನ್ನು ಹಾಗೂ ೪೨ ವಿದ್ಯಾರ್ಥಿಗಳಿಗೆ ಡಾಕ್ಷರೇಟ್ (Ph.ಆ) ಪದವಿಯನ್ನು ಪ್ರದಾನ ಮಾಡಲಾಯಿತು. 

ಇವರಲ್ಲಿ ೧೧೪ ಸ್ನಾತಕ (Uಉ) ಪದವಿ ವಿದ್ಯಾರ್ಥಿನಿಯರು, ೩೫ ಸ್ನಾತಕೋತ್ತರ (Pಉ) ಪದವಿ ವಿದ್ಯಾರ್ಥಿನಿಯರು ಹಾಗೂ ೨೧ ಡಾಕ್ಟರೇಟ್ (Ph.ಆ) ಪಡೆದ ವಿದ್ಯಾರ್ಥಿನಿಯರಿದ್ದರು. ಹಾಗೇಯೇ, ಸ್ನಾತಕ (Uಉ) ಪದವಿಯಲ್ಲಿ ೨೫ ಚಿನ್ನದ ಪದಕ, ಸ್ನಾತಕೋತ್ತರ (Pಉ) ಪದವಿಯಲ್ಲಿ ೧೪ ಚಿನ್ನದ ಪದಕ ಹಾಗೂ ೧೩ ಚಿನ್ನದ ಪದಕಗಳು ಡಾಕ್ಷರೇಟ್ (Ph.ಆ) ಪದವಿ ವಿದ್ಯಾರ್ಥಿಗಳಿಗೆ ಪದವಿ ಪ್ರದಾನ ಮಾಡಲಾಯಿತು.

ವಿಶ್ವವಿದ್ಯಾಲಯದ ಕುಲಪತಿಗಳಾದ ಡಾ.ಎಂ.ಹನುಮAತಪ್ಪ ಅವರು ಘಟಿಕೋತ್ಸವಕ್ಕೆ ಆಗಮಿಸಿದ ಎಲ್ಲರನ್ನೂ ಸ್ವಾಗತಿಸಿ ೨೦೨೦-೨೧ ರಲ್ಲಿ ವಿಶ್ವವಿದ್ಯಾಲಯವು ಕೈಗೊಂಡ ಪ್ರಮುಖ ಚಟುವಟಿಕೆಗಳ ಸಂಕ್ಷಿಪ್ತ ವರದಿಯನ್ನು ಮಂಡಿಸಿದರು. 

ರಾಯಚೂರು ಕೃಷಿ ವಿಜ್ಞಾನಗಳ ವಿಶ್ವವಿದ್ಯಾಲಯದ ವ್ಯವಸ್ಥಾಪನಾ ಮಂಡಳಿಯ ಸದಸ್ಯರುಗಳು, ವಿದ್ಯಾವಿಷಯಕ ಪರಿಷತ್ತಿನ ಸದಸ್ಯರುಗಳು, ಪದವಿ ಪುರಸ್ಕೃತ ವಿದ್ಯಾರ್ಥಿಗಳು, ಗಣ್ಯರು, ಪದವಿ ಪಡೆದ ವಿದ್ಯಾರ್ಥಿಗಳ ಪಾಲಕರು ಹಾಗೂ ಪೋಷಕರು ಹಾಗೂ ವಿಶ್ವವಿದ್ಯಾಲಯದ ಅಧಿಕಾರಿಗಳು ಉಪಸ್ಥಿತರಿದ್ದರು

ಕಾಮೆಂಟ್‌ಗಳು

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

ಕ್ರಿಕೆಟ್ ಬೆಟ್ಟಿಂಗ್ ದಂಧೆಕೋರರ ಎಡೆಮುರಿ ಕಟ್ಟಿದ : ಪಿಎಸ್ಐ ಗೀತಾಂಜಲಿ ಶಿಂಧೆ

ಮಲೆನಾಡಲ್ಲಿ ಮಳೆ:ಭದ್ರಾ ಒಳ ಹರಿವು ಹೆಚ್ಚಳ

ಕೊಟ್ಟೂರು ಪೊಲೀಸ್ ಠಾಣೆಗೆ ಮೊದಲ ಬಾರಿಗೆ ಮಹಿಳಾ ಪಿಎಸ್ಐ ಗೀತಾಂಜಲಿ ಶಿಂಧೆ