ಹಿಂದೂ- ಮುಸ್ಲಿಂ ಭಾವೈಕ್ಯತೆಗೆ ಸಾಕ್ಷಿಯಾಯ್ತು ಮೊಹರಂ ಆಚರಣೆ
ಕೊಟ್ಟೂರಿನಲ್ಲಿ ಭಾವೈಕ್ಯತೆಯೊಂದಿಗೆ ಹಿಂದೂಗಳಿಂದ ಮೊಹರಂ ಆಚರಣೆ
ಕೊಟ್ಟೂರು:ಮೊಹರಂ ಹಬ್ಬವನ್ನು ಇಲ್ಲಿನ ಮುಸ್ಲಿಂರಿಗಿಂತ ಅನ್ಯಕೋಮಿನ ಜನರು ಶ್ರದ್ದ ಭಕ್ತಿಗಳೊಂದಿಗೆ ಶನಿವಾರ ಆಚರಿಸಿದರು. ಇದರ ಅಂಗವಾಗಿ ಪೀರಲ ದೇವರುಗಳನ್ನು ಪಟ್ಟಣದ ನಾಲ್ಕೈದು ಮಸೀದಿಗಳಿಂದ ಮೆರವಣಿಗೆ ಮೂಲಕ ತಂದು ಮುಸ್ಲಿಂ ಬಳಗದವರನ್ನು ವೈಭವದ ಮೆರವಣಿಗೆ ಮೂಲಕ ಕೊಂಡು ಒಯ್ಯಲಾಯಿತು.
ಮೆರವಣಿಗೆಯುದ್ದಕ್ಕೂ ಪಾಲ್ಗೊಂಡಿದ್ದ ಭಕ್ತರು ಕ್ಯಾಹುಸೇನ್-ಬೌಸೇನ್ ಎಂಬ ಘೋಷಣೆಗಳನ್ನು ಕೂಗಿದರಲ್ಲದೇ ನೃತ್ಯ ಮಾಡುತ್ತ ಉದ್ದಕ್ಕೂ ಸಾಗಿದರು. ಮೆರವಣಿಗೆ ಗಾಂಧಿ ವೃತ್ತದ ಬಳಿ ಬರುತ್ತಿದ್ದಂತೆ ಹರಿಜನ ಮಹಿಳೆಯರು ಸೇರಿದಂತೆ ಇತರರು ನೆಲಕ್ಕೆ ಮಲಗಿ ಪೀರ್ಲದೇವರನ್ನು ಹೊತ್ತವರು ತಮ್ಮನ್ನು ತುಳಿದು ಸಾಗಲೀ ಎಂದು ಬಯಸಿದರು.
ಹೀಗೆ ಮಾಡುವುದರಿಂದ ತಮಗೆ ಒಳಿತಾಗುತ್ತದೆ ಎಂಬ ನಂಬಿಕೆ ಅವರಲ್ಲಿ ಮನೆ ಮಾಡಿದ್ದು ಈ ಕಾರಣಕ್ಕಾಗಿ ಮೆರವಣಿಗೆ ಸಾಗುವ ಕೆಲ ಪ್ರದೇಶಗಳಲ್ಲಿ ಇದೇ ತೆರನಾದ ನೆಲಕ್ಕೆ ಮಲಗುವ ಭಕ್ತರು ಕಂಡುಬಂದರು.
ಮೆರವಣಿಗೆ ಪಟ್ಟಣ ಹೊರಪ್ರದೇಶದಲ್ಲಿನ ಕೆರೆಗೆ ತೆರಳಿ ಪೀರ್ಲ ದೇವರುಗಳನ್ನು ವಿಸರ್ಜಿಸಿದರು ನಂತರ ದೇವರ ಮೂರ್ತಿಗಳನ್ನು ಅವುಗಳನ್ನು ಪೆಟ್ಟಿಗೆಯಲ್ಲಿ ಇರಿಸಿ ತಲೆಯ ಮೇಲೆ ಹೊತ್ತುಕೊಂಡು ವಿದಾಯ ಗೀತೆಯನ್ನು ರಾಗಬದ್ದವಾಗಿ ಹಾಡುತ್ತ ಪಟ್ಟಣದ ಮಸೀದಿಗಳ ಬಳಿ ಬಂದರು ಮೊಹರಂ ಹಬ್ಬದ ನಿಮಿತ್ತ ಪೋಲಿಸರು ಬಿಗಿ ಬಂದೋಬಸ್ತ ನಿಯೋಜನೆಗೊಂಡಿತ್ತು.
ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ