ಪೋಷಕರೇ ಎಚ್ಚರ: ಮಳೆಗಾಲದಲ್ಲಿ ಮಕ್ಕಳನ್ನೇ ಟಾರ್ಗೆಟ್​! ಕಣ್ಣು ಕೆಂಪಾಗಿಸುತ್ತಿದೆ ಮದ್ರಾಸ್ ಐ


*ಗುಡೇಕೋಟೆ*: ಕಳೆದೊಂದು ತಿಂಗಳಿನಿಂದ ಎಡಬಿಡದೆ ಸುರಿಯುತ್ತಿರೋ ಮಳೆಗೆ ರಾಜ್ಯದ ಜನ ತತ್ತರಿಸಿ ಹೋಗಿದ್ದಾರೆ. ಜೋರು ಮಳೆ ಮಧ್ಯೆ ರಾಜ್ಯದಲ್ಲಿ ಮದ್ರಾಸ್‌ ಐ ಸಮಸ್ಯೆಯೂ ಹೆಚ್ಚುತ್ತಿದೆ. ಇತ್ತೀಚೆಗೆ ಹಲವು ಮಕ್ಕಳಲ್ಲಿ ಮದ್ರಾಸ್‌ ಐ ಸಮಸ್ಯೆ ಕಾಣಿಸಿಕೊಂಡಿದ್ದು, ಪೋಷಕರು ಎಚ್ಚರ ವಹಿಸಲೇಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ.


ಹೌದು, ರಾಜ್ಯಾದ್ಯಂತ ಮಳೆಯ ಅಬ್ಬರದ ಮಧ್ಯೆಯೂ ಎಲ್ಲಿ ಕೇಳಿದರೂ ಒಂದೇ ಸುದ್ದಿ. ಅದು ಮದ್ರಾಸ್‌ ಐ ಸಮಸ್ಯೆ. ಮಕ್ಕಳಲ್ಲಿ ರೋಗ ನಿರೋಧಕ ಶಕ್ತಿ ಕಡಿಮೆಯಾಗಿರೋ ಕಾರಣ ಈ ಮದ್ರಾಸ್​​ ಐ ಕಾಣಿಕೊಂಡಿದೆ. ಇದನ್ನು ಪಿಂಕ್​ ಐ ಎಂದು ಕರೆಯಲಾಗುತ್ತದೆ.


ಸಿಲಿಕಾನ್​ ಸಿಟಿ ಬೆಂಗಳೂರು ಸೇರಿದಂತೆ ರಾಜ್ಯದ ವಿವಿಧ ಭಾಗಗಳಲ್ಲಿ ಮಕ್ಕಳಲ್ಲಿ ಮದ್ರಾಸ್‌ ಐ ಸಮಸ್ಯೆ ಹೆಚ್ಚು ಕಾಣಿಸಿಕೊಳ್ಳುತ್ತಿದೆ. ಇದರ ಪರಿಣಾಮ ಪೋಷಕರು ಬಹಳ ಆತಂಕಕ್ಕೆ ಒಳಗಾಗಿದ್ದಾರೆ.


ಏನಿದು ಮದ್ರಾಸ್​ ಐ?

ಮಳೆಗಾಲದಲ್ಲಿ ಮದ್ರಾಸ್‌ ಐ ಕಾಣಿಸಿಕೊಳ್ಳುತ್ತದೆ. ಮಕ್ಕಳ ಕಣ್ಣುಗಳು ಗುಲಾಬಿ ಬಣ್ಣಕ್ಕೆ ತಿರುಗುವುದೇ ಮದ್ರಾಸ್​ ಐ. ಇದಕ್ಕೆ ಕಂಜಂಕ್ಟಿವಿಟಿಸ್‌ ಎಂದೂ ಕರೆಯುತ್ತೇವೆ. ಅದರಲ್ಲೂ ಮಳೆಗಾಲದಲ್ಲೇ ಹೆಚ್ಚು ಕಾಣಿಸಿಕೊಳ್ಳಲು ಕಾರಣ ಬ್ಯಾಕ್ಟೀರಿಯಾ. ಮದ್ರಾಸ್‌ ಐ ಸಮಸ್ಯೆ ಕಾಣಿಸಿಕೊಂಡಾಗ ಕಣ್ಣುಗಳು ಕೆಂಪಾಗುತ್ತವೆ. ಕಣ್ಣುಗಳು ಊದಿಕೊಳ್ಳುವುದು, ನೀರು ಸೋರುವುದು, ತುರಿಕೆ ಉಂಟಾಗುವುದು; ಹೀಗೆ ಹಲವು ಸಮಸ್ಯೆಗಳು ಕಾಣಿಸಿಕೊಳ್ಳಲಿವೆ.ಇದು ಗಂಭೀರ ಕಾಯಿಲೆ ಇದಲ್ಲದೆ ಹೋದ್ರು ನಿರ್ಲಕ್ಷ ಮಾಡಿದರೆ ಕಣ್ಣು ಕಳೆದುಕೊಳ್ಳುವ ಅಪಾಯವಿರುತ್ತದೆ.

ಮದ್ರಾಸ್ ಐ ತಡೆಗಟ್ಟಲು ಏನು ಮಾಡಬೇಕು?

ಪಿಂಕ್ ಐ ಕಾಣಿಸಿಕೊಂಡವರು ಬಟ್ಟೆಗಳು, ಟವಲ್, ಕರವಸ್ತ್ರಗಳನ್ನು ಎಂದು ಹಂಚಿಕೊಳ್ಳಬೇಡಿ, ಮದ್ರಾಸ್ ಐ ಕಾಣಿಸಿಕೊಂಡಿರುವವರು ಕನ್ನಡಕ ಧರಿಸುವುದು ಒಳ್ಳೆಯದು, ಶಾಲೆಯಲ್ಲಿ ಮಕ್ಕಳಿಗೆ ಮದ್ರಾಸ್ ಐ ಹರಡುತ್ತಿದ್ದರೆ ಹೆಚ್ಚಿನ ಎಚ್ಚರಿಕೆ ವಹಿಸಬೇಕಾಗುತ್ತದೆ. ಮಕ್ಕಳನ್ನು ಶಾಲೆಗೆ ಕಳುಹಿಸಬಾರದು. ನಾಲ್ಕೈದು ದಿನಗಳ ನಂತರ ಸೋಂಕು ಹೊರಡುವುದಿಲ್ಲ ಎಂಬುದನ್ನು ಖಾತ್ರಿ ಮಾಡಿಕೊಂಡ ನಂತರ ಮಕ್ಕಳನ್ನು ಶಾಲೆಗೆ ಕಳಿಸಬೇಕು. ನೀವು ಸೂಕ್ತ ಸಮಯದಲ್ಲಿ ಸೂಕ್ತ ಚಿಕಿತ್ಸೆ ನೀಡದ ಬಿಟ್ಟರೆ ಗಂಭೀರವಾದ ಕಣ್ಣಿನ ಸಮಸ್ಯೆ ಎದುರಿಸಬೇಕಾಗುತ್ತದೆ. ಈ ರೀತಿಯ ಸೊಂಕುಗಳು ಕಂಡು ಬಂದರೆ ಕೂಡಲೇ ಹತ್ತಿರದ ಆರೋಗ್ಯಕೇಂದ್ರಕ್ಕೆ ಭೇಟಿ ನೀಡಿ ಪರೀಕ್ಷಿಸಬೇಕು ಎಂದು ಗುಡೇಕೋಟೆ ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿ ಶ್ರೀಧರ ಬಾಬು ಮತ್ತು ಆರೋಗ್ಯ ನಿರೀಕ್ಷಕರಾದ ಸೈಯದ್ ವಹಾಬ್. ಸಾರ್ವಜನಿಕರಲ್ಲಿ ವಿನಂತಿಸಿದರು.

ಕಾಮೆಂಟ್‌ಗಳು

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

ಕ್ರಿಕೆಟ್ ಬೆಟ್ಟಿಂಗ್ ದಂಧೆಕೋರರ ಎಡೆಮುರಿ ಕಟ್ಟಿದ : ಪಿಎಸ್ಐ ಗೀತಾಂಜಲಿ ಶಿಂಧೆ

ಮಲೆನಾಡಲ್ಲಿ ಮಳೆ:ಭದ್ರಾ ಒಳ ಹರಿವು ಹೆಚ್ಚಳ

ಕೊಟ್ಟೂರು ಪೊಲೀಸ್ ಠಾಣೆಗೆ ಮೊದಲ ಬಾರಿಗೆ ಮಹಿಳಾ ಪಿಎಸ್ಐ ಗೀತಾಂಜಲಿ ಶಿಂಧೆ