"ಮಣಿಪುರದ ಹಿಂಸಾಚಾರವನ್ನು ನಿಯಂತ್ರಿಸಲು ಆಗ್ರಹ"
ವಿಜಯನಗರ ಜಿಲ್ಲೆ ಕೂಡ್ಲಿಗಿ ತಾಲೂಕು ಆಡಳಿತ ಸೌಧದ ಮುಂದೆ ಭಾರತ ಕಮ್ಯುನಿಸ್ಟ್ ಪಕ್ಷದಿಂದ ಈ ದಿನ ರಾಜ್ಯಾದ್ಯಂತ ಕರೆಗೆ ರಾಜ್ಯದ ಜಿಲ್ಲಾ ತಾಲೂಕು ಕಚೇರಿಗಳ ಮುಂಭಾಗದಲ್ಲಿ ಮಣಿಪುರದ ಹಿಂಸಾಚಾರವನ್ನು ನಿಯಂತ್ರಿಸಲು ವಿಫಲವಾದ ಬಿಜೆಪಿ ಸರ್ಕಾರ ನೀತಿಯನ್ನು ಖಂಡಿಸಿ ಹೋರಾಟ ಮಾಡಲಾಯಿತು, ಮಣಿಪುರದ ಜನತೆಯ ನಡುವೆ ಜನಾಂಗೀಯ ದ್ವೇಷ ಬಿತ್ತಿ ಗಲಭೆ ಉಂಟು ಮಾಡಿದ ಸಂಘ ಪರಿವಾರದ ಕುಟಿಲ ನೀತಿಯನ್ನು ವಿರೋಧಿಸಿ ಮಣಿಪುರದ ಸಮೃದ್ಧ ನೆಲವನ್ನು ಕಾರ್ಪೊರೇಟ್ ಕಂಪನಿಗಳಿಗೆ ನೀಡಲು ಮುಂದಾಗಿರುವ ಬಿಜೆಪಿ ಸರ್ಕಾರದ ನೀತಿಯನ್ನು ವಿರೋಧಿಸಿ ಮಣಿಪುರದಲ್ಲಿ ಶಾಂತಿ ಮತ್ತು ಸೌಹಾರ್ದತೆಗಾಗಿ ಆಗ್ರಹಿಸಿ ಎನ್ ಎಫ್ ಐ ಡಬ್ಲ್ಯೂ ಮುಖಂಡರ ವಿರುದ್ಧ ದಾಖಲಾಗಿರುವ ದೇಶ ದ್ರೋಹ ಮತ್ತಿತರ ಪ್ರಕರಣಗಳನ್ನು ಹಿಂಪಡೆಯಲು ಮಣಿಪುರ ಸರ್ಕಾರವನ್ನು ಒತ್ತಾಯಿಸಿ ರಾಜ್ಯ ವ್ಯಾಪಿ ಹೋರಾಟ ಮಾಡುತ್ತಾ ಮಾನ್ಯ ತಹಶೀಲ್ದಾರ್ ಮುಖಾಂತರ ಪ್ರಧಾನ ಮಂತ್ರಿಗಳಿಗೆ ಮನವಿ ಪತ್ರವನ್ನು ಕೊಡುವುದರ ಮೂಲಕ ಮಣಿಪುರದ ರಾಜಕೀಯವಾಗಿ ಪ್ರಭಲವಾಗಿರುವ ಮೈತೆಯಿ ಸಮುದಾಯ ಮತ್ತು ಅರಣ್ಯ ವಾಸಿಗಳಾದ ಬುಡಕಟ್ಟು ಕುಕ್ಕಿ ಜನಾಂಗವು ಪರಸ್ಪರ ವೈರಿಗಳಂತೆ ಗಲಭೆ ದೊಂಬಿ ಕೊಲೆ ಸುಲಿಗೆ ಅತ್ಯಾಚಾರ ಹಿಂಸೆಗಳಲ್ಲಿ ತೊಡಗಿರುವುದರಿಂದ ಇಂತಹ ಘೋರ ಸ್ಥಿತಿ ಏಕಾಏಕಿ ನಿರ್ಮಾಣವಾಗಿಲ್ಲ, ಆದರೆ ಮಣಿಪುರದ ಈ ಒಂದು ಗಲಭೆಗಳಿಗೆ ಬಿಜೆಪಿ ಮತ್ತು ಸಂಘ ಪರಿವಾರದ ದಶಕಗಳ ಕಾಲ ಮಾಡಿರುವ ಕೋಮು ಪ್ರಚೋದನೆಯಿಂದಾಗಿ ಇದು ಎರಡು ಸಮುದಾಯಗಳು ಮತೀಯ ಆಧಾರದಲ್ಲಿ ಹೊಡೆದು ಅವರ ನಡುವೆ ದ್ವೇಷ ಬೆಳದಿದೆ ಹಾಗೂ ಮಣಿಪುರದ ಭೂ ಗರ್ಭದಲ್ಲಿರುವ ಅಗಾಧ ನಿಕ್ಷೇಪಗಳನ್ನು ಲೂಟಿ ಮಾಡಲು ಹೊರಟಿರುವ ಅದಾನಿ ಅಂತಹ ಕಾರ್ಪೊರೇಟರ್ ಹುಳಗಳ ಸಂಚು ಹಾಗೂ ಇದಕ್ಕೆ ಬಲವಾಗಿ ನಿಂತಿರುವ ರಾಜ್ಯ ಮತ್ತು ಕೇಂದ್ರ ಸರ್ಕಾರ ಮಣಿಪುರದಲ್ಲಿ ಗಲಭೆಗಳಿಗೆ ಪ್ರಮುಖ ಕಾರಣವಾಗಿದೆ.ಎಂದು ಮಂಗಳವಾರದಂದು ಭಾರತದ ಕಮ್ಯುನಿಸ್ಟ್ ಪಕ್ಷ ಹತ್ತಾರು ಹಕ್ಕೋತಾಯಿಗಳನ್ನು ಇಟ್ಟುಕೊಂಡು ಕೇಂದ್ರ ಸರ್ಕಾರದ ವಿರುದ್ಧ ಘೋಷಣೆಗಳನ್ನು ಕೂಗುತ್ತಾ
*ಹಕ್ಕೋತಾಯಗಳು*
*ಗಲಭೆಯನ್ನು ನಿಯಂತ್ರಿಸಲು ವಿಫಲವಾದ ಮಣಿಪುರದ ಮುಖ್ಯಮಂತ್ರಿ ಕೂಡಲೇ ರಾಜೀನಾಮೆ ನೀಡಬೇಕು, * ಅಕ್ರಮ ಶಶಸ್ತ್ರ ಹೊಂದಿರುವ ಜನರಿಂದ ಕೂಡಲೇ ಅವುಗಳನ್ನು ವಶಪಡಿಸಿಕೊಳ್ಳಬೇಕು, * ಅಕ್ರಮವಾಗಿ ಅರಣ್ಯದಲ್ಲಿ ಬೆಳೆಯುತ್ತಿರುವ ಗಸಗಸೆ (ಮಾದಕ ವಸ್ತು) ಕೃಷಿಯನ್ನು ತಡೆಯಬೇಕು, * ಅಕ್ರಮ ವಲಸೆ ತಡೆಯಲು ಸೂಕ್ತ ಕ್ರಮ ಕೈಗೊಳ್ಳಬೇಕು, * ಮಣಿಪುರ ಹೆದ್ದಾರಿಯನ್ನು ಸಂಚಾರಕ್ಕೆ ಮುಕ್ತಗೊಳಿಸಿ ಜನರಿಗೆ ಅಗತ್ಯ ಆಹಾರ ವಸ್ತು ಮತ್ತು ಔಷಧ ಸರಬರಾಜು ಮಾಡಬೇಕು, * ಸಂತ್ರಸ್ತ ಕುಟುಂಬಗಳಿಗೆ ಸೂಕ್ತ ಪರಿಹಾರ ನೀಡಬೇಕು, * ಅದಾನಿ ಮತ್ತಿತರ ಕಾರ್ಪೊರೇಟ್ ಕಂಪನಿಗಳಿಗೆ ಗಣಿಗಾರಿಕೆ ನಡೆಸಲು ನೀಡಬೇಕೆಂದಿರುವ 65,000 ಎಕರೆ ಅರಣ್ಯ ಭೂಮಿಯ ಪ್ರಸ್ತಾಪವನ್ನು ಕೈ ಬಿಡಬೇಕು, * ಎನ್ ಎಫ್ ಐ ಡಬ್ಲ್ಯೂ ನಾಯಕಿಯರ ಮೇಲೆ ದಾಖಲಾಗಿರುವ ಎಫ್ಐಆರ್ ಕೂಡಲೇ ರದ್ದುಗೊಳಿಸಬೇಕು, ಎಂದು ಮಣಿಪುರ ಸರ್ಕಾರ ದೇಶದ್ರೋಹ ಮತ್ತು ಇತರೆ ಗಂಭೀರ ಪ್ರಕರಣಗಳನ್ನು ದಾಖಲಿಸಿದ್ದಾರೆ ಇದನ್ನು ಭಾರತ ಕಮ್ಯುನಿಸ್ಟ್ ಪಕ್ಷ ತೀರ್ವವಾಗಿ ಖಂಡಿಸುತ್ತದೆ ಎಂದು ಕಮ್ಯುನಿಸ್ಟ್ ಪಕ್ಷದ ಮುಖಂಡರಾದ ಈರಣ್ಣ ಇವರು ಆಕ್ರೋಶ ವ್ಯಕ್ತಪಡಿಸಿದರು. ಈ ಸಂದರ್ಭದಲ್ಲಿ ಪ್ರಧಾನಮಂತ್ರಿಗಳಿಗೆ ತಹಸೀಲ್ದಾರ್ ರವರ ನೇತೃತ್ವದಲ್ಲಿ ಮಧ್ಯಾಹ್ನಪ್ಪ ಹಾಗೂ ಎಸ್ ಡಿ ಸಿ ಶಿವಕುಮಾರ್ ಇವರುಗಳು ಹೋರಾಟಗಾರರ ಮನವಿ ಪತ್ರವನ್ನು ಸ್ವೀಕರಿಸಿದರು. ಈ ಸಂದರ್ಭದಲ್ಲಿ ಕಮ್ಯುನಿಸ್ಟ್ ಪಕ್ಷದ ತಾಲೂಕು ಪ್ರಧಾನ ಕಾರ್ಯದರ್ಶಿಯಾದ ಕರಿಯಪ್ಪ ಖಜಾಂಚಿ ಪೆನ್ನಪ್ಪ ಅಂಗನವಾಡಿ ಕಾರ್ಯಕರ್ತರ ಅಧ್ಯಕ್ಷರಾದ ಮಹಾಂತಮ್ಮ, ಅನಂತೇಶ, ಓಬಳೇಶ, ಕುಬೇರ, ಕರಿಯಪ್ಪ, ಬಾಬಣ್ಣ ಶಿವಪುರ, ಗಣೇಶ ಶಿವಪುರ, ಮಲ್ಲಿಕಾರ್ಜುನ ಕಿಸಾನ್ ಸಭಾ ಸಹಕಾರದರ್ಶಿ ಹಾಗೂ ಇನ್ನೂ ಇತರರು ಭಾಗವಹಿಸಿದ್ದರು
ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ