ಮಣಿಪುರ ಮಹಿಳೆಯರ ಬೆತ್ತಲೆ ಮೆರವಣಿಗೆ ಖಂಡಿಸಿ ಕವಿಗೋಷ್ಠಿ
ಮಹಿಳಾ ಲೋಕ ಮಾಸ ಪತ್ರಿಕೆಯ ಸಂಪಾದಕಿ ಸಾವಿತ್ರಿ ಮುಜುಮದಾರ ಮಾತನಾಡಿ " ಇಡೀ ದೇಶ ತಲೆತಗ್ಗಿಸುವಂತಹ ಹೇಯ ಕೃತ್ಯ ಮಣಿಪುರದಲ್ಲಿ ನಡೆದಿದ್ಧು, ಮಹಿಳೆಯರೆಲ್ಲರೂ ಖಂಡಿಸಬೇಕಾದ
ಮತ್ತು ಜಾಗೃತಿ ಮೂಡಿಸಬೇಕಾದ ಸಂದರ್ಭವಿದು.ಈ ನಿಟ್ಟಿನಲ್ಲಿ ಈ ಕವಿಗೋಷ್ಠಿ ಒಂದು ಒಳ್ಳೆಯ ಪ್ರಯತ್ನ " ಎಂದರು. ಕವಿಯತ್ರಿಗಳಾದ....ವಿಮಲಾ ಇನಾಮದಾರ, ವಿಜಯಲಕ್ಷ್ಮಿ ಕೊಟಗಿ,ಮಾಲಾ ಬಡಿಗೇರ, ನಿರ್ಮಲಾ ಬಳ್ಳೊಳ್ಳಿ, ಅನ್ನಪೂರ್ಣ ಪದ್ಮಸಾಲಿ, ಸಾವಿತ್ರಿ ಮುಜುಮದಾರ ಹಾಗೂ ಕವಿಗಳಾದ ಡಿ.ರಾಮಣ್ಣಾ ಅಲ್ಮರ್ಸಿಕೇರಿ,ಜಿ.ಎಸ್.ಗೋನಾಳ,ಶಿವರಾಜ ಕೆ.ವಿ. ರಂಗಕರ್ಮಿ ರಂಗನಾಥ ಕೋಳೂರು ಉಮೇಶ ಕಾತರಕಿ ಇವರು ಘಟನೆಯನ್ನು ಕುರಿತು ರಚಿಸಿದ ಕವನಗಳನ್ನು ವಾಚಿಸಿದರು.
ಮಣಿಪುರದ ಘಟನೆಯನ್ನು ಕುರಿತು ವಕೀಲರಾದ ವಿಜಯ ಅಮೃತರಾಜ ಅವರು ಮಾತನಾಡಿದರು.ಶಿಲ್ಪಾ ರಾಜೇಶ್ ಸಸಿಮಠ ಅವರು ಪ್ರಾಸ್ತಾವಿಕವಾಗಿ ಮಾತನಾಡಿದರು. ಕವಿಗೋಷ್ಠಿಯಲ್ಲಿ ವಿಮಲಾ ಇನಾಮದಾರ, ವಿಜಯಲಕ್ಷ್ಮಿ ಕೊಟಗಿ, ಮಾಲಾ ಬಡಿಗೇರ, ನಿರ್ಮಲಾ ಬಳ್ಳೊಳ್ಳಿ, ಅನ್ನಪೂರ್ಣ ಪದ್ಮಸಾಲಿ, ಸಾವಿತ್ರಿ ಮುಜುಮದಾರ ಹಾಗೂ ಕವಿಗಳಾದ ಡಿ.ರಾಮಣ್ಣಾ ಅಲ್ಮರ್ಸಿಕೇರಿ, ಜಿ.ಎಸ್.ಗೋನಾಳ, ಶಿವರಾಜ ಕೆ.ವಿ. ರಂಗಕರ್ಮಿ ರಂಗನಾಥ ಕೋಳೂರು ಉಪಸ್ಥಿತರಿದ್ದರು. ಕಾರ್ಯಕ್ರಮವನ್ನು
ಉಮೇಶ ಬಾಬು ಸುರ್ವೆ ನಡೆಸಿಕೊಟ್ಟರು.
ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ