ರಂದು ಕೃಷಿ ವಿವಿ ಘಟಿಕೋತ್ಸವ -ವಿವಿ ವಿದ್ಯಾರ್ಥಿಗಳು ರಾಷ್ಟ್ರ ಮಟ್ಟದಲ್ಲಿ ಸಾಧನೆ
ರಾಯಚೂರು:ಕೃಷಿ ವಿಜ್ಞಾನಗಳ ವಿಶ್ವವಿದ್ಯಾಲಯದ 12 ನೇ ಘಟಿಕೋತ್ಸವ ಕಾರ್ಯಕ್ರಮವನ್ನು ಜು.28 ರಂದು ಹಮ್ಮಿಕೊಳ್ಳಲಾಗಿದೆ ಎಂದು ಕೃಷಿ ವಿಜ್ಞಾನಗಳ ವಿಶ್ವವಿದ್ಯಾಲಯದ ಕುಲಪತಿಗಳಾದ ಡಾ.ಎಂ.ಹನುಮ0ತಪ್ಪ ಹೇಳಿದರು.
ಅವರಿಂದು ಪತ್ರಿಕಾ ಭವನದಲ್ಲಿ ಸುದ್ದಿಗೋಷ್ಟಿಯಲ್ಲಿ ಮಾತನಾಡಿ ಕೃಷಿ ವಿಜ್ಞಾನಗಳ ವಿಶ್ವವಿದ್ಯಾಲಯ ಸ್ಥಾಪನೆಯಾಗಿ 14 ನೇ ವಸಂತಕ್ಕೆ ಪಾದಾರ್ಪಣೆ ಮಾಡಿದ್ದು ಇದೆ ಜು.28 ರಂದು ಕೃಷಿ ವಿವಿ ಸಭಾಂಗಣದಲ್ಲಿ ಬೆಳಿಗ್ಗೆ 10 ಕ್ಕೆ ಕಾರ್ಯಕ್ರಮ ನಡೆಯಲಿದ್ದು ರಾಜ್ಯದ ಗೌರವಾನ್ವಿತ ರಾಜ್ಯಪಾಲರಾದ ಥಾವರಚಂದ್ ಗೆಹ್ಲೋಟ್ ಅಧ್ಯಕ್ಷತೆ ವಹಿಸಲಿದ್ದು , ಮುಖ್ಯ ಅತಿಥಿಗಳಾಗಿ ಡಿಎಅರ್‌ಇ ಕಾರ್ಯದರ್ಶಿಗಳು ಹಾಗೂ ಐಸಿಎಅರ್ ಮಹಾನಿರ್ದೇಶಕರಾದ ಡಾ.ಹಿಮಾಂಶು ಪಾಠಕ್ ಆಗಮಿಸಲಿದ್ದು ,ರಾಜ್ಯದ ಕೃಷಿ ಸಚಿವರು ಹಾಗೂ ಸಹ ಕುಲಾಧಿಪತಿಗಳಾದ ಎನ್.ಚೆಲುವರಾಯಸ್ವಾಮಿ ಉಪಸ್ಥಿತರಿರಲಿದ್ದಾರೆಂದರು.
ಕೃಷಿ ವಿವಿ ಮುಖ್ಯ ಧ್ಯೇಯ ಶಿಕ್ಷಣ, ಸಂಶೋಧನೆ ಹಾಗೂ ವಿಸ್ತರಣೆಯಾಗಿದ್ದು ನಮ್ಮ ವಿವಿ ವ್ಯಾಪ್ತಿಯಲ್ಲಿ ಕಲ್ಯಾಣ ಕರ್ನಾಟಕದ 7 ಜಿಲ್ಲೆಗಳು ಬರಲಿದ್ದು ಕೃಷಿ ಸ್ನಾತಕ, ಸ್ನಾತಕೋತ್ತರ ಮತ್ತು ಪಿಹೆಚ್‌ಡಿ ತರಗತಿಗಳು ನಡೆಯುತ್ತಿದ್ದು ನಮ್ಮ ವಿವಿ ವಿದ್ಯಾರ್ಥಿಗಳು ರಾಷ್ಟç ಮಟ್ಟದಲ್ಲಿ ತಮ್ಮ ಸಾಧನೆ ಮೆರೆದಿದ್ದಾರೆ ಈ ಬಾರಿಯ ಘಟಿಕೋತ್ಸವದಲ್ಲಿ ೩೩೨ ವಿದ್ಯಾರ್ಥಿಗಳಿಗೆ ಸ್ನಾತಕ, ೧೦೬ ವಿದ್ಯಾರ್ಥಿಗಳಿಗೆ ಸ್ನಾತಕೋತ್ತರ ಹಾಗೂ ೪೨ ವಿದ್ಯಾರ್ಥಿಗಳಿಗೆ ಪಿಹೆಚ್‌ಡಿ ಪದವಿ ಪ್ರದಾನ ಮಾಡಲಾಗುತ್ತಿದ್ದು ಸ್ನಾತಕ ಪದವಿಯಲ್ಲಿ ೨೫ ಚಿನ್ನದ ಪದಕ,ಸ್ನಾತಕೋತ್ತರ ಪದವಿಯಲ್ಲಿ ೧೪ ಚಿನ್ನದ ಪದಕ ಹಾಗೂ ೧೩ ಚಿನ್ನದ ಪದಕಗಳನ್ನು ಪಿಹೆಚ್‌ಡಿ ಪದವಿ ವಿದ್ಯಾರ್ಥಿಗಳಿಗೆ ನೀಡಲಾಗುತ್ತದೆ ಎಂದರು.
೨೦೨೦೨೧ ನೇ ಸಾಲಿನಲ್ಲಿ ೧೩ ವಿವಿಧ ಶೈಕ್ಷಣಿಕ ಹಾಗೂ ಶೈಕ್ಷಣಿಕ ಸಂಶೋಧನಾ ಸಂಸ್ಥೆಗಳೊ0ದಿಗೆ ಒಪ್ಪಂದ ಮಾಡಿಕೊಳ್ಳಲಾಗಿದೆ ಎಂದ ಅವರು ಸಂಶೋಧನಾ ಮತ್ತು ಆವಿಷ್ಕಾರಕ್ಕೆ ಹೆಚ್ಚು ಉತ್ತೇಜನ ನೀಡಲಾಗುತ್ತಿದ್ದು ದ್ರೋಣ ಚಾಲತ ಓಷಧಿ ಸಿಂಪರಣಿ ಪ್ರಯೋಗಿಕ ಪರೀಕೆಯನ್ನು ೬೦ ಹೆಕ್ಟೇರ್ ಪ್ರದೇಶದಲ್ಲಿ ಮಾಡಲಾಗಿದೆ ದ್ರೋಣ ಯಂತ್ರವನ್ನು ರೈತರಿಗೆ ಬಾಡಿಗೆ ಆಧಾರದಲ್ಲಿ ನೀಡಲಾಗುತ್ತದೆ ಎಂದರು.
ನಮ್ಮ ವಿವಿಯಲ್ಲಿ ಹೊಸದಾಗಿ ಅಧಿಕ ಇಳುವರಿ ನೀಡುವ ರಾಗಿ ಹೆಚ್‌ಅರ್ ೧೩ ತಳಿ,ಅಗಸೆ ತಳಿ ಅರ್‌ಎಮ್‌ಎಲ್‌ಎಸ್ ೧೧ ತಳಿ, ಕಡಳೆ ಅರ್ ಜಿ ೨೦೧೬-೧೩೪ ತಳಿ ಬೀಜಗಳನ್ನು ಸಂಶೋಧಿಸಿ ರೈತರ ಉಪಯೋಗಕ್ಕೆ ನೀಡಲಾಗಿದೆ ಎಂದರು.
ವಿವಿಯಲ್ಲಿ ಬಿಟಿ ಹತ್ತಿ ಸಂಶೋಧನೆ ಮಾಡಿಲ್ಲ ಏಕೆ0ದರೆ ಅದಕ್ಕೆ ಹೆಚ್ಚಿನ ಖರ್ಚು ವೆಚ್ಚ ತಗಲುವುದರಿಂದ ವೆಂದ ಅವರು ಸಿರಿ ಧಾನ್ಯ ಸೇರಿದಂತೆ ವಿವಿಧ ಬೆಳೆಗಳ ಬೀಜೋತ್ಪಾದನೆ ಮಾಡಲಾಗಿದೆ ಎಂದರು.
ರೈತರು ಇಳುವರಿ ಹೆಚ್ಚು ಮಾಡಲು ಅಧಿಕ ರಸಗೊಬ್ಬರ ಬಳಕೆ ತಡೆ ಕುರಿತು ಕಾರ್ಯಗಾರ ಮಾಡಲಾಗಿದ್ದು ಹೆಚ್ಚು ಕೀಟನಾಶಕ ಬಳಕೆಯಿಂದ ಬೆಳೆಗಳು, ಹಣ್ಣು ಹಂಪಲುಗಳು ಮೇಲೆ ಪ್ರಭಾವ ಬಗ್ಗೆ ಸಂಶೋಧನೆ ಮಾಡಲಾಗಿದೆ ಎಂದರು.
ಮಾಜಿ ಕುಲಪತಿಗಳಾದ ಬಿ.ವಿ ಪಾಟೀಲ ಪ್ರಕರಣ ನ್ಯಾಯಾಲಯದಲ್ಲಿ ಇರುವುದರಿಂದ ನ್ಯಾಯಾಲಯ ತೀರ್ಪು ನೀಡುತ್ತದೆ ಇದರ ಬಗ್ಗೆ ಹೆಚ್ಚು ವಿಶ್ಲೇಷಣೆ ಸರಿಯಲ್ಲವೆಂದರು.
ಈ ಸಂದರ್ಭದಲ್ಲಿಎಂ.ಜಿ.ಪಾಟೀಲ, ವೀರನಗೌಡ, ಬಿ.ಕೆ.ದೇಸಾಯಿ, ಎಸ್.ಬಿ.ಗೌಡಪ್ಪ, ಗುರುರಾಜ ಸುಂಕದ, ಸತ್ಯನಾರಾಯಣ ಇನ್ನಿತರರು ಇದ್ದರು.
ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ