ಪೋಸ್ಟ್‌ಗಳು

Vachanas ಲೇಬಲ್ ಜೊತೆಗೆ ಪೋಸ್ಟ್‌ಗಳನ್ನು ತೋರಿಸಲಾಗುತ್ತಿದೆ

ದಿನಕ್ಕೊಂದು ವಚನ- ಅಲ್ಲಮ ಪ್ರಭುಗಳ 4ನೆಯ ವಚನ

ಇಮೇಜ್
ನೆಲದ ಮರೆಯ ನಿಧಾನದಂತೆ, ಮುಗಿಲ ಮರೆಯಲಡಗಿದ ಮಿಂಚಿನಂತೆ, ಬಯಲ ಮರೆಯಲಡಗಿದ ಮರೀಚಿಯಂತೆ. ಶಬ್ದರ ಮರೆಯಲಡಗಿದ ನಿಶ್ಯಬ್ದದಂತೆ ಕಂಗಳ ಮರೆಯಲಡಗಿದ ಬೆಳಗಿನಂತೆ- ಗುಹೇಶ್ವರಾ ನಿಮ್ಮ ನಿಲವು ಶರಣರು ದೇವರನ್ನು ತಮ್ಮದೇ ರೂಹುಗಳಲ್ಲಿ ಪ್ರತಿಪಾದಿಸಿರು. ಅಂಗೈಯಲ್ಲಿರುವ ಆತ್ಮಲಿಂಗವೇ ನಿಮ್ಮ ದೇವರು ಎಂದು ಭಕ್ತರಿಗೆ ಹೇಳುವ ಶರಣರು ಆತನ ವಿವರಣೆ ನೀಡುವುದು ಮಾತ್ರ ರೋಚಕ.. ಬಸವಣ್ಣ ಜಗದಗಲ, ಮುಗಿಲಗಲ ಮಿಗೆಯಗಲ ನಿಮ್ಮಗಲ ಪಾತಾಳದಿಂದ ಅತ್ತತ್ತ ನಿಮ್ಮ ಶ್ರೀಚರಣ ಬ್ರಹ್ಮಾಂಡದಿ೦ವೆ ಅತ್ತತ್ತ ನಿಮ್ಮ ಶ್ರೀಮುಕುಟ ಅಗಮ್ಯ ಅಗೋಚರ ಅಪ್ರಚಿಮ ಲಿಂಗವೆ ಕೂಡಲಸ೦ಗಮದೇವಯ್ಯಾ ಎನ್ನ ಕರಸ್ಥಳಕ್ಕೆ ಬಂದು ಚುಳುಕಾದಿರಯ್ಯಾ ಎಂದು ತಮ್ಮ ಆರಾಧ್ಯ ದೈವವನ್ನು ಬಣ್ಣಿಸುತ್ತಾರೋ ಹಾಗೆ ಇಲ್ಲಿ ಅಲ್ಲಮಪ್ರಭುಗಳು ತಮ್ಮ ಗುಹೇಶ್ವರ ಲಿಂಗವ ಬಣ್ಣಿಸಿದ್ದಾರೆ. ಭೂಗತವಾದ ಸಂಪತ್ತಿನ೦ತೆ, ಮುಗಿಲಲ್ಲಿ ಮೋಡದ ಮರೆಯಲಡಗಿದ ಮಿಂಚಿನ೦ತೆ ನೀವು, ಮರುಭೂಮಿಯಲ್ಲಿ ಅಡಗಿದ ಮರೀಚಿಕೆಯಂತೆ ನೀವು, ಶಬ್ದಗಳ ನಡುವಿನ ನಿಶ್ಯಬ್ದಂತೆ ನೀವು, ಕಂಗಳ ಮರೆಯಲಡಗಿದ ಬೆಳಕಿನಂತೆ ನೀವು ಎಂದು ಅಲ್ಲಮ ಪ್ರಭುಗಳು ತಮ್ಮ ಆತ್ಮಲಿಂಗವನ್ನು ಬಣ್ಣಿಸುತ್ತಾರೆ. ಇಲ್ಲಿ ಶಬ್ದದ ನಡುವಿನ ನಿಶ್ಯಬ್ದ ಎಂಬುದು ಪ್ರಶಾಂತತೆ, ವೈಶಾಲ್ಯತೆಯನ್ನು ಪ್ರತಿನಿಧಿಸುತ್ತದೆ. ಇದೇ ರೀತಿ ಕಣ್ಣಿನ ಹಿಂದೆ ಅಡಗಿದ ಬೆಳಕು ಎಂದರೆ ನಮ್ಮ ಕಣ್ಣು ಮುಂದೆ ಬರುವ ವಸ್ತುಗಳ ಮೇಲೆ ಬೆಳಕು ಚೆಲ್ಲಿ ಅವು ಗೋಚರಿಸುವಂತೆ ಮಾಡುವ ಸಾಧನ ಆಗಿದೆ ಎಂಬುದ

ದಿನಕ್ಕೊಂದು ವಚನ-ಬಸವಣ್ಣನವರ 432ನೆಯ ವಚನ

ಇಮೇಜ್
ಕಂದಿದೆನಯ್ಯಾ ಎನ್ನ ನೋಡುವವರಿಲ್ಲದೆ; ಕುಂದಿದೆನಯ್ಯಾ ಎನ್ನ ನುಡಿಸುವವರಿಲ್ಲದೆ; ಡಬವಾದೆನಯ್ಯಾ ಎನ್ನ ತನು, ಮನ, ಧನವ ಬೇಡುವವರಿಲ್ಲದೆ ಕಾಡುವ ಬೇಡುವ ಶರಣರ ತಂದು ಕಾಡಿಸು ಬೇಡಿಸಯ್ಯಾ ಕೂಡಲಸಂಗಮದೇವಾ. ಬಸವಣ್ಣನವರ ಈ ವಚನ ಅಂದಿನ ಕಾಲದಲ್ಲಿ ಇದ್ದ ಸಾಮಾಜಿಕ ಭೇಧ, ಭಾವಗಳನ್ನು ಎತ್ತಿಹಿಡಿಯುತ್ತದೆ. ಮೇಲು ಜಾತಿಗೆ ಸೇರಿದ ಬಸವಣ್ಣನವರನ್ನು ಜನ ನೋಡುತ್ತಿದ್ದ ಪರಿಯನ್ನು ಈ ವಚನದಲ್ಲಿ ತಿಳಿಸಿದ್ದಾರೆ. ನನ್ನನ್ನು ಜನ ನೋಡುತ್ತಿಲ್ಲ, ಮಾತನಾಡಿಸುತ್ತಿಲ್ಲ, ನನ್ನಲ್ಲಿರುವುದನ್ನು ಬೇಡಿ ಕೇಳುವುದಿಲ್ಲ. ಪ್ರೀತಿ, ಮನಸ್ಸು, ಹಣ ಕೇಳುವುದಿಲ್ಲ ಎಂದು ಕೂಡಲಸಂಗನಲ್ಲಿ ಬೇಡುವ ಬಸವಣ್ಣ ಜೊತೆಗೆ ಕಾಡುವ, ಬೇಡುವ ಶರಣರ ತಂದು ಕಾಡಿಸು ಬೇಡಿಸಯ್ಯಾ ಎನ್ನುತ್ತಾರೆ.

ದಿನಕ್ಕೊಂದು ವಚನ:ಬಸವಣ್ಣನವರ 59ನೇ ವಚನ

ಇಮೇಜ್
ಅತ್ತಲಿತ್ತಲು ಹೋಗದಂತೆ ಹೆಳವನ ಮಾಡಯ್ಯಾ, ತಂದೆ; ಸುತ್ತಿಸುಳಿದು ನೋಡದಂತೆ ಅಂಧಕನ ಮಾಡಯ್ಯಾ, ತಂದೆ; ಮತ್ತೊ0ದ ಕೇಳದಂತೆ ಕಿವುಡನ ಮಾಡಯ್ಯಾ, ತಂದೆ; ನಿಮ್ಮ ಶರಣ ಪಾದವಲ್ಲದೆ ಅನ್ಯ ವಿಷಯಕ್ಕೆಳಸದಂತೆ ಇರಿಸು, ಕೂಡಲಸಂಗಮದೇವಾ! ಇದೊ0ದು ಸಾಕಷ್ಟು ಜನಪ್ರಿಯವಾದ ವಚನ. ಹಲವು ವಚನಗಳು ಇದೇ ರೀತಿ ಎಲ್ಲರ ಬಾಯಲ್ಲೂ ಬರುತ್ತವೆ. ಹಾಗೆ ಬರಲು ಪ್ರಮುಖ ಕಾರಣ ಸಿರಿಗೆರೆಯ ಶ್ರೀತರಳಬಾಳು ಬೃಹನ್ಮಠ. ವಿಶೇಷವಾಗಿ ಡಾ. ಶ್ರೀ ಶಿವಮೂರ್ತಿ ಶಿವಾಚಾರ್ಯ ಸ್ವಾಮೀಜಿಗಳು ಕಾರಣ. ಇದರ ಜೊತೆಗೆ ಚಿತ್ರದುರ್ಗದ ಮುರುಘಾ ಮಠದ ಕೊಡುಗೆ ಸಹ ಇದೆ. ವಚನಗಳಿಗೆ ರಾಗ ಸಂಯೋಜಿಸಿ, ಕರಣಾನಂದ ಆಗುವ ರೀತಿ ಗಾಯನ ಮಾಡಿಸಿ, ಪ್ರಸ್ತುತ ಪಡಿಸಿದ ಕಾರಣಕ್ಕೆ ಈ ವಚನಗಳು ಜನರ ಬಾಯಲ್ಲಿ ಗುನುಗುವಂತೆ ಆದವು. ಅದೇನೆ ಇರಲಿ; ಇದೀಗ ಈ ವಚನದ ವಿಚಾರಕ್ಕೆ ಬರೋಣ. ಇದೇನು ಶರಣ ಬಸವಣ್ಣ ಈ ರೀತಿ ನನ್ನ ಕುಂಟನನ್ನು ಮಾಡು, ಕುರುಡನನ್ನಾಗಿಸು, ಕಿವುಡನನ್ನಾಗಿಸು, ನಿಮ್ಮ ಪಾದದಲ್ಲಿರಿಸುವ ಎಂದೆಲ್ಲಾ ಕೇಳಿಕೊಂಡಿದ್ದಾರಲ್ಲ. ಈ ರೀತಿ ಪ್ರಾರ್ಥಿಸುವುದು ತರವಲ್ಲ ಅಲ್ಲವೇ? ಎಂಬ ಪ್ರಶ್ನೆ ಈ ವಚನ ಓದಿದವರಿಗೆ ಮೂಡುತ್ತದೆ. ಆದರೆ, ಬಸವಣ್ಣನವರು ಈ ರೀತಿ ಹೇಳಿದ್ದಲ್ಲ; ಕೆಟ್ಟದ್ದರಿಂದ ದೂರ ಇರಿಸು ನನ್ನನ್ನು ಎನ್ನಲು ಈ ರೀತಿ ಹೇಳಿದ್ದಾರೆ. ಬಸವಣ್ಣನವರ 131ನೇ ವನಚ ಹೇಳುತ್ತದೆಯಲ್ಲಾ. "ಛಲ ಬೇಕು ಶರಣಂಗೆ....." ಅಂತಹುದ್ದೇ ಧಾಟಿಯ ವಚನ ಇದು. ಅಯ್ಯಾ ಕೂಡಲಸಂಗಮದೇವ ನಾನು ಸಿಕ್ಕ ಸಿಕ್ಕ ಕಡೆ

ದಿನಕ್ಕೊಂದು ವಚನ- ಬಸವಣ್ಣನವರ ವಚನ

ಇಮೇಜ್
ಒಲೆ ಹತ್ತಿಯುರಿದೊಡೆ ನಿಲಬುಹುದೆ, ಧರೆ ಹತ್ತಿಯುರಿದೊಡೆ ನಿಲಬಾರದು. ಏರಿ ನೀರುಣ್ಬೊಡೆ, ಬೇಲಿ ಕೆಯ್ಯೆ ಮೋವೊಡೆ, ನಾರಿ ತನ್ನ ಮನೆಯಲ್ಲಿ ಕಳುವೊಡೆ, ತಾಯ ಮೊಲೆವಾಲು ನಂಜಾಗಿ ಕೊಲುವೊಡೆ, ಇನ್ನಾರಿಗೆ ದೂರುವೆ, ಕೂಡಲಸಂಗಮದೇವ ಮನೆಯಲ್ಲಿನ ಒಲೆ ಹೊತ್ತಿ ಉರಿದರೆ ಸಹಿಸಬಹುದು. ಸಹಸಿಲಾಗದು ಎಂದು ದೂರ ಸರಿಯಬಹುದು. ಆದರೆ, ದರೆಯೇ ಹತ್ತಿ ಉರಿದರೆ! ಬಸವಣ್ಣನರು ಈ ವಚನದ ಮೂಲಕ ಸಾಮಾಜಿಕ ಜೀವನದಲ್ಲಿ ಮನುಷ್ಯ ಹೇಗಿರಬೇಕು ಎಂಬುದರ ಕುರಿತು ವಿಶ್ಲೇಷಣೆ ಮಾಡುತ್ತಾರೆ. ವಚನಗಳು ಧಾರ್ಮಿಕ ನೆಲೆಗಟ್ಟಲ್ಲಿ ಮಾತ್ರ ವಿಶ್ಲೇಷಣೆ ಆದರೆ ಅವೂ ಸಹಿತ ಮೌಢ್ಯ ಬಿತ್ತಲು ಎಡೆಮಾಡಿಕೊಡುವ ಸಾಧ್ಯತೆ ಇರುತ್ತದೆ. ಬಸವಣ್ಣ ನನ್ನ ಪ್ರಕಾರ ಇಲ್ಲಿ ಹೇಳಲು ಹೊರಟಿರುವುದು ನಾವೇ ನಮ್ಮ ಸಮಾಜವನ್ನು ಕಟ್ಟಿಕೊಳ್ಳಬೇಕು. ಇಲ್ಲದೇ ಹೋದರೆ ಧರೆಗೆ ಬೆಂಕಿ ಬಿದ್ದಾಗ ನೀರು ಸಂಗ್ರಹಿಸಲೆAದು ಕಟ್ಟೆ ಕಟ್ಟಿದೆಡೆ, ಆ ಕಟ್ಟೆಯೇ ನೀರು ನುಂಗಿದರೆ ಹೇಗೆ? ಇದೇ ರೀತಿ ಹೊಲದ ಬೆಳೆ ಸಂರಕ್ಷಿಸಲು ಬೇಲಿ ಹಾಕಿದರೆ ಅದೇ ಬೇಲಿ ಹೊಲವ ಮೇಯ್ದರೆ ಹೇಗೆ? ಮನೆಯ ಒಡತಿಯೇ ಮನೆಯಲ್ಲಿರುವ ವಸ್ತುಗಳನ್ನು ಕದ್ದರೆ ಏನಾದೀತು? ಹೆತ್ತ ತಾಯಿ ತನ್ನ ಮಗುವಿಗೆ ಕುಡಿಸುವ ಎದೆಹಾಲೇ ನಂಜಾದರೆ ಹೇಗೆ? ಹೀಗೆ ಬಸವಣ್ಣ ಎತ್ತುವ ಈ ಪ್ರಶ್ನೆಗಳಲ್ಲಿ ಬಹುತೇಕ ನಾಶದ ಕುರಿತು ಪ್ರಸ್ತಾಪ ಮಾಡುತ್ತಾರೆ. ಹೊಲದ ಬೆಳೆ ನಾಶ, ನಂಜಾದ ಹಾಲಿಂದ ಮಗುವಿನ ಆರೋಗ್ಯ ನಾಶ, ನೀರು ಸಂಗ್ರಹಿಸುವ ಕಂದಕ ತಾನೇ ನೀರು ಕುಡಿದರೂ ನಾಶ ಎಂದು ಹೇಳ

ದಿನಕ್ಕೊಂದು ವಚನ- ಬಸವಣ್ಣನವರ 346ನೇ ವಚನ

ಇಮೇಜ್
ಚೆನ್ನಯ್ಯನ ಮನೆಯ ದಾಸಿಯ ಮಗನು ಕಕ್ಕಯ್ಯನ ಮನೆಯ ದಾಸಿಯ ಮಗಳು ಇಬವರಿಬ್ಬರು ಹೊಲದಲಿ ಬೆರಣಿಗೆ ಹೋಗಿ ಸಂಗವ ಮಾಡಿದರು ಇವರಿಬ್ಬರಿಗೆ ಹುಟ್ಟಿದ ಮಗ ನಾನು ಕೂಡಲಸಂಗಮದೇವ ಸಾಕ್ಷಿಯಾಗಿ ಬಸವಣ್ಣನವರ ವಿಶಾಲ ಸಮಷ್ಠಿ ಏಕತೆ. ಉಚ್ಛ, ನೀಚ ಎಂಬ ಭೇಧ ಭಾವ ಕಟು ವಿರೋಧಿತನ ಈ ವಚನದಲ್ಲಿ ಪ್ರಾಪ್ತಿ ಆಗುತ್ತದೆ. ಅವರು ಬ್ರಾಹ್ಮಣ ಜಾತಿ ತೊರೆದು ಹೊಸ ಪಥದತ್ತ ನಡೆದರೂ ಕೂಡ ಹಲವು ಅವರನ್ನು ಬ್ರಾಹ್ಮಣ ಕುಲದಲ್ಲಿ ಹುಟ್ಟಿದವರು ಎಂಬ ಕಾರಣಕ್ಕೆ ಗೌರವ ಕೊಡುತ್ತಿರುತ್ತಾರೆ. ಇದನ್ನು ನಿವಾರಿಸಲು ಬಸವಣ್ಣ ಈ ರೀತಿ ಹೇಳುತ್ತಾರೆ. ಮಾದಾರ ಚೆನ್ನೆಯ್ಯ, ಡೋಹರ ಕಕ್ಕಯ್ಯನವರ ಮನೆಯಲ್ಲಿ ಹುಟ್ಟಿದವರಿಗೆ ನಾನು ಹುಟ್ಟಿದೆ ಎನ್ನುವ ಮೂಲಕ ನಾನು ನಿಮ್ನರಲ್ಲಿ ನಿಮ್ನ ಎನ್ನುತ್ತಾರೆ ಬಸವಣ್ಣ.  ಬಹುಶಃ ಬಸವಣ್ಣರಂತಹ ವಿಶಾಲ ಮನೋಭಾವ, ಏಕತೆ ಸಾಧಿಸುವ ಪರಿ ಅರಿತ ಪಂಡಿತರು, ಸಮಾನತೆ ಪ್ರದಿಪಾದಿಸುವ ಆಳ ಚಿಂತನೆ ಮಾಡಿದ ಚಿಂತಕರು ಸಿಗಲಾರರು. ಮಾದಾರ ಚೆನ್ನಯ್ಯನ ಮನೆಯಲ್ಲಿ ಹುಟ್ಟಿದ ಮಗ, ಕಕ್ಕಯ್ಯನ ಮನೆಯಲ್ಲಿ ಹುಟ್ಟಿದ ಮಗಳು ಹೊಲದಲ್ಲಿ ಸಂದಿಸಿದಾಗ ನಾನು ಜನ್ಮತಳೆದೆ. ಸಂದಿಸುವ ವಿಷಯದಲ್ಲೂ ಅವರು ನಿಮ್ನತೆಯನ್ನು ತಪ್ಪಲ್ಲ ಎಂದು ಎತ್ತಿಹಿಡಿಯುವ ಪರಿ ದೊಡ್ಡದು. ನನ್ನ ಈ ನಿಮ್ನ ಹುಟ್ಟಿಗೆ ಕೂಡಲ ಸಂಗಮವನೇ ಸಾಕ್ಷಿ ಎಂದು ಬಸವಣ್ಣ ಹೇಳುತ್ತಾರೆ. ಒಮ್ಮೊಮ್ಮೆ ಈ ವಚನ ದಾರಿ ತಪ್ಪಿಸುವ ರೀತಿಯಲ್ಲೂ ವಿಶ್ಲೇಷಣೆ ಆಗುತ್ತದೆ. ಬಸವಣ್ಣ ನಿಜಕ್ಕೂ ಬ್ರಾಹ್ಮಣ ಕುಲದಲ್ಲಿ ಹುಟ್ಟೇ ಇಲ್ಲ ಎಂ

ದಿನಕ್ಕೊಂದು ವಚನ-ಬಸವಣ್ಣನವರು 66ನೇ ವಚನ

ಇಮೇಜ್
ನೀನೊಲಿದರೆ ಕೊರಡು ಕೊನರುವುದಯ್ಯಾ ನೀನೊಲಿದರೆ ವಿಷವೆ ಅಮೃತವಹುದಯ್ಯಾ ನೀನೊಲಿದರೆ ಸಕಲ ಪಡಿಪದಾರ್ಥ ಇದಿರಲಿರ್ಪುವು, ಕೂಡಲಸಂಗಮದೇವಾ. ನೀನೊಲಿದರೆ ಬರಡು ಹಯನಹುದಯ್ಯಾ ಪಕ್ಕಾ ತಾರ್ಕಿಕ ವಿಚಾರಗಳನ್ನೇ ಮುಂದಿಟ್ಟು ಕ್ರಾಂತಿಮಾಡಿದ ಶರಣರು ಜನರನ್ನು ಏಕಾಏಕಿ ಬದಲಾಯಿಸಲು ಸಾಧ್ಯವಿಲ್ಲ ಎಂಬುದನ್ನು ಅರಿತಿದ್ದಿದವರು. ಇದೇ ಕಾರಣಕ್ಕೆ ಅವರು ದೇವರ ಕಲ್ಪನೆಯನ್ನು ತಮ್ಮದೇ ರೀತಿಯಲ್ಲಿ ಕಟ್ಟಿಕೊಡುತ್ತಾ ಜನರನ್ನು ಸರಿ ದಾರಿಗೆ ತರಲು ಯತ್ನಿಸಿದರು. ಬಸವಣ್ಣನವರು ಈ ವಚನದಲ್ಲಿ ಇದನ್ನೇ ಹೇಳುತ್ತಾರೆ. ಆತ್ಮಲಿಂಗ ಎಂಬ ದೇವರು ಒಲಿದರೆ ಏನು ಬೇಕಿದ್ದರೂ ಆಗುತ್ತದೆ. ಆತ್ಮಲಿಂಗ ಎಂಬ ದೇವರು ಎಂದರೆ ಇಲ್ಲಿ ಎಲ್ಲೋ ಪರಲೋಕದಲ್ಲಿರುವ ದೇವರು ಎಂದರ್ಥ ಅಲ್ಲ. ವಚನಕಾರರ ಕೆಲ ವಚನಗಳು ಪಟ್ಟಭದ್ರರಿಂದ ವಿರೂಪಗೊಂಡ ಕಾರಣ ಅಲ್ಲಲ್ಲಿ ದೇವರು ದಿಂಡರ ಹೆಸರನ್ನು ತಪ್ಪಾಗಿ ಬಳಿಸಿದ ಅನುಭವ ವಚನ ಓದಿದಾಗ ಆಗುತ್ತದೆ. ಇಲ್ಲೂ ಇಂತಹ ಪ್ರಮಾದಕ್ಕೆ ಅವಕಾಶ ಇದೆ. ಇಲ್ಲಿ ಬಸವಣ್ಣ ಹೇಳುವುದು ನೀನು ಒಲಿದರೆ ಕೊರಡು ಕೊನವುದಯ್ಯಾ ಅಂದರೆ ಅರ್ಥ; ನೀನು ಒಲಿದರೆ ಒಣಗಿದ ಮರದ ಕೊಂಬೆ ಸಹ ಜಿಗುರುಬಲ್ಲದು ಎಂದು. ನಮಗೆ, ನಿಮಗೂ ಗೊತ್ತೇ ಇದೆ. ಯಾವುದೇ ಕಾರಣಕ್ಕೆ ಒಮ್ಮೆ ಮರ ಒಣಗಿದರೆ ಮತ್ತೆ ಚಿಗುರದು; ಆದರೆ, ಒಂದು ವೇಳೆ ಕೂಡಲಸಂಗಮದೇವ ಒಲಿದರೆ ಅಂದರೆ ಕೈಯಲ್ಲಿರುವ ಆತ್ಮಲಿಂಗ ಒಲಿದರೆ ಇದು ಸಾಧ್ಯ ಎನ್ನುತ್ತಾರೆ. ಇದೇ ನೀರಿ ಬರಡು ಹಯನಹುದಯ್ಯಾ ಅಂದರೆ ಬರವು ಹಸು ನಮ್ಮ ಗ್ರಾಮೀಣ ಭಾಷೆ

ದಿನಕ್ಕೊಂದು ವಚನ ಬಸವಣ್ಣನವರ 241ನೇ ವಚನ

ಇಮೇಜ್
ಏನಿ ಬಂದಿರಿ, ಹದುಳವಿದ್ದಿರೆ? ಎಂದರೆ ನಿಮ್ಮ ಮೈ ಸಿರಿ ಹಾರಿಹೋಹುದೆ? ಕುಳ್ಳಿರೆಂದರೆ ನೆಲ ಕುಳಿಹೋಹುದೆ? ಕೊಡಲಿಲ್ಲದಿದ್ದರೊಂದು ಗುಣವಿಲ್ಲದಿರ್ದೆಡೆ ಕೆಡಹಿ ಮೂಗ ಕೊಯ್ಯದೆ ಮಾಣ್ಬನೆ ಕೂಡಲಸಂಗದೇವನು? ಮನೆಗೆ ಬಂದವರನ್ನು ಸತ್ಕರಿಸುವುದು ಭಾರತೀಯ ಸಂಪ್ರದಾಯದಲ್ಲಿ ಅವ್ಯಾಹತವಾಗಿ ನಡೆದ ಬಂದಿರುವ ಒಂದು ಶಿಷ್ಟಾಚಾರ. ಮನೆಗೆ ಬಂದವರನ್ನು ಉಪೇಕ್ಷಿಸದೆ ಉಪಚರಿಸಬೇಕು. ಅಹಂಕಾರ, ಐಶ್ವರ್ಯ, ಮದದಿಂದ ವರ್ತಿಸುವುದು ಸಲ್ಲ. ಬಂದವರನ್ನು ಹೇಗಿದ್ದೀರಾ? ಸುಖವಾಗಿರುವಿರಾ? ಎಂದು ಕುಶಲ ವಿಚಾರಿಸುವುದು ನಮ್ಮ ಪದ್ಧತಿ ಎಂದು ಬಸವಣ್ಣನವರು ಹೇಳುತ್ತಾರೆ. ಮನೆಗೆ ಬಂದವರನ್ನು ಕುಳಿತುಕೊಳ್ಳಿ ಎಂದು ಕೇಳುವುದು. ಇದರಿಂದೇನು ನೆಲ ಕುಳಿ ಬೀಳುವುದೆ? ಎಂದು ಬಸವಣ್ಣನವರು ಪ್ರಶ್ನಿಸುತ್ತಾರೆ. ಒಟ್ಟಾರೆ ಇಡೀ ವಚನದಲ್ಲಿ ಬಸವಣ್ಣನವರು ಮನೆಗೆ ಬಂದವರೊಡನೆ ಹೇಗೆ ವರ್ತಿಸಬೇಕು ಎಂಬುದನ್ನು ಬಸವಣ್ಣನವರು ವಿವರಿಸುತ್ತಾರೆ. ಎಲ್ಲರೊಂದಿಗೆ ವಿನಯದೊಂದಿಗೆ ವರ್ತಿಸಬೇಕು. ಪರಸ್ಪರ ಕುಶಲ ವಿಚಾರಿಸಬೇಕು. ಯಾರೇ ಆದರೂ ಅವರ ಅಂತಸ್ತು, ಹಣ, ಜಾತಿ ಆಧಾರದಲ್ಲಿ ಯಾರನ್ನೂ ಸಹಿತ ಕೀಳಾಗಿ ನೋಡಬಾರದು ಎಂದು ಈ ವಚನದಲ್ಲಿ ಹೇಳುತ್ತಾರೆ.

ದಿನಕ್ಕೊಂದು ವಚನ- ಲಿಂಗವಿದ್ದೆಡೆ

ಇಮೇಜ್
 ದಿನಕ್ಕೊಂದು ವಚನ- ಲಿಂಗವಿದ್ದೆಡೆ ಹೊಲೆಯುಂಟೆ ಲಿಂಗವಿದ್ದೆಡೆಯಲ್ಲಿ? ಕುಲವುಂಟೆ ಜಂಗಮವಿದ್ದೆಡೆಯಲ್ಲಿ? ಎಂಜಲುಂಟೆ ಪ್ರಸಾದವಿದ್ದೆಡೆಯಲ್ಲಿ? ಅಪವಿತ್ರದ ನುಡಿಯ ನುಡಿವ ಸೂತಕವೇ ಪಾತಕ! ನಿಷ್ಕಳ ನಿಜೈಕ್ಯ, ತ್ರಿವಿಧನಿರ್ಣಯ ಕೂಡಲ ಸಂಗದೇವಾ, ನಿಮ್ಮ ಶರಣರಿಗಲ್ಲದಿಲ್ಲಾ ಲಿಂಗ ಇದ್ದಲ್ಲಿ ಹೊಲೆಯುಂಟೆ ಎಂಬ ವಚನದ ಮೊದಲ ಸಾಲು ಸಾಕಷ್ಟು ವಿಚಾರಗಳನ್ನು ಹೊರಗೆಡುವುತ್ತದೆ. ಬಸವಣ್ಣ ಸ್ಪೃಶ್ಯ, ಆಸ್ಪೃಶ್ಯ ಎಂಬ ಧರ್ಮದ ಕಟ್ಟಳೆಯನ್ನು ಕಟುವಾಗಿ ವಿರೋಧಿಸಲು ಈ ಮಾತು ಹೇಳುತ್ತಾರೆ. ದೇವರು ಇದ್ದಲ್ಲಿ ಹೊಲೆಯ ಎಂಬ ಮಾತು ಯಾಕೆ? ಲಿಂಗ ಎಂಬುದು ಆತ್ಮಲಿಂಗ ಅದನ್ನು ಧರಿಸಿದೊಡೆ ಹೊಲೆಯತ್ವ ಇರದು ಎಂಬ ಮಾತನ್ನು ಹೇಳುತ್ತಾರೆ. ಜಂಗಮವಿದ್ದೆಡೆ ಕುಲವೆಲ್ಲಿಂದ ಬರುತ್ತದೆ ಎಂಬ ಮಾತು ಸಹ ಇದೇ ಧಾಟಿಯದ್ದು. ಇಲ್ಲಿ ಜಂಗಮ ಎಂದರೆ ತಪ್ಪು ಅರ್ಥಮಾಡಿಕೊಳ್ಳುವ ಅವಕಾಶ ಹೆಚ್ಚಿರುತ್ತದೆ. ಜಂಗಮ ಎಂಬುದು ನಿತ್ಯ ನಿರಂತರ ಬದಲಾವಣೆಗೆ ಒಪ್ಪಿಕೊಳ್ಳುವ ಮನಸ್ಥಿತಿ. ಶಿವಯೋಗ ಅನುಸರಣೆ ವೇಳೆ ದಾಸೋಹ ಅರ್ಪಿಸುವುದಕ್ಕೂ ಜಂಗಮ ಎನ್ನುತ್ತಾರೆ. ಇಂತಹ ಜಂಗಮತ್ವ ಇರುವವರ ಮಧ್ಯೆ ಕುಲ ಶ್ರೇಷ್ಠತೆ ಯಾಕೆ? ಎಂದು ಬಸವಣ್ಣ ಎರಡನೆಯ ಸಾಲಲ್ಲಿ ಪ್ರಶ್ನಿಸುತ್ತಾರೆ. ಪ್ರಸಾದದ ವಿಷಯದಲ್ಲೂ ಮಡಿವಂತಿಕೆಯನ್ನು ಬಸವಣ್ಣ ಖಂಡಿಸುತ್ತಾರೆ. ಅನ್ನಕ್ಕೆ ಎಂಜಲು ಉಂಟೆ. ಪ್ರಸಾದ ಎಂಬುದು ಲಿಂಗಕ್ಕೆ ಅರ್ಪಿಸುವುದಾದರೆ ಅದರ ವಿಷಯದಲ್ಲಿ ಯಾಕೆ ಮಡಿವಂತಿಕೆ ಎಂಬುದನ್ನು ಬಸವಣ್ಣ ಪ್ರಶ್ನಿಸುತ್ತಾರೆ. ಸೂತಕ

ದಿನಕ್ಕೊಂದು ವಚನ- ಬಸವಣ್ಣನವರ 56ನೆಯ ವಚನ

ಇಮೇಜ್
 ದಿನಕ್ಕೊಂದು ವಚನ- ಬಸವಣ್ಣನವರ 56ನೆಯ ವಚನ ಅಯ್ಯಾ, ಅಯ್ಯಾ ಎಂದು ಕರೆಯುತ್ತಲಿದ್ದೇನೆ; ಅಯ್ಯಾ ಅಯ್ಯಾ ಎಂದೊರಲುತ್ತಲಿದ್ದೇನೆ; ಓ ಎನ್ನಲಾಗದೆ, ಅಯ್ಯಾ? ಆಗಳೂ ನಿಮ್ಮುವ ಕರೆಯುತಲಿದ್ದೇನೆ; ಮೌನವೇ ಕೂಡಲ ಸಂಗಮದೇವ? ಬಸವಾದಿ ಶರಣರ ತಾರ್ಕಿಕ ಪ್ರತಿಪಾದನೆಯನ್ನು ಅಲುಗಾಡಿಸುವ ಉದ್ದೇಶದಿಂದಲೇ ಈ ವಚನ ಕ್ರಾಂತಿಯನ್ನು 4 ಶತಮಾನಗಳ ಕಾಲ ಮುಚ್ಚಿಡಲಾಗಿತ್ತು. ಲಿಂಗಾಯತ ಸಮಾಜಕ್ಕೆ ಬಸವ ಎಂದರೆ ಶಿವನ ಮುಂದಿರುವ ನಂದಿ ಎಂಬಂತೆ ಬಿಂಬಿಸಲಾಗಿತ್ತು. ಇದರ ಜೊತೆಗೆ ವಚನಗಳನ್ನು ತಿದ್ದುವ, ಬದಲಾಯಿಸುವ ಕಾರ್ಯ ಸಹ ನಡೆದಿತ್ತು ಎಂಬ ಮಾತುಗಳು ಪದೇ ಪದೇ ಕೇಳಿಬರುತ್ತವೆ. ಅಂತಹುದ್ದೆ ನಡೆದಿರಬಹುದು ಎಂಬ ಅಂಶಕ್ಕೆ ಒತ್ತುಕೊಡುವ ಹಲವು ವಚನಗಳ ಪೈಕಿ ಈ ವಚನವೂ ಒಂದಿರಬಹುದೇ? ಎಂಬ ಪ್ರಶ್ನೆ ಮೂಡುತ್ತದೆ. ಈ ವಚನದ ಪ್ರಕಾರ ಬಸವಣ್ಣನವರು ಕೂಡಲಸಂಗಮದೇವರನ್ನು ಕರೆಯುತ್ತಾರೆ. ಈ ಭೂಮಿಗೆ ನನ್ನನ್ನು ಕರೆತಂದವ ನೀನು. ಇಲ್ಲಿಯವರೆಗೆ ನೀನು ನಿನ್ನ ಮುಖವನ್ನೂ ಸಹ ನನಗೆ ತೋರಿಸಿಲ್ಲ. ನಾನು ಬಹು ಎತ್ತರದಿಂದ ನೆಲಕ್ಕೆ ಬಿದ್ದು ನೋವಿಗಿಂದ ನೀವು ಕಾಣುತ್ತಿಲ್ಲ ಎಂಬ ಕಾರಣಕ್ಕೆ ಅಯ್ಯಾ ಅಯ್ಯಾ ಎಂದು ಕರೆಯುತ್ತಿದ್ದೇನೆ. ನೀವು ಮಾತ್ರ ನನ್ನ ದನಿಗೆ ಪ್ರತಿಕ್ರಿಯೆ ನೀಡುತ್ತಿಲ್ಲ. ಬಿಡುವಿಲ್ಲದ ಕೆಲಸ ಇದ್ದರೆ ಒಮ್ಮೆ ಅಲ್ಲಿಂದಲೇ ಓಗುಟ್ಟುಬಿಡು ಎಂದು ಬಸವಣ್ಣ ಈ ವಚನದಲ್ಲಿ ಪರಿಪರಿಯಾಗಿ ಬೇಡುತ್ತಾರೆ.

ದಿನಕ್ಕೊಂದು ವಚನ-ವೇದಕ್ಕೆ ಒರೆಯ ಕಟ್ಟುವೆ-ಬಸವಣ್ಣನವರ 717ನೆಯ ವಚನ

ಇಮೇಜ್
ವೇದಕ್ಕೆ ಒರೆಯ ಕಟ್ಟುವೆ, ಶಾಸ್ತ್ರಕ್ಕೆ ನಿಗವಳನಿಕ್ಕುವೆ ತರ್ಕದ ಬೆನ್ನ ಬಾರನೆತ್ತುವೆ,ಆಗಮದ ಮೂಗ ಕೊಯಿವೆ, ನೋಡಯ್ಯಾ ಮಹಾದಾನಿ ಕೂಡಲ ಸಂಗಮದೇವಾ,ಮಾದಾರ ಚೆನ್ನಯ್ಯನ ಮನೆಯ ಮಗ ನಾನಾಯ್ಯಾ ವೇದೋಪನಿಷತ್ತುಗಳ ಕುರಿತು ಕಟು ಟೀಕೆಮಾಡಿರುವ ಬಸವಣ್ಣನವರ ೭೧೭ನೆಯ ವಚನ ಇದು. ಇದರ ಅರ್ಥ ವೇದಶಾಸ್ತ್ರಗಳನ್ನು ಅತಿಯಾಗಿ ಬಿಂಬಿಸಲಾಗಿದೆ. ದೇವರಿಗಿಂದ ವೇದಶಾಸ್ತ್ರಗಳು ದೊಡ್ಡವು ಎಂಬಂತೆ ಜನ ನೆದುಕೊಳ್ಳುತ್ತಿದ್ಧಾರೆ. ಇದನ್ನೇ ಬಸವಣ್ಣನವರು ಟೀಕಿಸುತ್ತಾರೆ. ಜೊತೆಗೆ ವರ್ಣ ವ್ಯವಸ್ಥೆಯನ್ನು ಟೀಕಿಸಲು ಜಾತಿಯಲ್ಲಿ ಅತಿ ಕೀಳು ಎಂದು ಅಂದು ಪರಿಗಣಿಸಲ್ಪಟ್ಟ ಮಾದಾರ ಚೆನ್ನಯ್ಯನ ಮಗ ಎಂದು ಹೇಳಿಕೊಳ್ಳಲು ನನಗೆ ಹೆಮ್ಮೆ ಇದೆ ಎಂಬಂತೆ ಬಸವಣ್ಣನವರು ಹೇಳುತ್ತಾರೆ. ಮನುಷ್ಯ ಮನುಷ್ಯನನ್ನು ಕೀಳಾಗಿ ನೋಡುವ ಪರಿ ಬೆಳೆಸಿಕೊಟ್ಟ ವೇದಗಳನ್ನು ಒರೆಕಟ್ಟುವೆ ಎಂದು ಬಸವಣ್ಣ ಹೇಳುವರು. ಇದರರ್ಥ ನಾನು ಅವಕ್ಕೆ ಬೆಲೆ ಕೊಡಲಾರೆ ಎಂಬುದಾಗಿದೆ. ಇನ್ನು ಶಾಸ್ತ್ರಗಳನ್ನು ಕಟ್ಟಿಹಾಕುವೆ ಎನ್ನುವ ಬಸವಣ್ಣ ತರ್ಕದ ಬೆನ್ನ ಮೇಲೆ ಬಾರುಕೋಲಿನ ಪೆಟ್ಟು ನೀಡುವೆ ಎನ್ನುತ್ತಾರೆ. ವೇದಗಳ ಮೇಲೆ ಒರೆಕಟ್ಟುವೆ ಎಂದರೆ ಮೊನಚಾದ ಕತ್ತಿ ಮಸೆಯುವೆ ಎಂತಲೂ ಅರ್ಥ ಬರುತ್ತದೆ. ಇನ್ನು ಇದರ ಜೊತೆಗೆ ಆಗಮದ ಮೂಗು ಕೊಯ್ಯುವ ಮಾತನ್ನೂ ಬಸವಣ್ಣ ಇಲ್ಲಿ ಹೇಳುತ್ತಾರೆ. ಒಟ್ಟಾರೆ ಈ ವಚನದಲ್ಲಿ ಬಸವಣ್ಣನವರು ವೇದ, ಶಾಸ್ತ್ರ, ಆಗಮಗಳು ಮನುಷ್ಯನ ಪ್ರೀತಿಗೆ ಅಡ್ಡಿಯಾಗುವುದಾದರೆ ಅವನ್ನು ನಾನು ಗಾಳಿಗೆ ತೂರುವ

ವಚನ ವಿಶ್ಲೇಷಣೆ- ದಿನಕ್ಕೊಂದು ವಚನ

ಇಮೇಜ್
12ನೆಯ ಶತಮಾನದಲ್ಲಿ ಬದುಕು ಬಾಳಿ, ಸಾಮಾಜಿಕ ಕ್ರಾಂತಿ ಮಾಡಿದ ಬಸವಾದಿ ಶರಣರು ನಮ್ಮ ಕರ್ನಾಟಕವನ್ನು ಇಡೀ ಪ್ರಪಂಚಕ್ಕೆ ಭಿನ್ನ ಎಂಬುದಾಗಿ ತೋರಿಸಿಕೊಟ್ಟಿದ್ದಾರೆ. ಅವರ ಜೀವನ, ಸಾಧನೆ, ಗುರಿ, ಉದ್ದೇಶ, ವಚನಗಳು ನಿಜಕ್ಕೂ ನಮ್ಮ ಮುಂದಿನ ಸಾಮಾಜಿಕ ಜೀವನ ಕಟ್ಟಿಕೊಳ್ಳಲು ದಾರಿದೀಪ. ಆದರೆ, ಅಂತಹವರ ಜೀವನ ಕುರಿತು ಹೆಚ್ಚು ಓದಲು ಹೋಗಿಲ್ಲ. ಇಂದು ನಾವು ಸಾಕ್ಷರತೆ ಬಗ್ಗೆ ಮಾತನಾಡುತ್ತೇವೆ. ಆದರೆ, 12ನೇ ಶತಮಾನದಲ್ಲಿಯೇ ನಮ್ಮ ಕನ್ನಡ ದೇಶದ ನಾಗರಿಕರು ಎಷ್ಟು ಪ್ರಬುದ್ಧರು ಎಂಬುದಕ್ಕೆ ಬಸವಾದಿ ಶರಣರ ಚಿಂತನೆಗಳು ಸಾಕು ಎನ್ನಿಸುತ್ತದೆ. ಎಲ್ಲಾ ಕುಲ, ಜಾತಿಗರು ಒಟ್ಟಾಗಿ ಕಟ್ಟಿದ ಅನುಭವ ಮಂಟದಲ್ಲಿನ ಅನುಭಾವವೇ ವಚನಗಳು. ಅಂತಹ ವಚನಗಳನ್ನು ಪರಿಚಯಿಸುವ ಕಾರ್ಯವನ್ನು ನಮ್ಮ ಪ್ರಜಾಸಾಕ್ಷಿ ತಂಡ ಮಾಡಲಿದೆ. ಬಸವಣ್ಣನವರ ಮೊದಲ ವನಚದೊಂದಿಗೆ ಈ ಕಾರ್ಯ ಆರಂಭ ಆಗಲಿದೆ. ದಿನಕ್ಕೊಂದು ವಚನ ನಿಮ್ಮ ಮುಂದೆ ಅರ್ಥ ಸಹಿತ ಇರಲಿದೆ. ಉದಕದೊಳಗೆ ಬಚ್ಚಿಟ್ಟ ಬಯ್ಕೆಯ ಕಿಚ್ಚಿನಂತಿದ್ದಿತು ಸಸಿಯೊಳಗಣ ರಸದ ರುಚಿಯಂತಿದ್ದಿತ್ತು ನನೆಯೊಳಗಳ ಪರಿಮಳದಂತಿದ್ದಿತ್ತು ನಿಲುವು ಕೂಡಲಸಂಗಮದೇವಾ ಕನ್ಯೆಯ ಸ್ನೇಹದಂತಿದ್ದಿತ್ತು ಉದಕದೊಳಗೆ ಬಚ್ಚಿಟ್ಟ ಬಯ್ಕೆಯ ಕಿಚ್ಚು ಅಂದರೆ ಬೆಂಕಿ ಹಾಕಿ ಕಾಯಿಸಿದ ನೀರಿನಲ್ಲಿರುವ ಶಾಖ. ಇನ್ನು ವಿವರವಾಗಿ ಹೇಳುವುದಾದರೆ ಕಾದ ನೀರಿನಲ್ಲಿ ಕಿಚ್ಚು ಬಚ್ಚಿಟ್ಟುಕೊಂಡಂತೆ. ಸಸಿಯೊಳಗಣ ರಸದ ರುಚಿಯಂತೆ ಅಂದರೆ ನಮ್ಮಲ್ಲಿರುವ ಹಲವು ಮರ, ಗಿಡ ಹಣ್ಣು ಕೊಡ