ದಿನಕ್ಕೊಂದು ವಚನ- ಅಲ್ಲಮ ಪ್ರಭುಗಳ 4ನೆಯ ವಚನ


ನೆಲದ ಮರೆಯ ನಿಧಾನದಂತೆ,
ಮುಗಿಲ ಮರೆಯಲಡಗಿದ ಮಿಂಚಿನಂತೆ,
ಬಯಲ ಮರೆಯಲಡಗಿದ ಮರೀಚಿಯಂತೆ.
ಶಬ್ದರ ಮರೆಯಲಡಗಿದ ನಿಶ್ಯಬ್ದದಂತೆ
ಕಂಗಳ ಮರೆಯಲಡಗಿದ ಬೆಳಗಿನಂತೆ-
ಗುಹೇಶ್ವರಾ ನಿಮ್ಮ ನಿಲವು

ಶರಣರು ದೇವರನ್ನು ತಮ್ಮದೇ ರೂಹುಗಳಲ್ಲಿ ಪ್ರತಿಪಾದಿಸಿರು. ಅಂಗೈಯಲ್ಲಿರುವ ಆತ್ಮಲಿಂಗವೇ ನಿಮ್ಮ ದೇವರು ಎಂದು ಭಕ್ತರಿಗೆ ಹೇಳುವ ಶರಣರು ಆತನ ವಿವರಣೆ ನೀಡುವುದು ಮಾತ್ರ ರೋಚಕ..

ಬಸವಣ್ಣ ಜಗದಗಲ, ಮುಗಿಲಗಲ ಮಿಗೆಯಗಲ ನಿಮ್ಮಗಲ

ಪಾತಾಳದಿಂದ ಅತ್ತತ್ತ ನಿಮ್ಮ ಶ್ರೀಚರಣ

ಬ್ರಹ್ಮಾಂಡದಿ೦ವೆ ಅತ್ತತ್ತ ನಿಮ್ಮ ಶ್ರೀಮುಕುಟ

ಅಗಮ್ಯ ಅಗೋಚರ ಅಪ್ರಚಿಮ ಲಿಂಗವೆ

ಕೂಡಲಸ೦ಗಮದೇವಯ್ಯಾ

ಎನ್ನ ಕರಸ್ಥಳಕ್ಕೆ ಬಂದು ಚುಳುಕಾದಿರಯ್ಯಾ

ಎಂದು ತಮ್ಮ ಆರಾಧ್ಯ ದೈವವನ್ನು ಬಣ್ಣಿಸುತ್ತಾರೋ ಹಾಗೆ ಇಲ್ಲಿ ಅಲ್ಲಮಪ್ರಭುಗಳು ತಮ್ಮ ಗುಹೇಶ್ವರ ಲಿಂಗವ ಬಣ್ಣಿಸಿದ್ದಾರೆ.

ಭೂಗತವಾದ ಸಂಪತ್ತಿನ೦ತೆ, ಮುಗಿಲಲ್ಲಿ ಮೋಡದ ಮರೆಯಲಡಗಿದ ಮಿಂಚಿನ೦ತೆ ನೀವು, ಮರುಭೂಮಿಯಲ್ಲಿ ಅಡಗಿದ ಮರೀಚಿಕೆಯಂತೆ ನೀವು, ಶಬ್ದಗಳ ನಡುವಿನ ನಿಶ್ಯಬ್ದಂತೆ ನೀವು, ಕಂಗಳ ಮರೆಯಲಡಗಿದ ಬೆಳಕಿನಂತೆ ನೀವು ಎಂದು ಅಲ್ಲಮ ಪ್ರಭುಗಳು ತಮ್ಮ ಆತ್ಮಲಿಂಗವನ್ನು ಬಣ್ಣಿಸುತ್ತಾರೆ.

ಇಲ್ಲಿ ಶಬ್ದದ ನಡುವಿನ ನಿಶ್ಯಬ್ದ ಎಂಬುದು ಪ್ರಶಾಂತತೆ, ವೈಶಾಲ್ಯತೆಯನ್ನು ಪ್ರತಿನಿಧಿಸುತ್ತದೆ. ಇದೇ ರೀತಿ ಕಣ್ಣಿನ ಹಿಂದೆ ಅಡಗಿದ ಬೆಳಕು ಎಂದರೆ ನಮ್ಮ ಕಣ್ಣು ಮುಂದೆ ಬರುವ ವಸ್ತುಗಳ ಮೇಲೆ ಬೆಳಕು ಚೆಲ್ಲಿ ಅವು ಗೋಚರಿಸುವಂತೆ ಮಾಡುವ ಸಾಧನ ಆಗಿದೆ ಎಂಬುದು ಇದರ ತಾತ್ಪರ್ಯ.

ಕಾಮೆಂಟ್‌ಗಳು

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

ಕ್ರಿಕೆಟ್ ಬೆಟ್ಟಿಂಗ್ ದಂಧೆಕೋರರ ಎಡೆಮುರಿ ಕಟ್ಟಿದ : ಪಿಎಸ್ಐ ಗೀತಾಂಜಲಿ ಶಿಂಧೆ

ಮಲೆನಾಡಲ್ಲಿ ಮಳೆ:ಭದ್ರಾ ಒಳ ಹರಿವು ಹೆಚ್ಚಳ

ಕೊಟ್ಟೂರು ಪೊಲೀಸ್ ಠಾಣೆಗೆ ಮೊದಲ ಬಾರಿಗೆ ಮಹಿಳಾ ಪಿಎಸ್ಐ ಗೀತಾಂಜಲಿ ಶಿಂಧೆ