ಇಂದಿಗೂ ಗುಲಾಮಗಿರಿ ಹೇಗಿದೆ; ಅಂಬೇಡ್ಕರ್ ಹೇಳ್ತಾರೆ ಓದಿ!
ಅಂಬೇಡ್ಕರ್ ಬಗ್ಗೆ ನಮಗೆ ತಿಳಿಸಿದ್ದು ಅತಿ ಕಡಮೆ. ಅವರನ್ನು ಓರ್ವ ಸಂವಿಧಾನ ಶಿಲ್ಪಿ ಅಂತಲೂ ಓರ್ವ ದಲಿತ ನಾಯಕ ಆಂತಲೂ ಮಾತ್ರ ಹೇಳಿದ್ದುಂಟು. ಅದರಾಚೆ ಅಂಬೇಡ್ಕರ್ ಇದ್ದಾರೆ. ಅವರೊಬ್ಬ ಆರ್ಥಿಕ ತಜ್ಞ, ಸಾಮಾಜಿಕ ಚಿಂತಕ, ಜಗತ್ತಿನ ಶ್ರೇಷ್ಠ ಮಾನವತಾವಾದಿಗಳ ಸಾಲಿನಲ್ಲಿ ನಿಲ್ಲಬಲ್ಲ ಮಹಾನ್ ವಿಶ್ವ ನಾಯಕ. ಅವರ ಚಿಂತನೆಯನ್ನು ಆಳವಾಗಿ ತಿಳಿಸುವ ಒಂದು ಸಣ್ಣ ಯತ್ನ ಇದು. ಅವರ ಬದುಕು ಮತ್ತು ಬರಹದ ಕುರಿತು ಸರಳೀಕರಿಸಿದ ಲೇಖನಗಳನ್ನು ಇನಿದಿಂದ ನಿಯಮಿತವಾಗಿ ಪ್ರಕಟಿಸುತ್ತೇವೆ. ಓದಿ ಇತರರಿಗೆ ಹಂಚಿ.
``ಒಬ್ಬ ಮನುಷ್ಯನು ಯಾವುದೇ ಉದ್ಯೋಗವನ್ನು ಆಯ್ದುಕೊಂಡು ಮುಂದುವರಿಯಲು
ಸ್ವತಂತ್ರನಿರಬಹುದು.... ಆದರೂ ಅವನಿಗೆ ಉದ್ಯೋಗದಲ್ಲಿ ಭದ್ರತೆಯಿಲ್ಲದಂತೆ ಮಾಡಿದರೆ
ದೈಹಿಕ ಮತ್ತು ಮಾನಸಿಕ ಗುಲಾಮಗಿರಿಗೆ ಬಲಿಯಾಗುತ್ತಾನೆ. ಸ್ವಾತಂತ್ರ್ಯದ ತಿರುಳನ್ನೇ
ಅರ್ಥಮಾಡಿಕೊಳ್ಳಲು ಅವನು ಅಸಮರ್ಥನಾಗುತ್ತಾನೆ. ನಾಳಿನ ಬಗೆಗೆ ನಿರಂತರ ಕಳವಳ,
ಬರಲಿರುವ ಆಪತ್ತಿನ ಬಗೆಗೆ ಬೀತಿ, ತುಂಬಿದ ಉದ್ವೇಗ, ಸುಖ ಸಂತೋಷಗಳಿಗಾಗಿ
ನಿರಂತರ ಹುಡುಕಾಟವಿದ್ದರೂ ಅದು ತಪ್ಪಿಸಿಕೊಳ್ಳುವುದು; ಇದೆಲ್ಲ ಏನನ್ನು ಸೂಚಿಸುತ್ತಿದೆ
ಎಂದರೆ - ಆರ್ಥಿಕ ¨ಭದ್ರತೆಯಿಲ್ಲದ ಸ್ವಾತಂತ್ರ್ಯಕ್ಕೆ ಯಾವುದೇ ಬೆಲೆಯಿಲ್ಲ. ಮನುಷ್ಯರು
ಸ್ವತಂತರಿರಬಹುದು; ಆದರೂ ಅವರು ಸ್ವಾತಂತ್ರ್ಯದ ಗುರಿ ಸಾಧಿಸಲು ಅಶಕ್ತರಾಗಿಯೇ
ಉಳಿದುಬಿಡಬಹುದು.''
ಅಂಬೇಡ್ಕರ್‌ರ ಈ ಮಾತುಗಳು ಮುದ್ರಣ ಆಗಿರುವುದು ಅಂಬೇಡ್ಕರ್ ಬರಹ ಮತ್ತು ಭಾಷಣಗಳು ಭಾಗ-3ರ ಪಿಡಿಎಫ್ ಆವೃತ್ತಿಯ 64ನೆಯ ಪುಟದಲ್ಲಿ..
ಸಮಾಜದಲ್ಲಿ ಇಂದಿಗೂ ಅದು ಹೇಗೆ ಶೂದ್ರರನ್ನು ಗುಲಾಮಗಿರಿಯಲ್ಲಿಯೇ ಇಟ್ಟಿದ್ದಾರೆ ಎಂಬುದನ್ನು ಇದನ್ನು ಅರಿತರೆ ಸಾಕು.
ಇಂದು ಯಾವುದೇ ರಂಗ, ವಲಯಕ್ಕೆ ಹೋಗಿ ಮೇಲು ಸ್ತರದಲ್ಲಿ ಸಿಗುವುದು ಬಹುತೇಕ ಮೇಲ್ಜಾತಿಗರೇ. ಅದಾದ ಬಳಿಕ ಬರುವವರು ಕೆಳಜಾತಿಯವರು. ಉದಾಹರಣೆಗೆ ಮಾರಾಟ ವಲಯಕ್ಕೆ ಬರೋಣ. ಯಾವುದೇ ಕಂಪನಿಯ ಅಥವಾ ಉತ್ಪನ್ನಗಳ ಮಾರಾಟ ವಲಯದಲ್ಲಿ ಗಮನಿಸಿದರೂ ಬಹುತೇಕ ಮೇಲು ಸ್ತರದಲ್ಲಿ ಅಂದರೆ ವಿಪಿ, ಸ್ಟೇಟ್ ಹೆಡ್, ಜಿಎಂ, ಎಜಿಎಂ, ಎಚ್‌ಆರ್ ಹೆಡ್ ಹೀಗೆ ಎಲ್ಲಾ ಕಡೆ ಗಮನಿಸಿ ನೋಡಿ ಬಹುತೇಕ ಮೇಲ್ಜಾತಿಗರೇ; ಅದರಲ್ಲೂ ಬ್ರಾಹ್ಮಣರೇ ತುಂಬಿ ತುಳುಕುತ್ತಾರೆ. ಮಾಧ್ಯಮ ಕ್ಷೇತ್ರದಲ್ಲಿ ಅವರ ಅವರ ನಡುವೆಯೇ ತಾರತಮ್ಯ ಇವೆ.
ಇವರ ಕೆಳಗೆ ಬರುವ ಕೆಳ ಜಾತಿಗರಿಗೆ ಇವರು ನಿರಂತರ ಕಿರುಕುಳ ಕೊಡುತ್ತಿರುತ್ತಾರೆ. ಟಾರ್ಗೆಟ್, ಟರ್ನ್ ಓವರ್ ಹೀಗೆ ಏನೇನೋ ಹೇಳುತ್ತಲೇ ಈ ಮೇಲಾಧಿಕಾರಿಗಳು ಕೆಳ ಸ್ತರದಲ್ಲಿ ಇರುವವರನ್ನು ಸದಾ ಭಯದಲ್ಲಿ ಇರಿಸಿರುತ್ತಾರೆ. ಇದೇ ಕಾರಣಕ್ಕೆ ಬಹುತೇಕ ಮಾರಾಟ ವಲಯದಲ್ಲಿರುವ ಕೆಳ ಸ್ತರದ ಉದ್ಯೋಗಿಗಳು ನಾನಾ ಚಟಗಳಿಗೆ ಬಲಿಯಾಗುತ್ತಾರೆ. ಹಾಗೂ ಹೀಗು ಒಂದಿಷ್ಟು ಸಾಧನೆ ಮಾಡಿ ಮೇಲು ಸ್ತರಕ್ಕೆ ಬಂದರೆ ಅಲ್ಲಿ ಸಹ ಕೆಲಸಗಾರರಿಂದಲೇ ಕಿರುಕುಳ ಇರುತ್ತದೆ. ಇದನ್ನೇ ಅಂಬೇಡ್ಕರ್ ಮಾನಸಿಕ ಗುಲಾಮಗಿರಿ ಎಂದು ಹೇಳುತ್ತಾರೆ.
ಮನು ಸ್ಮೃತಿಯ 8ನೇ ಅಧ್ಯಾಯ 121 ಶ್ಲೋಕದ ಪ್ರಕಾರ
``ಬಾಹ್ಮಣ ಸೇವೆಯಿಂದ ಜೀವಿಸಲು ಸಾಧ್ಯವಾಗದಿದ್ದಾಗ, ಶೂದ್ರನು ಉದ್ಯೋಗಕ್ಕಾಗಿ ಕ್ಷತಿಯನಲ್ಲಿ ಸೇವೆ ಮಾಡಬಹುದು. ಅಥವಾ ಒಬ್ಬ ಶೀಮಂತ ವೈಶ್ಯನಲ್ಲಿ ಸೇವಾವೃತ್ತಿ ಮಾಡಿಯೂ ಆತ ಜೀವನ ಮಾಡಬಹುದು.''
8-122 ಪ್ರಕಾರ ``ಆದರೆ ಒಬ್ಬ ಶೂದನು ಬಾ ್ರ ಹ್ಮಣನಲ್ಲೇ ಸೇವಾವೃತ್ತಿ ಕೈಗೊಳ್ಳಲಿ.....'' ಎಂದು ಹೇಳುವ ಮನು ಶೂದ್ರನು ತನ್ನ ಅಪೇಕ್ಷೆಯಂತೆ ನಡೆದುಕೊಳ್ಳಲು ಅವಕಾಶ ಇಲ್ಲ ಎಂದು ಪ್ರತಿಪಾದಿಸುತ್ತಾನೆ.
ಅಷ್ಟೇ ಅಲ್ಲ ಇನ್ನೂ ಒಂದು ಹೆಜ್ಜೆ ಮುಂದೆ ಹೋಗಿ ಶೂದ್ರನು ತನಗೆ ವಹಿಸಲಾದ ಕೆಲಸವನ್ನು ತಪ್ಪಿಸಿಕೊಳ್ಳುವಂತಿಲ್ಲವೆಂದು ಸ್ಪಷ್ಟಪಡಿಸುತ್ತಾನೆ.
ರಾಜನಿಗೆ ಮನು ವಹಿಸಿರುವ ಕರ್ತವ್ಯಗಳಲ್ಲಿ ಒಂದು ಕರ್ತವ್ಯವೆಂದರೆ, ಶೂದನೂ ಸೇರಿದಂತೆ, ಎಲ್ಲ ಜಾತಿಗಳೂ ತಮ್ಮ ತಮ್ಮ ಪಾಲಿಗೆ ಬಂದ ಕೆಲಸಗಳನ್ನೂ ನಿರ್ವಹಿಸುವಂತೆ ನೋಡಿಕೊಳ್ಳುವುದು.
ಅಧ್ಯಾಯ 8, ಶ್ಲೋಕ 410 ``ಪತಿಯೊಬ್ಬ ವ್ಯಾಪಾರಿ ವರ್ಗದವನು ವ್ಯಾಪಾರದಲ್ಲಿ ನಿರತನಾಗಿರಲು ಅಥವಾ ಸಾಲ ಕೊಡುವ ವ್ಯವಹಾರದಲ್ಲಿ ತೊಡಗಿರಲು ಅಥವಾ ಕೃಷಿ, ಪಶುಪಾಲನೆ ಮಾಡಲು ರಾಜನು ಕಟ್ಟಪ್ಪಣೆ ಮಾಡಬೇಕು. ಅದರಂತೆ ಪತಿಯೊಬ್ಬ ಸೇವಾ ವರ್ಗದವನೂ ಬ್ರಾಹ್ಮಣರ ಸೇವೆಯಲ್ಲಿ ನಿರತನಾಗಿರುವಂತೆ ಅಪ್ಪಣೆ ಮಾಡಬೇಕು.''
ಅಧ್ಯಾಯ 8, 418 ``ರಾಜನು ಕಟ್ಟೆಚ್ಚರದಿಂದ ವ್ಯಾಪಾರಿಗಳನ್ನು ತಾಂತ್ರಿಕ ಕೆಲಸಗಾರರನ್ನು ತಮ್ಮ ತಮ್ಮ ಉದ್ಯೋಗಗಳಲ್ಲೇ ನಿರತರಾಗಿರುವಂತೆ ನೋಡಿಕೊಳ್ಳಬೇಕು. ಏಕೆಂದರೆ ಇಂತಹ
ಜನಗಳ ಕರ್ತವ್ಯದಲ್ಲಿ ಚ್ಯುತಿ ಉಂಟಾದರೆ ಇಡಿ ಜಗತ್ತೇ ಅಲ್ಲೋಲಕಲ್ಲೋಲವಾಗುತ್ತದೆ.''
ವ್ಯವಸ್ಥೆ ತಪ್ಪಿದರೆ ಅದೊಂದು ಅಪರಾದವಾಗುವಂತಿದ್ದು ರಾಜನು ಕಾನೂನು ಪ್ರಕಾರ ಅವರನ್ನು
ಶಿಕ್ಷಿಸಲು ಅವಕಾಶವಿತ್ತು ಎಂದು ಮನು ಸ್ಮೃತಿ ಉಲ್ಲೇಖಿಸುತ್ತದೆ.
ಒಟ್ಟಾರೆ ಅನಾದಿ ಕಾಲದಿಂದ ಇದ್ದ ಗುಲಾಮಗಿರಿ, ಉನ್ನತ ಜಾತಿಯವರ ನಿಯಂತ್ರಣ ಇಂದಿಗೂ ಬೇರೆ ಬೇರೆ ರೂಪದಲ್ಲಿ ಇದೆ. ಈಗ ಯಾಕೆ ಮೀಸಲಾತಿ ಬೇಕು. ಎಲ್ಲರಿಗೂ ಸಮಾನ ಅವಕಾಶ ಇದೆ ಅಲ್ವಾ ಎಂದು ಕೇಳುವ ಮಹಾಶಯರು ಈ ಯಾದಿಯನ್ನು ಅರ್ಥ ಮಾಡಿಕೊಳ್ಳಬೇಕು. ಅಂಬೇಡ್ಕರ್ ಹೇಳುವ ಒಂದೇ ಒಂದು ಇಡೀ ನಮ್ಮ ದೇಶದ ಆರ್ಥಿಕ ವ್ಯವಸ್ಥೆ ಹೇಗಿದೆ ಎಂಬುದನ್ನು ಹೇಳಿಬಿಡುತ್ತದೆ; ಆರ್ಥಿಕ ಸ್ವಾತಂತ್ರö್ಯ ಇರದ ಸ್ವತಂತ್ರ ಅದು ಸ್ವತಂತ್ರವೇ ಅಲ್ಲ. ಅದು ಮನುಷ್ಯನಿಗೆ ಸ್ವಂತ ಆಲೋಚನೆ ಮಾಡಲು ಅವಕಾಶವನ್ನೇ ನೀಡಲ್ಲ ಎಂಬುದು. ಬ್ರಾಹ್ಮಣರು ಶ್ರೇಷ್ಠತೆಯ ವ್ಯಸನದಿಂದ ಆಚೆ ಬಂದು ಇದನ್ನೊಮ್ಮೆ ನೋಡಬೇಕಿದೆ!
ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ