ಕಾನೂನನ್ನು ಅರಿತು ಜೀವನ ಪಾವನಾಗಿಸಿಕೊಳ್ಳಲು: ಗೌರವಾನ್ವಿತ ಶ್ರೀ ಕೋಟೆಪ್ಪ ಕಾಂಬಳೆ ಪ್ರಧಾನ ಸಿವಿಲ್ ನ್ಯಾಯಾಧೀಶರು

 


ಸಿಂಧನೂರು :ಆ 26. ಗೊರೇಬಾಳ ಗ್ರಾಮದಲ್ಲಿ ರಾಯಚೂರು ವಿಶ್ವವಿದ್ಯಾಲಯ ರಾಯಚೂರು ಮತ್ತು ನೋಬೆಲ್ ಪದವಿ ಮಹಾವಿದ್ಯಾಲಯ ಸಂಯುಕ್ತ ಆಶ್ರಯದಲ್ಲಿ ಮೂರನೇ ದಿನ ನಡೆದ ಎನ್ ಎನ್ ಎಸ್ ಕಾರ್ಯಕ್ರಮದಲ್ಲಿ ಗೌರವನ್ವಿತ ಶ್ರಿ ಕೊಟೆಪ್ಪ ಕಾಂಬಳೆ ಸಾಹೇಬರು 

ಭಾರತ ಭವ್ಯ ಭವಿಷ್ಯತ್ತಿನ ಡಾಕ್ಟರ, ನ್ಯಾಯಾಧೀಶರು, ಮುಖ್ಯ ಮಂತ್ರಿ, ಪ್ರಧಾನ ಮಂತ್ರಿ, ವಿಶ್ವ ಚೆಸ್ ಚಾಂಪಿಯನ್ ಕ್ರೀಡಾಪಟುಗಳೇ.....ಆಗುವ ನಮ್ಮೆಲ್ಲಾ ವಿದ್ಯಾರ್ಥಿಗಳೇ ಎಂದು ಮಾತನ್ನು ಆರಂಭಿಸುತ್ತಾ ಈ ಸಮಾಜದಲ್ಲಿ ಎಲ್ಲವೂ ಇದೆ, ಕೆಟ್ಟದ್ದು ಇದೆ, ಒಳ್ಳೆಯದು ಇದೆ, ಆದ್ರೆ ನಾವು ಕೇವಲ ಒಳ್ಳೆಯದಕ್ಕೆ ಮಾತ್ರ ತಲೆಯಲ್ಲಿ ತೆಗೆದುಕೊಳ್ಳಬೇಕು, ಕೆಟ್ಟದ್ದನ್ನು ಬಿಡಬೇಕು, ಎಂದರು.


 ಪ್ರಜಾಪ್ರಭುತ್ವದ ಕುರಿತು ವಿದ್ಯಾರ್ಥಿಗಳಿಗೆ ಮನ ಮುಟ್ಟುವ ಹಾಗೆ ಮತನಾಡಿದ ಅವರು ಭಾರತದಲ್ಲಿ ನಾವು ಹುಟ್ಟಿನಿಂದ ಸಾಯುವವರೆಗೆ ಕಾನೂನನ್ನು ಪಾಲನೆ ಮಾಡಬೇಕು ಅದಕ್ಕಾಗಿ ಕಾಲೇಜು ವಿದ್ಯಾರ್ಥಿಗಳು ಇನ್ನೆರಡು ವರ್ಷಗಳಲ್ಲಿ ಮದುವೆ ಆಗುವವರು ಇದ್ದಾರೆ ಅದಕ್ಕಾಗಿ ಮದುವೆ ಕಾನೂನಿನ ಕುರಿತು ತಿಳಿದುಕೊಳ್ಳಬೇಕು ಎಂದು ಹೇಳಿದ ಅವರು ಮೊದಲು ಮದುವೆಗೆ ಒಂದು ಗಂಡು, ಒಂದು ಹೆಣ್ಣು ಬೇಕು, ಹುಡುಗನಿಗೆ 21, ಹುಡಿಗಿದೆ 18 ವಯಸ್ಸು ಆಗಿರಬೇಕು, ಈಗಾಗಲೇ ಮದುವೆ ಆಗಿರಬಾರದು, ಬಾಲ್ಯ ವಿವಾಹದಿಂದ ಎಸ್ಟೆಲ್ಲ ಅನಾಹುತ ಗಳು ಇದಾವೆ ಎಂದು ವಿದ್ಯಾರ್ಥಿಗಳಿಗೆ ಮನಮುಟ್ಟುವ ಹಾಗೆ ಮಾತನಾಡಿದರು, ಕಾನೂನುಗಳನ್ನು ಮನೆಮದ್ದಾಗಿ ಇಟ್ಟುಕೊಂಡರೆ ಬರುವ ಅನಾಹುತಗಳನ್ನು ತಪ್ಪಿಸಬಹುದು, 

ವಿದ್ಯಾರ್ಥಿಗಳು ಹೇಗೆ ಓದಬೇಕು ಎಂದರೆ, ಎಲ್ಲಾ ವಿದ್ಯಾರ್ಥಿಗಳು ಎಲ್ಲಾ ವಿಷಯಗಳಲ್ಲಿ ಪರಿಣಿತಿಯನ್ನು ಹೊಂದಿರುವುದಿಲ್ಲ, ಎಲ್ಲರಲ್ಲಿಯೂ ಕೂಡ ಒಂದೊಂದು ವಿಷಯ ಜ್ಞಾನದ ಕೊರೆತೆ ಕಾಣುತ್ತೇವೆ, ವಿದ್ಯಾರ್ಥಿ ಬಂಗಾರದ ಜೀವನ ಯಾಕಂದ್ರೆ, ವಿದ್ಯಾರ್ಥಿಗೆ ಓದುವ ಕಾರ್ಯ ಒಂದನ್ನು ಬಿಟ್ಟು ಬೇರೆ ಏನೂ ಇರಲ್ಲ ಆದರೆ, ಈಗಿನ ವಿದ್ಯಾರ್ಥಿಗಳು ಕೆಲ್ವ ಸಾಮಾಜಿಕ ಜಾಲ ತಾಣಗಳಲ್ಲಿ ಸಮಯ ಕಳೆಯುತ್ತಿರುವುದು ದುರ್ದೈವ ಎಂದರು,



ಗೌರವಾನ್ವಿತ ಶ್ರೀ ಆನಂದಪ್ಪ 1ನೇ ಅಪಾರ ನ್ಯಾಯಾಧೀಶರು ಅವರು ಮಾತನಾಡಿ, ವಿದ್ಯಾರ್ಥಿಗಳು ವಿದ್ಯಾರ್ಥಿ ಜೀವನದಲ್ಲೇ ಒಂದು ನಿರ್ದಿಷ್ಟವಾದ ಗುರಿಯನ್ನು ಇಟ್ಟುಕೊಂಡು ಅಭ್ಯಾಸ ಮಾಡಿದರೆ ನೀವು ಕಂಡಿತಾ ಜಯಶಾಲಿಗಳಾಗುತ್ತೀರಿ ಎಂದು ವಿದ್ಯಾರ್ಥಿಗಳಿಗೆ ಸಲಹೆ ನೀಡಿದರು, ಇತ್ತೀಚಿನ ದಿನಗಳಲ್ಲಿ ಅಕೌಂಟ್ ಮೂಲಕ ಹಣದವನ್ನು ಕಡಿಯುವ ಸೈಬರ್ ದಾಳಿಯ ಕುರಿತು ವಿದ್ಯಾರ್ಥಿಗಳಿಗೆ ಅರಿವು ಮೂಡಿಸಿದರು. ಇಂತಹ ಚಟುವಟಿಕೆ ಗಳನ್ನು ಗಮನಿಸುತ್ತಾ, ಜಾಗರೂಕತೆಯಿಂದ ಮುನ್ನಡೆಯಬೇಕು ಎಂದರು, ವಿದ್ಯಾರ್ಥಿಗಳು ಮೊದಲು DL ಮಾಡಿಸಿರಿ ಎಂದು ಹೇಳಿದರು. ಕಾನೂನನ್ನು ಅರಿತು ಜೀವಿಸಿರಿ ಎಂದು ಕರೆ ನೀಡಿದರು.

ಮುಖ್ಯ ಅತಿಥಿಗಳಾಗಿ ಜೆ.ರಾಯಪ್ಪ ಮಾಜಿ ಅಧ್ಯಕ್ಷರು ತಾಲೂಕು ನ್ಯಾಯವಾದಿಗಳ ಸಂಘ ಸಿಂಧನೂರು ಇವರ

ಭಾರತದಲ್ಲಿ 33000 ಕಾನೂನುಗಳಿವೆ. ಮನುಷ್ಯನ ಹುಟ್ಟುವ ಮೊದಲೇ ಅಂದರೆ, ಬ್ರುಣವ್ಯವಸ್ತೆಯಲ್ಲೆ ಇರುವಾಗಲೇ ಕಾನೂನಿನ ಚೌಕಟ್ಟಿನಲ್ಲಿ ಬಂದು ಅವನು ಗೋರಿಗೆ ಹೋಗುವ ವವರೆಗೆ ಕಾನೂನನ್ನು ಪಾಲನೆ ಮಾಡಬೇಕು ಎಂದು ಹೇಳಿದರು. ಯಾವುದೇ ಆಸೆ, ಆಮಿಷಗಳಿಗೆ ಬಲಿಯಾಗದೆ ಜೀವಿಸಿರಿ ಎಂದು ಹೇಳಿದರು.

 ರವಿ ಮಲ್ಲಾಪುರ ಅರ್ಥಶಾಸ್ತ್ರ ಉಪನ್ಯಾಸಕರು ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿ ಮಾತನಾಡಿ ತಮ್ಮ ವಿದ್ಯಾರ್ಥಿ ಜೀವನವನ್ನು ನೆನೆದು ಕಾನೂನು ನೆರವು ಅರಿವು ದಿನದಂದು 20 ವರ್ಷಗಳ ಹಿಂದೆ ಕಾರ್ಯಕ್ರದಲ್ಲಿ ಭಾಗವಹಿಸಿದ್ದೆ ಇಂದು ಕೂಡ ತಾಲೂಕ ನ್ಯಾಯಾಧೀಶರ ಜೊತೆ ಮತ್ತೆ ವೇದಿಕೆ ಹಂಚಿಕೊಂಡಿದ್ದು ನನ್ನ ಸೌಭಾಗ್ಯ ಸರಿ ಎಂದು ಹೇಳಿದರು. 


ಉದ್ಘಾಟಕರಾಗಿ ಟಿಎಂ ಪಾಟೀಲ್ ಅಧ್ಯಕ್ಷರು ಬಸವ ಚಾಟಗಳು ಟ್ರಸ್ಟ್ ಸಿಂಧನೂರು ರವರು ಮಾತನಾಡಿ ನಿಸ್ವಾರ್ಥ ಸೇವೆಯನ್ನು ಮೈಗೂಡಿಸಿಕೊಳ್ಳಬೇಕು ಎಂದು ಹೇಳಿದರು 

ಮುಖ್ಯ ಅತಿಥಿಗಳಾಗಿ ಶ್ರೀ ಎಚ್ ಬಸವರಾಜಪ್ಪ ನಿವೃತ್ತ ವ್ಯವಸ್ಥಾಪಕರು ವಿಎಸ್ಎಸ್ಎನ್, ಶ್ರೀ ಚಂದ್ರಪ್ಪ ತಂದೆ ಬುಡ್ಡಪ್ಪ ಗ್ರಾಮ ಪಂಚಾಯತ್ ಸದಸ್ಯರು, ಶ್ರೀ ಮರದೇವ ಗ್ರಾಮ ಪಂಚಾಯತ ಸದಸ್ಯರು, ಶ್ರೀ ಗೋವಿಂದರೆಡ್ಡಿ ವಿಎಸ್ಎಸ್ಎನ್ ನಿರ್ದೇಶಕರು, ರಾಮಣ್ಣ ಬೋವಿ ಮಾಜಿ ಎಪಿಎಂಸಿ ಸದಸ್ಯರು, ಶ್ರೀ ಶರಣಪ್ಪ ಬೋವಿ ಮಾಜಿ ಜಿಲ್ಲಾ ಪಂಚಾಯತ ಸದಸ್ಯರು, ಶ್ರೀ ಹನುಮಂತ, ಕರಿಯಪ್ಪ ಎಸ್ ಡಿ ಎಂ ಸಿ ಅಧ್ಯಕ್ಷರು ಶ್ರೀ ಕಿರಣ ಕುಮಾರ್ ವರದಿಗಾರರು ಪ್ರಜಾ ಪರ್ವ ದಿನಪತ್ರಿಕೆ, ಶ್ರೀಮತಿ ಚನ್ನಬಸಮ್ಮ ಪರಶುರಾಮ ಮಲ್ಲಾಪುರ ಮಾಗಡಿ, ಖಜಾಂಚಿಗಳಾದ ಜಯಪ್ಪ ಗೊರೇಬಾಳ ಪ್ರಾಂಶುಪಾಲರಾದ ಆನಂದ ದುಮತಿ, ಏನ್ ಎಸ್ ಎಸ್ ಕಾರ್ಯಕ್ರಮದ ಅಧಿಕಾರಿಗಳು ಹೊನ್ನಪ್ಪ ಬೆಳಗುರ್ಕಿ , ಉಪನ್ಯಾಸಕರಾದ ನಾಗರಾಜ ನಾಯಕ, ಕುಮಾರಿ ಜ್ಯೋತಿ, ವಿಶ್ವನಾಥ, ಶಿವುಕುಮಾರ, ಕಾರ್ಯಕ್ರಮದಲ್ಲಿ ಭಾಗವಹಿಸಿದರು. ಕಾರ್ಯಕ್ರಮವನ್ನು ಭಾಗ್ಯಮ್ಮ ನಿರೂಪಿಸಿದರು, ರಮೇಶ ಬೆರ್ಗಿ ಸ್ವಾಗತಿಸಿದರು,ನೆನಪಿನ ಕಾಣಿಕೆ ಕಾರ್ಯಕ್ರಮವನ್ನು ಶ್ರೀದೇವಿ.ಕೆ ಯಮನೂರ ವಂದಿಸಿದರು.

ಕಾಮೆಂಟ್‌ಗಳು

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

ಕ್ರಿಕೆಟ್ ಬೆಟ್ಟಿಂಗ್ ದಂಧೆಕೋರರ ಎಡೆಮುರಿ ಕಟ್ಟಿದ : ಪಿಎಸ್ಐ ಗೀತಾಂಜಲಿ ಶಿಂಧೆ

ಮಲೆನಾಡಲ್ಲಿ ಮಳೆ:ಭದ್ರಾ ಒಳ ಹರಿವು ಹೆಚ್ಚಳ

ಕೊಟ್ಟೂರು ಪೊಲೀಸ್ ಠಾಣೆಗೆ ಮೊದಲ ಬಾರಿಗೆ ಮಹಿಳಾ ಪಿಎಸ್ಐ ಗೀತಾಂಜಲಿ ಶಿಂಧೆ