ಮೇಲ್ ಸೇತುವೆ ನಿರ್ಮಾಣಕ್ಕೆ ಕೇಂದ್ರದಿಂದ 29.57ಕೋಟಿ -- ಗುಂಗಾಡಿ

 


 ವರದಿ ಮಂಜುನಾಥ್ ಕೋಳೂರು ಕೊಪ್ಪಳ

ಕೊಪ್ಪಳ ಆಗಸ್ಟ್ 23 :- ಬಹುದಿನಗಳ ಬೇಡಿಕೆಯಂತೇ ಮುನಿರಾಬಾದ್ — ಹುಲಿಗಿ ರೈಲು ಗೇಟ್ 79ಕ್ಕೆ ಮೇಲು ಸೇತುವೆ ನಿರ್ಮಾಣಕ್ಕೆ ಕೇಂದ್ರ ಸರ್ಕಾರದಿಂದ 29.57 ಕೋಟಿ ರೂ. ಮಂಜೂರಾತಿ ದೊರೆತಿದೆ ಎಂದು ಹುಲಿಗಿ ಗ್ರಾಮದ ಮುಖಂಡ ಪಾಲಕ್ಷಪ್ಪ ಗುಂಗಾಡಿ ಪತ್ರಿಕಾಗೋಷ್ಠಿಯಲ್ಲಿ ಹೇಳಿದರು.


 ನಗರದ ಪತ್ರಿಕಾ ಭವನದಲ್ಲಿ ಪತ್ರಿಕಾಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿ, ಪ್ರಸ್ತುತ ಈ ಕಾಯಕಕ್ಕೂ ಕಾರಣಿಭೂತರಾದ ಸಂಸದ ಸಂಗಣ್ಣ ಕರಡಿ ಅವರಿಗೆ ಹುಲಿಗಿ ಮತ್ತು ಮುನಿರಾಬಾದ್ ಜನತೆ ಅಭಿನಂದಿಸಿದೆ. ಹುಲಿಗಿ ಗ್ರಾಮವು ಹೆಸರಾಂತ ದೇವತೆ ಶ್ರೀ ದೇವಿ ಹುಲಿಗೇಮ್ಮಳು ನೆಲೆಸಿರುವ ಬೀಡಾಗಿದ್ದರಿಂದ ದೇವಸ್ಥಾನಕ್ಕೂ ಆಗಮಿಸುವ ಭಕ್ತರಿಗೆ ಮತ್ತು ವಾಹನ ಸಂಚರಿಸುವವರಿಗೆ ಅನೇಕ ತೊಂದರೆಯಾಗುತ್ತಿದ್ದ ಹಿನ್ನಲೆಯಲ್ಲಿ ಈಗ ಈ ಸಮಸ್ಯೆಗೆ ಇತಿಶ್ರೀ ಹಾಡಿರುವದು ಈ ಭಾಗದ ಜನರಿಗೆ ಹರ್ಷವಾಗಿದೆ ಎಂದರು.


ಯುವ ಮುಖಂಡ ಗಣೇಶ್ ಹೊರ್ತಟ್ನಾಳ ಮಾತನಾಡಿ, ಈ 79ರ ರೈಲ್ವೆ ಗೇಟ್ ಗೆ ಭೂಮಿ ಮತ್ತು ಇಲ್ಲಿನ ಕಟ್ಟಡಗಳಿಗೆ ಪರಿಹಾರವಾಗಿ 3.06ಕೋಟಿ ರೂಪಾಯಿಯನ್ನು ಮಾಲೀಕರಿಗೆ ನೀಡಲು ಕೇಂದ್ರ ಸರ್ಕಾರ ಮಂಜೂರು ಮಾಡಿದೆ. ರಾಜ್ಯ ಸರ್ಕಾರದ ಯಾವುದೇ ಪಾಲುವಿಲ್ಲ. ಬಹುತೇಕ ಈ ಕುರಿತು ಇಚ್ಛಾಸಕ್ತಿಯ ಕೊರತೆ ಇರಬಹುದು ಎಂದರು. ಸಂಸದರು ಈ ಸಮಸ್ಯೆಯನ್ನು ಶೀಘ್ರ ಕಾರ್ಯರೂಪಕ್ಕೆ ತರಬೇಕು ಎಂದು ಪ್ರಧಾನಮಂತ್ರಿ ನರೇಂದ್ರ ಮೋದಿ ಮತ್ತು ಕೇಂದ್ರ ರೈಲ್ವೆ ಸಚಿವ ಅಶ್ವಿನಿ ವೈಷ್ಣವ್ ಅವರಲ್ಲಿ ಮನವಿ ಸಲ್ಲಿಸಿ ಈ ಮಂಜೂರಾತಿಯನ್ನು ಪಡೆಯಲಾಗಿದೆ ಎಂದು ತಿಳಿಸಿದರು. ಗ್ರಾ.ಪಂ ಉಪಾಧ್ಯಕ್ಷ ಸೈಯದ್ ನಮತ್ ಅಲಿ, ಸಿದ್ಧಪ್ಪ ಗುಂಗಾಡಿ, ಮಲ್ಲಿಕಾರ್ಜುನಗೌಡ, ಯೋಗೆಶ ಕೊಟ್ರಯ್ಯಸ್ವಾಮಿ, ಮಂಜುನಾಥ ಗಡಗಿ, ಯಮನೂರಪ್ಪ ಬಡಗಿ, ಪರಶುರಾಮ ಅಕ್ಕಸಾಲಿಗ, ಬಸವರಾಜ ಮೇಟಿ ಸೇರಿದಂತೆ ಇತರರು ಹಾಜರಿದ್ದರು.

ಕಾಮೆಂಟ್‌ಗಳು

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

ಕ್ರಿಕೆಟ್ ಬೆಟ್ಟಿಂಗ್ ದಂಧೆಕೋರರ ಎಡೆಮುರಿ ಕಟ್ಟಿದ : ಪಿಎಸ್ಐ ಗೀತಾಂಜಲಿ ಶಿಂಧೆ

ಮಲೆನಾಡಲ್ಲಿ ಮಳೆ:ಭದ್ರಾ ಒಳ ಹರಿವು ಹೆಚ್ಚಳ

ಕೊಟ್ಟೂರು ಪೊಲೀಸ್ ಠಾಣೆಗೆ ಮೊದಲ ಬಾರಿಗೆ ಮಹಿಳಾ ಪಿಎಸ್ಐ ಗೀತಾಂಜಲಿ ಶಿಂಧೆ