ಹಿಂದು ಧರ್ಮೀಯರ ಹೆಸರಲ್ಲಿ ಭಿನ್ನತೆ ಯಾಕೆ? ಅಂಬೇಡ್ಕರ್ ಹೇಳುತ್ತಾರೆ ಶಾಸ್ತ್ರಾಧಾರಿತ ಕಾರಣ!
ಅಂಬೇಡ್ಕರ್ ಬಗ್ಗೆ ನಮಗೆ ತಿಳಿಸಿದ್ದು ಅತಿ ಕಡಮೆ. ಅವರನ್ನು ಓರ್ವ ಸಂವಿಧಾನ ಶಿಲ್ಪಿ ಅಂತಲೂ ಓರ್ವ ದಲಿತ ನಾಯಕ ಆಂತಲೂ ಮಾತ್ರ ಹೇಳಿದ್ದುಂಟು. ಅದರಾಚೆ ಅಂಬೇಡ್ಕರ್ ಇದ್ದಾರೆ. ಅವರೊಬ್ಬ ಆರ್ಥಿಕ ತಜ್ಞ, ಸಾಮಾಜಿಕ ಚಿಂತಕ, ಜಗತ್ತಿನ ಶ್ರೇಷ್ಠ ಮಾನವತಾವಾದಿಗಳ ಸಾಲಿನಲ್ಲಿ ನಿಲ್ಲಬಲ್ಲ ಮಹಾನ್ ವಿಶ್ವ ನಾಯಕ. ಅವರ ಚಿಂತನೆಯನ್ನು ಆಳವಾಗಿ ತಿಳಿಸುವ ಒಂದು ಸಣ್ಣ ಯತ್ನ ಇದು. ಅವರ ಬದುಕು ಮತ್ತು ಬರಹದ ಕುರಿತು ಸರಳೀಕರಿಸಿದ ಲೇಖನಗಳನ್ನು ಇನಿದಿಂದ ನಿಯಮಿತವಾಗಿ ಪ್ರಕಟಿಸುತ್ತೇವೆ. ಓದಿ ಇತರರಿಗೆ ಹಂಚಿ.
ಅವರು ಹೇಳುವ ಹಾಗೆ ಬ್ರಾಹ್ಮಣರು ಮೂರೂ ವರ್ಗಕ್ಕೆ ಮಾರ್ಗದರ್ಶಕರು; ಕಟ್ಟ ಕಡೆಗೆ ಬರುವ ಶೂದ್ರ ವರ್ಗಕ್ಕೆದ ಸಂಪೂರ್ಣ ನಿಯಂತ್ರಣ, ನಿರ್ವಹಣೆ ಬ್ರಾಹ್ಮಣರದ್ದೇ ಎಂಬುದನ್ನು ಮನು ತನ್ನ ಸ್ಮೃತಿಯಲ್ಲಿ ಪ್ರತಿಪಾದಿಸಿದ್ದಾನೆ ಎಂಬುದನ್ನು ಅಂಬೇಡ್ಕರ್ ಹೇಳುತ್ತಾರೆ.
ಹುಟ್ಟಿದ ಮಗುವಿನ ಹೆಸರು ಇಡುವುದರಿಂದ ಹಿಡಿದು ಯಾರೆಲ್ಲಾ ಹೇಗೆ ಹೇಗೆ ಬದುಕಬೇಕು ಎಂಬುದನ್ನು ಮನು ಸ್ಮೃತಿಯಲ್ಲಿ ಕಟ್ಟಳೆ ವಿಧಿಸಲಾಗಿದೆ. ಅದಕ್ಕೆ ತಪ್ಪಿ ನಡೆದುಕೊಂಡರೆ ಶಿಕ್ಷೆಯನ್ನೂ ವಿಧಿಸಲಾಗಿದೆ ಎಂಬುದನ್ನು ಅಂಬೇಡ್ಕರ್ ಸಂಬಂಧಪಟ್ಟ ಶ್ಲೋಕದ ವಿವರಗಳ ಸಮೇತ ಪ್ರತಿಪಾದಿಸಿದ್ದಾರೆ.
ನಮ್ಮಲ್ಲಿ ಹೆಸರು ಇಡುವ ಪದ್ಧತಿ ಗಮನಿಸಿದರೆ ಬಹುಶಃ ನಿಮಗೆ ಇದು ಅರ್ಥ ಆಗುತ್ತದೆ. ಬ್ರಾಹ್ಮಣರ ಹೆಸರುಗಳನ್ನು ಗಮನಿಸಿ; ಕಮಲಾಕರ್ ಭಟ್, ಶ್ರೀನಾಥ ಜೋಷಿ ಹೀಗೆ ಇರುತ್ತವೆ.
ಇನ್ನು ಕ್ಷತ್ರಿಯರ ಹೆಸರುಗಳನ್ನು ಗಮನಿಸಿ; ಪೃಥ್ವಿರಾಜ್ ಚೌಹಾಣ್, ಧರ್ಮಪಾಲ್. ಇನ್ನು ವೈಶ್ಯ ವರ್ಣದವರ ಹೆಸರುಗಳನ್ನು ಗಮನಿಸಿ; ಶ್ರೀನಿವಾಸ ಶ್ರೇಷ್ಠಿ, ರಾಜೇಶ್ವರಿ, ಕನ್ಯಕಾ ಪರಮೇಶ್ವರಿ ಹೀಗೆ ಐಶ್ವರ್ಯ ಸೂಚಕ ಇವೆ. ಇನ್ನು ಶೂದ್ರರ ಹೆಸರು ಹೇಗಿವೆ ರಾಮದಾಸ, ಚರಣದಾಸ, ಗುರ್ಜಿ, ಕಲ್ಲವ್ವ, ನಾಗದಾಸಿ... ಹೀಗೆ ಹಲವು ರೀತಿಯಲ್ಲಿ ಇವೆ.
ಇದಕ್ಕೆ ಕಾರಣ ಹುಡುಕುತ್ತಾ ಹೋದರೆ ಮನುಸ್ಮೃತಿಯಲ್ಲಿ ಸಕಾರಣ ಸಿಗುತ್ತದೆ.
ಮನುಸ್ಮೃತಿಯ ಪ್ರಕಾರ ನಮ್ಮ ಧರ್ಮಶಾಸ್ತçಗಳು ಈ ರೀತಿಯೇ ನಾಮಕರಣ ಮಾಡಬೇಕು ಎಂದು ಕಟ್ಟಳೆ ವಿಧಿಸುತ್ತವೆ ಅಂತೆ. ಮನು ತನ್ನ ಸ್ಮೃತಿಯಲ್ಲಿ ಯಾವ ಯಾವ ವರ್ಣದವರು ಹೇಗೆ ನಾಮಕರಣ ಮಾಡಬೇಕು ಎಂಬುದನ್ನು ವಿವರಿಸಿದ್ದನ್ನು ಅಂಬೇಡ್ಕರ್ ಸರಳ ಭಾಷೆಯಲ್ಲಿ ತಿಳಿಸಿದ್ದಾರೆ.
ಮನುಸ್ಮೃತಿಯ ಭಾಗ 2, 31ನೇ ಶ್ಲೋಕದ ಪ್ರಕಾರ ಬಾಹ್ಮಣನ ಮೊದಲ ಹೆಸರು ಮಂಗಳಕರವಾಗಲಿ, ಕ್ಷತಿಯನದ್ದು ಅಧಿಕಾರ ಸಂಬಂಧಿಯಾಗಿಯೂ, ಸಂಬಂಧಿ, ವೈಶ್ಯನದು ಐಶ್ವರ್ಯ ಸಂಬಂಧಿಯಾಗಿ ಇರಬೇಕು. ಶೂದ್ರನದ್ದು ಏನಾದರೂ ಒಂದು ರೀತಿಯಲ್ಲಿ ಅಪಮಾನ ಸೂಚಕವಾಗಿರಬೇಕಂತೆ.
ಬಾಹ್ಮಣನ ಹೆಸರಿನ ಎರಡನೆ ಭಾಗದಲ್ಲಿ ಸಂತೋಷದಾಯಕವಾದ ಮಾತಿರಲಿ, ಕ್ಷತ್ರಿಯನ ಎರಡನೆಯ ಹೆಸರಿನಲ್ಲಿ ರಕ್ಷಣೆ, ವೈಶ್ಯನಲ್ಲಿ ಸಮೃದ್ಧಿ, ಶೂದ್ರನಲ್ಲಿ ಸೇವಕ ಭಾವ ಹುಟ್ಟುವಂತೆ ಇರಬೇಕು.
ಶೂದ್ರ ಉನ್ನತವಾದ ಅರ್ಥವಿರುವ ಹೆಸರನ್ನು ಹೊಂದುವ ಸಮಾಧಾನ ಪಡೆಯಲು ಮನು ಒಪ್ಪುವುದಿಲ್ಲ. ವಸ್ತುಸ್ಥಿತಿಯಲ್ಲಿ ಮತ್ತು ಹೆಸರಿನಲ್ಲಿ ಅವನು ಅಪಮಾನವನ್ನು ಹೊತ್ತು ನಡೆಯಬೇಕು. ಸಾಮಾಜಿಕವಾಗಿ ದಾರ್ಮಿಕವಾಗಿ, ಎರಡೂ ನೆಲೆಗಳಲ್ಲಿ ಹಿಂದೂ ಧರ್ಮ ಸಮಾನತೆಯನ್ನು ಹೇಗೆ ನಿರಾಕರಿಸಿದೆ ಎಂಬುದರ ಬಗೆಗೆ ಸಾಕಷ್ಟು ವಿಚಾರಗಳನ್ನು ಅಂಬೇಡ್ಕರ್ ಪ್ರಸ್ತಾಪಿಸಿದ್ದಾರೆ.
ಉದ್ಯೋಗದ ವಿಷಯದಲ್ಲಿ ಹೇಗೆ ಶೂದ್ರರನ್ನು ಕಟ್ಟಿಹಾಕಲಾಗಿದೆ ಎಂಬುದರ ಕುರಿತು ನಾಳಿನ ಸಂಚಿಕೆಯಲ್ಲಿ ಓದಿ.
ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ